Rain Alert:
ಮಳೆ, ಮಳೆ ಮಳೆ ! ರಾಜ್ಯದಲ್ಲಿ ಮುಂದಿನ 6 ದಿನ ಭಾರಿ ಮಳೆ ಎಚ್ಚರಿಕೆ! ಈ ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ಘೋಷಣೆ.!
ಕಳೆದ ವರ್ಷ ಭೀಕರ ಬರಗಾಲದಿಂದ ಕಂಗೆಟ್ಟು ಹೋಗಿದ್ದ ಕರ್ನಾಟಕದ ಜನತೆಗೆ ಈ ವರ್ಷದ ಮಳೆಗಾಲದ ಸೀಸನ್ ನಲ್ಲಿ ಆರಂಭದಲ್ಲಿಯೇ ಸಮಾಧಾನಕರವಾದ ಉತ್ತರ ಸಿಕ್ಕಿದೆ ಎಂದು ಹೇಳಬಹುದು. ಯಾಕೆಂದರೆ ಕಳೆದ ವರ್ಷದಲ್ಲಿ ಆರಂಭದಿಂದಲೇ ಭಾರಿ ಹೊಡೆತ ಬಿದ್ದಿತ್ತು. ಮುಂಗಾರು ಮಳೆ ಮುನಿಸಿಕೊಂಡು ರೈತರ ಪರಿಸ್ಥಿತಿ ಕಷ್ಟದಾಯಕವಾಗಿತ್ತು, ಸಂಪೂರ್ಣ ಕೃಷಿ ಚಟುವಟಿಕೆ ಸ್ಥಬ್ಧವಾಗಿ ಜನಸಾಮಾನ್ಯರಿಗೂ ಕೂಡ ಬಿಸಿಲ ತಾಪ ಹೆಚ್ಚಾಗಿ ಸುಡುತ್ತಿತ್ತು.
ಆದರೆ ಈಗ 2024-25 ನೇ ಸಾಲಿನ ಪರಿಸ್ಥಿತಿ ಸಮಾಧಾನಕರವಾಗಿದೆ. ತಿಂಗಳ ಹಿಂದೆಯೇ ದರ್ಶನವಾದ ವರುಣ ದೇವನ ಕೃಪೆಯಿಂದ ನಿರೀಕ್ಷೆಗೂ ಮೀರಿದ ಉತ್ತಮ ಮಳೆಯಾಗಿದೆ. ಸಮೀಕ್ಷೆ ಪ್ರಕಾರ ಕರಾವಳಿ ಹಾಗೂ ಮಳೆನಾಡಿಗಿಂತ ಉತ್ತರ ಕರ್ನಾಟಕದ ಭಾಗದಲ್ಲಿಯೇ ಅತ್ಯುತ್ತಮ ಮಳೆಯಾಗಿದೆ. ವಾಡಿಕೆಗಿಂತ 60% ಹೆಚ್ಚಿನ ಮಳೆ ಬಿದ್ದಿದೆ ಎನ್ನುವ ದಾಖಲೆಯೂ ಆಗಿದೆ.
ನಿರಂತರವಾಗಿ ಸುರಿಯುತ್ತಿದ್ದ ಮಳೆಯೂ ಕಳೆದ ಒಂದು ವಾರದಿಂದ ಬಿಡುವು ಕೊಟ್ಟಿದ್ದು ಈಗ ಮತ್ತೊಮ್ಮೆ ರಾಜ್ಯದಲ್ಲಿ ಹವಮಾನ ಬದಲಾವಣೆ ಶುರುವಾಗಿದೆ. ಈಗಾಗಲೇ ಬಿದ್ದಿರುವ ಹನಿಗೆ ಭೂಮಿ ಉತ್ತು ಹದ ಮಾಡಿಕೊಳ್ಳಲು ರೈತ ಜಮೀನಿನತ್ತ ಮುಖ ಮಾಡಿ ಸಿದ್ದನಾಗಿರುವ ರೈತನಿಗೆ ಮಾತ್ರವಲ್ಲದೆ ಮೀನುಗಾರಿಕೆ ಮಾಡುವವರಿಂದ ಹಿಡಿದು ಶಾಲೆಗೆ ಹೋಗುವ ಮಕ್ಕಳವರಿಗೆ ಪ್ರತಿಯೊಬ್ಬರಿಗೂ ಕೂಡ ಹವಾಮಾನ ವರದಿ ಮುಖ್ಯವಾಗುತ್ತದೆ.
ಹಾಗಾಗಿ ಈ ವಾರ ಮತ್ತೆ ಮಳೆ ನಿರೀಕ್ಷೆ ಇರುವುದರಿಂದ ಎಲ್ಲಾ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ. ಅದರಲ್ಲೂ ರಾಜ್ಯದ ಕೆಲವು ಜಿಲ್ಲೆಗಳಿಗೆ ಸರ್ಕಾರದಿಂದ ಎಲ್ಲೋ ಅಲರ್ಟ್ ಕೂಡ ಘೋಷಣೆಯಾಗಿದೆ. ರಾಜ್ಯದ ಯಾವ ಜಿಲ್ಲೆಗಳಲ್ಲಿ ಮಳೆ ಉತ್ತಮವಾಗಿದೆ ಹಾಗೂ ಯಾವ ಜಿಲ್ಲೆಗಳು ಮುಂಬರುವ ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಾಗಬೇಕು ಎನ್ನುವುದರ ವಿವರ ಹೀಗಿದೆ.
ಈ ಮೇಲೆ ತಿಳಿಸಿದಂತೆ ಇದುವರೆಗೂ ಬಿದ್ದಿರುವ ಮಳೆಯಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಹೆಚ್ಚಿನ ಮಳೆ ಆಗಿದೆ. ಉತ್ತರ ಕರ್ನಾಟಕ ಭಾಗದ 107 ತಾಲೂಕುಗಳು ಕೂಡ ಒಳ್ಳೆಯ ಮಳೆಯ ಫಲಿತಾಂಶವನ್ನು ಪಡೆದಿವೆ . ಈಗಾಗಲೇ ಅಲ್ಲೆಲ್ಲ ಕೃಷಿ ಚಟುವಟಿಕೆ ಜಾಗೃತವಾಗಿದೆ, ಉತ್ತರ ಕರ್ನಾಟಕದಲ್ಲಿ ಭಾರಿ ಪ್ರಮಾಣದ ಮಳೆಯಾಗಿರುವುದರಿಂದ ರೈತರು ಶೇಂಗಾ, ಹೆಸರು, ಉದ್ದು, ಸೋಯಾ ಮೆಕ್ಕೆಜೋಳ, ಶೇಂಗಾ, ಹತ್ತಿ, ಮೆಣಸಿನ ಕಾಯಿ ತೊಗರಿ ಬಿತ್ತನೆಗೆ ತಯಾರಾಗಿದ್ದಾರೆ.
ಇದನ್ನು ಹೊರತುಪಡಿಸಿ ಹೇಳುವುದಾದರೆ ಹವಮಾನ ಇಲಾಖೆ ನೀಡಿರುವ ಮುನ್ಸೂಚನೆ ಪ್ರಕಾರ ಮುಂದಿನ ಒಂದು ವಾರ ರಾಜ್ಯದಾದ್ಯಂತ ಮತ್ತೊಮ್ಮೆ ಹೆಚ್ಚಿನ ಪ್ರಮಾಣದ ಮಳೆ ಬೀಳಲಿದೆ. ಕಳೆದ ಒಂದು ವರ್ಷದ ಗೈರಿಗೆ ತಿಂಗಳಪೂರ್ತಿ ರೌದ್ರಾವತಾರ ತೋರಿ ವಾರದಿಂದ ಸೈಲೆಂಟ್ ಆಗಿದ್ದ ವರುಣದೇವ ಮತ್ತೊಮ್ಮೆ ಸೆಕೆಂಡ್ ಇನ್ನಿಂಗ್ಸ್ ಆರಂಭಿಸುತ್ತಿದ್ದಾನೆ.
ಈ ಬಾರಿ ಗುಡುಗು ಸಹಿತ ಭರ್ಜರಿ ಮಳೆ ಬೀಳಲಿದೆ, ಕರಾವಳಿ ಭಾಗಕ್ಕೆ ಹೆಚ್ಚಿನ ಮಳೆ ಆಗಲಿದೆ ಎನ್ನುವ ಮಾಹಿತಿಯನ್ನು ಹವಾಮಾನ ಇಲಾಖೆ ಹಂಚಿಕೊಂಡಿದೆ. ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಈಗಾಗಲೇ ಎಲ್ಲೋ ಅಲರ್ಟ್ ಘೋಷಿಸಿದೆ. ಘಂಟೆಗೆ 35km – 45km ಬೇಗದಲ್ಲಿ ಬೀಸುವ ಚಂಡಮಾರುತ ಗಾಳಿಯು ಕರ್ನಾಟಕ ಕರಾವಳಿ ಉದ್ದಕ್ಕೂ ಮತ್ತು ಹೊರಗಿನ ರಾಜ್ಯಗಳಿಗೂ ಮುಂದುವರೆಯುತ್ತದೆಂದು ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.
ಜೂನ್ 22ರಿಂದ ಜುಲೈ ತಿಂಗಳ ಮೊದಲ ವಾರದ ಅಂತ್ಯದವರೆಗೂ ಕೂಡ ಇದೇ ರೀತಿ ವಾತಾವರಣ ಇರಲಿದ್ದು ಅತ್ಯುತ್ತಮ ಮಳೆ ಬೀಳಲಿದೆ. ಅದರಲ್ಲೂ ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಉಡುಪಿ, ಉತ್ತರ ಕನ್ನಡ, ಮಂಡ್ಯ, ಚಾಮರಾಜನಗರ, ತುಮಕೂರು, ಹಾಸನ, ಚಿತ್ರದುರ್ಗ, ಬೆಳಗಾವಿ ಹಾಗೂ ದಾವಣಗೆರೆಯ ಪ್ರದೇಶಗಳಲ್ಲಿ ಮಳೆ ಅಬ್ಬರ ಜೋರಾಗಿರಲಿದೆ ಎಂದು ಹವಾಮಾನ ತಜ್ಞರು ಸೂಚನೆ ಕೊಟ್ಟಿದ್ದಾರೆ.
ಮಳೆ ಎನ್ನುವುದು ಪ್ರತಿಯೊಬ್ಬರಿಗೂ ಕೂಡ ಖುಷಿ ಕೊಡುವ ಸಂಗತಿ ಆಗಿದೆ. ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಸರಿಯಾದ ಸಮಯಕ್ಕೆ ಬೀಳದೆ ಇದ್ದರೆ ಪರಿಸ್ಥಿತಿ ಹೇಗಾಗುತ್ತದೆ ಎನ್ನುವುದನ್ನು ಕಳೆದ ವರ್ಷ ಮತ್ತಷ್ಟು ಹತ್ತಿರದಿಂದ ಅನುಭವಿಸಿದ್ದೇವೆ ಹಾಗಾಗಿ ಈ ವರ್ಷವಾದರೂ ಹೆಚ್ಚಿನ ಪ್ರಮಾಣದಲ್ಲಿ ಮಳೆ ಬಿದ್ದು ಇಳೆಯ ದಾಹ ನೀಗುವುದರ ಜೊತೆಗೆ ಎಲ್ಲರ ಪರಿಸ್ಥಿತಿ ಕೂಡ ಹಸನಾಗಲಿ ಮುಂಗಾರು ಮಳೆ ತಂಪು ವರ್ಷ ಪೂರ್ತಿ ಮುಂದುವರೆದು.
ಕೃಷಿ ಹಸನಾಗಿ ರೈತನ ಬದುಕು ಮತ್ತು ಈ ಮೂಲಕ ಪರೋಕ್ಷವಾಗಿ ಪ್ರತಿಯೊಬ್ಬರ ಬದುಕು ಸರಾಗವಾಗಲಿ, ವಾತಾವರಣ ಆರೋಗ್ಯಕರವಾಗಿರಲಿ ಎಂದು ಬಯಸೋಣ. ಇದರೊಂದಿಗೆ ಮಳೆ ಬೀಳುವ ಸೂಚನೆ ನೀಡುವುದರಿಂದ ಮುನ್ನೆಚ್ಚರಿಕೆಯಿಂದ ಇದ್ದು ಮಳೆಯನ್ನು ಸ್ವಾಗತಿಸೋಣ.