Gruha Jyothi
ಕರ್ನಾಟಕದಲ್ಲಿ ಪ್ರಸ್ತುತವಾಗಿ ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷವು (Congress) ಕಳೆದ ವರ್ಷದ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ತನ್ನ ಸರ್ಕಾರ ಸ್ಥಾಪನೆಯಾಗುತ್ತಿದ್ದಂತೆ ಚುನಾವಣೆ ಮುನ್ನ ಪ್ರಣಾಳಿಕೆಯಲ್ಲಿ ನೀಡಿದ್ದ 5 ಗ್ಯಾರಂಟಿ ಭರವಸೆಗಳನ್ನು (5 guarantee Schemes) ಕೊಟ್ಟ ಮಾತಿನಂತೆ ಈಡೇರಿಸಿದೆ.
ಅದರಲ್ಲೀಗ ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಐತಿಹಾಸಿಕ ಯೋಜನೆ ಎಂದು ಕರೆಸಿಕೊಂಡ ಪ್ರತಿ ಮನೆಗೂ ಬೆಳಕು ಎನ್ನುವ ಧ್ಯೇಯದಡಿ ಲಾಂಚ್ ಆದ ಗೃಹಜ್ಯೋತಿ ಯೋಜನೆಯು (Gruhajyothi) ಒಂದು ವರ್ಷ ಪೂರೈಸಿಕೊಂಡ ಸಂಭ್ರಮದಲ್ಲಿದೆ. ಇಂದು ರಾಜ್ಯದ 1.65 ಕುಟುಂಬಗಳು ಗ್ರಹಜ್ಯೋತಿ ಯೋಜನೆಯ ಮೂಲಕ ಗರಿಷ್ಠ 200 ಯೂನಿಟ್ ವರೆಗೂ ಉಚಿತ ವಿದ್ಯುತ್ (free current) ಸೌಲಭ್ಯವನ್ನು ಪಡೆಯುತ್ತಿವೆ.
ಹಿಂದಿನ ಒಂದು ವರ್ಷದ ಸರಾಸರಿಯಲ್ಲಿ ಬಳಸಿರುವ ವಿದ್ಯುತ್ ಬಳಕೆ ಗಿಂತ 10% ಹೆಚ್ಚುವರಿಯೊಂದಿಗೆ ಕನಿಷ್ಠ 200 ಯೂನಿಟ್ ವರೆಗೆ ಪ್ರತಿ ಕುಟುಂಬವು ಈ ಯೋಜನೆಯ ಪ್ರಯೋಜನ ಪಡೆಯಬಹುದು ಮತ್ತು ಈ ಯೋಜನೆ ಪ್ರಯೋಜನ ಪಡೆಯುವುದಕ್ಕೆ ಆಧಾರ್ ಸಂಖ್ಯೆಯನ್ನು ಮನೆಯ ವಿದ್ಯುತ್ ID ಅಂದರೆ RR ಸಂಖ್ಯೆಯೊಂದಿಗೆ ಲಿಂಕ್ ಮಾಡಬೇಕಿತ್ತು.
ಈ ಸುದ್ದಿ ಓದಿ:- Gruhalakshmi: ಗೃಹಲಕ್ಷ್ಮಿ ಯೋಜನೆ ಹಣ ಬಾರದೇ ಇದ್ದರೆ ತಕ್ಷಣವೇ ಈ ಕೆಲಸ ಮಾಡಿ.!
ಈ ಯೋಜನೆ ಮೂಲಕ ಒಂದು ವರ್ಷದಿಂದ ಕೋಟ್ಯಾಂತರ ಕುಟುಂಬಗಳು ಒಂದು ರೂಪಾಯಿ ಕೂಡ ಕರೆಂಟ್ ಬಿಲ್ ಕಟ್ಟದೆ ಬೆಳಕು ಕಂಡು ಸಂತಸದಲ್ಲಿವೆ ಆದರೆ ಬಾಡಿಗೆ ಮನೆಯಲ್ಲಿರುವವರಿಗೆ ಮಾತ್ರ ಇದರಿಂದ ಸ್ವಲ್ಪ ಗೊಂದಲವೇರ್ಪಟ್ಟಿತ್ತು ಯಾಕೆಂದರೆ ಅನಿವಾರ್ಯ ಕಾರಣದಿಂದಾಗಿ ಮನೆ ಬದಲಾಯಿಸಿದಾಗ.
ಈಗಾಗಲೇ ಹಿಂದಿನ ಮನೆಯ RR ಸಂಖ್ಯೆಗೆ ತಮ್ಮ ಆಧಾರ ಲಿಂಕ್ ಮಾಡಿದ್ದರಿಂದ ಮುಂದೆ ಹೋಗುವ ಹೊಸ ಮನೆಯ RR ಸಂಖ್ಯೆಗೆ ಆಧಾರ್ ಲಿಂಕ್ ಮಾಡಲು ಆಗುವುದಿಲ್ಲ ಹಾಗೂ ಈಗಾಗಲೇ ಅದು ಮತ್ತೊಬ್ಬರ ಹೆಸರಿನಲ್ಲಿ ಲಿಂಕ್ ಆಗಿ ಅವರು ಹೆಚ್ಚು ಬಳಕೆ ಮಾಡಿದ್ದರೆ ಎನ್ನುವ ಸಮಸ್ಯೆ ಕಾಡುತ್ತಿತ್ತು. ಈಗ ಯೋಜನೆಗೆ ವರ್ಷ ತುಂಬಿದ ಸಂಭ್ರಮದಲ್ಲಿ ಸರ್ಕಾರ ಈ ಬಗ್ಗೆ ಗಮನಹರಿಸಿ ರಾಜ್ಯದ ಜನತೆಗೆ ಒಂದು ಸಿಹಿ ಸುದ್ದಿಯನ್ನು ಕೂಡ ನೀಡಿದೆ.
ಅದೇನೆಂದರೆ ಮನೆ ಬದಲಾಯಿಸುವಂತಹ ಗ್ರಾಹಕರು ಇನ್ನು ಮುಂದೆ ತಮ್ಮ ಆಧಾರ್ ನ್ನು ಹಳೆ ಮನೆಯ RR ಲಿಂಕ್ ಸಂಖ್ಯೆಯಿಂದ ಡಿ ಲಿಂಕ್ (De link) ಮಾಡಿಕೊಳ್ಳಬಹುದು. ನೀವು ನಿಮ್ಮ ಮನೆಯಲ್ಲಿಯೇ ಕುಳಿತು ಮೊಬೈಲ್ ಮೂಲಕ ಕೂಡ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಈ ಪ್ರಕ್ರಿಯೆ ಹೇಗೆ ಎನ್ನುವ ವಿವರಣೆ ಹೀಗಿದೆ ನೋಡಿ ಮತ್ತು ತಪ್ಪದೆ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.
ಈ ಸುದ್ದಿ ಓದಿ:- Railway Recruitment: 10th, & ITI ಪಾಸಾದವರಿಗೆ ಯಾವುದೇ ಪರೀಕ್ಷೆ ಇಲ್ಲದೇ ರೈಲ್ವೆ ಇಲಾಖೆಯಲ್ಲಿ ಉದ್ಯೋಗವಕಾಶ.!
* ಮೊದಲಿಗೆ ಸರ್ಕಾರದ ಅಧಿಕೃತ ವೆಬ್‌ಸೈಟ್ https://sevasindhu.karnataka.gov.in/ ಕ್ಲಿಕ್ ಮಾಡಿ ಸೇವಾ ಸಿಂಧು ವೆಬ್ ಪೋರ್ಟಲ್ ತಲುಪುತ್ತೀರಿ.
* ನಂತರ ಡಿ ಲಿಂಕ್ ಮಾಡುವುದಕ್ಕಾಗಿ ನೀವು ನಿಮ್ಮ ಮನೆಯ ಗೃಹಜ್ಯೋತಿ ಯೋಜನೆಗೆ ಲಿಂಕ್ ಮಾಡಿರುವ ಆಧಾರ್ ನಂಬರ್ ಎಂಟರ್ ಮಾಡಿ, Get Details ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿ.
* ಆಧಾರ್ ಕಾರ್ಡ್ ದೃಢೀಕರಿಸಲು OTP ಕಳುಹಿಸಲಾಗಿರುತ್ತದೆ ಇದನ್ನು ಪರಿಶೀಲಿಸಿ, ನಮೂದಿಸಿ ದೃಢೀಕರಿಸಿ
* ಈಗಾಗಲೇ ಇದ್ದ ಹಳೆಯ ಮನೆಯ RR ಸಂಖ್ಯೆ ಡೀಲಿಂಕ್ ಆಗಿರುವ ಕಾರಣ ನೀವು ಹೊಸ ಮನೆಯ RR ಸಂಖ್ಯೆಗೆ ಹೊಸದಾಗಿ ಲಿಂಕ್ ಮಾಡಿಕೊಳ್ಳಬಹುದು. ಎಂದಿನಂತೆ ಹಳೆಯ ವಿಧಾನವನ್ನೇ ಅನುಸರಿಸಿ ಹೊಸ ಮನೆಯ RR ಸಂಖ್ಯೆ ಹಾಗೂ ಆಧಾರ್ ಸಂಖ್ಯೆ ಹಾಕಿ ಗೃಹಜ್ಯೋತಿ ಯೋಜನೆಗೆ ನೋಂದಾಯಿಸಿಕೊಳ್ಳಿ