Gruhalakshmi Scheme
ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ನ ಸರ್ಕಾರದ ಪ್ರಮುಖ 5 ಗ್ಯಾರಂಟಿ ಯೋಜನೆ(Guarantee scheme)ಗಳಲ್ಲಿ ಗೃಹಲಕ್ಷ್ಮಿ(Gruhalakshmi Scheme)ಯೂ ಒಂದು. ಈ ಯೋಜನೆಯಡಿ ಇಷ್ಟುದಿನ ಪ್ರತಿಯೊಂದು ಮನೆಯ ಯಜಮಾನಿಗೆ ಪ್ರತಿ ತಿಂಗಳು 2,000 ರೂ. ನೀಡಲಾಗುತ್ತಿತ್ತು. ಆದರೆ, ಇದೀಗ ಕೊಂಚ ಬದಲಾವಣೆ ತರಲು ರಾಜ್ಯ ಸರ್ಕಾರವು ಮುಂದಾಗಿದ್ದು, ಇದರಿಂದ ಕೆಲವು ಮಹಿಳೆಯರಿಗೆ ಬಿಗ್ ಶಾಕ್ ಎದುರಾಗಿದೆ.
ಏಕೆಂದರೆ ಕೆಲವರನ್ನು ಈ ಯೋಜನೆಯಿಂದ ಹೊರಗಿಡಲಾಗುತ್ತದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಹೌದು, ಅನರ್ಹ ಬಿಪಿಎಲ್ ಕಾರ್ಡ್(BPL Card) ಹೊಂದಿರುವವರಿಗೆ ಸಿಎಂ ಸಿದ್ದರಾಮಯ್ಯ(CM Siddaramaiah) ಬಿಗ್ ಶಾಕ್ ನೀಡಿದ್ದು, ಶೀಘ್ರವೇ ಅನರ್ಹ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಈ ಮೂಲಕ ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಕಾರ್ಡ್ ನೀಡಿ ಗೃಹಲಕ್ಷ್ಮಿ ಯೋಜನೆಯ ಹಣ(Grilahakshmi Scheme money) ಪಡೆದುಕೊಂಡ ಮಹಿಳೆಯರಿಗೆ ಇನ್ಮುಂದೆ ಗೃಹಲಕ್ಷ್ಮಿ ಹಣ ಸ್ಥಗಿತವಾಗಲಿದೆ ಎನ್ನಲಾಗಿದೆ. ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿದಂತೆ ಹೊಸ ಆದೇಶ ಹೊರಬಿದ್ದಿದ್ದು, ಕೆಲ ಮಹಿಳೆಯರಿಗೆ ಇನ್ಮುಂದೆ ಗೃಹಲಕ್ಷ್ಮೀ ಯೋಜನೆಯ ಹಣ ಸಿಗೋದಿಲ್ಲ.
ಈ ಸುದ್ದಿ ಓದಿ:- Free Education: ಅಂಗನವಾಡಿ ಕೇಂದ್ರಗಳಲ್ಲೇ ಇನ್ಮುಂದೆ ಇಂಗ್ಲಿಷ್ ಮೀಡಿಯಂ LKG, UKG ತರಗತಿ ಆರಂಭ.!
ಕಾರಣ ರಾಜ್ಯಾದ್ಯಂತ ಅನರ್ಹ ಬಿಪಿಎಲ್ ಕಾರ್ಡ್ ರದ್ದು ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ರಾಜ್ಯದಲ್ಲಿ 4,37,23,911 ಜನರು ಬಿಪಿಎಲ್ ಕಾರ್ಡ್ ಸೌಲಭ್ಯ ಪಡೆಯುತ್ತಿದ್ದು, ಶೇ.80ರಷ್ಟು ಕುಟುಂಬಗಳು ಬಿಪಿಎಲ್ ಅಡಿಯಲ್ಲಿವೆ. 1.27 ಕೋಟಿ ಬಿಪಿಎಲ್ ಕುಟುಂಬಗಳಿವೆ ಹೊಸ ಕಾರ್ಡ್‌ಗಳಿಗೆ 2.95 ಲಕ್ಷ ಅರ್ಜಿ ಬಾಕಿಯಿದೆ.
ನೀತಿ ಆಯೋಗದ ಪ್ರಕಾರ ರಾಜ್ಯದಲ್ಲಿ ಬಡವರ ಸಂಖ್ಯೆ ಕಡಿಮೆಯಾಗಿದ್ದರೂ, ಬಿಪಿಎಲ್ ಕಾರ್ಡ್ ಪ್ರಮಾಣ ಕಡಿಮೆಯಾಗದಿರಲು ಕಾರಣವೇನು? ತಮಿಳುನಾಡಿನಲ್ಲಿ ಬಿಪಿಎಲ್ ಪ್ರಮಾಣ ಶೇ. 40ರಷ್ಟಿದೆ. ಈ ಕುರಿತು ಪರಿಶೀಲನೆ ನಡೆಸಿ, ಅನರ್ಹರನ್ನು ಕೈಬಿಡುವ ಕಾರ್ಯ ನಡೆಯಬೇಕು. ಇದೇ ರೀತಿ ಮೃತ ಸದಸ್ಯರ ಹೆಸರು ತೆಗೆದು ಹಾಕುವ ಪ್ರಕ್ರಿಯೆ ತ್ವರಿತಗೊಳಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಸುದ್ದಿ ಓದಿ:- Mosquito Net: ರಾಜ್ಯದಲ್ಲಿ ‘ಡೆಂಗ್ಯೂ’ ಪ್ರಕರಣ ಹೆಚ್ಚಳ: ರೇಷನ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಸರ್ಕಾರದಿಂದ ಉಚಿತ ಸೊಳ್ಳೆ ಪರದೆ ವಿತರಣೆ.!
ಇನ್ನೂ ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಕಾರ್ಡ್ ಪಡೆದುಕೊಂಡು ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯುತ್ತಿರುವ ಮಹಿಳೆಯರಿಗೂ ಇನ್ಮುಂದೆ ಗೃಹ ಲಕ್ಷ್ಮಿ ಹಣ ಬರುವುದಿಲ್ಲ ಎನ್ನಲಾಗಿದೆ. ಗೃಹಲಕ್ಷ್ಮಿ ಯೋಜನೆಗೆ ಮುಖ್ಯವಾಗಿ ಬಿಪಿಎಲ್ ಕಾರ್ಡ್ ಕಡ್ಡಾಯವಾಗಿದ್ದು, ಬಿಪಿಎಲ್ ಕಾರ್ಡ್ ರದ್ದಾದ್ದರೆ ಗೃಹಲಕ್ಷ್ಮಿ ಹಣವೂ ರದ್ದಾಗಲಿದೆ ಎನ್ನಲಾಗಿದೆ.
ಇನ್ನೂ, ಗೃಹಲಕ್ಷ್ಮಿ ಯೋಜನೆಯಡಿ ಮಾರ್ಚ್ ನಂತರ ಹೊಸದಾಗಿ 2 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ಈ ಅರ್ಜಿಗಳನ್ನೂ ಪರಿಗಣಿಸಲು ಸರ್ಕಾರ ನಿರ್ಧಾರ ಮಾಡಿದ್ದು, ಈ ನಡುವೆ ಕೆಲವು ಮಹಿಳೆಯರಿಗೆ ಶಾಕ್ ನೀಡಲು ಮುಂದಾಗಿದೆ. ಆದಾಯ ತೆರಿಗೆ ಪಾವತಿದಾರರ ಮನೆಯ ಯಜಮಾನಿಯರನ್ನು ಗೃಹಲಕ್ಷ್ಮಿ ಯೋಜನೆಯಿಂದ ಹೊರಗಿಡಲಾಗಿದೆ. ಆದರೆ ಆದಾಯ ತೆರಿಗೆ ಪಾವತಿ ಮಾಡುತ್ತಿರುವ ಲಕ್ಷಾಂತರ ಮಂದಿ ಅನರ್ಹರು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳುತ್ತಿದ್ದಾರಂತೆ.
ಈ ಸುದ್ದಿ ಓದಿ:- Metro Recruitment: ಬೆಂಗಳೂರು ಮೆಟ್ರೋದಲ್ಲಿರುವ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ.! ವೇತನ 51,350/- ಆಸಕ್ತರು ಅರ್ಜಿ ಸಲ್ಲಿಸಿ.!
ಇಂತಹ ಬರೋಬ್ಬರಿ 1.78 ಲಕ್ಷ ಮಂದಿಯನ್ನು ಪತ್ತೆ ಮಾಡಲಾಗಿದೆ. ಇಂತವರಿಗೆ ಆದಾಯ ತೆರಿಗೆ ಪಾವತಿಸದ ಬಗ್ಗೆ ದೃಢೀಕರಣ ಪತ್ರ ತರಲು ಕೇಳಲಾಗಿತ್ತು. 1.78 ಲಕ್ಷ ಮಂದಿಯ ಕೇವಲ ಪೈಕಿ 6,000ಕ್ಕೂ ಹೆಚ್ಚು ಜನರು ಮಾತ್ರ ದೃಢೀಕರಣ ಪತ್ರ ಸಲ್ಲಿಕೆ ಮಾಡಿದ್ದಾರೆ. ಇವರನ್ನು ಮಾತ್ರ ಯೋಜನೆಗೆ ಪರಿಗಣಿಸಲಾಗುವುದು. ದೃಢೀಕರಣ ಪತ್ರ ಸಲ್ಲಿಕೆ ಮಾಡಿದವರಿಗೆ 2,000 ರೂ. ನೀಡಲಾಗುತ್ತದೆ. ನೀಡದವರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ದೊರೆಯುವುದಿಲ್ಲವೆಂದು ಇಲಾಖೆಯ ಅಧಿಕಾರಿಗಳು ಮಾಹಿತಿ ತಿಳಿಸಿದ್ದಾರೆ.