Corp Loan: ರೈತರಿಗೆ ಗುಡ್ ನ್ಯೂಸ್, ಸರ್ಕಾರದಿಂದ 2 ಲಕ್ಷವರೆಗಿನ ಬೆಳೆ ಸಾಲ ಮನ್ನಾ..!

Corp Loan: ರೈತರಿಗೆ ಸಂತಸದ ಸುದ್ದಿ

ರೈತರ ಬೆಳೆ ಸಾಲ ಮನ್ನಾ ವಿಚಾರವೂ ಕಳೆದೊಂದು ವರ್ಷದಿಂದ ರಾಜ್ಯದಲ್ಲಿ ಹೆಚ್ಚು ಚರ್ಚೆ ಆಗುತ್ತಿತ್ತು. ಯಾಕೆಂದರೆ ಕಳೆದ ವರ್ಷ ರಾಜ್ಯಕ್ಕೆ ಎದುರಾಗಿದ್ದ ಭೀಕರ ಬರಗಾಲದ ಪರಿಸ್ಥಿತಿ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಕರ್ನಾಟಕ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳ ಸುಮಾರು 200ಕ್ಕೂ ಹೆಚ್ಚು ತಾಲ್ಲೂಕುಗಳು ಬರಪೀಡಿತ ಎಂದು ಘೋಷಣೆಯಾಗಿವೆ. 2023ರಲ್ಲಿ ರೈತರಿಗೆ ವರ್ಷದ ಆರಂಭದಲ್ಲಿಯೇ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಸಂಪೂರ್ಣ ಕೃಷಿ ನೆಲಕಚ್ಚಿತು.

ಕಂಡು ಕೇಳರಿಯದ ಭೀಕರ ಬರಗಾಲಕ್ಕೆ ಸಿಲುಕಿ ಸಮಸ್ಯೆ ಎದುರಿಸುತ್ತಿದ್ದ ರೈತರಿಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಬರ ಪರಿಹಾರದ ಹಣ ನೀಡುವ ಮೂಲಕ ರೈತನ ಸಮಸ್ಯೆಗೆ ಸ್ಪಂದಿಸಿವೆ. ಇದರ ನಡುವೆ ರೈತರ ಕೃಷಿ ಸಾಲ ಮನ್ನಾ ಮಾಡುವಂತೆ ಕೋರಿಕೆಗಳು ಕೇಳಿ ಬರುತ್ತಿತ್ತು ಆದರೆ ಎಲ್ಲೂ ಕೂಡ ರೈತರ ಸಾಲ ಮನ್ನಾ ವಿಚಾರದ ಬಗ್ಗೆ ಅಧಿಕೃತವಾಗಿ ಸರ್ಕಾರದ ಕಡೆಯಿಂದ ಪ್ರಸ್ತಾಪವಾಗಿರಲಿಲ್ಲ ಬದಲಾಗಿ ಸಹಕಾರಿ ಬ್ಯಾಂಕ್ ಗಳಲ್ಲಿ ಸಾಲ ಪಡೆದಿರುವ ರೈತರಿಗೆ ಮಾತ್ರ ಕಂಡಿಶನ್ ಮೇರೆಗೆ ಮಧ್ಯಮಾವತಿ ಸಾಲದ ಬಡ್ಡಿ ಮನ್ನಾ ಮಾಡಲಾಗಿತ್ತು.

WhatsApp Group Join Now
Telegram Group Join Now

ಯಾವುದೇ ಬ್ಯಾಂಕ್ ಅಥವಾ ಬ್ಯಾಂಕೇತರ ಹಣಕಾಸು ಸಂಸ್ಥೆ, ಖಾಸಗಿ ಲೇವಾದೇವಿ ವ್ಯವಹಾರರು ಯಾವುದೇ ಕಾರಣಕ್ಕೂ ಈ ವರ್ಷ ನಷ್ಟದಲ್ಲಿರುವ ರೈತನಿಗೆ ಸಾಲ ಮರುಪಾವತಿ ಮಾಡುವಂತೆ ಒತ್ತಾಯಿಸಿ ತೊಂದರೆ ಹೋಗಿತ್ತು ಇದರ ಬೆನ್ನೆಲು ಲೋಕಸಭಾ ಚುನಾವಣೆ ಕೂಡ ಆರಂಭವದರಿಂದ ಕೇಂದ್ರದ ಪ್ರಣಾಳಿಕೆಯಲ್ಲಾದರು ರೈತರ ಕೃಷಿ ಸಾಲದ ಬಗ್ಗೆ ಸಿಹಿ ಸುದ್ದಿ ಕೇಳಿ ಬರುತ್ತದೆ ಎಂದು ರೈತರ ಕಾಯುತ್ತಿದ್ದರು ಅಂತಿಮವಾಗಿ ಈ ಬಗ್ಗೆ ಹಂಚಿಕೊಂಡಂತೆ ಹಾಗಿತ್ತು ನೆರೆಯ ರಾಜ್ಯದ ಕೃಷಿ ಸಾಲ ಮನ್ನಾ ಆಗಿದೆ.

ಕರ್ನಾಟಕದ ಪಕ್ಕದ ರಾಜ್ಯವಾದ ತೆಲಂಗಾಣದಲ್ಲಿ ರೇವಂತ್ ರೆಡ್ಡಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಸರ್ಕಾರವು ಅಲ್ಲಿನ ರೈತರ ರೂ. 2 ಲಕ್ಷದವರೆಗಿನ ಕೃಷಿ ಸಾಲವನ್ನು ಮನ್ನ ಮಾಡಿದೆ. ಇದು ಆ ಭಾಗದ ರೈತರ ಪಾಲಿಕೆ ಬಹಳ ಸಮಾಧಾನಕರ ಸಂಗತಿಯಾಗಿದ್ದು ರೈತರ ಮುಖದಲ್ಲಿ ನೆಮ್ಮದಿಯನ್ನು ತಂದಿದ್ದು ಈ ವಿಚಾರದ ಬಗ್ಗೆ ಸ್ವತಃ ಮುಖ್ಯಮಂತ್ರಿಗಳೇ ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಇದರೊಂದಿಗೆ ಇನ್ನಷ್ಟು ಪ್ರಮುಖ ವಿಚಾರಗಳ ಬಗ್ಗೆ ಕೂಡ ಮುಖ್ಯಮಂತ್ರಿಗಳಾದರೆ ಮಾತನಾಡಿದ್ದಾರೆ ಇದರ ಬಗೆಗಿನ ವಿವರ ಇಂತಿದೆ. ಕೃಷಿ ಎನ್ನುವುದು ಸಂಭ್ರಮ ಇದನ್ನು ಹಬ್ಬದ ರೀತಿ ಆಚರಿಸಬೇಕು, ಯಾವೊಬ್ಬ ರೈತನು ಕೂಡ ಕೃಷಿ ಮಾಡಿದ ಕಾರಣದಿಂದ ಕ’ಣ್ಣೀ’ರಿಡುವಂತಾಗಬಾರದು ಇದೇ ನಮ್ಮ ಪಕ್ಷದ ಧ್ಯೇಯ ಎನ್ನುವ ಮಾತನಾಡಿದ ತೆಲಂಗಾಣ ಸಿ.ಎಂ ರೇವಂತ್ ರೆಡ್ಡಿ ಯವರು ತಮ್ಮ ಸಚಿವ ಸಂಪುಟದೊಡನೆ ಚರ್ಚಿಸಿ ಈ ಬಗ್ಗೆ ತೀರ್ಮಾನ ತೆಗೆದುಕೊಂಡು ತೆಲಂಗಾಣ ರಾಜ್ಯದ ರೈತರ ರೂ. 2 ಲಕ್ಷದವರೆಗಿನ ಬ್ಯಾಂಕ್ ಸಾಲ ಮನ್ನಾ ಬಗ್ಗೆ ಘೋಷಣೆ ಮಾಡಿದ್ದಾರೆ.

ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು 2022ರಲ್ಲಿ ನಮ್ಮ ಕಾಂಗ್ರೆಸ್​ ಪಕ್ಷದ ನಾಯಕ ರಾಹುಲ್ ಗಾಂಧಿಯವರು ರೈತರ ಸಾಲ ಮನ್ನಾ ಮಾಡುವುದಾಗಿ ಇಲ್ಲಿನ ರೈತರಿಗೆ ಮಾತು ಕೊಟ್ಟಿದ್ದರು, ಇದರ ಬಗ್ಗೆ ಕಾಂಗ್ರೆಸ್​​ನ ಹಿರಿಯ ನಾಯಕಿ ಸೋನಿಯಾ ಗಾಂಧಿಯವರು ಕೂಡ ಭರವಸೆ ನೀಡಿದ್ದರು ನಮ್ಮ ನಾಯಕರುಗಳ ಮಾತಿಗೆ ಬದ್ಧವಾಗಿ ರಾಹುಲ್ ಗಾಂಧಿ ಅವರು ನೀಡಿದ ಹೇಳಿಕೆ ಪ್ರಕಾರವಾಗಿ ರೂ. ಎರಡು ಲಕ್ಷದವರೆಗಿನ ಕೃಷಿ ಸಾಲ ಮನ್ನಾ ಮಾಡುತ್ತಿದ್ದೇವೆ ರೈತರ ಹಿತದೃಷ್ಟಿಯಿಂದ ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದು ವಾರಂಗಲ್ ಪಟ್ಟಣದ ಕ್ಯಾಬಿನೆಟ್ ಮೀಟಿಂಗ್ ಬಳಿಕ ಮುಖ್ಯಮಂತ್ರಿಗಳ ತಿಳಿಸಿದರು.

ಸಿ.ಎಂ ಅವರು ನೀಡಿರುವ ಮಾಹಿತಿ ಪ್ರಕಾರವಾಗಿ ಕೆಲ ಕಂಡೀಶನ್ ಗಳಿಗೆ ಒಳಪಟ್ಟು ಡಿಸೆಂಬರ್ 12, 2018 ರಿಂದ ಡಿಸೆಂಬರ್ 9, 2023 ರವರೆಗೆ ಕೃಷಿ ಉದ್ದೇಶಕ್ಕಾಗಿ ಯಾವುದೇ ಬ್ಯಾಂಕ್ ನಲ್ಲಿ ಸಾಲ ಮಾಡಿರುವ ರೈತರ ಎಲ್ಲಾ ಸಾಲಗಳು ಒಂದೇ ಬಾರಿ ಮನ್ನಾ ಆಗಲಿದೆ. ಇದಕ್ಕಾಗಿ ಒಟ್ಟು ರೂ. 31 ಸಾವಿರ ಕೋಟಿ ಬಜೆಟ್ ಬೇಕಾಗಬಹುದೆಂದು ಅಂದಾಜಿಸಲಾಗಿದೆ. ಸಾಲ ಮನ್ನಾದಿಂದ ರಾಜ್ಯದ 47 ಲಕ್ಷ ರೈತರಿಗೆ ಲಾಭವಾಗಲಿದೆ, ಈ ಕಾರಣದಿಂದ ಹೊರೆ ಭರೀಸಲೇ ಬೇಕಿದೆ.

ಅದೇ ರೀತಿ ರೈತರ ಯೋಜನೆ ಭರೋಸಾ ಕೂಡ ಅನುಷ್ಠಾನ ತರಲು ತರಲಾಗಿದೆ. ಸಚಿವ ಸಂಪುಟವು ಉಪ ಸಮಿತಿ ರಚನೆ ಮಾಡಿದೆ, ಜುಲೈ 15ರೊಳಗೆ ಸಚಿವ ಸಂಪುಟ ಉಪಸಮಿತಿ ಸರ್ಕಾರಕ್ಕೆ ಈ ಕುರಿತು ವರದಿ ನೀಡಲಿದ್ದು, ಅದರ ಆಧಾರದ ಮೇಲೆ ರೈತರ ವಿಮಾ ಪಾಲಿಸಿ ಅಂತಿಮಗೊಳಿಸಲಾಗುವುದು ಎಂದು ತೆಲಂಗಾಣ ಸಿ.ಎಂ ರೇವಂತ್ ರೆಡ್ಡಿಯವರು ಮಾಧ್ಯಮಗಳೊಂದಿಗೆ ಮಾತನಾಡಿ ವಿಷಯ ಹಂಚಿಕೊಂಡಿದ್ದಾರೆ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment