HSRP ನಂಬರ್ ಪ್ಲೇಟ್ ಹಾಕದವರಿಗೆ RTO ನಿಂದ ಹೊಸ ಸೂಚನೆ.!

HSRP

2019 ಏಪ್ರಿಲ್, 1 ಕ್ಕಿಂತ ಮುಂಚೆ ಎಲ್ಲಾ ವಾಹನಗಳಿಗೂ ಕೂಡ HSRP ನಂಬರ್ ಪ್ಲೇಟ್ ಕಡ್ಡಾಯ ಎನ್ನುವ ನಿಯಮ ಜಾರಿಗೆ ತಂದಿರುವುದು ಎಲ್ಲರಿಗೂ ಗೊತ್ತೇ ಇದೆ. ದೇಶದ ಆಂತರಿಕ ಭದ್ರತೆ ಕಾರಣದಿಂದ ಮತ್ತು ವಾಹನಗಳು ಕಳುವಾದಾಗ ಅವುಗಳನ್ನು ಸುಲಭವಾಗಿ ಟ್ರ್ಯಾಕ್ ಮಾಡಲು ಅನುಕೂಲವಾಗಲು ಈ HSRP ನಂಬರ್ ಪ್ಲೇಟ್ ಅನುಕೂಲವಾಗುತ್ತದೆ.

ಹಾಗಾಗಿ ಕಟ್ಟುನಿಟ್ಟಾಗಿ ಇಂದು ದೇಶದಲ್ಲಿ ಈ ನಿಯಮ ಜಾರಿಗೊಳಿಸಲಾಗಿದೆ. ಕರ್ನಾಟಕ ರಾಜ್ಯವು ಕೂಡ ಆಗಸ್ಟ್ 17, 2023 ರಿಂದ ರಾಜ್ಯದಲ್ಲಿ ಎಲ್ಲಾ ದ್ವಿಚಕ್ರ ಹಾಗು ನಾಲ್ಕು ಚಕ್ರ ವಾಹನಗಳಿಗೆ HSRP ನಂಬರ್ ಪ್ಲೇಟ್ ಕಡ್ಡಾಯಗೊಳಿಸಿದೆ ಮತ್ತು ಇವುಗಳನ್ನು ಅಳವಡಿಸಿಕೊಳ್ಳುವುದಕ್ಕೆ ಸಾಕಷ್ಟು ಬಾರಿ ಸಮಯ ಅವಕಾಶ ನೀಡಿ ಮೇ 31ನ್ನು ಅಂತಿಮ ಗಡುವು ಎಂದು ತಿಳಿಸಿದೆ.

WhatsApp Group Join Now
Telegram Group Join Now

ಈ ಸುದ್ದಿ ಓದಿ:- ಬಾಡಿಗೆ ಮನೆ ಕಟ್ಟುವಾಗ ಹಣ ಉಳಿಸುವುದು ಹೇಗೆ ನೋಡಿ.!

ಒಂದು ವೇಳೆ ಈ ನಿಯಮವನ್ನು ಉಲ್ಲಂಘನೆ ಮಾಡಿದ್ದೇ ಆದಲ್ಲಿ ಮೊದಲ ಬಾರಿಗೆ ರೂ.500 ಎರಡನೇ ಬಾರಿಗೆ ರೂ.1000 ಹಾಗೂ ಪದೇಪದೇ ಇದೇ ಮುಂದುವರಿಸಿದರೆ ವಾಹನವನ್ನೇ ವಶಪಡಿಸಿಕೊಳ್ಳಲಾಗುವುದು ಎನ್ನುವ ಕಟ್ಟುನಿಟ್ಟಿನ ಆದೇಶವನ್ನು ನೀಡಿದೆ.

ನಮ್ಮ ಕರ್ನಾಟಕ ರಾಜ್ಯದಲ್ಲಿ ಈ ನಿಯಮ ಜಾರಿಗೆ ಬರುವ ಮುನ್ನ ದೇಶದ ಇತರೆ ರಾಜ್ಯಗಳು ಕೂಡ ಈಗಾಗಲೇ ಈ ನಿಯಮವನ್ನು ಅನುಸರಿಸಿವೆ. ಆ ರಾಜ್ಯಗಳಲ್ಲಿ ನೂರಕ್ಕೆ ನೂರಷ್ಟು ಕಟ್ಟುನಿಟ್ಟಾಗಿ ಈ ಬಗೆ ವಾಹನ ಪರಿಶೀಲನೆ ಕಾರ್ಯವೂ ನಡೆಯುತ್ತಿದೆ.

ಅದಲ್ಲದೆ ಲೋಕಸಭಾ ಚುನಾವಣೆ ನೀತಿ ಸಂಹಿತೆ ಕೂಡ ಜಾರಿಯಾಗಿರುವ ಈ ಸಂದರ್ಭದಲ್ಲಿ ಚುನಾವಣೆ ಸಮಯದಲ್ಲಿ ಎದುರಾಗಬಹುದಾದ ಅನಾಹುತಗಳ ಬಗ್ಗೆ ನಿಗಾವಹಿಸುವ ಕಾರಣದಿಂದಾಗಿ ಇನ್ನಷ್ಟು ಈ ನಿಯಮವನ್ನು ಬಿಗಿಗೊಳಿಸಲಾಗಿದೆ. ಇದರಿಂದ HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳದ ವಾಹನ ಮಾಲೀಕರು ವಾಹನ ಚಾಲನೆ ಮಾಡುವುದರಿಂದ ದಂಡಕ್ಕೆ ಗುರಿಯಾಗುತ್ತಿದ್ದಾರೆ.

ಈ ಸುದ್ದಿ ಓದಿ:- ಮಹಿಳೆಯರಿಗೆ ಸರ್ಕಾರದಿಂದ 50,000 ಸಹಾಯಧನ, ಆಸಕ್ತರು ಅರ್ಜಿ ಸಲ್ಲಿಸಿ.!

ದೆಹಲಿ NCR ಅಧಿಕಾರಿಗಳು ಎಲ್ಲಾ ವಾಹನಗಳ ನಂಬರ್ ಪ್ಲೇಟ್ ಪರಿಶೀಲನೆ ಮಾಡುತ್ತಿದ್ದಾರೆ. ಮುಖ್ಯವಾಗಿ ರಾಜ್ಯ ರಾಜಧಾನಿ ದೆಹಲಿ, ನೋಯ್ಡಾ, ಗ್ರೇಟರ್ ನೋಯ್ಡಾ, ಫರಿದಾಬಾದ್, ಗೌತಮ್ ಬುಧ್ ನಗರ ಇನ್ನು ಮುಂತಾದ ಪ್ರಮುಖ ನಗರಗಳಲ್ಲಿ ವಾಹನಗಳ HSRP ನಂಬರ್ ಪ್ಲೇಟ್ ಪರಿಶೀಲನೆ ಮಾಡಲಾಗುತ್ತಿದೆ ಮತ್ತು ನಿಯಮ ಮುರಿದಿರುವ ವಾಹನಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ.

ಈ ನಿಯಮಗಳನ್ನು ಮೀರಿರುವಂತಹ ವಾಹನಗಳಿಗೆ ರೂ.5000 ದಿಂದ ರೂ.10,000 ದಂಡ ವಿಧಿಸಲಾಗುತ್ತಿದೆ. ಹಾಗಾಗಿ ದೇಶದ ಯಾವುದೇ ಭಾಗದ ವಾಹನವಾಗಿದ್ದರೂ ಈ ರೀತಿ ದೆಹಲಿ ಸೇರಿದಂತೆ ಇನ್ನಿತರ ಪ್ರಮುಖ ರಾಜ್ಯಗಳಲ್ಲಿ ಸಂಚರಿಸುವುದಾದರೆ ಎಚ್ಚರವಿರಲಿ ಎನ್ನುವ ಉದ್ದೇಶದಿಂದ ಈ ಲೇಖನದಲ್ಲಿ ಮಾಹಿತಿ ಹಂಚಿಕೊಂಡಿದ್ದೇವೆ.

ದೆಹಲಿಯಲ್ಲಿ ಇರುವ ಈ ನಿಯಮದಂತೆ ಇನ್ನು ಕೆಲವೇ ತಿಂಗಳಲ್ಲಿ ದೇಶದಾದ್ಯಂತ ಅತಿ ಹೆಚ್ಚಿನ ದಂಡ ವಸೂಲಿ ಅಥವಾ ವಾಹನ ವಶಪಡಿಸಿಕೊಳ್ಳುವಿಕೆ ಕಾರ್ಯಕ್ಕೆ ಸರ್ಕಾರ ಮುಂದಾಗಬಹುದು.

ದೇಶದ ರಕ್ಷಣೆ ಉದ್ದೇಶದಿಂದ ಈ ಕಾರ್ಯವು ಅನಿವಾರ್ಯವೂ ಆಗಿದೆ. ಆದ್ದರಿಂದ ಕೂಡಲೇ ASAP ನಿಮ್ಮ ವಾಹನದಲ್ಲಿ HSRP ಪಡೆಯಿರಿ ಅಥವಾ ನಿಯಮ ಉಲ್ಲಂಘನೆ ಕಾರಣದಿಂದ ದಂಡ ತೆರಲು ತಯಾರಾಗಿ ಮತ್ತು ಅತಿ ಹೆಚ್ಚಿನ ಜನರಿಗೆ ಈ ಮಾಹಿತಿ ತಲುಪಿಸುವ ಉದ್ದೇಶದಿಂದ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರೊಂದಿಗೆ ಈ ವಿಷಯ ಶೇರ್ ಮಾಡಿ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ needs of ಕನ್ನಡ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment