Hostel Recruitment
ರಾಜ್ಯದಾದ್ಯಂತ ಇರುವ ಎಲ್ಲಾ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಒಂದು ಹಿತಕರವಾದ ವಿಷಯವನ್ನು ಈ ಲೇಖನದ ಮೂಲಕ ತಿಳಿಸಲು ಬಯಸುತ್ತಿದ್ದೇವೆ. ಅದೇನೆಂದರೆ ಪ್ರತಿಯೊಬ್ಬ ವ್ಯಕ್ತಿಗೂ ಕೂಡ ತಾನು ಉನ್ನತ ಹುದ್ದೆಗೆ ಹೋಗಬೇಕು ಹೆಚ್ಚು ಸಂಬಳ ಸಿಗುವ ಅಥವಾ ಜವಾಬ್ದಾರಿತವಾಗಿ ಕಾರ್ಯನಿರ್ವಹಿಸಿ ಆ ಮೂಲಕ ಹೆಸರಾಗುವ ಮತ್ತು ಸಮಾಜಕ್ಕೆ ತನ್ನದೇ ಆದ ಕೊಡುಗೆಯನ್ನು ಕೊಡಬಯಸುವ ಮನಸ್ಸಿರುತ್ತದೆ.
ಹಾಗೆಯೇ ತನ್ನ ವೈಯಕ್ತಿಕವಾದ ಜೀವನಮಟ್ಟ ವೃದ್ದಿಗೆ ಹಾಗೂ ತನ್ನ ಅವಲಂಬಿತ ಕುಟುಂಬಕ್ಕೆ ನೆರವಾಗಲು ಹಣದ ಅಗತ್ಯತೆಯು ಕೂಡ ಇರುವುದರಿಂದ ಸರ್ಕಾರಿ ಹುದ್ದೆ ಆದರೆ ಇದು ಭದ್ರತೆ ಇರುತ್ತದೆ ಎಂದು ಸರ್ಕಾರಿಗೆ ನೌಕರಿ ಆಸೆ ಪಡುತ್ತಾರೆ ಆದರೆ ಇದು ಸುಲಭಕ್ಕೆ ಸಿಗುವುದಿಲ್ಲ ಎನ್ನುವುದಿಲ್ಲ ಹಾಗೆ ಸರ್ಕಾರಿ ಹುದ್ದೆ ಸಿಗಬೇಕು ಎಂದರೆ ಹೆಚ್ಚು ಓದಿರಬೇಕು ಎನ್ನುವ ತಪ್ಪು ಕಲ್ಪನೆ ಕೂಡ ಕೆಲವರಲ್ಲಿ ಇರುತ್ತದೆ.
ಸದ್ಯಕ್ಕೆ ಈಗ ಕರೆಯಾಗಿರುವ ಹಿಂದುಳಿದ ವರ್ಗಗಳ ಇಲಾಖೆ ಹಾಸ್ಟೆಲ್ ನೇಮಕಾತಿಯಲ್ಲಿ SSLC ಉತ್ತೀರ್ಣರಾದವರಿಗೆ ಕೂಡ ಸರ್ಕಾರಿ ಹುದ್ದೆ ಪಡೆಯುವಂತಹ ಅವಕಾಶ ಸಿಗುತ್ತಿದೆ. ಹೌದು ಈ ಮೇಲೆ ಹೇಳಿದ ಮಾತು ಅಕ್ಷರಶಃ ಸತ್ಯವಾಗಿದೆ. ಏಕೆಂದರೆ ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಹಾಸ್ಟೆಲ್ ನಿರ್ಮಾಣಕ್ಕೆ ಸರ್ಕಾರ ಮನವಿ ಸಲ್ಲಿಸಿತ್ತು.
ಈಗ ಸರ್ಕಾರ ಇದಕ್ಕೆ ಅನುಮತಿ ನೀಡಿ ಅಸ್ತು ಎಂದಿದೆ ಯೋಜನೆ ಪ್ರಕಾರವಾಗಿ ಪ್ರಮುಖ ಜಿಲ್ಲಾ ಕೇಂದ್ರಗಳಲ್ಲಿ 100 ವಿದ್ಯಾರ್ಥಿಗಳನ್ನು ಒಳಗೊಂಡಂತಹ 150 ಹಾಸ್ಟೆಲ್ ನಿರ್ಮಾಣ ಮಾಡಲು ನಿರ್ಧಾರ ಮಾಡಲಾಗಿದ್ದು ಇದರ ಸಂಬಂಧಿತ ಕಾರ್ಯವು ಬರದಿಂದ ಸಾಗುತ್ತಿದೆ. ಇದರಲ್ಲಿ 75 ಬಾಲಕರಿಗಾಗಿ ಇರುವ ಹಾಸ್ಟೆಲ್ ವ್ಯವಸ್ಥೆ ಮತ್ತು 75 ಬಾಲಕಿಯರಿಗಾಗಿ ನಿರ್ಮಾಣ ಮಾಡುತ್ತಿರುವ ವಿದ್ಯಾರ್ಥಿ ನಿಲಯವಾಗಿದೆ.
ಒಟ್ಟು ನಿರ್ವಹಣೆಗಾಗಿ ಸುಮಾರು 895 ಪೋಸ್ಟಿಂಗ್ ಮಾಡಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಈ ವಿದ್ಯಾರ್ಥಿ ನಿಲಯಗಳಲ್ಲಿ ಜವಾಬ್ದಾರಿ ಯುತವಾಗಿ ಕಾರ್ಯನಿರ್ವಹಿಸಲು ನಿಲಯ ಪಾಲಕರಿಂದ ಹಿಡಿದು ರಾತ್ರಿ ಪಾಳಿ ಕಾವಲುಗಾರರವರೆಗೆ ಅನೇಕ ಹುದ್ದೆಗಳು ಖಾಲಿ ಇವೆ, ಈ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳುವಂತಹ ಪ್ರಸ್ತಾವನಿಗೂ ಕೂಡ ಮುಖ್ಯಮಂತ್ರಿಗಳಿಂದ ಅನುಮತಿ ದೊರೆತಿದೆ.
ಆ ಪ್ರಕಾರವಾಗಿ ಸದ್ಯಕ್ಕೀಗ 895 ಹುದ್ದೆಗಳಲ್ಲಿ 150 ನಿಲಯಪಾಲಕರ ಹುದ್ದೆಗಳಿಗೆ ವೃಂದ ನೇಮಕಾತಿ ನಿಯಮಾವಳಿ ಪ್ರಕಾರವಾಗಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು ಇನ್ನಿತರೆ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಹಾಗಾದರೆ ಒಟ್ಟು ಎಷ್ಟು ಹುದ್ದೆಗಳು ಖಾಲಿ ಇದೆ? ಹುದ್ದೆಗಳ ವಿವರವೆಷ್ಟು? ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ವಿದ್ಯಾರ್ಹತೆ ಏನು ಮತ್ತು ಕಾಲಾವಕಾಶ ಎಲ್ಲಿಯವರೆಗೆ ಇರುತ್ತದೆ ಎನ್ನುವುದರ ಬಗ್ಗೆ ಈ ಲೇಖನದಲ್ಲಿ ವಿವರಣೆ ಕೊಡುತ್ತಿದ್ದೇವೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಸ್ಟೆಲ್ ಗಳಲ್ಲಿ ಖಾಲಿ ಇರುವ ಹುದ್ದೆಗಳ ವಿವರ:-
* ಒಟ್ಟು ಖಾಲಿ ಇರುವ ಹುದ್ದೆಗಳು 825 ಹುದ್ದೆಗಳು
* ಅಡುಗೆಯವರು – 300 ಹುದ್ದೆಗಳು
* ಅಡುಗೆ ಸಹಾಯಕರು – 300 ಹುದ್ದೆಗಳು
* ರಾತ್ರಿ ಕಾವಲುದಾರರು – 75 ಹುದ್ದೆಗಳು.
ಈ ಮೇಲೆ ಹೇಳಿದಂತೆ ಸದ್ಯಕ್ಕೆ 150 ನಿಲಯ ಪಾಲಕರ ಹುದ್ದೆಗಳಿಗೆ ಶೀಘ್ರದಲ್ಲಿಯೇ ಅರ್ಜಿ ಆಹ್ವಾನ ಮಾಡಲಾಗುವುದು ಎನ್ನುವ ಭರವಸೆ ಸಿಕ್ಕಿದೆ. ಇನ್ನು ಕೆಲವೇ ದಿನಗಳಲ್ಲಿ ಆನ್ಲೈನ್ ಮೂಲಕ ಅರ್ಜಿ ಪ್ರಕ್ರಿಯೆ ಆರಂಭ ಆಗಲಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ. ಈ ಬಗ್ಗೆ ಅಧಿಕೃತ ಅಧಿಸೂಚನೆ ಬಿಡುಗಡೆಯಾಗಿ ಬಂದ ಬಳಿಕ ಆಸಕ್ತ ಅಭ್ಯರ್ಥಿಗಳು ಇಲಾಖೆಯ ವೆಬ್ಸೈಟ್ ವಿಳಾಸಕ್ಕೆ ಹೋಗಿ ಅರ್ಜಿ ಸಲ್ಲಿಸಿ ನಿಯಮಾವಳಿಗಳ ಪ್ರಕಾರ ಪರೀಕ್ಷೆಗಳನ್ನು ಎದುರಿಸಿ ಹುದ್ದೆ ಗಿಟ್ಟಿಸಿಕೊಳ್ಳಬಹುದಾಗಿದೆ.
ಸಾಮಾನ್ಯವಾಗಿ ಎಲ್ಲ ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ವಿಧಿಸಿರುವ ವಯೋಮಿತಿ ಮಾನದಂಡವನ್ನೇ ಈ ಹುದ್ದೆಗಳಿಗೂ ಮುಂದುವರಿಸುವ ಸಾಧ್ಯತೆ ಇದೆ ಮತ್ತು ನಿಲಯ ಪಾಲಕರು ಹುದ್ದೆಗಳಿಗೆ ಬಿ.ಎ ಬಿ.ಎಡ್ ಮಾಡಿದ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳುವ ಬಗ್ಗೆ ಅಂತಿಮ ತೀರ್ಮಾನಕ್ಕೆ ಬಂದು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.
ಇದನ್ನು ಹೊರ ತುಪಡಿಸಿ ಇನ್ನುಳಿದ ಎಲ್ಲ ಹುದ್ದೆಗಳಿಗೆ ಸಹಾ S.S.L.C ಹೊಂದಿದವರು ಕೂಡ ಅರ್ಜಿ ಸಲ್ಲಿಸಬಹುದಾಗಿದ. ಈ ವಿಚಾರವಾಗಿ ಯಾವುದೇ ಹೆಚ್ಚಿನ ಆಸಕ್ತಿ ಇದ್ದರೂ ಖುದ್ದಾಗಿ ಇಲಾಖೆ ವೆಬ್ಸೈಟ್ಗೆ ಭೇಟಿ ಕೊಟ್ಟು ಮಾಹಿತಿ ಪಡೆಯಿರಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.