HSRP ನಂಬರ್ ಪ್ಲೇಟ್ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಸರ್ಕಾರ.!

 

ಕಳೆದ ಒಂದು ವರ್ಷದಿಂದ ರಾಜ್ಯದ ಮಟ್ಟಿಗೆ ಹರಿದಾಡುತ್ತಿರುವ ಸಾಕಷ್ಟು ಸುದ್ದಿಗಳಲ್ಲಿ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಕೆ ಕುರಿತಾದ ಸುದ್ದಿ ಕೂಡ ಪ್ರಮುಖವಾದದ್ದು. ಕೇಂದ್ರ ಸರ್ಕಾರವು ದೇಶದ ಆಂತರಿಕ ಭದ್ರತೆ ಹಾಗೂ ವಾಹನಗಳ ಸುರಕ್ಷತೆ ಉದ್ದೇಶದಿಂದಾಗಿ ಎಲ್ಲಾ ಬಗೆಯ ವಾಹನಗಳಿಗೂ HSRP ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯ ಎಂದು ನಿಯಮ ಜಾರಿಗೆ ತಂದಿದೆ.

WhatsApp Group Join Now
Telegram Group Join Now

ಈಗಾಗಲೇ ದೇಶದ ಹಲವು ರಾಜ್ಯಗಳಲ್ಲಿ ನೂರಕ್ಕೆ ನೂರರಷ್ಟು ಈ ನಿಯಮ ಅಳವಡಿಕೆ ಆಗಿದೆ, ಕರ್ನಾಟಕ ರಾಜ್ಯವು ಕೂಡ ಆಗಸ್ಟ್ 2023 ರಲ್ಲಿ ಈ ನಿಯಮ ಅಳವಡಿಸಿಕೊಂಡು ವಾಹನ ಸವಾರರಿಗೆ ಸಾಕಷ್ಟು ಸಮಯಾವಕಾಶವನ್ನು ನೀಡಿತ್ತು. ಆ ಪ್ರಕಾರವಾಗಿ ಮೇ 31, 2024 ಇದಕ್ಕೆ ಅಂತಿಮ ಗಡುವು ಆ ಬಳಿಕ HSRP ನಂಬರ್ ಪ್ಲೇಟ್ ಇಲ್ಲದೆ ವಾಹನಗಳು ರಸ್ತೆಗಳಿದರೆ ಸಂಚಾರಿ ನಿಯಮದ ಉಲ್ಲಂಘನೆ ಆಧಾರದ ಮೇಲೆ ದೊಡ್ಡ ಮೊತ್ತದ ದಂಡ ವಿಧಿಸುವುದಾಗಿ ಎಚ್ಚರಿಸಿತ್ತು.

ಈ ವಿಚಾರವಾಗಿ ಒಂದು ಪ್ರಮುಖ ಬದಲಾವಣೆಯಾಗಿದೆ. ಆ ಬಗ್ಗೆ ನಾವು ಈ ಲೇಖನದಲ್ಲಿ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದೇವೆ. ಸಾಮಾನ್ಯವಾಗಿ 2019 ರ ನಂತರ ಖರೀದಿಸಿರುವ ಎಲ್ಲ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಯಾಗಿರುತ್ತದೆ ಆದರೆ ಅದಕ್ಕೂ ಹಿಂದೆ ಖರೀದಿಸಿದ ವಾಹನಗಳಲ್ಲಿ ಸಾಮಾನ್ಯ ನಂಬರ್ ಪ್ಲೇಟ್ ಇರುತ್ತದೆ.

HSRP ನಂಬರ್ ಪ್ಲೇಟ್ ಎನ್ನುವುದು ಸಾಮಾನ್ಯ ನಂಬರ್ ಪ್ಲೇಟ್ ಗಿಂತ ವಿಭಿನ್ನವಾಗಿದೆ. ಹೆಸರೇ ಹೇಳುವಂತೆ ಇದು ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್. ಅಲ್ಯುಮಿನಿಯಂ ಲೋಹದಿಂದ ತಯಾರಿಸಿದ  ಈ ಪ್ಲೇಟ್‌ಗಳಲ್ಲಿ ಇಂಗ್ಲಿಷ್ ಅಕ್ಷರಗಳು ಹಾಗೂ ನಂಬರ್‌ಗಳು ಉಬ್ಬಿಕೊಂಡಿರುವ ರೀತಿ ಅಚ್ಚಾಗಿರುತ್ತೆ ಹಲವು ತಂತ್ರಜ್ಞಾನ ಬಳಸಿ ಇದನ್ನು ತಯಾರಿಸಲಾಗಿತ್ತು ಇದನ್ನು ತಿದ್ದಲು ಬದಲಾಯಿಸಲು ಸಾಧ್ಯವಾಗುವುದಿಲ್ಲ ಹೀಗಾಗಿ.

ವಾಹನದ ಬಗೆಗಿನ ಡಾಟಾ ಸಂಗ್ರಹಣೆಗೆ ಈ ನಂಬರ್ ಪ್ಲೇಟ್ಗಳು ಅನುಕೂಲಕರ ಎಂದು ಪರಿಗಣಿಸಿರುವುದರಿಂದ ನಿಮ್ಮ ವಾಹನಗಳಿಗೆ ಇವುಗಳನ್ನು ಅಳವಡಿಸಿಕೊಂಡಾಗ ವಾಹನ ಸುರಕ್ಷಿತವಾಗಿರುತ್ತದೆ. ಒಂದು ವೇಳೆ ವಾಹನ ಕಳೆದುಹೋದರೆ ಸಾರಿಗೆ ಸಚಿವಾಲಯದಲ್ಲಿ ಈಗಾಗಲೇ ರಿಜಿಸ್ಟರ್ ಆಗಿರುವಂತಹ ಮಾಹಿತಿ ಪ್ರಕಾರ ಸುಲಭವಾಗಿ ವಾಹನವನ್ನು ಪತ್ತೆ ಹಚ್ಚಬಹುದು ಹಾಗೂ ನಿಮ್ಮ ವಾಹನಗಳು ಕಳ್ಳತನವಾಗಿ ಕಾನೂನು ಬಾಹಿರ ಚಟುವಟಿಕೆಗಳಿಗೆ ಬಳಕೆ ಆಗದಂತೆ ನೀವು ತಡೆಗಟ್ಟಬಹುದು ಇದರಿಂದ ಗ್ರಾಹಕನಿಗೆ ಮಾತ್ರವಲ್ಲದೆ ಪರೋಕ್ಷವಾಗಿ ದೇಶಕ್ಕೂ ಕೂಡ ಇದು ಉಪಯುಕ್ತವೇ.

ಹಾಗಾಗಿ ಸರ್ಕಾರ ಕಳೆದೊಂದು ವರ್ಷದಿಂದ ಈ HSRP ನಂಬರ್ ಪ್ಲೇಟ್ ಅಳವಡಿಕೆಗೆ ಸಾಕಷ್ಟು ಸಮಯ ನೀಡಿತ್ತು ಮತ್ತು ಇದರ ಮಾರ್ಗಸೂಚಿಯನ್ನು ಕೂಡ ವಿವರವಾಗಿ ತಿಳಿಸಿತ್ತು. ಹತ್ತಿರದ ಶೋರೂಮ್ ಅಥವಾ ಡೀಲರ್ ಗಳ ಬಳಿ ಅಥವಾ ಆನ್ಲೈನ್ ನಲ್ಲಿ ಬುಕ್ ಮಾಡುವ ಮೂಲಕ ದ್ವಿ ಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ ಸುಲಭವಾಗಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳುವ ಬಗ್ಗೆ ತಿಳಿಸಿಕೊಟ್ಟಿತ್ತು ಮತ್ತು ಮೇ 31ರ ಒಳಗೆ ಇದು ಪೂರ್ತಿ ಆಗಬೇಕು ಎಂದು ಸಮಯ ಅವಕಾಶ ನೀಡಿ ಆ ನಂತರ HSRP ನಂಬರ್ ಪ್ಲೇಟ್ ಇಲ್ಲದೆ ಹಳೆ ವಾಹನಗಳು ವಾಹನ ರಸ್ತೆಗಳಿದ್ದರೆ ದಂಡ ಬೀಳುತ್ತದೆ ಎನ್ನುವ ಎಚ್ಚರಿಕೆ ನೀಡಿತ್ತು.

ಕಾರಣಾಂತರಗಳಿಂದ ಇನ್ನು ತಡವಾಗಿರುವ ವಾಹನ ಸವಾರರು ಈ ವಿಚಾರವಾಗಿ ಆತಂಕ ಪಡುವುದು ಬೇಡ. ಕರ್ನಾಟಕ ಹೈಕೋರ್ಟ್ ಇದಕ್ಕೆ ತಡೆ ತಂದು ಇನ್ನಷ್ಟು ಕಾಲಾವಕಾಶವನ್ನು ನೀಡಿದೆ. ಬಲವಾದ ಮೂಲದಿಂದ ತಿಳಿದು ಬಂದ ಮಾಹಿತಿಯ ಪ್ರಕಾರ HSRP ಅಳವಡಿಸಿಕೊಳ್ಳದೇ ಇದ್ದಲ್ಲಿ ಜುಲೈ 4ನೇ ದಿನಾಂಕದವರೆಗೆ ಯಾವುದೇ ರೀತಿಯ ದಂಡವನ್ನು ವಿಧಿಸಬಾರದು ಎನ್ನುವುದಾಗಿ ಟ್ರಾಫಿಕ್ ಪೊಲೀಸರಿಗೆ ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ ಎಂಬುದಾಗಿ ತಿಳಿದು ಬಂದಿದೆ.

ರಾಜ್ಯದ ಎರಡು ಕೋಟಿಗೂ ಹೆಚ್ಚಿನ ಹಳೆಯ ವಾಹನಗಳಲ್ಲಿ ಕೇವಲ 35 ರಿಂದ 40 ಲಕ್ಷ ವಾಹನಗಳು ಮಾತ್ರ HSRP ನಂಬರ್ ಪ್ಲೇಟ್ ಗಾಗಿ ರಿಜಿಸ್ಟರ್ ಮಾಡಿಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ಈ ಸಂಬಂಧ ಹಳೆಯ ವಾಹನಗಳ HSRP ಅಳವಡಿಕೆ ವಿಚಾರದಲ್ಲಿ BND ಎನರ್ಜಿ ಲಿಮಿಟೆಡ್ ಸಂಸ್ಥೆ ಹೈಕೋರ್ಟ್ ಮೆಟ್ಟಿಲು ಏರಿತ್ತು. ಈ ಪ್ರಕರಣದ ಪ್ರಕಾರ ಮೊದಲಿಗೆ ಜೂನ್ 12ರಂದು ಕೊನೆಯ ದಿನಾಂಕ ಎಂಬುದಾಗಿ ಪರಿಗಣಿಸಲಾಗಿತ್ತು ಹಾಗೂ ನಂತರ ಈಗ ಅದು ಮುಂದುವರೆದು ಜುಲೈ 4ರವರೆಗೆ ವಿಸ್ತರಣೆಯಾಗಿದೆ ಎಂದು ತಿಳಿದು ಬಂದಿದೆ.

ಸಂಸ್ಥೆಯು ಹೈಕೋರ್ಟ್ ನಲ್ಲಿ ಮೇಲ್ಮನೆಗೆ ಸಲ್ಲಿಸಿರುವುದೇ ಈ ದಿನಾಂಕ ವಿಸ್ತರಣೆಯಾಗುವುದಕ್ಕೆ ಕಾರಣ ಎನ್ನುವುದು ತಿಳಿದುಬಂದಿದ್ದು ಸದ್ಯಕ್ಕೆ ವಾಹನ ಸವಾರರಿಗೆ ಸಮಾಧಾನ ತಂದಿದೆ. ಆದರೂ ಆದಷ್ಟು ಶೀಘ್ರವಾಗಿ ಸರ್ಕಾರದ ನಿಯಮದಂತೆ ವಾಹನದ ನಂಬರ್ ಪ್ಲೇಟ್ HSRP ಗೆ ಬದಲಾಯಿಸಿ ಇಲ್ಲವಾದಲ್ಲಿ ದಂಡ ಬೀಳುವುದು ಮಾತ್ರವಲ್ಲದೆ ನಿಮ್ಮ ವಾಹನವನ್ನ ಮಾರಾಟ ಮಾಡಿದ ಸಂದರ್ಭದಲ್ಲಿ ಮಾಲೀಕತ್ವದ ಬದಲಾವಣೆ, ವಿಳಾಸ ಬದಲಾವಣೆಗೆ ಸಮಸ್ಯೆಯಾಗುತ್ತದೆ ಮತ್ತು ನಕಲಿ RC ಕೂಡ ಸಿಗುವುದಿಲ್ಲ, ವಿಮೆ ಅಪ್ಡೇಟ್ ಮಾಡುವುದಕ್ಕೆ ಸಹಾ ಆಗುವುದಿಲ್ಲ ಇನ್ನು ಅನೇಕ ಸಮಸ್ಯೆಗಳಾಗುತ್ತದೆ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment