ಜಮೀನು ಇರುವ ರೈತರಿಗೆ ಸರ್ಕಾರದಿಂದ ಹೊಸ ರೂಲ್ಸ್ ಜಾರಿ.!

 

ಆಧಾರ್ – ಪಾನ್ ಕಾರ್ಡ್ ಲಿಂಕ್, ಆಧಾರ್ – ಬ್ಯಾಂಕ್ ಅಕೌಂಟ್ ಲಿಂಕ್, ಆಧಾರ್ – ರೇಷನ್ ಕಾರ್ಡ್ ಲಿಂಕ್ ಬಳಿಕ ರಾಜ್ಯದಲ್ಲಿ ಆಧಾರ್ – ಪಹಣಿ ಲಿಂಕ್ (Aadhar – RTC link) ಬಗ್ಗೆ ಹೆಚ್ಚು ಸುದ್ದಿ ಇದೆ. ಆದರೆ ಇದು ಹೊಸದಾಗಿ ಬಂದಿರುವಂತಹ ನಿಯಮವೇನು ಅಲ್ಲ. ರಾಜ್ಯ ಸರ್ಕಾರವು ಈ ವರ್ಷದ ಬರಗಾಲ ಪರಿಹಾರ ಹಣ ಬಿಡುಗಡೆ ಮಾಡುವ ಸಮಯದಲ್ಲಿಯೇ ಈ ಬಗ್ಗೆ ಪ್ರಕಟಣೆ ಹೊರಡಿಸತ್ತು.

WhatsApp Group Join Now
Telegram Group Join Now

ಎಲ್ಲಾ ರೈತರು (Farmers) ತಪ್ಪದೆ ಫ್ರೂಟ್ಸ್ ತಂತ್ರಾಂಶದಲ್ಲಿ (FRUITS) ನೋಂದಾಯಿಸಿಕೊಂಡು ತಮ್ಮ ಆಧಾರ್ ಕಾರ್ಡ್ ಜೊತೆ ಪಹಣಿ, ಬ್ಯಾಂಕ್ ಖಾತೆ ಮತ್ತು ಮೊಬೈಲ್ ಸಂಖ್ಯೆ ಲಿಂಕ್ ಮಾಡಿಸಿ ಎಫ್ ಐ ಡಿ (FID) ಪಡೆದುಕೊಳ್ಳಬೇಕು ಇಲ್ಲವಾದಲ್ಲಿ ಬರ ಪರಿಹಾರದ ಹಣ ವರ್ಗಾವಣೆ ಸಮಯದಲ್ಲಿ ಸಮಸ್ಯೆ ಆಗಬಹುದು ಎಂದು ಎಚ್ಚರಿಕೆ ನೀಡಿತ್ತು ಅದೇ ಪ್ರಕಾರವಾಗಿ ಪರ ಪರಿಹಾರದ ಹಣ ಬಿಡುಗಡೆ ಆದ ನಂತರ ಹಣ ಪಡೆಯಲಾಗದ ಅನೇಕರ ಇತರ ಕಾರಣಗಳಲ್ಲಿ ಇದು ಕೂಡ ಒಂದಾಗಿತ್ತು.

ಈಗ ರಾಜ ಸರ್ಕಾರದ (Government) ಕಡೆಯಿಂದ ಎರಡು ಕಂತುಗಳಲ್ಲಿ ಬರ ಪರಿಹಾರದ (drought releif) ಹಣ ಪಡೆಯಲಾಗದವರಿಗೆ ಮಾತ್ರ ತಮ್ಮ ಸಮಸ್ಯೆಗಳನ್ನು ಸರಿಪಡಿಸಿಕೊಂಡಲ್ಲಿ ಮೊದಲ ಕಂತಿನ ಬರ ಪರಿಹಾರದ ಹಣ (3rd Installment) ನೀಡಲಾಗುತ್ತಿದೆ. ಇದರೊಂದಿಗೆ ಮಾನ್ಯ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡರವರು (Revenue Inspector Krishna Bairegowda) ಆಧಾರ್ – ಪಹಣಿ ಲಿಂಕ್ ಬಗ್ಗೆ ಮತ್ತೊಮ್ಮೆ ಮಾತನಾಡಿ ಕಾರಣಗಳನ್ನು ಸ್ಪಷ್ಟಪಡಿಸಿ ಇದರ ಅನುಕೂಲತೆ ಅನಾನುಕೂಲತೆಗಳ ಬಗ್ಗೆ ಮಾತನಾಡಿದ್ದಾರೆ.

ಮಾಧ್ಯಮಗಳ ಸಂದರ್ಶನ ಒಂದರಲ್ಲಿ ಈ ಬಗ್ಗೆ ಮಾತಿಗಿಳಿದ ಕಂದಾಯ ಸಚಿವರು ಯಾರದ್ದೋ ಜಮೀನನ್ನು ಮತ್ತೊಬ್ಬರು ಲಪಟಾಯಿಸುವುದನ್ನು ತಡೆಯಲು, ಬೆಳೆ ನಷ್ಟ ಮತ್ತಿತರ ಸಂದರ್ಭಗಳಲ್ಲಿ ದೊರೆಯುವ ಪರಿಹಾರದ ಧನವನ್ನು ಮತ್ತೊಬ್ಬರು ಪಡೆದು ದುರ್ಬಳಕೆ ಮಾಡಿಕೊಳ್ಳುವುದನ್ನು ತಪ್ಪಿಸಲು ರಾಜ್ಯದಲ್ಲಿನ ಎಲ್ಲಾ ಆಸ್ತಿಗಳಿಗೆ ಆಧಾರ್ ಲಿಂಕ್ ಮಾಡುವ ಪ್ರಕ್ರಿಯ ಜುಲೈಗೆ ಅಂತ್ಯಗೊಳ್ಳುತ್ತದೆ ಎಂದು ಹೇಳಿದ್ದಾರೆ.

ಹಾಗಾಗಿ ಎಲ್ಲ ರೈತರು ತಪ್ಪದೆ ಈ ಗಡುವಿನ ಒಳಗಾಗಿ ತಮ್ಮ ಜಮೀನಿನ ದಾಖಲೆಗಳಿಗೆ ಆಧಾರ್ ಲಿಂಕ್ ಮಾಡಿಕೊಳ್ಳುವುದು ಉತ್ತಮ. ಯಾವ ವಿಧಾನದಲ್ಲಿ ಆಧಾರ್ ಲಿಂಕ್ ಮಾಡಿಸಬೇಕು? ಎಲ್ಲಿ ಮಾಡಿಸಬೇಕು? ಜೊತೆಗೆ ಯಾವೆಲ್ಲ ದಾಖಲೆಗಳನ್ನು ಕೊಡಬೇಕಾಗುತ್ತದೆ? ಇದರಿಂದ ಆಗುವ ಮತ್ತಷ್ಟು ಪ್ರಯೋಜನಗಳು ಏನು? ಎನ್ನುವ ಎಲ್ಲ ಮಾಹಿತಿಯ ಬಗ್ಗೆ ಈ ಲೇಖನದಲ್ಲಿ ವಿವರಣೆ ಕೊಡುತ್ತಿದ್ದೇವೆ. ತಪ್ಪದೆ ಈ ಉಪಯುಕ್ತ ಮಾಹಿತಿಯನ್ನು ಪ್ರತಿಯೊಬ್ಬ ರೈತನಿಗೂ ತಲುಪಿಸುವ ಉದ್ದೇಶದಿಂದ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

ಪ್ರಯೋಜನಗಳು:-

* ಕಂದಾಯ ಸಚಿವರು ಹೇಳಿದ ಕಾರಣಗಳಂತೆ ಸರ್ಕಾರದಿಂದ ಜಮೀನು ಹೊಂದಿ ಕೃಷಿ ಮಾಡುತ್ತಿರುವ ರೈತನಿಗೆ ತಲುಪಬೇಕಾದ ಎಲ್ಲಾ ಸೌಕರ್ಯಗಳು ಆತನ ಹೆಸರಿನಲ್ಲಿ ಮತ್ಯಾರಿಗೋ ಹೋಗುವುದನ್ನು ತಪ್ಪಿಸಲು ಈ ಕ್ರಮ ಅನುಸರಿಸಿದರೆ ಅನುಕೂಲವಾಗುತ್ತದೆ

* ಕೃಷಿ ಇಲಾಖೆ ಮೂಲಕ ರೈತನಿಗೆ ಸಹಾಯಧನದಲ್ಲಿ ಬಿತ್ತನೆ ಬೇಜಾರ್ ನೀಡಲಾಗುತ್ತದೆ, ಕೃಷಿ ಯಂತ್ರೋಪಕರಣಗಳನ್ನು ಕೂಡ ಸಬ್ಸಿಡಿ ದರದಲ್ಲಿ ನೀಡಲಾಗುತ್ತದೆ ಇದೆಲ್ಲ ಪ್ರಯೋಜನವು ಅಸಲಿ ಫಲಾನುಭವಿಗೆ ತಲುಪುತ್ತದೆ ಮತ್ತು ಸರ್ಕಾರದ ಬಳಿ ಈಗಾಗಲೇ ಅನುದಾನ ಪಡೆದವರ ಅಧಿಕೃತ ದಾಖಲೆ ಉಳಿಯುತ್ತದೆ

* ಬರ ಪರಿಹಾರ, ಬೆಳೆ ಪರಿಹಾರ, ಕೃಷಿಗೆ ಪ್ರೋತ್ಸಾಹ ಧನಗಳು ಇದೆಲ್ಲವೂ ನೇರವಾಗಿ ರೈತನಿಗೆ ತಲುಪುತ್ತದೆ. ಹೀಗಾಗಿ ಕೃಷಿ ಅಥವಾ ಕೃಷಿಗೆ ಪೂರಕವಾದ ಎಲ್ಲ ಸೌಕರ್ಯಗಳ ಪ್ರಯೋಜನಗಳನ್ನು ಪಡೆಯಲು ಕಡ್ಡಾಯವಾಗಿದೆ

ಬೇಕಾಗುವ ದಾಖಲೆಗಳು:-

* ರೈತನ ಹೆಸರಿನಲ್ಲಿರುವ ಎಲ್ಲಾ ಜಮೀನುಗಳ ಪಹಣಿ ಪತ್ರಗಳು
* ರೈತನ ಆಧಾರ್ ಕಾರ್ಡ್ ಪ್ರತಿ
* ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ

ಆಧಾರ್ ಪಹಣಿ ಲಿಂಕ್ ಮಾಡಿಸುವ ವಿಧಾನ,:-

* ರೈತರು ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ಗ್ರಾಮ ಆಡಳಿತ ಅಧಿಕಾರಿಗಳ (V.A.O) ಕಚೇರಿಗೆ ಹೋಗಿ ಈ ಮೇಲೆ ತಿಳಿಸಿದ ಎಲ್ಲ ದಾಖಲೆಗಳನ್ನು ನೀಡುವ ಮೂಲಕ ಆಫ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಪ್ರಕ್ರಿಯೆ ಪೂರ್ತಿಗೊಳಿಸಬಹುದು
* ಅಥವಾ ಹೋಬಳಿ ಮಟ್ಟದಲ್ಲಿರುವ ನಾಡಕಚೇರಿಗೆ ಹೋಗಿ ಕೂಡ ಆನ್ಲೈನ್ ನಲ್ಲಿ ಅಥವಾ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಲಿಂಕ್ ಮಾಡಿಸಬಹುದು.

* ಅಥವಾ ರೈತರು ತಾವೇ ಆನ್ಲೈನ್ ಅಲ್ಲಿ ಅರ್ಜಿ ಸಲ್ಲಿಸುವುದಾದರೆ ನೇರವಾಗಿ ಕಂದಾಯ ಇಲಾಖೆ ಅಧಿಕೃತ ಭೂಮಿ ವೆಬ್ ಸೈಟ್ ಗೆ (Bhoomi online) ಭೇಟಿ ನೀಡಿ ಜಮೀನು ಯಾರ ಹೆಸರಿನಲ್ಲಿದೆ ಆ ವ್ಯಕ್ತಿಯ ಮೊಬೈಲ್ ಸಂಖ್ಯೆ ಹಾಕಿ ಲಾಗಿನ್ ಆಗುವ ಮೂಲಕ ಕೂಡ ಈ ಪ್ರಕ್ರಿಯೆಯನ್ನು ಪೂರ್ತಿಗೊಳಿಸಬಹುದು.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment