HESCOM
ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (HESCOM) ಕಡೆಯಿಂದ ಇದೇ ಆಗಸ್ಟ್ 2ರಂದು ಅಪ್ರೆಂಟಿಸ್ ತರಬೇತಿಗೆ (Apprenticeship training Notification) ಅರ್ಜಿ ಆಹ್ವಾನಿಸಿರುವ ಕುರಿತಾಗಿ ಅಧಿಕೃತ ನೋಟಿಫಿಕೇಶನ್ ಬಿಡುಗಡೆಯಾಗಿದೆ. ರಾಜ್ಯದ 338 ಅಭ್ಯರ್ಥಿಗಳಿಗೆ ಈ ಬಾರಿ ಹೆಸ್ಕಾಂನಲ್ಲಿ ತರಬೇತಿ ಪಡೆಯುವ ಅವಕಾಶವು ಸಿಗುತ್ತಿದ್ದು ಪದವಿ ಹಾಗೂ ಡಿಪ್ಲೋಮಾ ಪದವಿ ಪಡೆದವರಿಗೆ ಪ್ರತ್ಯೇಕವಾಗಿ ಇದನ್ನು ವಿಭಾಗ ಮಾಡಲಾಗಿದೆ.
ಈ ಸುದ್ದಿ ಓದಿ:- Railway Jobs: ರೈಲ್ವೇ ಇಲಾಖೆಯಲ್ಲಿ 7951 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ ವೇತನ:- 35,400/-
ಇದೇ ನೋಟಿಫಿಕೇಶನ್ ನಲ್ಲಿ ವಿವರವಾಗಿ ತರಬೇತಿ ವಿವರ ಮತ್ತು ಅರ್ಜಿ ಸಲ್ಲಿಸುವ ವಿಧಾನದ ಕುರಿತು ಮಾಹಿತಿ ನೀಡಲಾಗಿದೆ. ಆಸಕ್ತ ಅಭ್ಯರ್ಥಿಗಳಿಗೆ ಅನುಕೂಲತೆ ಮಾಡಿಕೊಡುವ ಸಲುವಾಗಿ ನಾವು ಕೂಡ ಈ ಅಂಕಣದಲ್ಲಿ ಸದರಿ ಮಾಹಿತಿಯ ಕುರಿತು ವಿವರಿಸುತ್ತಿದ್ದೇವೆ. ತಪ್ಪದೇ ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.
ತರಬೇತಿ ಸಂಸ್ಥೆ:- ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (HESCOM)
ಹುದ್ದೆ ವಿವರ:-
HASCOM ಅಪ್ರೆಂಟಿಸ್ ಶಿಪ್ ಆಕ್ಟ್ 1961 ಪ್ರಕಾರವಾಗಿ ಇಂಜಿನಿಯರಿಂಗ್ ನಲ್ಲಿ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವಿ ಅಥವಾ ಡಿಪ್ಲೋಮೋದಲ್ಲಿ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಅಭ್ಯಾಸ ಮಾಡಿರುವ ಅರ್ಹ ಅಭ್ಯರ್ಥಿಗಳಿಗೆ ಒಂದು ವರ್ಷಗಳ ತರಬೇತಿ ಸಹಿತ ಹುದ್ದೆ ನೀಡುತ್ತಿದೆ.
* ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ – 200 ಹುದ್ದೆಗಳು
* ಡಿಪ್ಲೋಮಾ ವಿದ್ಯಾರ್ಥಿಗಳಿಗೆ – 138 ಹುದ್ದೆಗಳು
ತರಬೇತಿಯ ಅವಧಿ:- 1 ವರ್ಷ
ಸ್ಥಳ:- ಹುಬ್ಬಳ್ಳಿ (HESCOM)
ತರಬೇತಿ ಭತ್ಯೆ:-
* ಇಂಜಿನಿಯರಿಂಗ್ ಪದವಿ ಪಡೆದ ಅಭ್ಯರ್ಥಿಗಳಿಗೆ – ರೂಂ.9,000
* ಡಿಪ್ಲೋಮಾ ಅಭ್ಯರ್ಥಿಗಳಿಗೆ – ರೂ.8000
ಅರ್ಹತಾ ಮಾನದಂಡಗಳು:-
* 25 ವರ್ಷದ ಒಳಗಿನ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಿಸುತ್ತಾರೆ
* ಈ ಮೇಲೆ ತಿಳಿಸಿದಂತೆ ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವಿ ಅಥವಾ ಡಿಪ್ಲೋಮೋದಲ್ಲಿ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಅಭ್ಯಾಸ ಮಾಡಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.
ಅರ್ಜಿ ಸಲ್ಲಿಸುವ ವಿಧಾನ:-
* ಮೊದಲಿಗೆ https://nats.education.gov.in/ ವೆಬ್ ಪೋರ್ಟಲ್ ಗೆ ಭೇಟಿ ಕೊಟ್ಟು Student Register ವಿಭಾಗಕ್ಕೆ ತೆರಳಿ register ಆಗಿ login ID & password ಪಡೆಯಿರಿ
* enrollment ಪೂರ್ತಿಯಾದ ನಂತರ HESCOM Vacancies ವಿಭಾಗದಲ್ಲಿ ಅರ್ಜಿ ಸಲ್ಲಿಕೆ ಪೂರ್ತಿಗೊಳಿಸಿ
ಆಯ್ಕೆ ವಿಧಾನ:-
* ಚೆನ್ನೈನ ಬೋರ್ಡ್ ಆಫ್ ಅಪ್ರೆಂಟಿಸ್ ಅರ್ಜಿಗಳನ್ನು ಪರಿಶೀಲಿಸಿ
ಅರ್ಹತಾ ಪಟ್ಟಿ ಸಿದ್ದಪಡಿಸಿ ಬಿಡುಗಡೆಗೊಳಿಸುತ್ತದೆ.
* ನಂತರ ನಿಗದಿಪಡಿಸುವ ದಿನಾಂಕದಂದು ಹುಬ್ಬಳ್ಳಿಯ ವಿದ್ಯಾನಗರದಲ್ಲಿರುವ ಹೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರಿಂಗ್ ಕಚೇರಿಯಲ್ಲಿ ದಾಖಲೆಗಳ ಪರಿಶೀಲನೆ ನಡೆಸಿ ಆಯ್ಕೆ ಆದವರಿಗೆ ಇ-ಮೇಲ್ ಮುಖಾಂತರ ಸಂಪರ್ಕಿಸಲಾಗುತ್ತದೆ
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ – 05 ಆಗಸ್ಟ್ 2024
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 20 ಆಗಸ್ಟ್ 2024
* ಶಾರ್ಟ್ ಲಿಸ್ಟ್ ಬಿಡುಗಡೆ ಆಗುವ ದಿನಾಂಕ – 27 ಆಗಸ್ಟ್ 2024
* ದಾಖಲೆಗಳ ಪರಿಶೀಲನೆ ನಡೆಯುವ ದಿನಾಂಕ – 09 ಸೆಪ್ಟೆಂಬರ್ 2024.
ಈ ಸುದ್ದಿ ಓದಿ:- Jio : ಜಿಯೋ ಸಿಮ್ ಗ್ರಾಹಕರಿಗೆ ಗುಡ್ ನ್ಯೂಸ್.! 3 ತಿಂಗಳವರೆಗೆ ರೀಚಾರ್ಜ್ ಮಾಡಬೇಕಿಲ್ಲ.! ಅನ್ಲಿಮಿಟೆಡ್ ಡೇಟಾ.!
ಹೆಚ್ಚಿನ ಮಾಹಿತಿಗಾಗಿ:-
* knplacement@boat.srp.com
044 – 22542235
* gmadmhr.hescom@gmail.com
0836 – 2956611
ದಾಖಲೆ ಪರಿಶೀಲನೆ ನಡೆಯುವ ವಿಳಾಸ:-
O/o ಎಕ್ಸಿಕ್ಯೂಟಿವ್ ಇಂಜಿನಿಯರ್ (Ele), ITI, HESCOM,
ಕಾರವಾರ ರಸ್ತೆ, ವಿದ್ಯಾ ನಗರ, ಹುಬ್ಬಳ್ಳಿ.