License
ಯಾವುದೇ ರೀತಿಯ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನ ಚಾಲನೆ ಕಲಿಯಬೇಕೆಂದಿರುವ ಅಥವಾ ಈಗಾಗಲೇ ವಾಹನಗಳನ್ನು ಖರೀದಿಸಿ ತರಬೇತಿ ಪಡೆಯಬೇಕು ಎಂದು ಬಯಸುವ ಎಲ್ಲಾ ನಾಗರಿಕರಿಗೂ ಕೂಡ ಸರ್ಕಾರದ ಕಡೆಯಿಂದ ಒಂದು ಗುಡ್ ನ್ಯೂಸ್ ಇದೆ. ಈಗಂತೂ ಪ್ರತಿಯೊಂದು ಮನೆಗೂ ಕೂಡ ವಾಹನಗಳ ಅಗತ್ಯ ಇದೆ ಆದರೆ ವಾಹನಗಳನ್ನು ಖರೀದಿಸಿದ ಮಾತ್ರಕ್ಕೆ ರಸ್ತೆಗಳಲ್ಲಿ ಸಂಚರಿಸುವ ಅನುಮತಿ ಇರುವುದಿಲ್ಲ.
ಸಾರ್ವಜನಿಕರ ರಸ್ತೆಗಳಲ್ಲಿ ವಾಹನ ಚಾಲನೆ ಮಾಡುವಾಗ ಸರ್ಕಾರದ ನಿಯಮಗಳನ್ನು ಪಾಲಿಸಲೇಬೇಕು. ರಸ್ತೆ ಸುರಕ್ಷತೆ ನಿಯಮಗಳು ಹಾಗೂ ಮೋಟಾರ್ ವಾಹನ ಕಾಯ್ದೆ ಜೊತೆಗೆ ಸರ್ಕಾರ ಕಾಲ ಕಾಲಕ್ಕೆ ವಿಧಿಸುವ ಎಲ್ಲಾ ನಿಯಮಗಳಿಗೆ ಬದ್ಧವಾಗಿ ವಾಹನ ಚಾಲನೆ ಮಾಡಬೇಕು ಇಲ್ಲವಾದಲ್ಲಿ ದಂಡ ಬೀಳುವುದು ಗ್ಯಾರಂಟಿ.
ಎಲ್ಲಕ್ಕಿಂತ ಮುಖ್ಯವಾಗಿ ಈ ವಿಚಾರದಲ್ಲಿ ಮೊದಲಿಗೆ ಬರುವುದು ಡ್ರೈವಿಂಗ್ ಲೈಸೆನ್ಸ್ (Driving License) ಎನ್ನುವುದು. ಡ್ರೈವಿಂಗ್ ಲೈಸೆನ್ಸ್ ಪಡೆದಿದ್ದಾರೆ ಎಂದರೆ ಅವರಿಗೆ ವಾಹನ ಚಾಲನೆ ಮಾಡಲು ಬರುತ್ತದೆ ಎಂದು ಅರ್ಥ ಡ್ರೈವಿಂಗ್ ಲೈಸೆನ್ಸ್ ಪಡೆಯುವುದಕ್ಕೆ ಮೊದಲೇ ಅವರ ಬಳಿ ಲರ್ನಿಂಗ್ ಲೈಸೆನ್ಸ್ ಸಿಗುತ್ತದೆ.
ಲರ್ನಿಂಗ್ ಲೈಸೆನ್ಸ್ ಪಡೆದ ನಂತರ ಡ್ರೈವಿಂಗ್ ಲೈಸೆನ್ಸ್ ಗೆ ಅರ್ಜಿ ಹಾಕಬೇಕು, ಡ್ರೈವಿಂಗ್ ಲೈಸನ್ಸ್ ಸಿಗಬೇಕು ಎಂದರೆ ಹತ್ತಿರದ RTO ಕಚೇರಿಗಳಿಗೆ ಹೋಗಿ ಡ್ರೈವಿಂಗ್ ಟೆಸ್ಟ್ ಎದುರಿಸಬೇಕು ಇದರಲ್ಲಿ ಮೌಖಿಕ ರೂಪದ ಪ್ರಶ್ನೆಗಳು ಮತ್ತು ಟೆಸ್ಟ್ ಡ್ರೈವ್ ಕೂಡ ಇರುತ್ತದೆ ಇದರಲ್ಲಿ ಯಶಸ್ವಿಯಾಗಿ ಪಾಸಾದವರಿಗೆ ಮಾತ್ರ ಡ್ರೈವಿಂಗ್ ಲೈಸನ್ಸ್ ಸಿಗುವುದು ಮತ್ತು ಈ ರೀತಿ ಅರ್ಜಿ ಸಲ್ಲಿಸಿ ಡ್ರೈವಿಂಗ್ ಲೈಸೆನ್ಸ್ ಪಡೆಯಲು 18 ವರ್ಷ ಪೂರೈಸಿರಬೇಕು ಇನ್ನಿತರ ನಿಯಮಗಳಿವೆ.
ಒಬ್ಬ ವ್ಯಕ್ತಿ ಈ ಪ್ರೋಸೆಸ್ ಮುಗಿಸಿ ತನ್ನ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಸಾಕಷ್ಟು ಬಾರಿ RTO ಕಛೇರಿಗೆ ಅಲೆದಾಡ ಬೇಕಿತ್ತು. ಇದರಿಂದ ಆತನ ಸಾಕಷ್ಟು ಸಮಯ ವ್ಯರ್ಥವಾಗುತ್ತಿತ್ತು. ಯಾಕೆಂದರೆ ಕಚೇರಿಯಲ್ಲಿ ಸಾಕಷ್ಟು ಜನಜಂಗುಳಿ ಎದುರಾಗುತ್ತಿದ್ದ ಕಾರಣ ಒಂದೇ ದಿನಕ್ಕೆ ಕೆಲಸ ಆಗುತ್ತದೆ ಎನ್ನುವ ಯಾವುದೇ ಗ್ಯಾರಂಟಿ ಇರುತ್ತಿರಲಿಲ್ಲ.
ಮತ್ತು ಪದೇ ಪದೇ ಕೆಲಸಕ್ಕೆ ಹೋಗುವವರು ರಜೆ ಹಾಕಬೇಕ್ಕಾದ್ದರಿಂದ ಆರ್ಥಿಕ ನಷ್ಟವನ್ನು ಅನುಭವಿಸಬೇಕಿತ್ತು ಆದರೆ ಇದೆಲ್ಲ ಗೊಂದಲಗಳಿಗೆ ಒಂದು ಪರಿಹಾರ ಮಾರ್ಗವನ್ನು ಸರ್ಕಾರ ತಿಳಿಸಿದೆ. ಇನ್ನು ಮುಂದೆ ಯಾವುದೇ ನಾಗರಿಕ ಅಂದರೆ RTO ಕಚೇರಿಗಳಿಗೆ ಹೋಗುವುದರ ಬದಲಾಗಿ ಯಾವ ಡ್ರೈವಿಂಗ್ ಶಾಲೆಗಳಲ್ಲಿ (Driving School) ತರಬೇತಿ ಪಡೆದಿರುತ್ತಾರೆ.
ಈ ಶಾಲೆಗಳಲ್ಲಿ ಅರ್ಜಿ ಸಲ್ಲಿಸಿ ಪರೀಕ್ಷೆಗಳನ್ನು ನೀಡಿ ಲೈಸೆನ್ಸ್ ಪಡೆಯಬಹುದಾಗಿದೆ. ಹಾಗೆಂದ ಮಾತ್ರಕ್ಕೆ ಎಲ್ಲಾ ಖಾಸಗಿ ಡ್ರೈವಿಂಗ್ ಶಾಲೆಗಳಿಗೂ ಕೂಡ ಈ ಅನುಮತಿ ಇರುವುದಿಲ್ಲ. ಸರ್ಕಾರ ಕೆಲವೇ ಕೆಲವು ಆಯ್ದ ಖಾಸಗಿ ಡ್ರೈವಿಂಗ್ ಶಾಲೆಗಳಿಗೆ ಮಾತ್ರ ಈ ಒಂದು ಪರ್ಮಿಷನ್ ನೀಡಿದೆ. RTO ಕಚೇರಿಗಳ ಬದಲಾಗಿ ಈ ನಿಗದಿತ ಡ್ರೈವಿಂಗ್ ಶಾಲೆಗಳಿಗೆ ಹೋಗಿ ಅರ್ಜಿ ಸಲ್ಲಿಸಿ ಟೆಸ್ಟ್ ಎದುರಿಸಿ ಡ್ರೈವಿಂಗ್ ಲೈಸೆನ್ಸ್ ಪಡೆದುಕೊಳ್ಳಬಹುದು.
ಈ ವಿಷಯವಾಗಿ ಇನ್ನೊಮ್ಮೆ ಸರ್ಕಾರದಿಂದಲೇ ಅಧಿಕೃತ ಅಧಿಸೂಚನೆ ಶೀಘ್ರದಲ್ಲೇ ಹೊರ ಬೀಳಲಿದೆ. ಈ ಒಂದು ಬದಲಾದ ನಿಯಮದಿಂದ ಸಾಕಷ್ಟು ಜನರಿಗೆ ಅನುಕೂಲವಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ತಪ್ಪದೇ ಕಮೆಂಟ್ ಮಾಡಿ ತಿಳಿಸಿ.