Gruha Lakshmi Scheme: ಗೃಹಲಕ್ಷ್ಮಿಯರಿಗೆ ಗುಡ್ ನ್ಯೂಸ್ ಕೊಟ್ಟ ಮುಖ್ಯಮಂತ್ರಿಗಳು, 11ನೇ ಕಂತಿನ ಹಣ ಜಮೆ ಕುರಿತು ಸರ್ಕಾರದಿಂದ ಬಿಗ್ ಅಪ್ಡೇಟ್, ಈ ದಿನದಂದು ಹಣ ಬರೋದು ಗ್ಯಾರಂಟಿ.!

Gruha Lakshmi Scheme:-

ರಾಜ್ಯದಾದ್ಯಂತ ಇರುವ ಎಲ್ಲಾ ಗೃಹಲಕ್ಷ್ಮಿಯರಿಗೆ ಗೃಹಲಕ್ಷ್ಮಿ ಯೋಜನೆ (Gruhalakshmi Scheme amount) ಹಣ ವರ್ಗಾವಣೆಯಾಗುವುದರ ಕುರಿತು ಬಹಳಷ್ಟು ಗೊಂದಲವಾಗಿದೆ. ಯಾಕೆಂದರೆ 2024 ನೇ ಸಾಲಿನ ಲೋಕಸಭಾ ಚುನಾವಣೆಯಲ್ಲಿ (Parliment Election-2024) ಕಾಂಗ್ರೆಸ್ ಪಕ್ಷವು ಗೆಲುವು ಸಾಧಿಸದೆ ಇರುವುದು ರಾಜ್ಯದಲ್ಲೂ ಕೂಡ ಇದು ಗ್ಯಾರಂಟಿ ಯೋಜನೆಗಳ ಮೇಲೆ ಅಡ್ಡ ಪರಿಣಾಮ ಬೀರಲಿದೆ ಎನ್ನುವ ಅನುಮಾನ ಹುಟ್ಟೂ ಹಾಕಿದೆ ಈ ಕುರಿತಂತೆ ಸರ್ಕಾರದ ಕಡೆಯಿಂದ ಒಂದು ಬಿಗ್ ಅಪ್ ಡೇಟ್ ಕೂಡ ಇದ್ದು, ಇದು ಮಹಿಳೆಯರ ಪರವಾಗಿಯೇ ಇದೆ ಎನ್ನುವುದೇ ಸಮಾಧಾನವಾಗಿದೆ.

WhatsApp Group Join Now
Telegram Group Join Now

ಹಾಗಾಗಿ 11ನೇ ಕಂತಿನ ಹಣ ಬಿಡುಗಡೆ ಆಗುತ್ತದೆಯೇ ಇಲ್ಲವೇ? ಯಾವ ದಿನಾಂಕದಂದು ಬಿಡುಗಡೆ ಆಗುತ್ತದೆ? ಈ ಬಗ್ಗೆ ಸರ್ಕಾರ ಹೇಳಿರುವುದು ಏನು ಇತ್ಯಾದಿ ವಿವರ ತಿಳಿದುಕೊಳ್ಳಲು ಲೇಖನವನ್ನು ಕೊನೆಯವರೆಗೂ ಓದಿ. ಕರ್ನಾಟಕ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ-20230ರ ವೇಳೆ ಕಾಂಗ್ರೆಸ್ ಪಕ್ಷವು ರಾಜ್ಯದ ಜನತೆಗೆ ನೀಡಿದ್ದ ಗ್ಯಾರಂಟಿ ಯೋಜನೆಗಳ ಭರವಸೆಗಳಂತೆ ಬಹುಮತ ಬೆಂಬಲದೊಂದಿಗೆ ತಮ್ಮದೇ ಸರ್ಕಾರ ಸ್ಥಾಪಿಸಿದ ಮೇಲೆ ಐದಕ್ಕೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ.

ಇದರಲ್ಲಿ ಗೃಹಲಕ್ಷ್ಮಿ ಯೋಜನೆಯು ಹೈ ಬಜೆಟ್ ಯೋಜನೆಯಾಗಿದ್ದು ಈ ಯೋಜನೆ ಮೂಲಕ ಕುಟುಂಬ ನಿರ್ವಹಣೆಗಾಗಿ ಕುಟುಂಬದ ಯಜಮಾನನಿಯು ಪ್ರತಿ ತಿಂಗಳು ರೂ.2000 ಸಹಾಯಧನ ನೀಡಲಾಗುತ್ತಿದೆ. ಸದ್ಯಕ್ಕೆ ಇದನ್ನು ರೇಷನ್ ಕಾರ್ಡ್ ಆಧಾರಿತವಾಗಿ ಪರಿಗಣಿಸಿ ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥೆ ಸ್ಥಾನದಲ್ಲಿರುವ ಹಿರಿಯ ಮಹಿಳೆಯ ಖಾತೆಗೆ ರೂ.1000 ಹಣ ಜಮೆ ಮಾಡಲಾಗುತ್ತಿದೆ.

ಆ ಪ್ರಕಾರ ಇದುವರೆಗೂ ಯಶಸ್ವಿಯಾಗಿ ಕಳೆದೊಂದು ವರ್ಷದಿಂದ ಮಹಿಳೆಯರು 10 ಕಂತುಗಳ ಗೃಹಲಕ್ಷ್ಮಿ ಹಣವನ್ನು ಪಡೆದಿದ್ದಾರೆ. ಆಗಸ್ಟ್ 30, 2023 ರಂದು ಯೋಜನೆ ಲಾಂಚ್ ಆಗಿತ್ತು, ಈ ಬಾರಿ ಲೋಕಸಭಾ ಚುನಾವಣೆ ಸಮೀಪದಲ್ಲಿಯೂ ಕೂಡ ಏಪ್ರಿಲ್ ತಿಂಗಳ ಹಣ ವರ್ಗಾವಣೆ ಆಗಿತ್ತು ಇದರ ನಡುವೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗೃಹಲಕ್ಷ್ಮಿ ಕ್ಯಾಂಪ್ ಗಳನ್ನು ನಡೆಸಿ ಹಣ ಪಡೆಯಲಾಗದ ಮಹಿಳೆಯರ ಸಮಸ್ಯೆ ಇತ್ಯರ್ಥಪಡಿಸಿವಕೊಡಲಾಗಿತ್ತು.

ಆದರೆ ಇದುವರೆಗೂ ಹಣ ಪಡೆಯುತ್ತಿದ್ದ ಮಹಿಳೆಯರೇ ಮೇ ತಿಂಗಳಿನಲ್ಲಿ ಹಣ ಪಡೆಯದೆ ಇರುವುದರಿಂದ ಯೋಜನೆ ಸ್ಥಗಿತಗೊಂಡಿದೆಯೇ? ಜೂನ್ ತಿಂಗಳ ಹಣ ಬರುತ್ತದೆಯೇ ಇಲ್ಲವೇ ಎಂದು ಗೊಂದಲಗೊಂಡಿದ್ದಾರೆ. ಯಾಕೆಂದರೆ ಎಲ್ಲೆಡೆ ಕೊಡ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಸೋತಿರುವುದರಿಂದ ರಾಜ್ಯದಲ್ಲಿ ಜಾರಿ ಇರುವ ಗ್ಯಾರಂಟಿ ಯೋಜನೆಗಳು ಕೂಡ ರದ್ದಾಗಲಿದೆ ಎಂಬ ಗಾಳಿ ಸುದ್ದಿ ಇದೆ.

ಇದು ಸರ್ಕಾರದ ಮಟ್ಟದವರೆಗೂ ಕೂಡ ತಲುಪಿದ್ದು ಮಾನ್ಯ ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ಇದಕ್ಕೆ ಪ್ರತಿಕ್ರಿಯಿಸಿ ಸ್ಪಷ್ಟನೆ ಕೊಟ್ಟಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು (C.M Siddaramaih) ಗ್ಯಾರಂಟಿ ಯೋಜನೆಗಳು ನಿಂತು ಹೋಗುತ್ತವೆ ಎಂದು ಹಬ್ಬಿರುವ ಪುಕಾರಿನ ಬಗ್ಗೆ ಮಾತನಾಡಿ ಖಂಡಿತವಾಗಿಯೂ ಈ ರೀತಿ ಆಗುವುದಿಲ್ಲ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತದಲ್ಲಿ ಇರುವವರೆಗೂ ಐದು ವರ್ಷಗಳವರೆಗೆ ಯೋಜನೆ ಜಾರಿಯಲ್ಲಿ ಇದ್ದೇ ಇರುತ್ತದೆ ಎಂದಿದ್ದಾರೆ.

ಇದರೊಂದಿಗೆ ಗೃಹಲಕ್ಷ್ಮಿ 11ನೇ ಕಂತಿನ ಹಣ (Gruhalakshmi 11th installment) ಬಿಡುಗಡೆ ಬಗ್ಗೆ ಕೂಡ ಮಾತನಾಡಿದ ಮುಖ್ಯಮಂತ್ರಿಗಳು ಶೀಘ್ರದಲ್ಲಿಯೇ ಮಹಿಳೆಯರು ತಮ್ಮ ಪಾಲಿನ 11ನೇ ಕಂತಿನ ಹಣ ಪಡೆಯಲಿದ್ದಾರೆ ಇದರೊಂದಿಗೆ ಅನ್ನಭಾಗ್ಯ ಯೋಜನೆ (Annabhagya Scheme pending amount) ಹಣ ಕೂಡ ಇದೆ ತಿಂಗಳ ಒಳಗೆ ಬಾಕಿ ಇರುವ ಎಲ್ಲಾ ಕಂತುಗಳು ಒಮ್ಮೆಲೆ ಜಮೆ ಆಗುತ್ತದೆ ಎನ್ನುವ ಮಾತನಾಡಿದ್ದಾರೆ.

ಗೃಹ ಸಚಿವರಾದ ಜಿ.ಪರಮೇಶ್ವರ್ (Home Minister) ಅವರು ಕೂಡ ಇದಕ್ಕೆ ಪ್ರತಿಕ್ರಿಯಿಸಿ ಮಹಿಳೆಯರ ಕಲ್ಯಾಣಕ್ಕಾಗಿ ಶಕ್ತಿ ಯೋಜನೆ, ಗೃಹಲಕ್ಷ್ಮಿ ಯೋಜನೆಗಳನ್ನು ಜಾರಿಗೆ ತಂದಿರುವುದು. ಈ ಯೋಜನೆಗಳು ಸ್ಥಗಿತಗೊಳ್ಳುವ ಮಾತೇ ಇಲ್ಲ ಖಂಡಿತವಾಗಿಯೂ ಯಾವುದೇ ಸಮಸ್ಯೆ ಇಲ್ಲದೆ ಹತ್ತು ತಿಂಗಳು ಹಣ ಪಡೆದ ಮಹಿಳೆಯರು 11ನೇ ಕಂತಿರ ಹಣ ಕೂಡ ಪಡೆಯಲಿದ್ದಾರೆ.

ಒಂದು ವೇಳೆ ಬ್ಯಾಂಕ್ ಖಾತೆ ಅಥವಾ ಆಧಾರ್ ಕಾರ್ಡ್ ಅಪ್ಡೇಟ್ ಆಗದಿರುವುದು ಅಥವಾ ರೇಷನ್ ಕಾರ್ಡ್ ನಿಯಮ ಬದ್ಧವಾಗಿ ಇಲ್ಲದೆ ಸಮಸ್ಯೆ ಆಗಿರುವುದರಿಂದ ಹಣ ಪಡೆಯಲಾಗದ ಮಹಿಳೆಯರು ಇದನ್ನು ತಿದ್ದುಪಡಿ ಮಾಡಿಸಿಕೊಂಡರೆ ಅದೇ ತಿಂಗಳಿಂದ ಅವರಿಗೂ ಗೃಹಲಕ್ಷ್ಮಿ ಹಣ ಸಿಗುತ್ತದೆ ಎನ್ನುವ ಪರಿಹಾರ ನೀಡಿದ್ದಾರೆ.

ಆದ್ದರಿಂದ ಮಹಿಳೆಯರು ಈ ಬಗ್ಗೆ ಯಾವುದೇ ಆತಂಕಕ್ಕೊಳಗಾಗುವುದು ಬೇಡ ಹಂತ ಹಂತವಾಗಿ ಜಿಲ್ಲಾವಾರು ಅರ್ಹ ಮಹಿಳೆಯರಿಗೂ ಕೂಡ ಹಣ ಜಮೆ ಆಗಲಿದೆ. ನೀವು ಆನ್ಲೈನ್ ನಲ್ಲಿ ಮೊಬೈಲ್ ಮೂಲಕವೇ ಮಾಹಿತಿ ಕಣಜ (com) ವೆಬ್ಸೈಟ್ ಮೂಲಕ ಅಥವಾ DBT ಕರ್ನಾಟಕ ಆಪ್ (DBT Karnataka app) ಇನ್ಸ್ಟಾಲ್ ಮಾಡಿಕೊಂಡು ‌ ಹಣ ಜಮೆ ಆಗಿದೆಯೇ ಎಂದು ಸ್ಟೇಟಸ್ ತಿಳಿದುಕೊಳ್ಳಬಹುದು.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ needs of ಕನ್ನಡ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment