Gruhalakshmi: ಈ ಜಿಲ್ಲೆ ಮಹಿಳೆಯರಿಗೆ ಜುಲೈ ತಿಂಗಳ ಗೃಹಲಕ್ಷ್ಮಿ ಹಣ 2000 ಜಮೆ ಆಗಿದೆ.!

Gruhalakshmi

ರಾಜ್ಯದಾದ್ಯಂತ ಇರುವ ಎಲ್ಲ ನಾಗರಿಕರು ಕಳೆದ ಒಂದು ವರ್ಷದಿಂದ ಕರ್ನಾಟಕ ರಾಜ್ಯದ ಗ್ಯಾರಂಟಿ ಯೋಜನೆಗಳ (Guarantee Schemes) ಪ್ರಯೋಜನವನ್ನು ಒಂದಲ್ಲ ಒಂದು ರೀತಿಯಲ್ಲಿ ಪಡೆಯುತ್ತಿದ್ದಾರೆ. ಹಾಗೆಯೇ ಇದರಲ್ಲಿ ಮಹಿಳೆಯರ ಪಾಲು ಹೆಚ್ಚಿಗೆ ಇದೆ.

ಯಾಕೆಂದರೆ ಮಹಿಳೆಯರಿಗೆ ಶಕ್ತಿ ಯೋಜನೆ ಮೂಲಕ ಉಚಿತ ಪ್ರಯಾಣ, ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ತಿಂಗಳು ರೂ.2000 ಸಹಾಯಧನ ಮತ್ತು ಅನ್ನ ಭಾಗ್ಯ ಯೋಜನೆ ಹೆಚ್ಚುವರಿ ಅಕ್ಕಿ ಹಣ ಕೂಡ ಕುಟುಂಬದ ಮುಖ್ಯಸ್ಥೆ ಮಹಿಳೆ ಬ್ಯಾಂಕ್ ಖಾತೆಗೆ DBT ಮೂಲಕ ಜಮೆ ಆಗುತ್ತಿದೆ ಮತ್ತು ಈ ಗ್ಯಾರಂಟಿ ಯೋಜನೆಗಳಿಗೆ ವರ್ಷ ಸಮೀಪಿಸುತ್ತಿರುವ ಸಂಭ್ರಮ ಹಾಗೂ ಸಮಾಧಾನ ಸರ್ಕಾರಕ್ಕಿದೆ.

WhatsApp Group Join Now
Telegram Group Join Now

ಆದರೆ ಇದೆಲ್ಲದರ ನಡುವೆ ಗೃಹಲಕ್ಷ್ಮಿ ಯೋಜನೆ (Gruha Lakshmi) ಬಗ್ಗೆ ಎರಡು ಮೂರು ತಿಂಗಳುಗಳಿಂದ ಸಾಕಷ್ಟು ಗೊಂದಲವಾಗಿತ್ತು ಇದೀಗ ಯೋಜನೆ ಕುರಿತ ಬಿಗ್ ಅಪ್ಡೇಟ್ ದೊರೆತಿದೆ. ಅದೇನೆಂದರೆ, ಯೋಜನೆ ಆರಂಭವಾದಾಗಲಿಂದಲೂ ಹಣ ಪಡೆಯುತ್ತಿದ್ದ ಗೃಹಲಕ್ಷ್ಮಿಯರು ಜೂನ್ ಹಾಗೂ ಜುಲೈ ತಿಂಗಳೇ ಹಣದಿಂದ ವಂಚಿತರಾಗಿದ್ದರು.

ಈ ಸುದ್ದಿ ಓದಿ:- SBI ಬ್ಯಾಂಕ್ & PNB ಬ್ಯಾಂಕ್‌ನೊಂದಿಗಿನ ವಹಿವಾಟು ಸ್ಥಗಿತಗೊಳಿಸಿದ ರಾಜ್ಯ ಸರ್ಕಾರ.!

ಸಮಯಕ್ಕೆ ಸರಿಯಾಗಿ ಖಾತೆಗೆ ಬರುತ್ತಿದ್ದ ಹಣ ಕೈ ತಪ್ಪಿದ ಕಾರಣ ಸಮಸ್ಯೆ ಏನಾಗಿದೆ ಎಂದು ತಿಳಿಯದೆ ಗೊಂದಲಕ್ಕೊಳಗಗಿದ್ದರು. ಇದೀಗ ಈ ವಿಚಾರವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ರವರೇ (Minister Lakshmi Hebbalkar) ಸ್ಪಷ್ಟೀಕರಣ ನೀಡಿದ್ದಾರೆ.

ಕಾಂಗ್ರೆಸ್ ಜನಾಂದೋಲನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಚಿವೆ ತಾಂತ್ರಿಕ ದೋಷಗಳ ಕಾರಣದಿಂದಾಗಿ ಜೂನ್ ಮತ್ತು ಜುಲೈ ತಿಂಗಳ ಹಣ ವರ್ಗಾವಣೆಯಾಗುವುದು ತಡವಾಗಿತ್ತು ಆದರೀಗ ಸರ್ಕಾರ ಹಣ ಬಿಡುಗಡೆ ಮಾಡಿದೆ. ಎಲ್ಲ ಫಲಾನುಭವಿಗಳು ಪೆಂಡಿಂಗ್ ಇರುವ ಎರಡು ಕಂತುಗಳ ಹಣವನ್ನು ಖಂಡಿತವಾಗಿಯೂ ಪಡೆಯಲಿದ್ದಾರೆ ಎನ್ನುವ ಭರವಸೆ ನೀಡಿದ್ದಾರೆ.

ಈಗಾಗಲೇ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡುವ ಕಾರ್ಯ ಕೂಡ ಆರಂಭವಾಗಿದೆ ಎನ್ನುವ ಸಿಹಿ ಸುದ್ದಿ ನೀಡಿದ್ದಾರೆ. ಅಂತೆಯೇ ಕಳೆದ ನಾಲ್ಕೈದು ದಿನಗಳಿಂದ ಹಂತ ಹಂತವಾಗಿಯು ಎಲ್ಲಾ ಜಿಲ್ಲೆಗಳ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳು ಜೂನ್ ಮತ್ತು ಜುಲೈ ತಿಂಗಳ ಪೆಂಡಿಂಗ್ ಹಣ ಜಮೆ ಆಗಿರುವುದನ್ನು ಕೂಡ ಕಾಣಬಹುದು.

ಈ ಸುದ್ದಿ ಓದಿ:- LIC Recruitment: LIC ಯಿಂದ 7000ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನ.! ವೇತನ:- 40,000

ಮೊದಲ ಹಂತದಲ್ಲಿ ಬೆಳಗಾವಿ, ಕಲ್ಬುರ್ಗಿ, ಬೀದರ್, ವಿಜಯಪುರ, ಚಾಮರಾಜನಗರ, ಮೈಸೂರು, ಬಳ್ಳಾರಿ, ಗದಗ, ಬಾಗಲಕೋಟೆ, ಹಾವೇರಿ, ಕೊಪ್ಪಳ, ಯಾದಗಿರಿ, ಚಿತ್ರದುರ್ಗ, ಬೆಂಗಳೂರು ಮತ್ತು ಕೋಲಾರ ಜಿಲ್ಲೆಗಳಿಗೆ 11ನೇ ಕಂತಿನ ಹಣ ಬಿಡುಗಡೆ ಆಗಿದೆ.

ಎರಡನೇ ಹಂತದಲ್ಲಿ ಉಳಿದ ಜಿಲ್ಲೆಯ ಫಲಾನುಭವಿಗಳಿಗೆ ಹಣ ಜಮೆ ಆಗುತ್ತಿದೆ ನೀವು ಕೂಡ ಗೃಹಲಕ್ಷ್ಮಿ ಯೋಜನೆ ಫಲಾನುಭವಿಯಾಗಿದ್ದು ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗಿದೆಯೇ ಇಲ್ಲವೇ ಎನ್ನುವ ಗೊಂದಲ ಇದ್ದರೆ ಈ ಕೆಳಗಿನ ವಿಧಾನಗಳನ್ನು ಅನುಸರಿಸಿ ಮಾಹಿತಿ ಪಡೆದುಕೊಳ್ಳಿ.

* ಫಲಾನುಭವಿಯು ತನ್ನ ಬ್ಯಾಂಕ್ ಖಾತೆಗೆ ಹಣ ಜಮೆ ಆಗಿರುವ ವಿವರ ನೋಡಿ ಅಥವಾ ಬ್ಯಾಂಕ್ ಅಥವಾ ಸರ್ಕಾರದ ಕಡೆಯಿಂದ ಮೊಬೈಲ್ ಸಂಖ್ಯೆಗೆ SMS ಬಂದಿರುವುದನ್ನು ನೋಡಿ ಇದನ್ನು ಧೃಡಪಡಿಕೊಳ್ಳಬಹುದು.

* ಅಥವಾ ಕರ್ನಾಟಕ ಸರ್ಕಾರದ DBT ಕರ್ನಾಟಕ ಆಪ್ (DBT Karnataka app) ಬಳಸಿ ಕೂಡ ಗೃಹಲಕ್ಷ್ಮಿ ಯೋಜನೆಯ ಹಣ ಜಮೆಯಾಗಿದೆ ಎನ್ನುವುದನ್ನು ತಿಳಿದುಕೊಳ್ಳಬಹುದು
* ಮಾಹಿತಿ ಕಣಜ (Mahiti Kanaja) ಎನ್ನುವ ವೆಬ್ ಸೈಟ್ ಗೆ ಭೇಟಿ ನೀಡಿ ಆ ಮೂಲಕ ಕೂಡ ಈ ಯೋಜನೆಯ ಹಣ ತಲುಪಿದೆಯೇ ಎನ್ನುವ ಮಾಹಿತಿ ಪಡೆದುಕೊಳ್ಳಬಹುದು.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment