Mosquito Net
ಬಿಪಿಎಲ್ ರೇಷನ್ ಕಾರ್ಡ್(BPL Ration Card) ನ್ನು ಬಡತನ ರೇಖೆಗಿಂತ ಕೆಳಗಿರುವ ವರ್ಗದ ಜನರಿಗೆ ಸರ್ಕಾರ ನೀಡುವ ಪಡಿತರವನ್ನು ಕಟ್ಟ ಕಡೆಯ ಅರ್ಹ ವ್ಯಕ್ತಿಗೂ ತಲುಪಿಸಲು ಸಹಾಯ ಮಾಡುವ ಸರ್ಕಾರಿ ದಾಖಲೆಯಾಗಿದೆ. ಇದಲ್ಲದೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಇನ್ನಿತರ ಹಲವು ಯೋಜನೆಗಳಿಗೆ ಅರ್ಹತೆ ಪಡೆಯಲು ಬಿಪಿಎಲ್ ರೇಷನ್ ಕಾರ್ಡ್ ಕಾಡ್ಡಾಯವಾಗಿರುತ್ತದೆ.
ರಾಜ್ಯ (State Govt) ಮತ್ತು ಕೇಂದ್ರ ಸರ್ಕಾರ(Central Govt)ಗಳೂ ಬಿಪಿಎಲ್ ಕಾರ್ಡ್ ಯೋಜನೆಯ ಮೂಲಕ ಬಡ ಜನರ ಸಾಮಾಜಿಕ ಮತ್ತು ಆರ್ಥಿಕ ಜೀವನದಲ್ಲಿ ಸುಧಾರಣೆಯನ್ನು ತರುವ ನಿಟ್ಟಿನಲ್ಲಿ ಕೆಲಸವನ್ನು ನಿರ್ವಹಿಸುತ್ತವೆ ಬಿಪಿಎಲ್ ಕಾರ್ಡುದಾರರಿಗೆ ಸರ್ಕಾರ ಆಗಾಗಾ ಗುಡ್ ನ್ಯೂಸ್ ನೀಡುತ್ತಲೇ ಇರುತ್ತದೆ.
ಇನ್ನೂ ಇದೀಗ ರಾಜ್ಯದಲ್ಲಿ ಡೆಂಗ್ಯೂ(Dengue) ಉಲ್ಬಣಿಸುತ್ತಿದ್ದು, ಈ ಹಿನ್ನೆಲೆ ಇದೀಗ ಮುಂಜಾಗ್ರತಾ ಕ್ರಮವಾಗಿ ಸರ್ಕಾರವು ಬಿಪಿಎಲ್ ಕಾರ್ಡುದಾರರಿಗೆ ಉಚಿತವಾಗಿ ಸೊಳ್ಳೆ ಪರದೆ(Mosquito net) ವಿತರಣೆ ಮಾಡಲು ಮುಂದಾಗಿದೆ.
ಈ ಸುದ್ದಿ ಓದಿ:- Metro Recruitment: ಬೆಂಗಳೂರು ಮೆಟ್ರೋದಲ್ಲಿರುವ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ.! ವೇತನ 51,350/- ಆಸಕ್ತರು ಅರ್ಜಿ ಸಲ್ಲಿಸಿ.!
ರಾಜ್ಯದಲ್ಲಿ ಡೆಂಘಿ ಜ್ವರ(Dengue fever) ಪರಿಸ್ಥಿತಿಯ ಸೂಕ್ಷ್ಮ ಮೇಲ್ವಿಚಾರಣೆಗೆ ವಾರ್ ರೂಮ್ ಪ್ರಾರಂಭಿಸಿ, ಡೆಂಘಿ ಪೀಡಿತರ ಮೇಲೆ 14 ದಿನಗಳು ನಿಗಾ ವಹಿಸಬೇಕೆಂದು ಆರೋಗ್ಯ ಇಲಾಖೆಯು ಜಿಲ್ಲಾಧಿಕಾರಿಗಳಿಗೆ ಸರ್ಕಾರ ಸೂಚಿಸಿದೆ. ಆರೋಗ್ಯ ಸೌಧದಲ್ಲಿರುವ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮ ವಿಭಾಗವು ರಾಜ್ಯಮಟ್ಟದ ವಾರ್ ರೂಮ್ ಉಸ್ತುವಾರಿ ಹೊಂದಿರಲಿದೆ.
ಬಿಬಿಎಂಪಿ ಹಾಗೂ ಜಿಲ್ಲಾಡಳಿತಗಳು ಅಧಿಕ ಪ್ರಕರಣಗಳು ವರದಿಯಾದ ಪ್ರದೇಶ ಗುರುತಿಸಿ, ವಿವರವನ್ನು ರಾಜ್ಯಮಟ್ಟದ ವಾರ್ ರೂಮ್ಗೆ ಸಲ್ಲಿಸಬೇಕು. ಹೆಚ್ಚು ಪ್ರಕರಣಗಳು ವರದಿಯಾದ ಪ್ರದೇಶಗಳಲ್ಲಿ ಲಾರ್ವಾ ನಾಶ ಚಟುವಟಿಕೆಗಳನ್ನು ತೀವ್ರಗೊಳಿಸಬೇಕು. ಜ್ವರ ಕ್ಲಿನಿಕ್ಗಳನ್ನು ತುರ್ತಾಗಿ ಪ್ರಾರಂಭಿಸಬೇಕು. ಬಿಪಿಎಲ್ ಕುಟುಂಬಗಳಿಗೆ ಸೊಳ್ಳೆ ಪರದೆ ವಿತರಣೆ ಮಾಡಬೇಕು ಎಂದು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಸುತ್ತೋಲೆ ಹೊರಡಿಸಿದ್ದಾರೆ.
ಡೆಂಗ್ಯೂ ಜ್ವರ ಎಂದರೇನು?
ಡೆಂಗ್ಯೂ ಜ್ವರ ಈಡಿಸ್ ಸೊಳ್ಳೆಗಳಿಂದ ಹರಡುವ ವೈರಲ್ ಕಾಯಿಲೆಯಾಗಿದೆ. ಇದು ಉಷ್ಣವಲಯದ ಮತ್ತು ಉಪೋಷ್ಣವಲಯದ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಡೆಂಗ್ಯೂ ಸೌಮ್ಯದಿಂದ ತೀವ್ರವಾಗಿರುತ್ತದೆ, ತೀವ್ರತರವಾದ ಪ್ರಕರಣಗಳು ಡೆಂಗ್ಯೂ ಹೆಮರಾಜಿಕ್ ಜ್ವರ ಅಥವಾ ಡೆಂಗ್ಯೂ ಶಾಕ್ ಸಿಂಡ್ರೋಮ್‌ಗೆ ಕಾರಣವಾಗಬಹುದು, ಇದು ಜೀವಕ್ಕೆ ಅಪಾಯಕಾರಿ.
ಡೆಂಗ್ಯೂ ಜ್ವರದ ಲಕ್ಷಣಗಳೇನು?
– ಹಠಾತ್ ಅಧಿಕ ಜ್ವರ
– ತೀವ್ರ ತಲೆನೋವು
– ಕಣ್ಣುಗಳ ಹಿಂದೆ ನೋವು
– ತೀವ್ರವಾದ ಕೀಲು ಮತ್ತು ಸ್ನಾಯು ನೋವು
– ಆಯಾಸ
– ವಾಕರಿಕೆ
– ವಾಂತಿ
– ಮೂಗು ಅಥವಾ ಒಸಡುಗಳಿಂದ ಸ್ವಲ್ಪ ರಕ್ತಸ್ರಾವ
– ಸೌಮ್ಯವಾದ ಮೂಗೇಟುಗಳು
ಡೆಂಗ್ಯೂ ಜ್ವರಕ್ಕೆ ಚಿಕಿತ್ಸೆ ಏನು?
ಡೆಂಗ್ಯೂ ಜ್ವರಕ್ಕೆ ನಿರ್ದಿಷ್ಟ ಆಂಟಿವೈರಲ್ ಚಿಕಿತ್ಸೆ ಇಲ್ಲ. ನಿರ್ವಹಣೆಯು ಬೆಂಬಲ ಆರೈಕೆಯ ಮೇಲೆ ಕೇಂದ್ರೀಕರಿಸುತ್ತದೆ, ಇದರಲ್ಲಿ ಈ ಕೆಳಗಿನವು ಸೇರಿವೆ…
ಈ ಸುದ್ದಿ ಓದಿ:- Bank Service Charges: ಬ್ಯಾಂಕ್ ಗ್ರಾಹಕರಿಗೆ ಬೇಸರದ ಸುದ್ದಿ, ಇನ್ಮುಂದೆ ಈ ಬ್ಯಾಂಕುಗಳ ಸರ್ವಿಸ್ ಜಾರ್ಜ್ ಹೆಚ್ಚಾಗಳಿದೆ.!
– ಜಲಸಂಚಯನ: ನಿರ್ಜಲೀಕರಣವನ್ನು ತಡೆಗಟ್ಟಲು ಚೆನ್ನಾಗಿ ಹೈಡ್ರೀಕರಿಸುವುದು ಬಹಳ ಮುಖ್ಯ .
– ನೋವು ಮತ್ತು ಜ್ವರ ನಿರ್ವಹಣೆ: ಅಸೆಟಾಮಿನೋಫೆನ್‌ನಂತಹ ಓವರ್-ದಿ-ಕೌಂಟರ್ ನೋವು ನಿವಾರಕಗಳು ರೋಗಲಕ್ಷಣಗಳನ್ನು ನಿರ್ವಹಿಸಲು ಸಹಾಯ ಮಾಡಬಹುದು.
– ಮಾನಿಟರಿಂಗ್: ತೊಡಕುಗಳಿಗೆ, ವಿಶೇಷವಾಗಿ ತೀವ್ರವಾದ ಡೆಂಗ್ಯೂಗೆ ನಿಕಟ ಮೇಲ್ವಿಚಾರಣೆ ಅತ್ಯಗತ್ಯ. ಎಚ್ಚರಿಕೆಯ ಚಿಹ್ನೆಗಳು ಕಾಣಿಸಿಕೊಂಡರೆ ತಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆಯಿರಿ.