Gruhalakshmi: ಮನೆ ಯಜಮಾನಿಯರಿಗೆ ಗುಡ್‌ ನ್ಯೂಸ್‌ ನಿಮ್ಮ ಖಾತೆ ಸೇರಲಿದೆ 2 ತಿಂಗಳ ʻಗೃಹಲಕ್ಷ್ಮಿʼ ಹಣ.!

Gruhalakshmi

ರಾಜ್ಯದ ಕಾಂಗ್ರೆಸ್ ಸರ್ಕಾರ(Congress government)ದ ಪಂಚ ಗ್ಯಾರಂಟಿ ಯೋಜನೆಗಳು(Five Guarantee Schemes) ಜನರ ಬೇಡಿಕೆಗಳನ್ನು ಪೂರೈಸುತ್ತಿವೆ. ಅದರಲ್ಲಿ ಮುಖ್ಯವಾಗಿ ಗೃಹಲಕ್ಷ್ಮಿ ಯೋಜನೆ (gruhalakshmi Yojana). ಇನ್ನು ಜೂನ್ ತಿಂಗಳ ಕಂತಿಗಾಗಿ ಕಾಯುತ್ತಿರುವವರಿಗೆ ಇದು ಒಳ್ಳೆಯ ಸುದ್ದಿಯಾಗಿದೆ ಹೌದು, ಶೀಘ್ರದಲ್ಲೇ ಜೂನ್ ತಿಂಗಳ ಕಂತು ಬಿಡುಗಡೆಯಾಗಲಿದೆ.

ಗೃಹಲಕ್ಷ್ಮೀ ಹಣ (gruhalakshmi money) ಫ‌ಲಾನುಭವಿಗಳಿಗೆ ಕಳೆದ ಮೇ 5ರಂದು ಕೊನೆಯದಾಗಿ ಜಮಾ ಆಗಿದೆ. ಜೂನ್‌ ಹಾಗೂ ಜುಲೈ ಎರಡು ತಿಂಗಳ ಹಣ ಮಾತ್ರ ಬಂದಿಲ್ಲ. ಆದರೆ, ಪರಿಶಿಷ್ಟ ಫಲಾನುಭವಿಗಳಿಗೆ ಬಂದಿದೆ. ಉಳಿದವರಿಗೆ ಶೀಘ್ರದಲ್ಲೇ ಡಿಬಿಟಿ (DBT) ಮೂಲಕ ಜಮೆ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್‌ (Laksmi Hebbalkar) ತಿಳಿಸಿದರು.

WhatsApp Group Join Now
Telegram Group Join Now

ಸುದ್ದಿಗಾರರೊಂದಿಗೆ ಮಾತನಾಡಿದ ಹೆಬ್ಟಾಳ್ಕರ್‌ ಅವರು, ಗೃಹಲಕ್ಷ್ಮಿ ಹಣ ಮೂರ್ನಾಲ್ಕು ತಿಂಗಳಿನಿಂದ ಬರುತ್ತಿಲ್ಲ ಎನ್ನುವುದು ತಪ್ಪು. ಗೃಹಲಕ್ಷ್ಮಿ ಹಣವನ್ನು ಮೇ ತಿಂಗಳಲ್ಲಿ ಹಾಕಿದ್ದೇವೆ. ಜೂನ್‌, ಜುಲೈ ತಿಂಗಳ ಗೃಹಲಕ್ಷ್ಮಿ ಹಣ ಹಾಕಲು ತಾಂತ್ರಿಕ ದೋಷವಾಗಿದ್ದು, ಈಗಾಗಲೇ ಡಿಬಿಟಿ ಪುಶ್‌ ಮಾಡುತ್ತಿದ್ದೇವೆ. 8-10 ದಿನದೊಳಗೆ ಗೃಹಲಕ್ಷ್ಮಿ ಹಣ ಖಾತೆಗೆ ಜಮಾ ಮಾಡಲಾಗುವುದು ಎಂದು ಹೇಳಿದ್ದಾರೆ.

ಈ ಸುದ್ದಿ ಓದಿ:- Montessori:- 5,000 ಟೀಚರ್ ಗಳ ನೇಮಕಾತಿಗೆ ಅಧಿಸೂಚನೆ PUC ಪಾಸ್ ಆದವರು ಅರ್ಜಿ ಸಲ್ಲಿಸಿ.!

ಈ ಯೋಜನೆಯನ್ನು ಮಹಿಳೆಯ ಆರ್ಥಿಕ ಸಬಲೀಕರಣಕ್ಕಾಗಿ ಕೊಡಲಾಗುತ್ತಿದೆ. ಚುನಾವಣೆ ಪೂರ್ಣದಲ್ಲೇ ರಾಜ್ಯದ ಮಹಿಳೆಯರಿಗೆ ಈ ಭರವಸೆ ನೀಡಲಾಗಿತ್ತು. ಹಾಗಾಗಿ, ಯಾವುದೇ ಕಾರಣಕ್ಕೂ ಗೃಹ ಲಕ್ಷ್ಮಿ ಯೋಜನೆಯನ್ನು ನಿಲ್ಲಿಸುವುದಿಲ್ಲ ಎಂದು ತಿಳಿಸಿದ್ದಾರೆ.

2 ತಿಂಗಳ ಬಾಕಿ ಹಣ ಪಾವತಿ ಯಾವಾಗ?

ಗೃಹಲಕ್ಷ್ಮಿ ಮಹಿಳೆಯರ ಪರವಾಗಿಯೇ, ಮಹಿಳೆಯರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಮಹಿಳೆಯರು ಮುಂದೆ ಬರುವ ಭರವಸೆಯಲ್ಲಿ ತಂದಿರುವ ಮಹತ್ತರ ಯೋಜನೆಯಾಗಿದೆ. ಗೃಹಲಕ್ಷ್ಮಿ ಯೋಜನೆಯ ಹಣ ಮೇ ತಿಂಗಳವರೆಗೆ ಪಾವತಿ ಯಾಗಿದೆ. ಇನ್ನು ಬಾಕಿ ಉಳಿದ ಜೂನ್ ಹಾಗೂ ಜುಲೈ ತಿಂಗಳ ಅಂದರೆ ಒಟ್ಟಾರೆಯಾಗಿ ಎರಡು ತಿಂಗಳ ಹಣವನ್ನು ಕೇವಲ 10 ದಿನಗಳ ಒಳಗಾಗಿ ಪಾವತಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್‌ ತಿಳಿಸಿದರು.

ಗೃಹಲಕ್ಷ್ಮಿ ಹಣ ಬಾರದಿರುವವರು ಏನು ಮಾಡಬೇಕು?

ನೋಂದಣಿ ಮಾಡಿದ ಕೆಲವು ಮಹಿಳೆಯರಿಗೆ 11 ಕಂತಿನ ವರೆಗೆ ಹಣ (Gruhalakshmi 11 installment money) ಜಮೆಯಾಗಿದೆ.‌ ಆದರೆ, ಕೆಲವರಿಗೆ ಒಂದೇ ಒಂದು ತಿಂಗಳ ಹಣ ಕೂಡ ಜಮೆಯಾಗಿಲ್ಲ. ಆದ್ದರಿಂದ, ಯಾರಿಗೆಲ್ಲ ಹಣ ಪಾವತಿಯಾಗಿಲ್ಲವೋ ಅವರಿಗೂ ಕೂಡ ಹಣ ಪಾವತಿಯಾಗುತ್ತದೆ ಎಂಬ ಭರವಸೆ ನೀಡಿದ್ದಾರೆ.

ಈ ಸುದ್ದಿ ಓದಿ:- Aadhaar Card Download: ನಿಮ್ಮ ಮೊಬೈಲ್‌ನಲ್ಲೇ ʻಆಧಾರ್‌ ಕಾರ್ಡ್‌ʼ ಡೌನ್ಲೋಡ್‌ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ.!

ಗೃಹಲಕ್ಷ್ಮಿ ಯೋಜನೆಯ ಹಣಕ್ಕಾಗಿ ಕಾಯುತ್ತಿದ್ದವರು ಒಂದು ಬಾರಿಯೂ ಹಣ ಪಡೆದುಕೊಳ್ಳದಿಲ್ಲದವರು (Gruha Lakshmi Money) ಕೊಡಲೇ ರೇಷನ್ ಕಾರ್ಡ್ ಗೆ ಈ ಕೆವೈಸಿ ಅಪ್ಡೇಟ್ ಮಾಡಿಸಬೇಕು ಹಾಗೂ ಮಹಿಳೆಯರ ಆಧಾರ್ ಕಾರ್ಡ್ ಅಪ್ಡೇಟ್ ಆಗದೇ ಇರುವುದು ಕೂಡ ಈ ಸಮಸ್ಯೆಗೆ ಕಾರಣವಾಗಿದೆ.

ಇನ್ನು ಬಹಳ ಮುಖ್ಯ ವಾಗಿ ಮಹಿಳೆಯರ ಬ್ಯಾಂಕ್ ಖಾತೆ ಹಾಗೂ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್(Ration card) ಗಳಲ್ಲಿ ಒಂದೇ ಹೆಸರು ಹಾಗೂ ವಿಳಾಸ ಇದೆಯೇ ಎಂಬುದನ್ನು ಖಾತರಿ ಪಡಿಸಿಕೊಳ್ಳಿ. ಈ ರೀತಿಯ ಸಮಸ್ಯೆಗಳನ್ನು ನೀವು ಸರಿಪಡಿಸಿಕೊಂಡರೆ ನಿಮ್ಮ ಬ್ಯಾಂಕ್ ಖಾತೆಗಳಿಗೆ ಹಣ ಜಮೆಯಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್‌ ತಿಳಿಸಿದರು.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment