ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎನ್ನುವ ಗಾದೆ ಮಾತು ಹೆಣ್ಣಿನ ಪ್ರಾಮುಖ್ಯತೆಯನ್ನು ತಿಳಿಸುತ್ತದೆ. ಶಿಕ್ಷಣದ ವಿಚಾರವಾಗಿ ಮಾತ್ರವಲ್ಲದೇ ಹೆಣ್ಣು ಪ್ರತಿಯೊಂದು ಕ್ಷೇತ್ರದಲ್ಲೂ ಕೂಡ ಇದೇ ರೀತಿ ಸ್ವಾತಂತ್ರ್ಯವಾಗಿ ಸಾಧನೆ ಮಾಡಿದರೆ ಆ ಮೂಲಕ ಕುಟುಂಬ, ಸಮುದಾಯ ಹಾಗೂ ದೇಶದ ಅಭಿವೃದ್ಧಿಗೂ ಪೂರಕ. ಹೀಗಾಗಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹೆಣ್ಣು ಮಕ್ಕಳನ್ನು ಮುಂದೆ ತರಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೂಡ ಹೊಣೆ ಹೊತ್ತಿಕೊಂಡು ಶ್ರಮಿಸುತ್ತಿವೆ.
ಈ ನಿಟ್ಟಿನಲ್ಲಿ ಹತ್ತಾರು ಯೋಜನೆಗಳನ್ನು ಸರ್ಕಾರದ ಕಡೆಯಿಂದ ಹೆಣ್ಣು ಮಕ್ಕಳಿಗೆಂದೇ ಜಾರಿಗೆ ತರಲಾಗಿದೆ ಕೂಡ. ಇವುಗಳಲ್ಲಿ ಒಂದು ವಿಶೇಷ ಯೋಜನೆ ಬಗ್ಗೆ ಈ ಲೇಖನದಲ್ಲಿ ಮಾಹಿತಿ ತಿಳಿಸಿಕೊಡುತ್ತಿದ್ದೇವೆ. ನೇರವಾಗಿ ಹೇಳುವುದಾದರೆ ಹೆಣ್ಣು ಮಕ್ಕಳನ್ನು ಆರ್ಥಿಕವಾಗಿ ಸದೃಢವಾಗಿಸುವ ನಿಟ್ಟಿನಲ್ಲಿ ಅನೇಕ ಮಹತ್ತರ ಯೋಜನೆಗಳು ಜಾರಿಗೆ ಬಂದಿದೆ.
ಕರ್ನಾಟಕ ರಾಜ್ಯದಲ್ಲಿನ ಗೃಹಲಕ್ಷ್ಮಿ ಯೋಜನೆಯು ಸೇರಿದಂತೆ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ಉದ್ಯೋಗಸ್ಥ ಮಹಿಳೆಗೆ ಕೆಲವು ವಿಶೇಷ ಸೌಲಭ್ಯಗಳು ಇಷ್ಟು ಮಾತ್ರವಲ್ಲದೇ ಸ್ವಯಂ ಉದ್ಯೋಗ ಮಾಡಿ ಸ್ವಾವಲಂಬಿಯಾಗಿ ಬದುಕಲಿಚ್ಚಿಸುವ ಮಹಿಳೆಯರಿಗೆ ಉಚಿತ ತರಬೇತಿಗಳು, ಸಬ್ಸಿಡಿ ರೂಪದ ಸಾಲ ಇತ್ಯಾದಿ ಸೌಲಭ್ಯಗಳು ದೊರಕುತ್ತಿವೆ. ಇವುಗಳಲ್ಲಿ ಮುದ್ರಾ ಯೋಜನೆ, ಶ್ರಮಶಕ್ತಿ ಸ್ವಯಂ ಉದ್ಯೋಗ ಇನ್ನು ಮುಂತಾದ ಯೋಜನೆಗಳನ್ನು ಹೆಸರಿಸಬಹುದು. ಈ ಯೋಜನೆಗಳಿಗೆ ಸೇರುವ ಮತ್ತೊಂದು ಯೋಜನೆ ಲಕ್ಪತಿ ದೀದಿ ಯೋಜನೆ.
ಈ ಯೋಜನೆ ಹೆಸರೇ ಹೇಳುವಂತೆ ಲಕ್ಷಾಂತರ ಹೆಣ್ಣು ಮಕ್ಕಳಿಗೆ ಉದ್ಯೋಗ ಭರವಸೆಯನ್ನು ಸೃಷ್ಟಿಸಿ ಉದ್ಯಮಿಗಳನ್ನಾಗುವ ದೂರ ದೃಷ್ಟಿಯಿಂದ ಈ ಯೋಜನೆಯನ್ನು ರಾಜಸ್ಥಾನ ಸರ್ಕಾರವು ಪರಿಚಯಿಸಿದೆ ಮತ್ತು ಇದು ದೇಶದಲ್ಲಿ ಮಾದರಿ ಯೋಜನೆ ಎನಿಸಿಕೊಂಡಿದೆ ಮತ್ತು ನಂತರ ಹಲವು ರಾಜ್ಯಗಳಿಗೆ ವಿಸ್ತರಣೆಯಾಗಿದೆ. ಮುಂದಿನ ದಿನಗಳಲ್ಲಿ ನಮ್ಮ ರಾಜ್ಯವೂ ಸೇರಿದಂತೆ ಇತರೆ ರಾಜ್ಯಗಳು ಕೂಡ ಅನುಸರಿಸುವ ಸಾಧ್ಯತೆ ಇದೆ. ಆದ್ದರಿಂದ ಈ ಯೋಜನೆ ಕುರಿತಾದ ಕೆಲ ಪ್ರಮುಖ ಸುದ್ದಿಗಳು ಹೀಗಿವೆ ನೋಡಿ.
ಯೋಜನೆಯ ಹೆಸರು:- ಲಖ್ಪತಿ ದೀದಿ ಯೋಜನೆ…
ಜಾರಿಗೆ ಬಂದ ವರ್ಷ:- 23 ಡಿಸೆಂಬರ್ 2023.
ಉದ್ದೇಶ:-
* ಭಾರತದಾದ್ಯಂತ ವಿವಿಧ ಹಳ್ಳಿಗಳಲ್ಲಿ 3ಕೋಟಿಗೂ ಹೆಚ್ಚು ಮಹಿಳೆಯರನ್ನು ತರಬೇತಿ ಹಾಗೂ ಸಾಲದ ಸೌಲಭ್ಯ ನೀಡಿ ಯಶಸ್ವಿ ಉದ್ಯಮಿಗಳನ್ನಾಗಿ ಮಾಡುವುದು.
ಸಿಗುವ ನೆರವು:-
* ಗರಿಷ್ಠ ರೂ.5 ಲಕ್ಷದವರೆಗೆ ಬಡ್ಡಿರಹಿತ ಸಾಲ
* ಮಹಿಳೆಯರ ಸ್ವ-ಸಹಾಯ ಗುಂಪುಗಳನ್ನು ಸೃಷ್ಟಿಸಿ ಬಲ್ಬ್ ತಯಾರಿಕೆ ತರಬೇತಿ, ಪ್ಲಂಬಿಂಗ್, ಡ್ರೋನ್ ಗಳನ್ನು ದುರಸ್ತಿ ಮಾಡುವುದು, ಪಶುಪಾಲನೆ, ಅಣಬೆ ಕೃಷಿಯಂತಹ ವಿವಿಧ ತರಬೇತಿ ಕಾರ್ಯಕ್ರಮಗಳನ್ನು ನೀಡುವುದರ ಜೊತೆಗೆ ಹಣಕಾಸು ನಿರ್ವಹಣೆ, ಮಾರ್ಕೆಟಿಂಗ್, ಆನ್‌ಲೈನ್ ವ್ಯವಹಾರ, ವ್ಯವಹಾರದಲ್ಲಿ ತರಬೇತಿಯನ್ನು ಸಹಾ ನೀಡಿ ಪ್ರೋತ್ಸಾಹಿಸಲಾಗುತ್ತದೆ.
ಅರ್ಹತೆಗಳು:-
* ಸ್ವ-ಸಹಾಯ ಸಂಘಗಳ ಸದಸ್ಯರಾಗಿರುವವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ
* 18 ರಿಂದ 50 ವರ್ಷದೊಳಗಿನ ಮಹಿಳೆಯರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
* ಯೋಜನೆಯು ಜಾರಿಯಲ್ಲಿರುವ ರಾಜ್ಯದ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಬೇಕಾಗುವ ದಾಖಲೆಗಳು:-
* ಆಧಾರ್ ಕಾರ್ಡ್
* ಬ್ಯಾಂಕ್ ಪಾಸ್ಬುಕ್
* SHG ಸದಸ್ಯತ್ವ ಕಾರ್ಡ್
* ಜಾತಿವಪ್ರಮಾಣ ಪತ್ರ
* ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ
* ಪಾಸ್ಪೋರ್ಟ್ ಸೈಜ್ ಫೋಟೋ
* ಇನ್ನಿತರ ಪ್ರಮುಖ ದಾಖಲೆಗಳು
ಅರ್ಜಿ ಸಲ್ಲಿಸುವ ವಿಧಾನ:-
* ಈ ಯೋಜನೆಗೆ ಅರ್ಜಿ ಸಲ್ಲಿಸಲು ಮಹಿಳೆಯರು ಈ ಮೇಲೆ ತಿಳಿಸಿದ ಎಲ್ಲಾ ದಾಖಲೆಗಳನ್ನು ಸಿದ್ಧ ಪಡಿಸಿ ಕೊಂಡು ಹತ್ತಿರದಲ್ಲಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದು
* ಅಥವಾ ಹತ್ತಿರದ ಅಂಗನವಾಡಿ ಕೇಂದ್ರಗಳಲ್ಲಿ ಕೂಡ ಈ ಯೋಜನೆಗೆ ಅರ್ಜಿ ವಿತರಣೆ ಮಾಡಲಾಗುತ್ತದೆ. ಇಲ್ಲಿಯು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ. ಅಂಗನವಾಡಿ ಸಹಾಯಕರು ಅಥವಾ ಸಿಬ್ಬಂದಿಗಳ ಮೂಲಕ ಹೆಚ್ಚಿನ ಮಾಹಿತಿ ಪಡೆದು ಸರಿಯಾದ ವಿಧಾನದಲ್ಲಿ ಅರ್ಜಿ ನಮೂನೆಯಲ್ಲಿ ಕೇಳಿರುವ ಮಾಹಿತಿಗಳನ್ನು ಭರ್ತಿ ಮಾಡಿ ತಪ್ಪದೇ ದಾಖಲೆಗಳನ್ನು ಕೂಡ ಲಗತ್ತಿಸಿರಬೇಕು
* ಅರ್ಜಿ ಸಲ್ಲಿಕೆ ಯಶಸ್ವಿ ಆದ ನಂತರ ಇಲಾಖೆಯ ಉನ್ನತ ಅಧಿಕಾರಿಗಳಿಂದ ಅರ್ಜಿ ಪರಿಶೀಲನೆ ನಡೆದು ಹಣ ವರ್ಗಾವಣೆ ಆಗುತ್ತದೆ ಮತ್ತು ಈ ಪ್ರೋಸೆಸ್ ನ ಸಂಪೂರ್ಣ ಮಾಹಿತಿಯು ಫಲಾನುಭವಿಗಳಿಗೆ SMS ಸಂದೇಶದ ಮೂಲಕ ತಲುಪುತ್ತದೆ
* ಈ ಕುರಿತಾದ ಯಾವುದೇ ಹೆಚ್ಚಿನ ಮಾಹಿತಿಗಾಗಿ ಸರ್ಕಾರದ ಅಧಿಕೃತ ವೆಬ್ಸೈಟ್ಗಳಿಗೆ ಭೇಟಿ ಕೊಟ್ಟು ಮಾಹಿತಿ ಪಡೆಯಿರಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರ ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.