Kisan Ashirvad Scheme: ಕೃಷಿ ಭೂಮಿ ಹೊಂದಿರುವ ರೈತರಿಗೆ ಗುಡ್ ನ್ಯೂಸ್.! ಎಕರೆಗೆ 5000 ಘೋಷಣೆ.!

 

ದೇಶದಾದ್ಯಂತ ಇರುವ ಎಲ್ಲ ರೈತರೂ (farmers) ಖುಷಿ ಪಡುವಂತಹ ವಿಚಾರವೊಂದನ್ನು ಈ ಲೇಖನದ ಮೂಲಕ ಹಂಚಿಕೊಳ್ಳಲು ಬಯಸುತ್ತಿದ್ದೇವೆ. ಅದೇನೆಂದರೆ, ಕೃಷಿ ಕ್ಷೇತ್ರವು ನಮ್ಮ ಆರ್ಥಿಕತೆಯ ಬೆನ್ನೆಲುಬು ಆಗಿದೆ ಹಾಗಾಗಿ ಕೃಷಿ ವಲಯಕ್ಕೆ ಪ್ರತಿ ವರ್ಷ ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಮತ್ತು ಆಯಾ ರಾಜ್ಯ ಸರ್ಕಾರಗಳು ಕೂಡ ರೈತರ ಶ್ರೇಯೋಭಿವೃದ್ಧಿಗಾಗಿ ಮತ್ತು ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ವಿಶೇಷ ಯೋಜನೆಗಳನ್ನು ಕೈಗೊಳ್ಳುತ್ತಲಿರುತ್ತವೆ.

WhatsApp Group Join Now
Telegram Group Join Now

ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ರೈತನು ಇಂತಹ ಸಾಕಷ್ಟು ಸವಲತ್ತುಗಳನ್ನು ಪಡೆಯುತ್ತಿದ್ದಾನೆ. ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜ, ರಸಗೊಬ್ಬರ, ಕೃಷಿ ಯಂತ್ರೋಪಕರಣಗಳನ್ನು ನೀಡುವುದು, ಬಡ್ಡಿರಹಿತ ಕೃಷಿ ಸಾಲ, ಕೃಷಿಗೆ ಹೊಂದಿಕೊಂಡಂತಹ ಕಸಬುಗಳಾದ ಹೈನುಗಾರಿಕೆ ಕೋರಿ ಕೋಳಿ ಮೇಕೆ ಸಾಕಾಣಿಕೆ ಇತ್ಯಾದಿಗಳಿಗೆ ಸಬ್ಸಿಡಿ ದರದಲ್ಲಿ ಸಾಲ ಸೌಲಭ್ಯ ಮತ್ತು ಸಹಾಯಧನಗಳು ಸಿಗುತ್ತಿವೆ ಇತ್ಯಾದಿಗಳನ್ನು ಉದಾಹರಿಸಬಹುದು.

ಇದರ ನಡುವೆ ಬೆಳೆ ಹಾನಿಯಾದರೆ ಅಥವಾ ಬರಗಾಲ ಪೀಡಿತ ಸಂದರ್ಭ ಎದುರಾದರೆ ಪರಿಹಾರವನ್ನು ನೀಡಲಾಗುತ್ತದೆ. ರೈತನು ಈಗ ತಾನು ಬೆಳೆದ ಬೆಳೆಗೂ ಕೂಡ ವಿಮೆ ಮಾಡಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಪ್ರಧಾನ ಮಂತ್ರಿಗಳು ಜಾರಿಗೆ ತಂದ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ (PMFBY) ಮಹತ್ವ ದೊಡ್ಡದು. ದೇಶದ ಅನೇಕ ರೈತರಿಗೆ ಪ್ರತಿ ಸೀಸನ್ ನಲ್ಲೂ ಈ ಯೋಜನೆಯಿಂದ ಬೆಳೆಗೊಂದು ಭದ್ರತೆಯನ್ನು ಕೊಡುತ್ತದೆ ಎಂದೇ ಹೇಳಬಹುದು.

ಇದು ಮಾತ್ರವಲ್ಲದೆ ದೇಶದ ಮೊಟ್ಟಮೊದಲ ಬಾರಿಗೆ 2009ರಲ್ಲಿ ಪ್ರಧಾನ ಮಂತ್ರಿಗಳು ರೈತನಿಗೂ ಕೂಡ ಪ್ರೋತ್ಸಾಹ ಧನ ನೀಡಲು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PMKSY) ಯೋಜನೆಯನ್ನು ಜಾರಿಗೆ ತಂದರು. ಈ ಯೋಜನೆಗೆಡಿ ರೈತನು ಕೇಂದ್ರ ಸರ್ಕಾರದಿಂದ ನೇರವಾಗಿ ತನ್ನ ಬ್ಯಾಂಕ್ ಖಾತೆಗೆ DBT ಮೂಲಕ ವರ್ಷಕ್ಕೆ ಮೂರು ಕಂತುಗಳಲ್ಲಿ ನಾಲ್ಕು ತಿಂಗಳ ಅಂತರದಲ್ಲಿ ತಲಾ ರೂ.2000 ಪಡೆಯುತ್ತಾನೆ.

ಇದಕ್ಕೆ ಕೆಲವೊಂದು ಕಂಡಿಷನ್ ಗಳು ಇದ್ದು ಅವುಗಳನ್ನು ಪೂರೈಸುವ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಈ ಯೋಜನೆಯ ಪ್ರಯೋಜನ ಸಿಗುತ್ತದೆ. ನಮ್ಮ ದೇಶದಲ್ಲಿ ಸಣ್ಣ ಹಿಡುವಳಿದಾರರೇ ಹೆಚ್ಚಾಗಿರುವುದರಿಂದ ಅವರನ್ನು ಕೇಂದ್ರವಾಗಿರಿಸಿಕೊಂಡು ಮತ್ತೊಂದು ಯೋಜನೆಯನ್ನು ಜಾರಿಗೆ ತರಲು ಚಿಂತಿಸಲಾಗಿದೆ. ಈ ಬಾರಿ ಒಂದು ಎಕರೆಗೆ ರೂ.5000 ಪ್ರೋತ್ಸಾಹ ಧನ ನೀಡಲು ನಿರ್ಧಾರ ಮಾಡಲಾಗಿದೆ.

ಕಿಸಾನ್ ಆಶೀರ್ವಾದ ಯೋಜನೆ (Kisan Ashirvad Scheme) ಎನ್ನುವ ಹೆಸರಿನ ಈ ಯೋಜನೆ ಮೂಲಕ ರೈತನಿಗೆ ಇನ್ನಷ್ಟು ಅನುಕೂಲತೆ ಆಗಲಿದೆ. ಆರಂಭಿಕವಾಗಿ ಮೊದಲನೇಯದಾಗಿ ಜಾರ್ಖಂಡ್ ರಾಜ್ಯ (Jharkhand State) ಸರ್ಕಾರವು ಈ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆ ಯಶಸ್ವಿ ಆದಲ್ಲಿ ಕರ್ನಾಟಕ ಸೇರಿದಂತೆ ಇತರೆ ರಾಜ್ಯ ಸರ್ಕಾರಗಳು ಅಥವಾ ಕೇಂದ್ರ ಸರ್ಕಾರವೇ ಈ ಯೋಜನೆಯನ್ನು ಅನುಸರಿಸುವ ಸಾಧ್ಯತೆ ಇದೆ.

* 1 ಎಕರೆ ಯಿಂದ 5 ಎಕರೆವರೆಗೆ ಕೃಷಿ ಭೂಮಿ ಹೊಂದಿರುವ ಎಲ್ಲಾ ಸಣ್ಣ ಹಾಗೂ ಅತಿ ಸಣ್ಣ ರೈತರು ಪ್ರತಿ ಎಕರೆಗೆ ರೂ.5000 ಕೃಷಿಗೆ ಸಹಾಯಧನ ಪಡೆಯಬಹುದು
* ಬಹುತೇಕ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಇರುವ ಎಲ್ಲಾ ಕಂಡಿಷನ್ ಗಳು ಕೂಡ ಇದಕ್ಕೂ ಅನ್ವಯಿಸುತ್ತದೆ.

* ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ನೀಡುವಂತೆ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಹಾಗೂ ಜಮೀನಿನ ಪಹಣಿಯ ದಾಖಲೆಗಳನ್ನು ಸಲ್ಲಿಸಿ ನೋಂದಾಯಿಸಿಕೊಳ್ಳಬೇಕಾಗುತ್ತದೆ. ಈ ಯೋಜನೆಯು ಜಾರಿಯಾದರೆ 1 ಎಕರೆ ಹೊಂದಿರುವ ರೈತನು ಕೂಡ ಕೇಂದ್ರ ಸರ್ಕಾರದ 6,000 ಕಿಸಾನ್ ಸಮ್ಮಾನ್ ನಿಧಿ ಹಣದ ಜೊತೆ ಕಿಸಾನ್ ಆಶೀರ್ವಾದ್ ಯೋಜನೆಯ ರೂ.5000 ಸೇರಿ ವಾರ್ಷಿಕವಾಗಿ ರೂ.11,000 ಹಣ ಪಡೆಯಬಹುದು ಈ ಯೋಜನೆ ರಾಜ್ಯದಲ್ಲೂ ಜಾರಿಗೆ ಬರಬೇಕೆ ಎನ್ನುವುದನ್ನು ಕಮೆಂಟ್ ಮಾಡಿ ತಿಳಿಸಿ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment