Lecturer Recruitment
ರಾಜ್ಯ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಸಚಿವರಾಗಿರುವಂತಹ ಮಧು ಬಂಗಾರಪ್ಪನವರು (Education Minister Madhu Bangarappa) ಇದೀಗ ಕರ್ನಾಟಕ ರಾಜ್ಯದ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಉಪನ್ಯಾಸಕರ ಹುದ್ದೆಗಳಿಗೆ (P U Lecturer) ನೇಮಕಾತಿ ಮಾಡಿಕೊಳ್ಳುವ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಕರ್ನಾಟಕ ರಾಜ್ಯದ ಪದವಿ ಪೂರ್ವ ಕಾಲೇಜುಗಳಲ್ಲಿ ಒಟ್ಟು 4259 ಉಪನ್ಯಾಸಕರ ಕೊರತೆ ಇದೆ ಆದರೆ ಸದ್ಯಕ್ಕೆ ಇವುಗಳ ಪೈಕಿ 814 ಹುದ್ದೆಗಳನ್ನು ತುಂಬಿಸುವುದಕ್ಕೆ ಸಚಿವರು ಭರವಸೆ ನೀಡಿದ್ದಾರೆ. ಇದರ ಕುರಿತಂತೆ ಅಧಿಕೃತ ಅಧಿಸೂಚನೆ ಕೂಡ ಬಿಡುಗಡೆಯಾಗಿದ್ದು ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವವರಿಗೆ ಅನುಕೂಲತೆ ಮಾಡಿಕೊಡುವ ಸಲುವಾಗಿ ಈ ನೇಮಕಾತಿ ಕುರಿತಂತೆ ಪ್ರಕಟಣೆಯಲ್ಲಿರುವ ಪ್ರಮುಖ ಅಂಶಗಳ ವಿವರವನ್ನು ಈ ಲೇಖನದಲ್ಲಿ ಮೂಲಕ ವಿವರಿಸುತ್ತಿದ್ದೇವೆ. ತಪ್ಪದೇ ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರೊಂದಿಗೂ ಹಂಚಿಕೊಳ್ಳಿ.
ಈ ಸುದ್ದಿ ಓದಿ:- Gruhalakshmi: ಮನೆ ಯಜಮಾನಿಯರಿಗೆ ಗುಡ್ ನ್ಯೂಸ್ ನಿಮ್ಮ ಖಾತೆ ಸೇರಲಿದೆ 2 ತಿಂಗಳ ʻಗೃಹಲಕ್ಷ್ಮಿʼ ಹಣ.!
ನೇಮಕಾತಿ ಸಂಸ್ಥೆ:- ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA)
ಹುದ್ದೆ ಹೆಸರು:- ಉಪನ್ಯಾಸಕರ ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ:-
* ಒಟ್ಟು 814 ಹುದ್ದೆಗಳು
* ಕಲ್ಯಾಣ ಕರ್ನಾಟಕ ಭಾಗದಲ್ಲಿ 36 ಹುದ್ದೆಗಳು
* ಕಲ್ಯಾಣ ಕರ್ನಾಟಕೇತರ ಜಿಲ್ಲೆಗಳಲ್ಲಿ 778 ಹುದ್ದೆಗಳು
ಹುದ್ದೆಗಳ ವಿವರ (ಭಾಷಾವಾರು):-
* ಕನ್ನಡ – 105
* ರಾಜ್ಯಶಾಸ್ತ್ರ – 79
* ಮನಶಾಸ್ತ್ರ – 02
* ಗಣಕ ವಿಜ್ಞಾನ – 06
* ವಾಣಿಜ್ಯಶಾಸ್ತ್ರ – 100
* ಅರ್ಥಶಾಸ್ತ್ರ – 184
* ಇತಿಹಾಸ – 124
* ಇಂಗ್ಲೀಷ್ – 125
* ಭೂಗೋಳಶಾಸ್ತ್ರ – 20
* ಸಮಾಜಶಾಸ್ತ್ರ – 79
ವೇತನ ಶ್ರೇಣಿ:-
ಈ ಹುದ್ದೆಗಳಿಗೆ ಆಯ್ಕೆ ಆದ ಅಭ್ಯರ್ಥಿಗಳಿಗೆ ಮಾಸಿಕ ವೇತನವಾಗಿ ಮೂಲವೇತನ ರೂ.22,800 ಸಿಗುತ್ತದೆ ಮತ್ತು ಇತರೆ ಭತ್ಯೆಗಳಾಗಿ ಎಲ್ಲಾ ಸೇರಿ ಒಟ್ಟು ರೂ.43,280 ವೇತನ ಸಿಗುತ್ತದೆ.
ಈ ಸುದ್ದಿ ಓದಿ:- Montessori:- 5,000 ಟೀಚರ್ ಗಳ ನೇಮಕಾತಿಗೆ ಅಧಿಸೂಚನೆ PUC ಪಾಸ್ ಆದವರು ಅರ್ಜಿ ಸಲ್ಲಿಸಿ.!
ಶೈಕ್ಷಣಿಕ ವಿದ್ಯಾರ್ಹತೆ:-
ಈ ಮೇಲೆ ತಿಳಿಸಿದ ವಿಭಾಗಗಳಿಗೆ ಸಂಬಂಧಪಟ್ಟಂತೆ ಸಂಬಂಧಪಟ್ಟ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದು ಇದರೊಂದಿಗೆ B.ed ಅಭ್ಯಾಸ ಮಾಡಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಪ್ರಯತ್ನಿಸಬಹುದಾಗಿದೆ.
ಅರ್ಜಿ ಸಲ್ಲಿಸುವ ವಿಧಾನ:-
* ಆನ್ಲೈನ್ ವಿಧಾನದಲ್ಲಿಯೇ ಅರ್ಜಿ ಸಲ್ಲಿಸಬೇಕು
* ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಮೊದಲು ನೇರವಾಗಿ https://kea.kar.nic.in ಈ ವೆಬ್ಸೈಟ್ಗೆ ಭೇಟಿ ನೀಡಬೇಕು
* ನಂತರ ಗಮನವಿಟ್ಟು ಅಧಿಸೂಚನೆಯನ್ನು ಪೂರ್ತಿಯಾಗಿ ಓದಿರಿ, ಅರ್ಥೈಸಿಕೊಂಡ ಬಳಿಕ ಅರ್ಜಿ ಸಲ್ಲಿಸುವ ಲಿಂಕ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಗೆ ಮುಂದುವರೆಯಿರಿ.
* ಫಾರ್ಮೆಟ್ ನಲ್ಲಿ ಕೇಳಿರುವಂತೆ ವೈಯಕ್ತಿಕ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ, ಶೈಕ್ಷಣಿಕ ವಿದ್ಯಾರ್ಹತೆ ಮತ್ತು ಇನ್ನಿತರ ಮಾನದಂಡಗಳಿಗೆ ಸಂಬಂಧಪಟ್ಟ ಪೂರಕ ದಾಖಲೆಗಳ ಸಂಖ್ಯೆಗಳನ್ನು ಕೂಡ ನಮೂದಿಸಿ, ನಿಗದಿಪಡಿಸಿರುವ ಶುಲ್ಕವನ್ನು ಪಾವತಿಸಿ ಅಪ್ಲೈ ಮಾಡಬಹುದು
* ಅರ್ಜಿ ಸಲ್ಲಿಕೆ ಯಶಸ್ವಿ ಆದಮೇಲೆ ತಪ್ಪದೆ ಅರ್ಜಿ ಸ್ವೀಕೃತಿ ಪ್ರತಿ ಪಡೆಯಿರಿ.
* ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದೆ, ತಡಮಾಡದೆ ಕೂಡಲೇ ಅಪ್ಲೈ ಮಾಡಿ.
ಈ ಸುದ್ದಿ ಓದಿ:- Aadhaar Card Download: ನಿಮ್ಮ ಮೊಬೈಲ್‌ನಲ್ಲೇ ʻಆಧಾರ್ ಕಾರ್ಡ್ʼ ಡೌನ್ಲೋಡ್ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ.!
ಆಯ್ಕೆ ವಿಧಾನ:-
* ಅಪ್ಲೈ ಮಾಡಿದ ಎಲ್ಲಾ ಅಭ್ಯರ್ಥಿಗಳಿಗೂ ಕೂಡ KEA ಎರಡು ಹಂತಗಳಲ್ಲಿ ಪರೀಕ್ಷೆಗಳನ್ನು ನಡೆಸಿ ಅರ್ಹರನ್ನು ಆಯ್ದುಕೊಳ್ಳುತ್ತದೆ.
* ಮೊದಲನೇ ಹಂತದಲ್ಲಿ – TET
* ಎರಡನೇ ಹಂತದಲ್ಲಿ – CET
* ಎರಡು ಹಂತದ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರಿಗೆ ನೇರ ಸಂದರ್ಶನ ಮತ್ತು ದಾಖಲೆಗಳ ಪರಿಶೀಲನೆ ನಡೆಸಿ ಆಯ್ದುಕೊಳ್ಳಲಾಗುತ್ತದೆ