Gruhalakshmi: ದಸರಾ ಹಬ್ಬಕ್ಕೂ ಮುನ್ನ ಮಹಿಳೆಯರ ಖಾತೆ ಸೇರಲಿದೆ ಗೃಹಲಕ್ಷ್ಮಿ ಹಣ.!

Gruhalakshmi

ರಾಜ್ಯದ ಕಾಂಗ್ರೆಸ್‌ನ ಪಂಚ ಗ್ಯಾರಂಟಿ ಯೋಜನೆಗಳು ಅನೇಕರ ಬದುಕಿಗೆ ನೆರವಾಗಿದೆ. ಆದ್ರೆ, ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ (Chief Minister Siddaramaiah) ಅವರೇ ಪ್ರಮುಖ ಆರೋಪಿಯಾಗಿರುವ ಮುಡಾ ಪ್ರಕರಣ ದಿನಕ್ಕೊಂದು ತಿರುವು ಪಡೆದಂತೆಲ್ಲ.

ಗ್ಯಾರಂಟಿ ಯೋಜನೆಗಳ (Karnataka Guarantee schemes) ಫಲಾನುಭವಿಗಳಲ್ಲಿ ಆತಂಕ ಹೆಚ್ಚುತ್ತಿದೆ. ಸಿದ್ದರಾಮಯ್ಯ ಅವರ ಸಿಎಂ ಸ್ಥಾನಕ್ಕೆ ಕುತ್ತು ಬಂದರೆ ಗ್ಯಾರಂಟಿ ಯೋಜನೆಗಳು ಮುಂದುವರೆಯುವುದು ಕಷ್ಟ ಎಂಬ ಅಭಿಪ್ರಾಯ ಅನೇಕರಲ್ಲಿದೆ.

WhatsApp Group Join Now
Telegram Group Join Now

ಏಕೆಂದರೆ, ಇತ್ತೀಚೆಗೆ ಲೋಕಸಭೆ ಚುನಾವಣೆ (Lok Sabha Elections) ನಂತರ ಕಾಂಗ್ರೆಸ್ (Congress) ನಾಯಕರಲ್ಲಿಯೇ ಗ್ಯಾರಂಟಿ ಯೋಜನೆಗಳನ್ನು (Guarantee schemes) ನಿಲ್ಲಿಸುವಂತೆ ಹಕ್ಕೊತ್ತಾಯ ವ್ಯಕ್ತವಾಗಿತ್ತು.

ಈ ಸುದ್ದಿ ಓದಿ:- Coin: ನಿಮ್ಮ ಹತ್ತಿರ ಈ ರೀತಿಯ 1 ರೂಪಾಯಿ ಕಾಯಿನ್‌ ಇದ್ಯಾ.? ಹಾಗಿದ್ರೆ, ನಿಮಗೆ ಸಿಗಲಿದೆ 1 ಕೋಟಿ, ಈ ಸುದ್ದಿ ಮಿಸ್‌ ಮಾಡ್ದೇ ಓದಿ.!

ಸಿಎಂ ಸಿದ್ಧರಾಮಯ್ಯ ಅವರು ಈ ಬಗ್ಗೆ ಕಿವಿಗೊಡದೇ ಚುನಾವಣಾ ಪೂರ್ವ ಭರವಸೆಯನ್ನು ಮುಂದುವರೆಸಿದ್ದರಿ೦ದ ಗ್ಯಾರಂಟಿ ಯೋಜನೆಗಳು ಮುಂದುವರೆಯುತ್ತಿವೆ. ಇದರಿಂದ ರಾಜ್ಯದ ಮಹಿಳೆಯರಲ್ಲಿ ಕೊಂಚ ಸಮಾಧಾನ ತಂದಿದ್ದು, ಹಣ ತಮ್ಮ ಖಾತೆ ಸೇರುವುದು ಯಾವಾಗ ಎಂದು ಕಾದು ಕುಳಿತಿದ್ದಾರೆ.

ಗೃಹಲಕ್ಷ್ಮಿ ಯೋಜನೆ (GruhaLakshmi Scheme) ನಿತ್ಯ ನಿರಂತರ

ರಾಜ್ಯದ ಬಿಪಿಎಲ್ (BPL), ಎಪಿಎಲ್ ರೇಷನ್ ಕಾರ್ಡ್‌ದಾರರು (APL Ration Card) ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆಯುತ್ತಿದ್ದಾರೆ. ಪ್ರಮುಖವಾಗಿ ಅತಿ ಹೆಚ್ಚಿನ ಅನುದಾನ ಬೇಡುವ ಗೃಹಲಕ್ಷ್ಮಿ ಯೋಜನೆಯ (GruhaLakshmi Scheme) ಬಗ್ಗೆ ಫಲಾನುಭವಿಗಳಲ್ಲಿ ಭಾರಿ ಕುತೂಹಲವಿದೆ. ಈ ಯೋಜನೆಯ ಹಣ ಇತ್ತೀಚೆಗೆ ನಿರಂತರವಾಗಿ ಬರುತ್ತಿಲ್ಲ ಎಂಬ ಕೊರಗು ಬಹಳಷ್ಟು ಫಲಾನುಭವಿಗಳಿಗಿದೆ.

ಕಳೆದ ಜೂನ್ ತಿಂಗಳಲ್ಲಿ ಬರಬೇಕಿದ್ದ ಗೃಹಲಕ್ಷ್ಮಿ ಹಣ ಆಗಸ್ಟ್‌ನಲ್ಲಿ ಜಮಾ ಆಗಿದೆ. ಹಿಂದಿನ ಜುಲೈನಿಂದ ಸೆಪ್ಟೆಂಬರ್ ವರೆಗಿನ ಮೂರು ತಿಂಗಳ ಹಣ ಬಿಡುಗಡೆ ಬಾಕಿಯಿದೆ. ಇದು ಪ್ರತಿಪಕ್ಷದ ಟೀಕೆಗೂ ಆಹಾರವಾಗಿದ್ದು; ಗೃಹಲಕ್ಷ್ಮಿ ಯೋಜನೆ ಬಂದ್ ಆಗುವುದಿಲ್ಲ. ಇದು ನಿತ್ಯ ನಿರಂತರ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದ್ದಾರೆ.

ಒಟ್ಟಿಗೆ ಖಾತೆ ಸೇರಲಿದೆ ಗೃಹಲಕ್ಷ್ಮಿ ಎರಡು ಕಂತಿನ ಹಣ

ಇದೀಗ ಗೃಹಲಕ್ಷ್ಮಿ ಯೋಜನೆಯ ಜುಲೈ ಕಂತಿನ ಹಣ ಬಿಡುಗಡೆ ಪ್ರಕ್ರಿಯೆ ನಡೆದಿದ್ದು, ಅದರ ಬೆನ್ನಲ್ಲೇ ಆಗಸ್ಟ್ ಹಣವೂ ಬಿಡುಗಡೆಯಾಗಲಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಾಹಿತಿಗಳ ಪ್ರಕಾರ ದಸರಾ, ದೀಪಾವಳಿ ಸಂದರ್ಭದಲ್ಲಿ ಎರಡೂ ಕಂತಿನ ಹಣ ಬಿಡುಗಡೆಯಾಗಲಿದೆ.

ನವರಾತ್ರಿಯ ಆಯುಧ ಪೂಜೆಗೂ ಮುನ್ನ ಒಂದು ಕಂತಿನ ಹಣ ಬಿಡುಗಡೆಯಾದರೆ, ಅಕ್ಟೋಬರ್ ಕೊನೆಯಲ್ಲಿ ಇನ್ನೊಂದು ಕಂತ್ತಿನ ಹಣ ಬಿಡುಗಡೆ ಮಾಡುವ ಚಿಂತನೆ ಸರ್ಕಾರಕ್ಕಿದೆ. ಶೀಘ್ರದಲ್ಲಿಯೇ ಗೃಹಲಕ್ಷ್ಮಿ ಯೋಜನೆಯ ಎರಡು ಕಂತಿನ 4,000 ರೂಪಾಯಿ ಹಣ ಮಹಿಳೆಯರ ಖಾತೆಗೆ ಜಮಾ ಆಗಲಿದೆ ಎನ್ನಲಾಗುತ್ತಿದೆ.

ಸಮಸ್ಯೆ ಪರಿಹರಿಸುವಂತೆ ಬ್ಯಾಂಕುಗಳಿಗೆ ಸೂಚನೆ

ಈ ನಡುವೆ ವಿವಿಧ ತಾಂತ್ರಿಕ ಸಮಸ್ಯೆಯಿಂದಾಗಿ ರಾಜ್ಯದ 1.82 ಲಕ್ಷ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಲು ಸಾಧ್ಯವಾಗುತ್ತಿಲ್ಲ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಕೂಡಲೇ ಸಮಸ್ಯೆ ಪರಿಹರಿಸುವಂತೆ ಬ್ಯಾಂಕುಗಳಿಗೆ ಸೂಚನೆ ನೀಡಿದೆ.

ಅರ್ಹ ಮಹಿಳೆಯರ ಬ್ಯಾಂಕಿನ ಇ-ಕೆವೈಸಿ (e-KYC) ಸಮಸ್ಯೆ, ಆಧಾರ್ ಜೋಡಣೆಯಲ್ಲಿನ (Aadhaar linking) ವ್ಯತ್ಯಾಸ, ಎನ್‌ಪಿಸಿಐ ಮ್ಯಾಪಿಂಗ್ (NPCI Mapping) ಗೊಂದಲವಿರುವುದನ್ನು ಇಲಾಖೆಯ ಅಧಿಕಾರಿಗಳು ಬ್ಯಾಂಕರುಗಳ ಸಮಿತಿ ಸಭೆಯಲ್ಲಿ ವಿವರಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಈ ಸಮಸ್ಯೆಗಳನ್ನು ಸರಿಪಡಿಸಬೇಕೆಂದು ಬ್ಯಾಂಕ್‌ಗಳಿಗೆ ಸೂಚನೆ ನೀಡಿದ್ದಾರೆ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment