Today Gold Price:
ಬಂಗಾರ ಎನ್ನುವ ಹಳದಿ ಲೋಹವು ಭಾರತೀಯರ ಪಾಲಿಗೆ ಅತ್ಯಂತ ಆಕರ್ಷಣೀಯ ವಸ್ತುವಾಗಿದೆ. ತಲತಲಾಂತರದಿಂದ ಬಂಗಾರ ಎಂದ ಕೂಡಲೇ ಅದೇನೋ ಸೆಳೆತ. ಹೆಣ್ಣು ಮಕ್ಕಳಿಗೆ ಇದು ಅಲಂಕಾರದ ವಸ್ತು, ಅಂದವನ್ನು ಹೆಚ್ಚಿಸುವ ಒಂದಂಶವಾದರೆ ಮನೆಯಲಮ ಹಿರಿಯರಿಗೆ ಪ್ರತಿಷ್ಠೆ ಹಾಗೂ ಹೂಡಿಕೆಯ ಲೆಕ್ಕಾಚಾರ. ಈಗಿನ ಕಾಲದಲ್ಲಿ ಪರಿಸ್ಥಿತಿ ಹೆಚ್ಚಿಗೆ ಬದಲಾಗಿಲ್ಲ.
ನಾವು 21ನೇ ಶತಮಾನದಲ್ಲಿ ಇದ್ದರೂ ಕೂಡ ಇಡೀ ಪ್ರಪಂಚದಲ್ಲಿ ಬಂಗಾರಕ್ಕೆ ಅತಿ ಹೆಚ್ಚು ಬೇಡಿಕೆ ಹೊಂದಿರುವ ದೇಶ ನಮ್ಮ ಭಾರತವೇ ಆಗಿದೆ. ಆದರೆ ಕಳೆದ ಒಂದುವರೆ ದಶಕದಲ್ಲಿ ಬಂಗಾರದ ಬೆಲೆಯಲ್ಲಿ ಉಂಟಾಗಿರುವ ಅಜಗಜಾಂತರ ವ್ಯತ್ಯಾಸ ಬಂಗಾರ ಪ್ರಿಯರ ಆಸೆಗಳಿಗೆ ಕೊಂಚ ಕಡಿವಾಣ ಹಾಕಿತ್ತು.
ಸಾಮಾನ್ಯ ಎನಿಸಿದ್ದ ಬೆಲೆಯು ನಾಗಲೋಟದಲ್ಲಿ ಹೆಚ್ಚಾಗಿ ಪ್ರತಿ ಗ್ರಾಂ ಗೆ ನೂರರ ಲೆಕ್ಕದಲ್ಲಿ ಇದ್ದ ಬಂಗಾರದ ಬೆಲೆಯು ಎರಡು ಮೂರು ವರ್ಷಗಳ ಅಂತರದಲ್ಲಿ ಸಾವಿರದ ಗಡಿ ದಾಟಿ ಇಂದು ಗ್ರಾಮ್ ಗೆ ಏಳು ಸಾವಿರಕ್ಕಿಂತ ಹೆಚ್ಚಿನ ಬೆಲೆ ಕೂಡ ತಲುಪಿತ್ತು. ಸದ್ಯಕ್ಕೆ ಈಗ ಬಂಗಾರ ಬೆಲೆಯಿಂದ ಕಂಗೆಟ್ಟು ಹೋಗಿದ್ದ ಜನರು ಸಂತಸ ಪಡುವ ಸಮಯ ಮತ್ತೆ ಬಂದಿದೆ.
ಕಳೆದ ಹತ್ತು ದಿನಗಳಿಂದ ಬಂಗಾರ ಮತ್ತು ಬೆಳ್ಳಿಯ ಬೆಲೆಯಲ್ಲಿ ಬಾರಿ ಇಳಿಕೆ ಕಂಡುಬಂದಿದ್ದು ಹಾಗಾಗಿ ಚಿನ್ನ ಖರೀದಿ ಮಾಡುವುದಕ್ಕೆ ಇದು ಸಕಾಲ ಎಂದೆ ಭಾವಿಸಲಾಗಿದೆ. ತಪ್ಪದೇ ಈ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಂಡು ಒಟ್ಟಿಗೆ ಬಂಗಾರದ ಶಾಪಿಂಗ್ ಮಾಡಿ
ಅಂದ ಹಾಗೆ ಬಂಗಾರದ ಬೆಲೆಯಲ್ಲಿ ವ್ಯತ್ಯಾಸ ಆಗಿರುವುದರಿಂದ ಪ್ರತಿ ಗ್ರಾಂ ಗೆ ಎಷ್ಟು ವ್ಯತ್ಯಾಸವಾಗಿದೆ ಎಂದು ತಿಳಿದುಕೊಳ್ಳಬೇಕಾದದ್ದು ಕೂಡ ಮುಖ್ಯ ಸಂಗತಿ ಆಗಿದೆ. ಚಿನ್ನದಲ್ಲೂ ಕೂಡ ಮೂರ್ನಾಲ್ಕು ಬಗೆ ಇದ್ದು ಒಂದೊಂದು ಗುಣಮಟ್ಟದ ಬಂಗಾರ ಒಂದೊಂದು ಬೆಲೆ ಹೊಂದಿದೆ. ಆದರೆ ಯಾವುದೇ ಬಂಗಾರದ ಒಡವೆ ಖರೀದಿಸಿದರು ಅದರ ಶುದ್ಧತೆಗಾಗಿ ಸರ್ಕಾರದ BIS ಸಂಸ್ಥೆ ನೀಡುವ ಪ್ರಮಾಣ ಪತ್ರ ಮತ್ತು ಹಾಲ್ಮಾರ್ಕ್ ಚಿಹ್ನೆ ಇದೆಯೇ ಎನ್ನುವುದನ್ನು ಕನ್ಫರ್ಮ್ ಮಾಡಿ ಖರೀದಿಸುವುದು ಮುಂದೆ ಆಗಬಹುದಾದ ನಷ್ಟವನ್ನು ತಪ್ಪಿಸುತ್ತದೆ.
ಇದರ ಜೊತೆಗೆ ಚಿನ್ನದ ಕುರಿತ ಮತ್ತೊಂದು ಪ್ರಮುಖ ಸುದ್ದಿ ಎಂದರೆ ಚಿನ್ನದ ಬೆಲೆಯು ಆಯಾ ರಾಜ್ಯ ಸರ್ಕಾರಗಳು ವಿಧಿಸುವ ಅಬಕಾರಿ ಸುಂಕ ಹಾಗೂ ಖರೀದಿದಾರ ಆರಿಸಿಕೊಳ್ಳುವ ಬಂಗಾರದ ಒಡವೆಯ ವಿನ್ಯಾಸ ಮತ್ತು ಎಷ್ಟು ಗ್ರಾಮ್ ಖರೀದಿಸುತ್ತಿದ್ದಾನೆ ಎನ್ನುವುದರ ಮೇಲೆ ಬೀಳುವ ವೇಸ್ಟೇಜ್ ಮೇಕಿಂಗ್ ಚಾರ್ಜಸ್ ಇದೆಲ್ಲದ ಆಧಾರದಲ್ಲಿ ವ್ಯತ್ಯಾಸವಾಗುತ್ತದೆ ಎನ್ನುವುದು ಕೂಡ ಗೊತ್ತಿರಲಿ.
ಸದ್ಯಕ್ಕೆ ಇಂದು ನಮ್ಮ ರಾಜ್ಯದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 100 ಗ್ರಾಂಗೆ 2,000 ರೂಪಾಯಿ ಕುಸಿತ ಕಂಡಿದೆ. ಹೀಗೆ ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ ಈಗ 200 ರೂಪಾಯಿ ಕಡಿಮೆಯಾಗಿದೆ. ಆಭರಣ ಚಿನ್ನ ಎಂದೇ ಹೆಸರಾಗಿರುವ ಅತಿ ಹೆಚ್ಚು ಆಭರಣಕ್ಕೆ ಬಳಸಲಾಗುವ 22 ಕ್ಯಾರೆಟ್ ಬಂಗಾರದ ಬೆಲೆ ಈಗ ಪ್ರತಿ 10 ಗ್ರಾಂಗೆ 67,450 ರೂಪಾಯಿ ಇದೆ.
ಇನ್ನು 24 ಕ್ಯಾರೆಟ್ ಚಿನ್ನದ ಬೆಲೆ 100 ಗ್ರಾಂಗೆ 2,200 ರೂಪಾಯಿ ಕುಸಿತ ಕಂಡಿದೆ. 10ಗ್ರಾಂ ಚಿನ್ನದ ಬೆಲೆ ಇದೀಗ 73,580 ರೂಪಾಯಿ ಆಗಿದ್ದು, 18 ಕ್ಯಾರೆಟ್‌ನ ಚಿನ್ನದ ಬೆಲೆ ಕೂಡ ಭಾರಿ ಇಳಿಕೆ ಕಂಡಿದೆ. ಬೆಳ್ಳಿ ಬೆಲೆ ಸ್ವಲ್ಪ ದುಬಾರಿಯಾಗಿದೆ. KG ಗೆ ರೂ.100 ಹೆಚ್ಚಾಗಿ ರೂ.94,600 ರಲ್ಲಿ ಬೆಳ್ಳಿ ಮಾರಾಟ ಆಗುತ್ತಿದೆ.