ಬಂಗಾರ ಪ್ರಿಯರಿಗೆಲ್ಲ ಒಂದು ಸಿಹಿ ಸುದ್ದಿ ಇದೆ. ಸದ್ಯದ ಮಟ್ಟಕ್ಕೆ ದೇಶದಲ್ಲಿ ಚಿನ್ನದ ಬೆಲೆ ಕಡಿಮೆ ಆಗುವುದಕ್ಕಿಂತ ಮತ್ತೊಂದು ಸಮಾಧಾನಕರದ ವಿಷಯ ಇಲ್ಲವೇ ಇಲ್ಲ ಎನ್ನಬಹುದು. ಯಾಕೆಂದರೆ ಕೆಳದೆರಡು ದಶಕದಲ್ಲಿ ಚಿನ್ನದ ಬೆಲೆಯು ನಾಗಲೋಟದಲ್ಲಿ ಏರುತ್ತಿದೆ. ಈ ಒಂದು ವರ್ಷದಲ್ಲಿಯೂ ಸಹ ಸಾಕಷ್ಟು ಬಾರಿ ಚಿನ್ನದ ಬೆಲೆಯು ಪರಿಷ್ಕೃತಗೊಂಡು ನಿರಂತರವಾಗಿ ಹೆಚ್ಚಾಗುತ್ತಲೇ ಇದೆ.
ಇದು ಸಹಜವಾಗಿ ಚಿನ್ನದ ಮೇಲೆ ಆಸಕ್ತಿ ಹೊಂದಿರುವ ಮಹಿಳೆಯರಿಗೂ ಹಾಗೂ ಹೂಡಿಕೆ ಉದ್ದೇಶದಿಂದ ಚಿನ್ನ ಖರೀದಿಸ ಬಯಸುವವರಿಗೂ ಕೂಡ ಬೇಸರವನ್ನು ತಂದಿತ್ತು. ಅಂತಿಮವಾಗಿ ಕೊನೆಗೂ ಈಗ ಚಿನ್ನದ ಬೆಲೆಯು ಇಳಿಕೆ ಕಂಡು ಎಲ್ಲರಿಗೂ ಸಮಾಧಾನ ತಂದಿದೆ. ಇದರ ಕುರಿತಾಗಿ ಹಾಗೂ ಬೆಂಗಳೂರು ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎನ್ನುವ ಪಟ್ಟಿ ಹೀಗಿದೆ ನೋಡಿ.
ಇದಕ್ಕೂ ಮುನ್ನ ಚಿನ್ನದ ಕುರಿತಾಗಿ ಒಂದಷ್ಟು ಇಂಪಾರ್ಟೆಂಟ್ ವಿಷಯಗಳನ್ನು ಹೇಳಲೇಬೇಕು. ಪ್ರತಿನಿತ್ಯವೂ ಕೂಡ ಬಂಗಾರಕ್ಕೆ ಬೆಲೆ ಹೆಚ್ಚಾಗುತ್ತಿರುವುದರಿಂದ ಸಹಜವಾಗಿ ಇದರ ಗುಣಮಟ್ಟದ ಮೇಲೆ ಕೂಡ ನಾವು ಗಮನಹರಿಸಲೇಬೇಕು. ಇಲ್ಲವಾದಲ್ಲಿ ಅತಿ ಹೆಚ್ಚು ದುಡ್ಡು ತೆತ್ತು ಖರೀದಿಸಿದ ನಮಗೆ ಮುಂದೊಂದು ದಿನ ನಾವು ಖರೀದಿಸಿದ್ದು ಅಪ್ಪಟ ಬಂಗಾರವಲ್ಲ ಎಂದು ತಿಳಿದಾಗ ನ’ಷ್ಟದ ಜೊತೆಗೆ ನೋ’ವು ಕೂಡ ಆಗುತ್ತದೆ.
ಹಾಗಾಗಿ ಯಾವುದೇ ಬಂಗಾರ ಖರೀದಿಸುವ ಮುನ್ನ ಆಲ್ ಮಾರ್ಕ್ ಇದೆಯೇ ಎನ್ನುವುದನ್ನು ಪರಿಶೀಲನೆ ಮಾಡಿ. ಇನ್ನು ನಿಖರ ಮಾಹಿತಿಗಾಗಿ ಸರ್ಕಾರದ BIS care app ಎನ್ನುವ ಸರ್ಕಾರದ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ನೀವು ನಿಮ್ಮ ಚಿನ್ನದ ಗುಣಮಟ್ಟದ ಪರೀಕ್ಷೆ ಮಾಡಬಹುದು, ಒಂದು ವೇಳೆ ಮೋ’ಸ ಹೋಗಿದ್ದರೆ ಆನ್ಲೈನಲ್ಲಿ ದೂರ ಸಲ್ಲಿಸಲು ಕೂಡ ಅವಕಾಶ ಮಾಡಿಕೊಡಲಾಗಿದೆ.
ಚಿನ್ನದ ಬೆಲೆಯ ಬಗ್ಗೆ ಹೇಳುವುದಾದರೆ ಚಿನ್ನದ ಬೆಲೆ ಹೆಚ್ಚಾಗುತ್ತಿರುವುದಂದ ಈಗ ಹೂಡಿಕೆಗೆ ಉತ್ತಮ ಸಮಯ ಎಂದು ಭಾವಿಸಬಹುದು. ಇದೆ ಸಮಯದಲ್ಲಿ ಭಾರತದಂತ ದೇಶದಲ್ಲಿ ಬಡ ಹಾಗೂ ಮಧ್ಯಮ ವರ್ಗದ ಜನರೂ ಕೂಡ ಬಂಗಾರದ ಖರೀದಿ ಆಸೆ ಇಟ್ಟುಕೊಂಡಿರುತ್ತಾರೆ. ತಮ್ಮ ಶಕ್ತಿ ಮಟ್ಟಿಗೆ ಬಂಗಾರದ ಒಡವೆಗಳನ್ನು ಮನೆ ಹೆಣ್ಣು ಮಕ್ಕಳಿಗೆ ಕೊಡಿಸ ಬಯಸುತ್ತಾರೆ.
ಇವರಿಗೆ ಸಹಜವಾಗಿ ಈ ರೀತಿ ಬಂಗಾರದ ಬೆಲೆ ಹೆಚ್ಚುತ್ತಿರುವುದು ಅವರ ಬಜೆಟ್ ಜಾಸ್ತಿ ಮಾಡಿ ಬೇಸರ ತರುತ್ತಿದೆ. ಬಂಗಾರದ ಬೆಲೆ ಜೊತೆಗೆ ಇದರ GST, ಮೇಕಿಂಗ್ ಚಾರ್ಜಸ್, ವೇಸ್ಟೇಜ್ ಇವುಗಳು ಕೂಡ ಹೊರೆ ಹೆಚ್ಚಿಸುತ್ತಿದೆ. ಆದರೆ ಇದು ಒಂದು ರಾಜ್ಯಕ್ಕಿಂತ ಮತ್ತೊಂದು ರಾಜ್ಯದಲ್ಲಿ ವ್ಯತ್ಯಾಸ ಇರುತ್ತದೆ. ಸದ್ಯಕ್ಕೆ ಈಗ ದೇಶದ ಯಾವ ರಾಜ್ಯಗಳಲ್ಲಿ ಎಷ್ಟೆಷ್ಟು ಬೆಲೆ ಇದೆ ಎನ್ನುವುದರ ಪಟ್ಟಿ ಹೀಗಿದೆ ನೋಡಿ.
22 ಕ್ಯಾರೆಟ್ ಹತ್ತು ಗ್ರಾಂ ಚಿನ್ನದ ಬೆಲೆ:-
* ಬೆಂಗಳೂರು – ರೂ.66,290
* ಚೆನ್ನೈ – ರೂ.66,890
* ಮುಂಬೈ – ರೂ.66,290
* ಕೇರಳ – ರೂ.66,290
* ಕೊಲ್ಕತ್ತಾ – ರೂ.66,290
* ಅಹಮದಾಬಾದ್ – ರೂ.66,340
* ನವದೆಹಲಿ – ರೂ.66,440
ವಿವಿಧ ನಗರಗಳಲ್ಲಿ 100ಗ್ರಾಂ ಬೆಳ್ಳಿಯ ಬೆಲೆ:-
* ಬೆಂಗಳೂರು – ರೂ.9,090
* ಚೆನ್ನೈ – ರೂ.9,550
* ಮುಂಬೈ – ರೂ.9,09
* ಕೊಲ್ಕತ್ತಾ – ರೂ.9,090
* ನವದೆಹಲಿ – ರೂ.9,090
ಬೆಂಗಳೂರು ನಗರದಲ್ಲಿ ಚಿನ್ನದ ಬೆಲೆ
* 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ – ರೂ.66,590
* 24 ಕ್ಯಾರಟ್ 10ಗ್ರಾಂ ಚಿನ್ನದ ಬೆಲೆ – ರೂ.77,320
* ಬೆಳ್ಳಿ ಒಂದು ಕೆಜಿ – ರೂ.90,900
ಕರ್ನಾಟಕದಲ್ಲಿ ಒಂದು ಗ್ರಾಂ ಚಿನ್ನದ ಬೆಲೆ
* 18 ಕ್ಯಾರಟ್ ಆವರಣ ಚಿನ್ನದ ಬೆಲೆ – ರೂ.5,423
* 22 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ.6,629
* 24 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ.7,232
ಕರ್ನಾಟಕದಲ್ಲಿ 8 ಗ್ರಾಂ ಚಿನ್ನದ ಬೆಲೆ
18 ಕ್ಯಾರೆಟ್ ಆವರಣ ಚಿನ್ನದ ಬೆಲೆ – ರೂ.43,384
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ.52,032
* 24 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ.57,856
ಕರ್ನಾಟಕದಲ್ಲಿ 10 ಗ್ರಾಂ ಚಿನ್ನದ ಬೆಲೆ
* 18 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ.54,230
* 22 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ.66,290
* 24 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ.72,320
ಕರ್ನಾಟಕದಲ್ಲಿ 100 ಗ್ರಾಂ ಚಿನ್ನದ ಬೆಲೆ
* 18 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ.5,42,300
* 22 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ.6,62,900
* 24 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ.7,23,200