ರೈತರಿಗೆ ಕೃಷಿ ಚಟುವಟಿಕೆಗಳಿಗೆ ಹಣದ ಅವಶ್ಯಕತೆ ಇರುತ್ತದೆ. ಬಿತ್ತನೆ ಬೀಜ, ಕ್ರಿಮಿ ಕೀಟನಾಶಕಗಳ ಖರೀದಿಸಿ ಸೇರಿದಂತೆ ಕೃಷಿ ಕೂಲಿ ಕಾರ್ಮಿಕರು ಯಂತ್ರೋಪಕರಣಗಳ ಬಳಕೆ ಇತ್ಯಾದಿ ಇನ್ನು ಸಾಕಷ್ಟು ಕಾರ್ಯಗಳಿಗೇ ಹಣವೇ ಬಂಡವಾಳವಾಗಿರುತ್ತದೆ. ಆದರೆ ನಮ್ಮ ದೇಶದ ರೈತರ ಪರಿಸ್ಥಿತಿ ಗೊತ್ತೇ ಇದೆ.
ಪ್ರತಿ ವರ್ಷವೂ ಕೂಡ ಹೆಚ್ಚಿನ ಸಂಖ್ಯೆ ರೈತರು ಈ ಅವಶ್ಯಕತೆಗಾಗಿ ಬಂಡವಾಳಕ್ಕಾಗಿ ಸಾಲದ ಮೊರೆ ಹೋಗುತ್ತಿದ್ದಾರೆ ಮತ್ತು ನಮ್ಮ ದೇಶದಲ್ಲಿ ಕೃಷಿಯು ಮಳೆ ಜೊತೆ ಆಡುವ ಜೂಜಾಟ ಆಗಿರುವುದರಿಂದ ಅತಿವೃಷ್ಟಿ / ಅನಾವೃಷ್ಟಿ ಅಥವಾ ಇನ್ಯಾವುದೇ ಸಂದರ್ಭದಲ್ಲಿ ಬೆಳೆ ಹಾನಿ ಆದರೆ ಸಾಲದ ಸುಳಿಯಲ್ಲಿ ಸಿಲುಕಿ ನರಳುತ್ತಾನೆ ಇಂತಹ ಸಮಸ್ಯೆಯಿಂದ ರೈತರನ್ನು ಕಾಪಾಡಿಕೊಳ್ಳಲು ಸರ್ಕಾರ ಕ್ರಮ ಕೈಗೊಂಡಿದೆ.
ಕೃಷಿ ಚಟುವಟಿಕೆ ದೇಶದ ಆರ್ಥಿಕತೆಯ ಬೆನ್ನೆಲುಬು ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿವಿಧ ಯೋಜನೆಗಳ ಮೂಲಕ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿವೆ. ಸಬ್ಸಿಡಿ ದರದಲ್ಲಿ ಬೀತ್ತನೆ ಬೀಜ, ರಸಗೊಬ್ಬರಗಳ ವಿತರಣೆ, ಯಂತ್ರೋಪಕರಣಗಳ ಖರೀದಿಗೆ ಸಾಲ, ಕೃಷಿ ಭೂಮಿಯಲ್ಲಿ ನೀರಾವರಿ ಸೌಲಭ್ಯ ಮಾಡುವುದಾದರೆ ಕಡಿಮೆ ಬಡ್ಡಿಗೆ ಸಾಲ ನೀಡುವುದು ಸೇರಿದಂತೆ ಸಾಕಷ್ಟು ಅನುಕೂಲತೆಗಳನ್ನು ಮಾಡಿಕೊಡುತ್ತಿವೆ.
ಇದರಲ್ಲಿ ಸದ್ಯದ ಮಟ್ಟಿಗೆ ರಾಜ್ಯದಲ್ಲಿ ಅತಿ ಹೆಚ್ಚಿನ ರೈತರಿಗೆ ಅನುಕೂಲವಾಗಿರುವ ಬೆಲೆ ಸಾಲವನ್ನು ರೈತನ ಭೂಮಿಯನ್ನು ಆಧಾರವಾಗಿ ಇಟ್ಟುಕೊಂಡು ಅಥವಾ ಆತನ ಬೆಳೆಯನ್ನೇ ಆಧಾರವಾಗಿ ಇಟ್ಟುಕೊಂಡು ನೀಡಲಾಗುತ್ತದೆ. ಈ ಸಾಲದ ಮಿತಿಯು ಈ ವರ್ಷ ಹೆಚ್ಚಾಗಿರುವ ಬಗ್ಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಇದಕ್ಕೆ ಯಾವ ರೈತರು ಅರ್ಹರು? ಎಲ್ಲಿ ಅರ್ಜಿ ಸಲ್ಲಿಸಬೇಕು ಮತ್ತು ಬೇಕಾಗುವ ದಾಖಲೆಗಳೇನು? ಇತ್ಯಾದಿ ಸಂಪೂರ್ಣ ವಿವರ ಹೀಗಿದೆ.
ರೈತರಿಗೆ ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲಗಳನ್ನು ನೀಡಲಾಗುತ್ತದೆ. ಅಲ್ಪಾವಧಿ ಸಾಲವನ್ನು ಒಂದು ವರ್ಷದವರೆಗೆ ಶೂನ್ಯ ಬಡ್ಡಿದರದಲ್ಲಿ ನೀಡಲಾಗುತ್ತದೆ, ಮಧ್ಯಮಾವಧಿ 10 ವರ್ಷಗಳವರೆಗೆ ಹಾಗೂ ದೀರ್ಘಾವಧಿ ಸಾಲವು 10 ವರ್ಷಗಳಿಗಿಂತ ಹೆಚ್ಚಿನ ಕಾಲಮಿತಿಯನ್ನು ಒಳಗೊಂಡಿರುತ್ತದೆ ಮತ್ತು ಇದರಲ್ಲಿ ಯಾವ ವಿಧದ ಸಾಲ ಪಡೆಯುತ್ತಿದ್ದಾರೆ ಎನ್ನುವುದರ ಮೇಲೆ ಬಡ್ಡಿ ನಿರ್ಧಾರ ಆಗುತ್ತದೆ.
ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಗಳು, ಪಿಕಾರ್ಡ್ ಬ್ಯಾಂಕ್ ಗಳು ಮತ್ತು ಜಿಲ್ಲಾ ಸಹಕಾರ ಬ್ಯಾಂಕುಗಳು ಸರ್ಕಾರದ ಸಹಯೋಗದೊಂದಿಗೆ ಈ ಮೇಲೆ ತಿಳಿಸಿದ ಸೌಲಭ್ಯಗಳನ್ನು ರೈತರಿಗೆ ನೀಡುತ್ತವೆ. ಕೃಷಿ ಚಟುವಟಿಕೆ ಮಾತ್ರವಲ್ಲದೆ ಕೃಷಿಗೆ ಹೊಂದಿಕೊಂಡ ಉಪಕಸುಬುಗಳಾದ ಕುರಿ, ಕೋಳಿ, ಮೇಕೆ ಸಾಕಾಣಿಕೆ, ರೇಷ್ಮೆ ಸಾಕಾಣಿಕೆ ಇವುಗಳ ಖರೀದಿ ಮತ್ತು ಶೆಡ್ ನಿರ್ಮಾಣಕ್ಕೆ ಕೂಡ ಹಣಕಾಸಿನ ನೆರವನ್ನು ಪಡೆಯಬಹುದು.
ಪ್ರತಿ ವರ್ಷವೂ ಕೂಡ ಈ ಶೂನ್ಯ ಬಡ್ಡಿದರದಲ್ಲಿ ಕೃಷಿ ಸಾಲ ಪಡೆಯುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ ಎನ್ನುವುದು ಸಂತಸದ ಸುದ್ದಿಯಾಗಿದೆ. 2004ರಲ್ಲಿ ಆರಂಭವಾದ ಸಹಕಾರಿ ಬ್ಯಾಂಕ್ ಗಳ ಮೂಲಕ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವ ಸೌಲಭ್ಯವು ಇಂದಿನವರೆಗೆ ಯಶಸ್ವಿಯಾಗಿ ಆರಂಭವಾಗಿದೆ, ಆರಂಭದಲ್ಲಿ ಒಂದು ಲಕ್ಷದವರೆಗೆ ಸಾಲ ಸಿಗುತ್ತಿತ್ತು, 2004-05 ನೇ ಸಾಲಿನಲ್ಲಿ 2 ಲಕ್ಷಕ್ಕೆ ಈ ಮಿತಿ ಹೆಚ್ಚಿಸಲಾಗಿತ್ತು.
ಅಂತೆಯೇ ಕಳೆದ ವರ್ಷ ಆಡಳಿತ BJP ಸರ್ಕಾರವು ಈ ಮಿತಿಯನ್ನು 3 ಲಕ್ಷಕ್ಕೆ ಏರಿಸಲು ಚಿಂತನೆ ನಡೆಸಿತ್ತು ಈಗ ಅಧಿಕಾರರೂಢಿ ಕಾಂಗ್ರೆಸ್ ಪಕ್ಷವು ಇದಕ್ಕೆ ಸಮ್ಮತಿ ನೀಡಿದೆ. ಇದಕ್ಕೆ ವಿಧಿಸಿರುವ ಷರತ್ತುಗಳನ್ನು ಪೂರೈಸುವ ಯಾವುದೇ ರೈತನು ಈ ಮೇಲೆ ತಿಳಿಸಿದ ಬ್ಯಾಂಕುಗಳಲ್ಲಿ ಕೃಷಿ ಉದ್ದೇಶಕ್ಕಾಗಿ ಶೂನ್ಯ ರಹಿತ ಸಾಲ ಪಡೆದುಕೊಳ್ಳಬಹುದು.
ಕಂಡಿಷನ್ ಗಳು :-
* ಕರ್ನಾಟಕದ ರೈತನಾಗಿರಬೇಕು. ಕರ್ನಾಟಕದಲ್ಲಿ ವಾಸವಿದ್ದು ನೆರೆ ರಾಜ್ಯದಲ್ಲಿ ಜಮೀನು ಇದ್ದರೆ ಅಥವಾ ನೆರೆ ರಾಜ್ಯದಲ್ಲಿ ವಾಸವಿದ್ದು ಕರ್ನಾಟಕದಲ್ಲಿ ಜಮೀನು ಇದ್ದರೆ ಈ ರೈತರಿಗೆ ಸಾಲ ಸೌಲಭ್ಯ ಸಿಗುವುದಿಲ್ಲ ಮತ್ತು ರೈತನ ಹೆಸರಿನಲ್ಲಿಯೇ ಜಮೀನಿಗೆ ಸಂಬಂಧಿಸಿದ ದಾಖಲೆಗಳು ಇರಬೇಕು ಹಾಗೂ ಆತ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿರಬೇಕು.
* ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಕೇಂದ್ರ ಬ್ಯಾಂಕ್ ಗಳಲ್ಲಿ ಸದಸ್ಯತ್ವ ಹೊಂದಿರುವ ರೈತರಿಗೆ ಮಾತ್ರ ಈ ಸೌಲಭ್ಯ ಸಿಗುವುದು
* ರೈತರ ವಾಸವಿರುವ ಸ್ಥಳದ ಸಂಘ ಅಥವಾ ಜಮೀನು ಇರುವ ಸ್ಥಳದ ವ್ಯಾಪ್ತಿಯಲ್ಲಿ ಮಾತ್ರ ಸಾಲ ಪಡೆಯಲು ಅವಕಾಶ. ಒಂದು ವೇಳೆ ಇಂತಹ ಬ್ಯಾಂಕ್ ಗಳಲ್ಲಿ ಸಾಲ ಪಡೆಯಲಾಗದಿದ್ದರೆ NOC ಪಡೆದು ಸಂಬಂಧಿಸಿದ DCC ಬ್ಯಾಂಕ್ ನಲ್ಲಿ ಸಾಲ ಸೌಲಭ್ಯ ಪಡೆಯಬಹುದು.
* ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಪ್ರಾಥಮಿಕ ಕೃಷಿ ಪತ್ತಿನ ಬ್ಯಾಂಕ್ ಅಥವಾ DCC ಬ್ಯಾಂಕ್ ಗೆ ಭೇಟಿ ಕೊಟ್ಟು ಮಾಹಿತಿ ಪಡೆಯಿರಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ತಪ್ಪದೆ ಹೆಚ್ಚಿನ ರೈತರೊಡನೆ ಶೇರ್ ಮಾಡಿ.