Gruha Jyothi
ರಾಜ್ಯ ಸರ್ಕಾರ(State Govt)ದ ಐದು ಗ್ಯಾರಂಟಿ ಯೋಜನೆ(Five Guarantee Plan)ಗಳ ಪೈಕಿ ಗೃಹ ಜ್ಯೋತಿ ಯೋಜನೆ((Gruhajyoti scheme) ಮಹತ್ವದ್ದಾಗಿದೆ. ಈ ಯೋಜನೆಯಲ್ಲಿ 200 ಯೂನಿಟ್ ವರೆಗೆ ವಿದ್ಯುತ್ ಉಚಿತವಾಗಿ ನೀಡಲಾಗುತ್ತಿದೆ. ಈವರೆಗಿನ ನಿಯಮದಂತೆ ಗ್ರಾಹಕರು ತಾವು ಬಳಕೆ ಮಾಡಿದ 200 ಮೀಟರ್ ಒಳಗಿನ ವಿದ್ಯುತ್ ಯೂನಿಟ್‌ಗೆ ಹೆಚ್ಚುವರಿಯಾಗಿ 10% ರಷ್ಟು ರಿಯಾಯಿತಿ ನೀಡಲಾಗುತ್ತಿತ್ತು. ಆದರೆ, ಇದೀಗ ಬದಲಾವಣೆಯನ್ನು ತರಲಾಗಿದೆ.
ಹೌದು, ಗೃಹಜ್ಯೋತಿ ಯೋಜನೆ ಫಲಾನುಭವಿಗಳಿಗೆ ರಾಜ್ಯ ಸರ್ಕಾರ(State Govt) ಶಾಕ್ ನೀಡಿದ್ದು, ಗೃಹಜ್ಯೋತಿ ಯೋಜನೆಯಡಿ ನಿಗದಿತ ಯುನಿಟ್(Fixed unit) ಗಿಂತ ಹೆಚ್ಚು ವಿದ್ಯುತ್ ಬಳಸಿದವರಿಗೆ ಈಗ ಹೆಚ್ಚುವರಿ ಭದ್ರತಾ ಠೇವಣಿ (Additional security deposit- ASD) ಪಾವತಿಸುವುದು ಕಡ್ಡಾಯವಾಗಿದೆ.
ರಾಜ್ಯ ಸರ್ಕಾರವು ಉಚಿತ ವಿದ್ಯುತ್ ಜೊತೆಗೆ 10 ಯೂನಿಟ್ ಹೆಚ್ಚುವರಿ ಉಚಿತ ವಿದ್ಯುತ್ ಬಳಸಿದ ಗ್ರಾಹಕರೂ ಎಎಸ್ ಡಿ ಪಾವತಿಸುವುದು ಕಡ್ಡಾಯವಾಗಿದೆ. ಈ ಮೂಲಕ ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್ ಶಾಕ್ ನೀಡಿದೆ. ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳು ಗ್ರಾಹಕರು ಬಳಸಿದ ವಿದ್ಯುತ್ ಪ್ರಮಾಣ ಲೆಕ್ಕ ಹಾಕಿ ಜುಲೈ ತಿಂಗಳ ವಿದ್ಯುತ್ ಬಿಲ್‌ನಲ್ಲಿ ಹೆಚ್ಚುವರಿ ಭದ್ರತಾ ಠೇವಣಿಯ ಮೊತ್ತವನ್ನು ಉಲ್ಲೇಖಿಸಿವೆ.
ಈ ಸುದ್ದಿ ಓದಿ:- Infosys Work From Home Jobs: ʻಇನ್ಫೋಸಿಸ್ʼನಲ್ಲಿ ವರ್ಕ್ ಫ್ರಮ್ ಹೋಮ್ ಕೆಲಸಕ್ಕೆ ಅರ್ಜಿ ಆಹ್ವಾನ.! ವೇತನ 55,000/-
ಒಬ್ಬೊಬ್ಬ ಗೃಹ ವಿದ್ಯುತ್ ಈಗ ಗೃಹ ಬಳಕೆದಾರನಿಂದ 250 ರಿಂದ 1000 ರೂ.ಗೂ ಅಧಿಕ ಮೊತ್ತದ ಎಎಸ್‌ಡಿ ನಿಗದಿಗೊಳಿಸಿವೆ. ಆದರೆ, ಈಗಾಗಲೇ ಸಂಗ್ರಹಿಸಿದ ಠೇವಣಿಯ ಬಡ್ಡಿ ಹಣವನ್ನು ಗ್ರಾಹಕರಿಗೆ ಮರು ಪಾವತಿಸುವ ಬಗ್ಗೆ ಪ್ರಸ್ತಾಪಿಸದಿರುವುದು ಚರ್ಚೆಗಳಿಗೆ ಆಸ್ಪದ ಮಾಡಿಕೊಟ್ಟಿದೆ.
ಸರಾಸರಿ ವಿದ್ಯುತ್ ಪ್ರಮಾಣ ಲೆಕ್ಕ
ವಿದ್ಯುತ್ ಸಂಪರ್ಕ ಪಡೆದ ಗ್ರಾಮ 12 ತಿಂಗಳಲ್ಲಿ ಬಳಸಿದ ಸರಾಸರಿ ವಿದ್ಯುತ್ ಪ್ರಮಾಣ ಲೆಕ್ಕ ಹಾಕಿ ಅದರಲ್ಲಿ ಎರಡು ತಿಂಗಳ ಬಿಲ್ ಮೊತ್ತವನ್ನು ವಿದ್ಯುತ್ ಸರಬರಾಜು ಕಂಪನಿಗಳು ಭದ್ರತಾ ಠೇವಣಿ ಪಡೆದುಕೊಳ್ಳಲಿವೆ. ಇದರ ಮೇಲೆ ಪ್ರತಿ ತಿಂಗಳ ಹೆಚ್ಚುವರಿಯಾಗಿ 10 ಯೂನಿಟ್ ಉಚಿತ ವಿದ್ಯುತ್ ನೀಡಲಾಗುತ್ತಿದೆ.
ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಿಗೆ ತಿಂಗಳಿಗೆ 200 ಯೂನಿಟ್‌ವರೆಗೆ ಉಚಿತವಾಗಿ ವಿದ್ಯುತ್ ಬಳಸಲು ಅವಕಾಶವಿದೆ. ಈ ಫಲಾನುಭವಿಗಳು ಹಿಂದಿನ ತಿಂಗಳ ಬಳಕೆಗಿಂತ 10 ಯೂನಿಟ್ ಅಧಿಕ ಬಳಕೆ ಮಾಡಬಹುದು. ಅದಕ್ಕಿಂತ ಹೆಚ್ಚು ಬಳಸಿದರೆ, ಹೆಚ್ಚುವರಿ ಯೂನಿಟ್‌ಗಳ ಬಿಲ್ ಪಾವತಿ ಮಾಡಬೇಕು.
ಈ ಸುದ್ದಿ ಓದಿ:- Ration Card: ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದವರಿಗೆ ಗುಡ್ ನ್ಯೂಸ್ 1.73 ಲಕ್ಷ ರೇಷನ್ ಕಾರ್ಡ್ ವಿತರಣೆ ಆರಂಭ.!
ವಿದ್ಯುತ್ ಸರಬರಾಜು ಕಂಪನಿಗಳು ದಶಕದ ಹಿಂದೆ ಮೂರು ತಿಂಗಳ ಬಿಲ್ ಮೊತ್ತವನ್ನು ಭದ್ರತಾ ಠೇವಣಿಯಾಗಿ ಸಂಗ್ರಹಿಸುತ್ತಿದ್ದವು. ಆದರೆ, ಈ ಮೊತ್ತ ಬಡವರಿಗೆ ಹೊರೆ ಆಗಲಿದೆ ಎಂಬ ಕಾರಣಕ್ಕೆ ಅದನ್ನು 2 ತಿಂಗಳಿಗೆ ಇಳಿಕೆ ಮಾಡಲಾಗಿತ್ತು. ಹಾಗೆಯೇ ಈಗ ಪಡೆಯುತ್ತಿರುವ ಹೆಚ್ಚುವರಿ ಭದ್ರತಾ ಠೇವಣಿ ಗೃಹಬಳಕೆ ಗ್ರಾಹಕರಿಗೆ ಮಾತ್ರ ಸೀಮಿತವಾಗಿಲ್ಲ. ಕೈಗಾರಿಕೆ, ವಾಣಿಜ್ಯ ವಿದ್ಯುತ್ ಬಳಕೆದಾರರೂ ಪಾವತಿಸಬೇಕಾಗಿದೆ ಎಂದು ಹೆಸ್ಕಾಂ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಮೈನಸ್ ಬಿಲ್ ಬಂದ್ರೂ ಹಣ ಇಲ್ಲ
ಗ್ರಾಹಕರ ಭದ್ರತಾ ಠೇವಣಿ ಹಣವನ್ನು ಅವರ ಖಾತೆಯಲ್ಲಿ ಜಮೆ ಇಡಲಾಗುತ್ತಿದೆ. ಇಲ್ಲಿಯವರೆಗೆ ಈ ಠೇವಣಿ ಮೊತ್ತಕ್ಕೆ ವಾರ್ಷಿಕ ಶೇ. 3.75 ಬಡ್ಡಿ ನೀಡಿ ಆಯಾ ತಿಂಗಳ ವಿದ್ಯುತ್ ಬಿಲ್‌ನಲ್ಲಿ ಹೊಂದಾಣಿಕೆ (ಮೈನಸ್) ಮಾಡಲಾಗುತ್ತಿತ್ತು. ಆದರೆ, ಈಗ ಗೃಹಜ್ಯೋತಿ ಯೋಜನೆ ಜಾರಿಯಲ್ಲಿರುವುದರಿಂದ ಠೇವಣಿ ಬಡ್ಡಿ ಹಣ ಬಹುತೇಕ ಗ್ರಾಹಕರಿಗೆ ಸಿಗುತ್ತಿಲ್ಲ.
ಬಡ್ಡಿ ಮೊತ್ತವನ್ನು ಗ್ರಾಹಕರ ಖಾತೆಯಲ್ಲಿ ಜಮೆ ಇಡಲಾಗುತ್ತಿದ್ದು, ಅದನ್ನು ಮರುಪಾವತಿ ಮಾಡಿಕೊಳ್ಳಲು ಆಗುತ್ತಿಲ್ಲ ಈ ಬಗ್ಗೆ ಅಧಿಕಾರಿಗಳೇ ಗೊಂದಲದಲ್ಲಿದ್ದಾರೆ. ಒಬ್ಬೊಬ್ಬ ವಿದ್ಯುತ್ ಬಳಕೆದಾರನ (ನೂರು, ಸಾವಿರ ಲೆಕ್ಕದಲ್ಲಿ) ಬಡ್ಡಿ ಹಣ ಖಾತೆಯಲ್ಲಿ ಉಳಿದುಕೊಂಡಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.