Ration Card: ರೇಷನ್ ಕಾರ್ಡ್ ಗೆ ಅರ್ಜಿ‌ ಸಲ್ಲಿಸಿದವರಿಗೆ ಗುಡ್ ನ್ಯೂಸ್ 1.73 ಲಕ್ಷ ರೇಷನ್ ಕಾರ್ಡ್ ವಿತರಣೆ ಆರಂಭ.!

Ration Card:

ಹೊಸ ರೇಷನ್ ಕಾರ್ಡ್‌ (New Ration Card) ಗಾಗಿ ಕಾಯುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಹೊಸ ಕಾರ್ಡ್‌ಗಳಿಗಾಗಿ ಅರ್ಜಿ ಸಲ್ಲಿಸಿ ಹಲವು ವರ್ಷಗಳೇ ಕಳೆದಿದ್ದರೂ ಲಕ್ಷಾಂತರ ಜನರ ಅರ್ಜಿಗಳಿಗೆ ಸದ್ಗತಿ ಸಿಗುತ್ತಿಲ್ಲ. ಇದೀಗ ಬಿಪಿಎಲ್ ರೇಷನ್ ಕಾರ್ಡ್ (BPL Ration Card) ನಿರೀಕ್ಷೆಯಲ್ಲಿರುವವರಿಗೆ ಆಹಾರ ಸಚಿವ ಕೆ ಎಚ್ ಮುನಿಯಪ್ಪ (K H Muniyappa) ಸಿಹಿ ಸುದ್ದಿ ನೀಡಿದ್ದಾರೆ.

WhatsApp Group Join Now
Telegram Group Join Now

ಸರ್ಕಾರದ ಯಾವುದೇ ಯೋಜನೆಗಳಿಗೆ ಬಿಪಿಎಲ್ ರೇಷನ್‌ ಕಾರ್ಡ್(BPL Ration Card) ನ ಉಪಯೋಗ ಬಹಳವಿದೆ. ಬಿಪಿಎಲ್ ಕಾರ್ಡ್ ಅನ್ನು ಮುಖ್ಯ ಗುರುತಿನ ಚೀಟಿ(Primary Identity Card)ಯಾಗಿ ಬಳಸುತ್ತೇವೆ. ಹಾಗೆಯೇ, ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಸರ್ಕಾರದಿಂದ ಬಹಳಷ್ಟು ಯೋಜನೆಗಳು ಅನ್ವಯಿಸಿದ್ದು, ಅವುಗಳ ಉಪಯೋಗವನ್ನು ಬಿಪಿಎಲ್ ಕಾರ್ಡ್ ದಾರರು ಪಡೆಯುತ್ತಿದ್ದಾರೆ.

ಈ ಹಿಂದೆ ಬಿಪಿಎಲ್ ಕಾರ್ಡ್ ನ ಅಪ್ಡೇಟ್ (Update) ಕೂಡ ಮಾಡಿಸಲಾಗಿದ್ದು, ಇದೀಗ ಹೊಸ ಬಿಪಿಎಲ್ ಕಾರ್ಡ್ ಗಾಗಿ ಈಗಾಗಲೇ ರಾಜ್ಯದಲ್ಲಿ ಲಕ್ಷಾಂತರ ಜನರು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಅವುಗಳು ಆದಷ್ಟು ಬೇಗ ವಿಲೇವಾರಿಗೊಳ್ಳಲಿದ್ದು ಕಾರ್ಡುದಾರರ ಕೈಗೆ ಸಿಗಲಿದೆ.

ಈ ಸುದ್ದಿ ಓದಿ:- Bank Loan: ಪರ್ಸನಲ್ ಲೋನ್, ವೆಹಿಕಲ್ ಲೋನ್, ಹೋಂ ಲೋನ್, ಇನ್ನಿತರ ಸಾಲ ಇದೆಯೇ.? EMI ಕಟ್ಟುತ್ತಿದ್ದೀರಾ.? ಆಗಿದ್ರೆ ನಿಮಗೊಂದು ಗುಡ್ ನ್ಯೂಸ್.!

ಈ ಬಗ್ಗೆ ಆಹಾರ ಸಚಿವ ಕೆಎಚ್‌ ಮುನಿಯಪ್ಪ ವಿಧಾನ ಪರಿಷತ್‌ಗೆ ಸೋಮವಾರ ಮಾಹಿತಿ ನೀಡಿದ್ದು, ರಾಜ್ಯದಲ್ಲಿ 1.73 ಲಕ್ಷ ಬಿಪಿಎಲ್‌ ಕಾರ್ಡ್‌ಗಾಗಿ ಅರ್ಜಿ ಸಲ್ಲಿಕೆಯಾಗಿದ್ದು, ಶೀಘ್ರ ವಿಲೇವಾರಿ ಮಾಡಿ ಅರ್ಹರಿಗೆ ಕಾರ್ಡ್‌ ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.

1.73 ಲಕ್ಷ ಬಿಪಿಎಲ್‌ ಕಾರ್ಡ್‌ಗಾಗಿ ಅರ್ಜಿ ಸಲ್ಲಿಕೆ (Application Submission)

ಈಗಾಗಲೇ ರಾಜ್ಯದಲ್ಲಿ 1.73 ಲಕ್ಷ ಬಿಪಿಎಲ್‌ ಕಾರ್ಡ್‌ಗಾಗಿ ಅರ್ಜಿ ಸಲ್ಲಿಕೆಯಾಗಿದ್ದು, ಶೀಘ್ರ ವಿಲೇವಾರಿ ಮಾಡಿ ಅರ್ಹರಿಗೆ ಕಾರ್ಡ್‌ ವಿತರಿಸಲಾಗುವುದು ಎಂದು ಆಹಾರ ಸಚಿವ ಕೆಎಚ್‌ ಮುನಿಯಪ್ಪ ಮಾಹಿತಿ ನೀಡಿದ್ದಾರೆ. ಹಾಗೆಯೇ ಒಟ್ಟು 2.95 ಲಕ್ಷ ಪಡಿತರ ಚೀಟಿಗಾಗಿ ಅರ್ಜಿ ಬಂದಿವೆ. ಇದರಲ್ಲಿ 2.36 ಲಕ್ಷ ಮಂದಿ ಅರ್ಹರಿದ್ದಾರೆ. ಬಿಪಿಎಲ್‌ ಕಾರ್ಡ್‌ಗೆ ಅರ್ಜಿ ಹಾಕಿದ ಒಂದು ವಾರದೊಳಗೆ ಅಂಥವರಿಗೆ ಆರೋಗ್ಯ ಸೇವೆ ಸಿಗುವಂತಹ ವ್ಯವಸ್ಥೆ ಮಾಡಲಾಗಿದೆ ಎಂದು ಬಿಜೆಪಿಯ ಪ್ರತಾಪ ಸಿಂಹ ನಾಯಕ್‌ ತಿಳಿಸಿದ್ದಾರೆ.

ಹೊಸ ರೇಷನ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು

– ವಾಸಸ್ಥಳ ದೃಢೀಕರಣ (ಆಧಾರ್ ಕಾರ್ಡ್, ವಿದ್ಯುತ್ ಬಿಲ್, ಮತದಾರರ ಗುರುತಿನ ಚೀಟಿ)
– ವಯಸ್ಸಿನ ದೃಢೀಕರಣ (ಆಧಾರ್ ಕಾರ್ಡ್, ಜನನ ಪ್ರಮಾಣಪತ್ರ)
– ಜಾತಿ ಮತ್ತು ಆದಾಯ ಪ್ರಮಾಣಪತ್ರ (ಅಗತ್ಯವಿದ್ದರೆ)
– ಕುಟುಂಬದವರ ಫೋಟೋ

ಹೊಸ ರೇಷನ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸುವ ವಿಧಾನ

– ಆನ್‌ಲೈನ್‌ನಲ್ಲಿ: https://ahara.kar.nic.in/ ಗೆ ಭೇಟಿ ನೀಡಿ ಮತ್ತು “ಹೊಸ ರೇಷನ್ ಕಾರ್ಡ್‌ಗಾಗಿ ಅರ್ಜಿ” ಲಿಂಕ್‌ ಮೇಲೆ ಕ್ಲಿಕ್ ಮಾಡಿ.
– ಆಫ್‌ಲೈನ್‌ನಲ್ಲಿ: ನಿಮ್ಮ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳಿಗೆ ಭೇಟಿ ನೀಡಿ ಮತ್ತು ಅರ್ಜಿ ಫಾರ್ಮ್‌ ಪಡೆಯಿರಿ.

ಹೊಸ ರೇಷನ್ ಸ್ಥಿತಿ ಚೆಕ್ ಮಾಡುವುದು ಹೇಗೆ?

ಹಂತ 1: ಕೆಳಗಿನ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ,ಫಲಾನುಭವಿಗಳ ಪಟ್ಚಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿ
https://ahara.kar.nic.in/Home/EServices.
ಹಂತ 2:ನಂತರ ಮುಖಪುಟದ ಎಡಭಾಗದಲ್ಲಿರುವ 3 ಗೆರೆಗಳ ಮೇಲೆ ಕ್ಲಿಕ್ ಮಾಡಿ, ನಂತರ ಕೆಳಗಡೆ e-Status ಮೇಲೆ ಕ್ಲಿಕ್ ಮಾಡಿ. ನಂತರ ಕೆಳಗಡೆ New/Existing RC Request Status ಮೇಲೆ ಕ್ಲಿಕ್ ಮಾಡಿ.
ಹಂತ 3: ಹಂತ 1 – ನಿಮ್ಮ ಜಿಲ್ಲೆಯನ್ನು ಸೆಲೆಕ್ಟ್ ಮಾಡಿ.
ಹಂತ 4: ನಂತರ ಹೊಸ ಪಡಿತರ ಚೀಟಿ ಸಲ್ಲಿಸಲಾದ ಅರ್ಜಿಯ ಸ್ಥಿತಿ ಮೇಲೆ ಕ್ಲಿಕ್ ಮಾಡಿ.

ನಂತರ ನಿಮ್ಮದು ಸಿಟಿ ಆಗಿದ್ದಲ್ಲಿ urban IRA ಸೆಲೆಕ್ಟ್ ಮಾಡಿ ಅಥವಾ ಹಳ್ಳಿ ಆಗಿದ್ರೆ RURAL ಸೆಲೆಕ್ಟ್ ಮಾಡಿ ನಂತರ ನಿಮ್ಮ ತಾಲೂಕು, ಗ್ರಾಮ ಪಂಚಾಯತಿ & ಊರು ಸೆಲೆಕ್ಟ್ ಮಾಡಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದ ಸ್ವೀಕೃತಿ ಸಂಖ್ಯೆ ಹಾಕಿ GO ಮೇಲೆ ಕ್ಲಿಕ್ ಮಾಡಿ. ಇಲ್ಲಿ ನಿಮ್ಮ ಅರ್ಜಿಯ ಸ್ಥಿತಿ ಕಾಣಿಸುತ್ತದೆ

ಇನ್ನೂ, ಪಡಿತರ ಚೀಟಿದಾರರು ಪಡಿತರ ಚೀಟಿಯಲ್ಲಿನ ವಿವರಗಳಲ್ಲಿ ಯಾವುದೇ ತಪ್ಪು ಕಂಡುಬಂದಲ್ಲಿ ವಿವರಗಳನ್ನು ಸರಿಪಡಿಸಿಕೊಳ್ಳಲು ದಿನಾಂಕ ವಿಸ್ತರಿಸಲಾಗಿದ್ದು, ಇದೇ ತಿಂಗಳ ಜುಲೈ 31ರವರೆಗೆ ಅವಕಾಶ ನೀಡಲಾಗಿದೆ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment