Grama Suraksha Yojana : ಕೇವಲ 1500 ರೂಪಾಯಿ ಪಾವತಿಸಿ ಸಾಕು 34 ಲಕ್ಷ ಸಿಗಲಿದೆ.!

Grama Suraksha Yojana

ಭಾರತೀಯ ಅಂಚೆ ಇಲಾಖೆ (Indian Postal Service) ಗ್ರಾಹಕರ ಅನುಕೂಲ (Customer convenience)ಕ್ಕಾಗಿ ಹಲವು ಉಳಿತಾಯ ಯೋಜನೆ(Savings Plan)ಗಳನ್ನು ಪರಿಚಯಿಸಿದೆ. ಅದ್ರಲ್ಲೂ ಈ ಯೋಜನೆಯಡಿಯಲ್ಲಿ ಕನಿಷ್ಠ ಮೊತ್ತವನ್ನು ಪಾವತಿ(Payment) ಮಾಡಿದ್ರೆ, ಗರಿಷ್ಠ ಮೊತ್ತ(Maximum amount)ವನ್ನು ವಾಪಾಸ್‌ ಪಡೆಯುವ ಅವಕಾಶವನ್ನು ಕಲ್ಪಿಸಿದೆ.

ಒಂದೊಮ್ಮೆ ನೀವು ತಿಂಗಳಿಗೆ 1,500 ರೂಪಾಯಿ ಹೂಡಿಕೆ(investment) ಮಾಡಿದ್ರೆ, 34 ಲಕ್ಷ ರೂಪಾಯಿಯ ವರೆಗೂ ರಿಟರ್ನ್‌(Return) ಪಡೆಯಬಹುದಾಗಿದೆ. ಹಾಗಾದ್ರೆ, ಈ ಯೋಜನೆ ಯಾವುದು, ಏನೆಲ್ಲಾ ಲಾಭವಿದೆ ಅನ್ನೋದನ್ನು ನೋಡೋಣಾ ಬನ್ನಿ.

WhatsApp Group Join Now
Telegram Group Join Now

ಸಾಮಾನ್ಯವಾಗಿ ಜನರು ಭವಿಷ್ಯದಲ್ಲಿ ಉತ್ತಮವಾಗಿ ಬದುಕಬೇಕು ಎಂದು ಕನಸು ಕಾಣುತ್ತಾರೆ. ಎಲ್ಲ ಯೋಚನೆ ಯೋಜನೆಯನ್ನು ಮಾಡಿರುತ್ತಾರೆ. ಆದರೆ, ಕಾರ್ಯಾಚರಣೆಗೆ ಮಾತ್ರ ಇಳಿದಿರುವುದಿಲ್ಲ. ಇನ್ನು ಕೆಲವರು ನಿಯಮಿತ ಆದಾಯದೊಂದಿಗೆ ಕಡಿಮೆ ಅಪಾಯದ ಯೋಜನೆಗಳಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿಸಿರುತ್ತಾರೆ.

ಈ ಸುದ್ದಿ ಓದಿ:- CISF Recruitment:- CISF ಸಂಸ್ಥೆಯಲ್ಲಿ ಉದ್ಯೋಗಾವಕಾಶ ಆಸಕ್ತರು ಅರ್ಜಿ ಸಲ್ಲಿಸಿ ವೇತನ:- 69,100/-

ಇಂತಹವರಿಗಾಗಿಯೇ ಕೇಂದ್ರ ಸರ್ಕಾರ ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದೆ. ಅಂಚೆ ಇಲಾಖೆ ಸಣ್ಣ ಉಳಿತಾಯಗಾರರಿಗಾಗಿ “ಗ್ರಾಮ ಸುರಕ್ಷಾ ಯೋಜನೆ (Gram Suraksha Yojana)” ಪರಿಚಯಿಸಿದೆ. ಗ್ರಾಮ ಸುರಕ್ಷಾ ಯೋಜನೆಯ ಪಕ್ವಗೊಳ್ಳುವ ಅಂದರೆ, ಮೆಚ್ಯೂರಿಟಿ ಅವಧಿಯು 55 ವರ್ಷಗಳಾಗಿವೆ.

58, 60 ವರ್ಷಗಳಿಗೂ ನೀವು ಅವಧಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ನಿಮ್ಮ ವಯಸ್ಸಿಗೆ ಅನುಗುಣವಾಗಿ ನೀವು ಪ್ರೀಮಿಯಂ ಅನ್ನು ಆಯ್ಕೆ ಮಾಡಬೇಕಾಗುತ್ತದೆ. ಗ್ರಾಮ ಸುರಕ್ಷಾ ಯೋಜನೆಯನ್ನು ಭಾರತೀಯ ಅಂಚೆ ಇಲಾಖೆ ಪರಿಚಯಿಸಿದೆ. ಈ ಯೋಜನೆಯ ಅಡಿಯಲ್ಲಿ ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಹಾಗೂ ವಾರ್ಷಿಕವಾಗಿ ಕಂತುಗಳನ್ನು ಪಾವತಿ ಮಾಡಬಹುದಾಗಿದೆ.

ವಾರ್ಷಿಕವಾಗಿ ಗರಿಷ್ಠ 10 ಸಾವಿರ ರೂಪಾಯಿಯಿಂದ 10 ಲಕ್ಷ ರೂಪಾಯಿಯ ವರೆಗೂ ಹೂಡಿಕೆ ಮಾಡಬಹುದಾಗಿದೆ. ವಯಸ್ಸಿನ ಆಧಾರದ ಮೇಲೆ ಮಾಸಿಕ ಕಂತುಗಳ ಮೊತ್ತದಲ್ಲಿ ವ್ಯತ್ಯಾಸವಾಗಲಿದೆ. ನಿಮ್ಮ ವಯಸ್ಸು 19 ವರ್ಷ ಎಂದು ತಿಳಿದುಕೊಳ್ಳಿ. ನೀವು ಪ್ರತೀ ತಿಂಗಳು 10 ಲಕ್ಷ ರೂಪಾಯಿ ಹಣವನನ್ನು ಹೂಡಿಕೆ ಮಾಡಲು ಬಯಸಿದ್ರೆ 55 ವರ್ಷಗಳ ಅವಧಿಗೆ ಮಾಸಿಕ 1,515 ರೂಪಾಯಿ ಪ್ರೀಮಿಯಂ ಪಾವತಿ ಮಾಡಬೇಕಾಗುತ್ತದೆ.

ಈ ಸುದ್ದಿ ಓದಿ:- Electricity Bill:‌ ಗೃಹಜ್ಯೋತಿ ಗ್ರಾಹಕರಿಗೆ ಬಿಗ್ ಶಾಕ್ ಇಂದಿನಿಂದ ಹೊಸ ರೂಲ್ಸ್ ಜಾರಿ.!

ಇನ್ನು 58 ವರ್ಷಗಳ ಅವಧಿಗೆ ಮಾಡಿದ್ರೆ 1,463 ರೂಪಾಯಿ ಪ್ರೀಮಿಯಂ ಹಾಗೂ 60 ವರ್ಷಗಳಿಗೆ ಹೂಡಿಕೆ ಮಾಡಿದ್ರೆ, 1,411 ರೂಪಾಯಿ ಪ್ರೀಮಿಯಂ ಪಾವತಿಸಬೇಕಾಗಿದೆ. 55 ವರ್ಷಗಳ ಅವಧಿಗೆ ಪಾಲಿಸಿಯನ್ನು ಪಡೆದುಕೊಂಡ್ರೆ ನಿಮಗೆ 31.60 ಲಕ್ಷ ರೂಪಾಯಿ, 58 ವರ್ಷದ ಅವಧಿಗೆ 33.40 ಲಕ್ಷ ರೂಪಾಯಿ ಹಾಗೂ 60 ವರ್ಷ ಅವಧಿಗೆ ಪಾಲಿಸಿಯನ್ನು ಪಡೆದುಕೊಂಡಿದ್ರೆ ನಿಮಗೆ 34.60 ಲಕ್ಷ ರೂಪಾಯಿಯನ್ನು ಪಡೆಯಬಹುದಾಗಿದೆ.

ಗ್ರಾಮೀಣ ಜನರಿಗಾಗಿ ಅಂಚೆ ಇಲಾಖೆ ಜಾರಿಗೆ ತಂದಿರುವ ಈ ಯೋಜನೆಯಲ್ಲಿ ಸುಲಭವಾಗಿ ಎಲ್ಲರೂ ಕೂಡ ಹೂಡಿಕೆ ಮಾಡಬಹುದಾಗಿದೆ. ಭಾರತೀಯ ಅಂಚೆ ಇಲಾಖೆಯಲ್ಲಿ ಕೇವಲ ಗ್ರಾಮ ಸುರಕ್ಷಾ ಯೋಜನೆ ಮಾತ್ರವಲ್ಲದೇ ಇನ್ನಷ್ಟು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಗ್ರಾಹಕರಿಗಾಗಿ ಅಂಚೆ ಇಲಾಖೆ ಜಾರಿಗೆ ತಂದಿರುವ ಯೋಜನೆಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ಸಮೀಪದಲ್ಲಿರುವ ಅಂಚೆ ಇಲಾಖೆಗೆ ಭೇಟಿ ನೀಡಿ ಅಥವಾ ಅಂಚೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಲಾಗಿನ್‌ ಆಗಿ.

ಈ ಯೋಜನೆಗೆ ಸೇರುವುದು ಹೇಗೆ?

ನಿಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ ಮತ್ತು ಈ ಯೋಜನೆಯ ಬಗ್ಗೆ ವಿಚಾರಿಸಿ. ಅದರ ನಂತರ ಸಂಬಂಧಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು ಹಾಗೂ ತ್ತು ಅಗತ್ಯ ದಾಖಲೆಗಳನ್ನು ಲಗತ್ತಿಸಿ ಸಂಬಂಧಿತ ಅಂಚೆ ಸಿಬ್ಬಂದಿಗೆ ಸಲ್ಲಿಸಬೇಕಾಗುತ್ತದೆ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment