Gruhalakshmi
ರಾಜ್ಯದ ಕಾಂಗ್ರೆಸ್ ಸರ್ಕಾರ(Congress Govt)ದ ಗ್ಯಾರಂಟಿ ಯೋಜನೆ(Guarantee scheme)ಯಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ(Grilahakshmi scheme)ಯ 11 ಕಂತಿನ ಹಣ(money)ಕ್ಕಾಗಿ ಮಹಿಳೆಯರು ಕಾಯುತ್ತಿದ್ದು, ಇನ್ಮುಂದೆ ಹಣ ಜಮಾ ಕುರಿತು ಸರ್ಕಾರದಿಂದ ಬಿಗ್ ಅಪ್ಡೇಟ್ ನೀಡಿದೆ.
ಇನ್ಮುಂದೆ ಪ್ರತಿ ತಿಂಗಳು 15 ರೊಳಗೆ ಗೃಹಲಕ್ಷ್ಮಿ ಹಣ ಜಮಾ ಆಗಲಿದೆ, ಚಿಂತೆ ಬೇಡ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮನೆಯ ಯಜಮಾನಿಯರಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಇದುವರೆಗೂ ಮನೆಯ ಯಜಮಾನೀಯರು ಸುಮಾರು 10 ಕಂತುಗಳಷ್ಟು ಗೃಹಲಕ್ಷ್ಮಿ ಹಣವನ್ನು ಸ್ವೀಕರಿಸಿದ್ದಾರೆ.
11 & 12ನೇ ಕಂತಿನ ಹಣಕ್ಕಾಗಿ ಬಹುತೇಕ ಮಹಿಳೆಯರು ಕಾಯುತ್ತಿದ್ದಾರೆ ಈಗಾಗಲೇ ಜೂನ್ ತಿಂಗಳ ಹಣ ಬರುವುದು ಬಹಳಷ್ಟು ತಡವಾಗಿದ್ದು, ಹಣ ಬಂದಿಲ್ಲವೆಂದು ಅನೇಕರು ಚಿಂತಿತರಾಗಿದ್ದಾರೆ. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದು, ಶೀಘ್ರವೇ ಜೂನ್ ತಿಂಗಳ ಹಣ ಜಮಾ ಆಗಲಿದೆ ಎಂದು ಹೇಳಿದ್ದಾರೆ.
ಈ ಸುದ್ದಿ ಓದಿ:- Mosquito Net: ರಾಜ್ಯದಲ್ಲಿ ‘ಡೆಂಗ್ಯೂ’ ಪ್ರಕರಣ ಹೆಚ್ಚಳ: ರೇಷನ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಸರ್ಕಾರದಿಂದ ಉಚಿತ ಸೊಳ್ಳೆ ಪರದೆ ವಿತರಣೆ.!
ಇದೇ ತಿಂಗಳಲ್ಲಿ ಜೂನ್ ಮತ್ತು ಜುಲೈ ತಿಂಗಳ ಹಣವನ್ನು ಜಮೆ ಮಾಡುವುದು ಅವರು ತಿಳಿಸಿದ್ದಾರೆ. ಕರ್ನಾಟಕದಲ್ಲಿರುವ ಕುಟುಂಬಗಳ ಪೈಕಿ ಶೇ.98 ರಷ್ಟು ಮಹಿಳೆಯರು ಈಗಾಗಲೇ ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ ಬಾಕಿ ಇರುವ 11 ನೇ ಕಂತಿನ ಹಣ ಜುಲೈ 15 ರೊಳಗೆ ಪಾವತಿಯಾಗಲಿದೆ.
ಅಷ್ಟೇ ಅಲ್ಲದೇ ಪ್ರತಿ ತಿಂಗಳ 15 ನೇ ತಾರೀಖಿನ ಒಳಗಾಗಿ ಗೃಹಲಕ್ಷ್ಮಿ ಹಣ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಆಗಲಿದೆ. ಈ ಬಗ್ಗೆ ಯಾರೂ ಚಿಂತೆ ಪಡುವ ಅಗತ್ಯವಿಲ್ಲ ಎಂದರು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಗೃಹಲಕ್ಷ್ಮಿ’ ಯೋಜನೆಯಡಿ ಯಜಮಾನಿಯರಿಗೆ 2,000 ರೂ. ನೀಡಲಾಗುತ್ತಿದ್ದು, ಕೆಲವರಿಗೆ ಹಣ ಬಂದಿಲ್ಲ.
ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯಬೇಕಾದರೆ ರೇಷನ್ ಕಾರ್ಡ್ನಲ್ಲಿರುವ ಪ್ರತಿಯೊಬ್ಬ ಸದಸ್ಯರೂ ಕೂಡ ಇ-ಕೆವೈಸಿ ಮಾಡಿಸಬೇಕು.ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಕೊಂಡಿರುವ ಮಹಿಳೆಯರು ತಪ್ಪದೇ ತಮ್ಮ ಖಾತೆಗೆ ಇ-ಕೆವೈಸಿ ಮಾಡಿಸಬೇಕು.ಗೃಹ ಲಕ್ಷ್ಮಿ ಫಲಾನುಭವಿಗಳಿಗೆ NPCI ಕಡ್ಡಾಯಗೊಳಿಸಿದೆ. ಗೃಹ ಲಕ್ಷ್ಮಿ ಫಲಾನುಭವಿಗಳು ಕಡ್ಡಾಯವಾಗಿ E -KYC , ಆಧಾರ್ ಸೀಡಿಂಗ್ ಮಾಡಿಸಬೇಕಾಗಿದೆ.
ಈ ಸುದ್ದಿ ಓದಿ:- Work From Home: SSLC ಪಾಸ್ ಆದವರಿಗೆ ಜಿಯೋ ಸಂಸ್ಥೆಯಿಂದ ವರ್ಕ್ ಫ್ರಮ್ ಹೋಂ ಕೆಲಸ.! ವೇತನ 30000/-
ಗೃಹಲಕ್ಷ್ಮಿ ಯೋಜನೆಯ ಹಣ ಇದೇ ತಿಂಗಳ 20ರೊಳಗೆ ಮಹಿಳೆಯರ ಖಾತೆಗೆ ಜಮಾ ಆಗಬಹುದು ಎಂದು ಹೇಳಲಾಗುತ್ತಿದೆ. ಇನ್ನುಂದೆ ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಯೋಜನೆಯ ಹಣ ತಲುಪಲಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಹೀಗಾಗಿ ಇದೇ ತಿಂಗಳಿನಲ್ಲಿ ಮಹಿಳೆಯರು 2 ತಿಂಗಳಿನ ಒಟ್ಟು ನಾಲ್ಕು ಸಾವಿರ ಹಣ ಪಡೆಯಲಿದ್ದಾರೆ.
ಆದರೆ ಈ ಹಣ ದಾಖಲೆಗಳು ಸರಿ ಇರುವ ಮಹಿಳೆಯರು ಖಾತೆಗೆ ಮಾತ್ರ ಬರಲಿದೆ ಅಂತಾ ಹೇಳಲಾಗಿದೆ. ಹಣ ಬರದಿರುವ ಮಹಿಳೆಯರು ತಮ್ಮ ದಾಖಲೆಗಳನ್ನು ಸರಿಪಡಿಸಬೇಕು. ಈ ಬಗ್ಗೆ ಸರ್ಕಾರ ಈಗಾಗಲೇ ಹಲವು ಬಾರಿ ಮಹಿಳೆಯರಿಗೆ ಅರಿವು ಮೂಡಿಸಿದೆ. ಆದರೂ ಆಧಾರ್ ಕಾರ್ಡ್ ಸಿಡಿಂಗ್ ಸಮಸ್ಯೆ, ಬ್ಯಾಂಕ್ ಖಾತೆ ನಿಷ್ಕ್ರಿಯ, ರೇಷನ್ ಕಾರ್ಡ್ ಅಪ್‌ಡೇಟ್ ಇತ್ಯಾದಿ ಸಮಸ್ಯೆಯಾಗಿದ್ದು.
ಮಹಿಳೆಯರು ಇಂತಹ ದಾಖಲೆಗಳನ್ನು ಕೂಡಲೇ ಸರಿಪಡಿಸಬೇಕೆಂದು ಸೂಚನೆ ನೀಡಲಾಗಿದೆ. ಯಾ ದಾಖಲೆಗಳು ಸರಿಯಾಗಿರುತ್ತವೋ ಅವರಿಗೆ ಮಾತ್ರ ಯೋಜನೆಯ ಹಣ ಜಮಾ ಆಗುತ್ತದೆ. ಇಲ್ಲದಿದ್ದರೆ ಆಗುವುದಿಲ್ಲ, ಹೀಗಾಗಿ ಕೂಡಲೇ ಏನಾದರೂ ತಪ್ಪುಗಳಿದ್ದರೆ ಅದನ್ನು ಸರಿಪಡಿಸಬೇಕಾಗಿದೆ. ಇನ್ನು ಹಣ ಬಂದಿರುವ ಬಗ್ಗೆ ಪರಿಶೀಲಿಸಲು ಮಹಿಳೆಯಡು DBT ಕರ್ನಾಟಕ ಎಂಬ ಆಪ್ ಡೌನ್‌ಲೋಟ್ ಮಾಡಿಕೊಳ್ಳಬೇಕು.
ಈ ಸುದ್ದಿ ಓದಿ:- HSRP Number Plate: ವಾಹನ ಸವಾರರಿಗೆ ಗುಡ್ ನ್ಯೂಸ್, HSRP ನಂಬರ್ ಪ್ಲೇಟ್ ನಿಯಮ ಬದಲಾವಣೆ, ಹೊಸ ರೂಲ್ಸ್ ಏನು ನೋಡಿ.!
ನಂತರ ಅದರಲ್ಲಿ ನಿಮ್ಮ ಹೆಸರು ನಮೂದಿಸಿ ಹಣ ಜಮಾ ಆಗಿರುವ ಬಗ್ಗೆ ಪರಿಶೀಲಿಸಬಹುದು. ಒಂದು ವೇಳೆ ಎಲ್ಲಾ ದಾಖಲೆಗಳು ಸರಿಯಾಗಿದ್ದರೂ ನಿಮ್ಮ ಖಾತೆಗೆ ಹಣ ಜಮಾ ಆಗಿಲ್ಲದಿದ್ದರೆ ಸರ್ಕಾರದ ಗ್ರಾಹಕ ಸೇವಾ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.