Gruhalakshmi: ಮಹಿಳೆಯರಿಗೆ ಗುಡ್​ ನ್ಯೂಸ್​ ಗೃಹಲಕ್ಷ್ಮಿ ಯೋಜನೆ ಹಣ ಈ ದಿನ ಜಮೆ.!

Gruhalakshmi

ಕರ್ನಾಟಕ(Karnataka)ದ ಬಹುನಿರೀಕ್ಷಿತ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ (Grilahakshmi Yojana) ಎಂದಿಗೂ ಬಂದ್ ಆಗುವುದಿಲ್ಲ ಎಂಬ ಆಶ್ವಾಸನೆ ಈಗಾಗಲೇ ರಾಜ್ಯದ ಜನತೆಗೆ ಸಿಕ್ಕಿದೆ. ಜುಲೈ ಹಾಗೂ ಆಗಸ್ಟ್ ತಿಂಗಳ ಗೃಹಲಕ್ಷ್ಮೀ ಹಣ (Grilahakshmi money) ಸರ್ಕಾರ ಯಾವಾಗ ಬಿಡುಗಡೆ ಮಾಡುತ್ತೆ ಎಂದು ಯೋಜನೆ ಫಲಾನುಭವಿಗಳು ಕೇಳುತ್ತಲೇ ಬರ್ತಿದ್ದಾರೆ.

ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ (Minister of Women and Child Welfare) ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅವರು ಕೂಡ ಎರಡು ಮೂರು ಬಾರಿ ಸ್ಪಷ್ಟನೆ ನೀಡಿ, ಎರಡು ತಿಂಗಳ ಹಣ ಒಟ್ಟಿಗೆ ಬಿಡುಗಡೆಯಾಗುತ್ತದೆ ಎಂದು ತಿಳಿಸಿದ್ದರು.

WhatsApp Group Join Now
Telegram Group Join Now

ಗೃಹಲಕ್ಷ್ಮಿ ಯೋಜನೆ(Gruhalakshmi Yojana) ಯು ಕರ್ನಾಟಕದಲ್ಲಿ ಮಹಿಳೆಯರಿಗೆ ಆರ್ಥಿಕ ಬೆಂಬಲದ ಮೂಲಾಧಾರವಾಗಿದೆ. ಇದು ರಾಜ್ಯಾದ್ಯಂತ ಮನೆಗಳಿಗೆ ಗಣನೀಯ ನೆರವು ನೀಡುತ್ತದೆ. ಮಹಿಳೆಯರಲ್ಲಿ ವ್ಯಾಪಕ ಜನಪ್ರಿಯತೆಯನ್ನು ಗಳಿಸಿರುವ ಈ ಯೋಜನೆಯು ನೇರ ಲಾಭ ವರ್ಗಾವಣೆ (ಡಿಬಿಟಿ) ಅರ್ಹ ಫಲಾನುಭವಿಗಳಿಗೆ ಪ್ರತಿ ಕಂತಿಗೆ ರೂ.2,000 ರಂತೆ ಇಲ್ಲಿಯವರೆಗೆ ಹತ್ತು ಕಂತುಗಳನ್ನು ಯಶಸ್ವಿಯಾಗಿ ವಿತರಿಸಲಾಗುತ್ತಿದೆ.

ಈ ಸುದ್ದಿ ಓದಿ:- Infosys Scholarship : ಇನ್ಫೋಸಿಸ್‌ನಿಂದ ವಿದ್ಯಾರ್ಥಿಗಳಿಗೆ ಸಿಗಲಿದೆ 1 ಲಕ್ಷ ಸ್ಕಾಲರ್ಶಿಪ್.!

ಇದರೊಂದಿಗೆ ಸೆಪ್ಟೆಂಬರ್ ತಿಂಗಳ ಅಂತ್ಯದ ವೇಳೆ ಗೃಹಲಕ್ಷ್ಮೀಯರ ಖಾತೆಗೆ ಎರಡು ತಿಂಗಳ ಹಣ ಒಟ್ಟಿಗೆ ಬಿಡುಗಡೆ ಆಗಲಿದೆ ಎಂದು ಎಲ್ಲರೂ ನಿರೀಕ್ಷೆ ಮಾಡಿದ್ದರು. ಆದರೆ ಈಗಾಗಲೇ ಸೆಪ್ಟೆಂಬರ್ ತಿಂಗಳು ಮುಗಿಯುತ್ತಿದೆ ಈ ತಿಂಗಳ ಹಣ ಇನ್ನು ಯಾವಾಗ ಬರುತ್ತೆ ಅಂತ ಹಲವರು ಪ್ರಶ್ನಿಸುತ್ತಿದ್ದಾರೆ.

ಜುಲೈ, ಆಗಸ್ಟ್​ ಮತ್ತು ಸೆಪ್ಟೆಂಬರ್ ತಿಂಗಳ ಗೃಹಲಕ್ಷ್ಮೀ ಹಣವನ್ನು ಬಿಡುಗಡೆ ಮಾಡಲು ಆರ್ಥಿಕ ಇಲಾಖೆಗೆ ಫೈಲ್ ನೀಡಲಾಗಿದೆ. ಆದರೆ ಆರ್ಥಿಕ ಇಲಾಖೆಯಿಂದ ಇನ್ನು ಹಣ ಬಿಡುಗಡೆ ಆಗಿಲ್ಲ. ಸಚಿವರ ಹೇಳಿಕೆ ನೋಡಿದರೆ ಇಷ್ಟೋತ್ತಿಗೆ ಹಣ ಬಿಡುಗಡೆಯಾಗಬೇಕಿತ್ತು. ಆದರೆ ಯಾವಾಗ ಬಿಡುಗಡೆ ಆಗುತ್ತೆ ಅನ್ನೋದಕ್ಕೆ ಸ್ಪಷ್ಟ ಮಾಹಿತಿ ಇಲ್ಲ.

ಆದರೆ, ಈಗ ಮೂರು ತಿಂಗಳ ಕಂತಿನ ಹಣ ಒಟ್ಟಿಗೆ ಬಿಡುಗಡೆ ಆಗುತ್ತಾ ಅಂತ ನೋಡುವುದಾದರೆ, ಖಂಡಿತ ಇಲ್ಲ ಎಂದು ಹೇಳಬಹುದು. ಏಕೆಂದರೆ ಕಳೆದ ನಾಲ್ಕು ತಿಂಗಳ ಪ್ರಕ್ರಿಯೆಯನ್ನು ನೋಡಿದರೆ ಆರ್ಥಿಕ ಇಲಾಖೆಯಿಂದ ಅನುದಾನ ಬಿಡುಗಡೆ ಮಾಡಲು ತಡವಾಗುತ್ತಿದೆ.

ಈ ಸುದ್ದಿ ಓದಿ:- RRCAT Recruitment: SSLC & ITI ಪಾಸ್ ಆದವರಿಗೆ ಉದ್ಯೋಗವಕಾಶ ಯಾವುದೇ ಎಕ್ಸಾಂ ಇಲ್ಲದೇ ನೇರ ನೇಮಕಾತಿ.!

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ಗೃಹಲಕ್ಷ್ಮೀಯರ ಖಾತೆಗೆ ಹಣ ಹಾಕಲು ಸಿದ್ಧವಾಗಿದ್ದಾರೆ. ಆದರೆ ವಾಸ್ತವ ನೋಡುವುದಾರೆ ಮೂರು ತಿಂಗಳ ಹಣ ಇರಲಿ ಎರಡು ತಿಂಗಳ ಹಣವನ್ನು ಆರ್ಥಿಕ ಇಲಾಖೆ ನೀಡುತ್ತಾ ಅಂತ ಕಾದು ನೋಡಬೇಕಿದೆ.

ಇದರೊಂದಿಗೆ ಜುಲೈ ತಿಂಗಳ ಕಂತಿನ ಹಣ ಯಾವಾಗ ಬರುತ್ತೆ ಅಂತ ನೋಡುವುದಾದರೆ, ಫಲಾನುಭವಿಗಳು ಅಕ್ಟೋಬರ್ ಮೊದಲ ವಾರದಲ್ಲಿ 2000 ಸಾವಿರ ರೂಪಾಯಿಯನ್ನು ನಿರೀಕ್ಷೆ ಮಾಡಬಹುದು. ಇನ್ನು ಆಗಸ್ಟ್ ತಿಂಗಳ ಕಥೆ ಏನು ಅಂತ ಪ್ರಶ್ನಿಸಿದೆ, ಇಲಾಖೆ ಒಟ್ಟಿಗೆ ಎರಡು ತಿಂಗಳ ಹಣ ಬಿಡುಗಡೆ ಮಾಡಿದರೆ ಒಟ್ಟಿಗೆ ನಿಮಗೆ ಹಣ ಸಿಗಲಿದೆ, ಒಂದೊಮ್ಮೆ ಇಲ್ಲ ಎಂದರೆ ಮತ್ತಷ್ಟು ತಡ ಆಡೋದು ನಿಶ್ಚಿತವಾಗಿದೆ.

ನೇರ ನಗದು ವರ್ಗಾವಣೆ ಮಾಡುವ ಕಾರಣ ಒಟ್ಟಿಗೆ ಎರಡು ತಿಂಗಳ ಕಂತನ್ನು ಹಾಕುವುದು ಕಷ್ಟ ಸಾಧ್ಯ ಎನ್ನಲಾಗಿದೆ. ಆದರೆ ಈಗಾಗಲೇ ಎರಡು ತಿಂಗಳ ಹಣ ಒಟ್ಟಿಗೆ ಬಿಡುಗಡೆಯಾದರೆ ಹಣ ಅಕ್ಟೋಬರ್ 2ನೇ ವಾರದಲ್ಲಿ ಹಣ ಬಿಡುಗಡೆ ಆಗುವ ಸಾಧ್ಯತೆ ಇದೆ. ಇದರೊಂದಿಗೆ ಒಟ್ಟಿಗೆ ಎರಡು ತಿಂಗಳ ಹಣ ಬರುವುದು ಕಷ್ಟಸಾಧ್ಯ ಎನ್ನಲಾಗಿದೆ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment