HSRP Number Plate: ವಾಹನ ಸವಾರರಿಗೆ ಗುಡ್ ನ್ಯೂಸ್, HSRP ನಂಬರ್ ಪ್ಲೇಟ್ ನಿಯಮ ಬದಲಾವಣೆ, ಹೊಸ ರೂಲ್ಸ್ ಏನು ನೋಡಿ.!

HSRP Number plate

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ವಾಹನಗಳಿಗೆ ಹೆಚ್ಚಿನ ಭದ್ರತೆ ಒದಗಿಸುವ ಮತ್ತು ದೇಶದ ಆಂತರಿಕ ರಕ್ಷಣೆ ಉದ್ದೇಶದಿಂದ ಎಲ್ಲಾ ಬಗೆಯ ವಾಹನ ಮಾಲೀಕರಿಗೆ ಅನ್ವಯವಾಗುವಂತೆ ಏಪ್ರಿಲ್ 01, 2019ಕ್ಕೂ ಮುನ್ನ ಯಾರೆಲ್ಲಾ ವಾಹನ ಖರೀದಿ ಮಾಡಿದ್ದಾರೆ ಆ ಮಾಲೀಕರು ಕೂಡಲೇ ತಮ್ಮ ವಾಹನದ ನಂಬರ್ ಪ್ಲೇಟ್ HSRP (High Security Registration Number ) ಬದಲಾಯಿಸಿಕೊಳ್ಳಬೇಕು ಎಂದು ನಿಯಮವನ್ನು ಜಾರಿಗೆ ತಂದಿದೆ.

ಆನಂತರ ಖರೀದಿಸಿದ ವಾಹನಗಳಲ್ಲಿ ವಾಹನ ಖರೀದಿಸುವ ಸಮಯದಲ್ಲಿಯೇ HSRP ನಂಬರ್ ಪ್ಲೇಟ್ ನೀಡಿರುವುದರಿಂದ ಇದರ ಅವಶ್ಯಕತೆ ಇಲ್ಲ. ಈಗಾಗಲೇ ದೇಶದ ಬಹುತೇಕ ಎಲ್ಲಾ ರಾಜ್ಯಗಳು ಕೂಡ ಸಂಪೂರ್ಣವಾಗಿ ಈ ನಿಯಮವನ್ನು ಅಳವಡಿಸಿಕೊಂಡಿದೆ ಮತ್ತು ರಾಜ್ಯದಲ್ಲೂ ಕೂಡ ಆಗಸ್ಟ್ 2023 ರಂದು ಸಾರಿಗೆ ಇಲಾಖೆಯು ಈ ನಿಯಮ ಹೇರಿ ಸುದೀರ್ಘವಾದ ಕಾಲಾವಕಾಶವನ್ನು ಕೂಡ ನೀಡಿತ್ತು.

WhatsApp Group Join Now
Telegram Group Join Now

ಮೊದಲನೇದಾಗಿ 17 ಆಗಸ್ಟ್ 2023 ರಿಂದ 17 ನವೆಂಬರ್ 2023ರ ವರೆಗೆ ಮೂರು ತಿಂಗಳ ಕಾಲಾವಕಾಶ ನೀಡಲಾಗಿತ್ತು ಆನ್ಲೈನ್ನಲ್ಲಿ ಬುಕ್ ಮಾಡುವ ಮೂಲಕ ಅಥವಾ ಹತ್ತಿರದಲ್ಲಿರುವ ಶೋರೂಮ್ ಅಥವಾ ಡೀಲರ್ಗಳ ಬಳಿ ಬುಕ್ ಮಾಡಿ HSRP ನಂಬರ್ ಪ್ಲೇಟ್ ಬದಲಾಯಿಸಿಕೊಳ್ಳಲು ಸೂಚಿಸಲಾಗಿತ್ತು. ಆದರೆ ಹೆಚ್ಚಿನ ಸಂಖ್ಯೆಯಲ್ಲಿರುವ ವಾಹನಗಳು ಮತ್ತು ಮಾಹಿತಿ ಕೊರತೆ ಕಾರಣದಿಂದಾಗಿ ಅನೇಕರ ವಾಹನ ನಂಬರ್ ಪ್ಲೇಟ್ ಬದಲಾವಣೆಗೆ ಸಾಧ್ಯವಾಗಿರಲಿಲ್ಲ.

ಈ ಸುದ್ದಿ ಓದಿ:- Mosquito Net: ರಾಜ್ಯದಲ್ಲಿ ‘ಡೆಂಗ್ಯೂ’ ಪ್ರಕರಣ ಹೆಚ್ಚಳ: ರೇಷನ್ ಕಾರ್ಡ್‌ ಹೊಂದಿರುವ ಕುಟುಂಬಗಳಿಗೆ ಸರ್ಕಾರದಿಂದ ಉಚಿತ ಸೊಳ್ಳೆ ಪರದೆ ವಿತರಣೆ.!

ಹಾಗಾಗಿ ಪದೇ ಪದೇ ಸರ್ಕಾರ ಕಡೆ ದಿನಾಂಕವನ್ನು ಮುಂದುವರೆಸುತ್ತಾ ಬಂದಿದೆ. ಆದರೆ ಈಗ ಅಂತಿಮವಾದ ದಿನವೊಂದನ್ನು ಘೋಷಣೆ ಮಾಡಿದ್ದು ಸರ್ಕಾರದ ಹೊಸ ಆದೇಶದ ಪ್ರಕಾರವಾಗಿ 15 ಸೆಪ್ಟೆಂಬರ್ 2024 ಇದಕ್ಕೆ ಕಡೆ ಅವಕಾಶವಾಗಿದೆ. ಈಗಾಗಲೇ ಸಾಕಷ್ಟು ಬಾರಿ ಸಮಯ ವಿಸ್ತರಣೆ ಮಾಡಿರುವುದರಿಂದ ಮತ್ತೊಂದು ಅವಕಾಶ ಸಿಗುವ ಸಾಧ್ಯತೆ ಕಡಿಮೆ ಹಾಗೂ ಒಂದು ವೇಳೆ ಈ ಸಮಯದಲ್ಲೂ ಕೂಡ HSRP ನಂಬರ್ ಪ್ಲೇಟ್ ಬದಲಾವಣೆ ಮಾಡಿಕೊಳ್ಳದೆ ರಸ್ತೆಗಿಳಿಯುವ ವಾಹನಗಳ ಮಾಲೀಕರಿಗೆ ದಂಡ ಬೀಳುವುದು ಗ್ಯಾರಂಟಿ.

ಇದಿಷ್ಟಲ್ಲದೆ ಮುಂದೆ ವಾಹನ ಮಾರಾಟ ಮಾಡುವ ಸಮಯದಲ್ಲಿ ಅಥವಾ ವಾಹನ ಕಳುವಾದಾಗ ಅಥವಾ ವಾಹನದ ಮಾಲಿಕತ್ವ ಬದಲಾವಣೆ ಸಮಯ ಇನ್ನು ಮುಂತಾದ ಸಂದರ್ಭಗಳಲ್ಲಿ ಮಾಲೀಕರು ಸಮಸ್ಯೆ ಎದುರಿಸಬೇಕಾಗಿ ಬರುತ್ತದೆ. ಹಾಗಾಗಿ ಕೂಡದೆ ತಡ ಮಾಡದೆ ಸರ್ಕಾರದ ನಿಯಮವಂತೆ ಎಲ್ಲ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನ ಮಾಲೀಕರು ನಿಮ್ಮ ನಂಬರ್ ಪ್ಲೇಟ್ HSRP ನಂಬರ್ ಪ್ಲೇಟ್ ಗೆ ಬದಲಾಯಿಸಿ.

ಏನಿದು HSRP ನಂಬರ್ ಪ್ಲೇಟ್:-

HSRP ಅಂದರೆ ಈ ಮೇಲಿನ ತಿಳಿಸಿದಂತೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್. ಇದನ್ನು ಅಲ್ಯೂಮಿನಿಯಂ ಲೋಹದಿಂದ ತಯಾರಿಸಲಾಗಿರುತ್ತದೆ. ಈ ನಂಬರ್ ಪ್ಲೇಟ್ ನಲ್ಲಿ ಅಕ್ಷರಗಳು ಇಂಗ್ಲಿಷ್ ನಲ್ಲಿ ಹಾಗೂ ನಂಬರ್‌ ಗಳು ಉಬ್ಬಿಕೊಂಡಿರುವ ರೀತಿ ಅಚ್ಚಾಗಿರುತ್ತವೆ ಮತ್ತು ಪ್ಲೇಟ್‌ನ ಮೇಲ್ಭಾಗದ ಎಡಗಡೆಯಲ್ಲಿ ನಮ್ಮೆಲ್ಲರ ಹೆಮ್ಮೆಯ ನೀಲಿ ಬಣ್ಣದ ಅಶೋಕ ಚಕ್ರದ ಮುದ್ರೆ ಕೂಡ ಇರುತ್ತದೆ. ಸುಮಾರು 20 ಮಿಲಿ ಮೀಟರ್ ಉದ್ದ ಅಗಲದ ಈ ಮುದ್ರೆಯನ್ನ ಕ್ರೋಮಿಯಂ ಲೋಹ ಬಳಸಿ ಆಕರ್ಷಕವಾಗಿ ತಯಾರಿಸುತ್ತಾರೆ. ಈ ಪ್ಲೇಟ್ ಅಳವಡಿಸುವಾಗ ಎರಡು ಲಾಕ್‌ ಪಿನ್‌ಗಳನ್ನ ವಾಹನಕ್ಕೆ ಅಂಟಿಸಿರುತ್ತಾರೆ ತಯಾರಿಸಲಾಗಿರುತ್ತೆ.

ಈ HSRP ನಂಬರ್ ಪ್ಲೇಟ್‌ನಲ್ಲಿ ಸದರಿ ವಾಹನದ ಎಂಜಿನ್ ಸಂಖ್ಯೆ, ಚಾಸ್ಸಿ ಸಂಖ್ಯೆ ಸೇರಿದಂತೆ ಹಲವು ಮಾಹಿತಿಗಳು ಇರುತ್ತವೆ. ಈ ಎಲ್ಲಾ ಮಾಹಿತಿಗಳೂ ಕೇಂದ್ರೀಯ ಡೆಟಾಬೇಸ್‌ನಲ್ಲಿ ಕೂಡ ಸಂಗ್ರಹ ಆಗಿರುತ್ತೆ. ಹೀಗಾಗಿ ವಾಹನ ಕಳ್ಳತನವಾದಾಗ ದೂರ ನೀಡಿದ ತಕ್ಷಣ ಈ ಮಾಹಿತಿಗಳನ್ನು ಬಳಸಿಕೊಂಡು ಬಹಳ ಬೇಗ ಪತ್ತೆ ಹಚ್ಚಬಹುದು. ಮತ್ತು ಕಳ್ಳತನ ಮಾಡಿದವರು ನಿಮ್ಮ ವಾಹನಕ್ಕೆ ಹಾಕಿರುವ ನಂಬರ್ ಪ್ಲೇಟ್ ಅನ್ನು ಅನಧಿಕೃತವಾಗಿ ಬದಲಾವಣೆ ಮಾಡಲು ಸಾಧ್ಯವಾಗುವುದೇ ಇಲ್ಲ.

ಈ ಸುದ್ದಿ ಓದಿ:- Metro Recruitment: ಬೆಂಗಳೂರು ಮೆಟ್ರೋದಲ್ಲಿರುವ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ.! ವೇತನ 51,350/- ಆಸಕ್ತರು ಅರ್ಜಿ ಸಲ್ಲಿಸಿ.!

ಈ ನಂಬರ್ ಪ್ಲೇಟ್ ನ್ನು ವಾಹನದಿಂದ ಬೇರ್ಪಡಿಸಲು ಅಷ್ಟು ಸುಲಭವಲ್ಲ, ಇದರಲ್ಲಿರುವ ಮಾಹಿತಿಯನ್ನ ತಿದ್ದಲು ಕೂಡಾ ಸಾಧ್ಯವಿಲ್ಲ. ಒಂದು ವೇಳೆ ವಾಹನದ ಬದಲು ಕೇವಲ ಪ್ಲೇಟ್ ಕಳ್ಳತನ ಮಾಡಿದರೂ ಕೂಡ ಅದನ್ನು ಮರುಬಳಕೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಕಾನೂನು ಬಾಹಿರ ಅಪರಾಧಿ ಚಟುವಟಿಕೆಗಳಿಗೆ ನಿಮ್ಮ ವಾಹನ ಕಳ್ಳತನವಾಗಿ ದುರ್ಬಳಕೆ ಆಗುವುದನ್ನು ತಪ್ಪಿಸಬಹುದು.

ಇದರಿಂದ ನಿಮಗೆ ಅನುಕೂಲತೆ ಆಗುವುದು ಮಾತ್ರವಲ್ಲ ದೇಶದ ಆಂತರಿಕ ರಕ್ಷಣೆಗೂ ಕೂಡ ಕೊಡುಗೆ ನೀಡಿದಂತಾಗುತ್ತದೆ. ನಿಮ್ಮ ವಾಹನಗಳ ಸುರಕ್ಷತೆ ಜೊತೆಯಲ್ಲೇ ರಾಷ್ಟ್ರೀಯ ಭದ್ರತೆಗೂ ಈ ಪ್ಲೇಟ್ ಸಹಕಾರಿಯಾಗಿರುವುದರಿಂದ ಕೂಡಲೇ ಸರ್ಕಾರದ ನಿಯಮದಂತೆ ನಂಬರ್ ಪ್ಲೇಟ್ ಬದಲಾಯಿಸಿ.

HSRP ನಂಬರ್ ಪ್ಲೇಟ್ ಬುಕ್ ಮಾಡುವ ಸುಲಭ ವಿಧಾನ:-

● ಕರ್ನಾಟಕ ಸಾರಿಗೆ ಇಲಾಖೆಯ ವೆಬ್‌ಸೈಟ್‌ https://transport.karnataka.gov.in ಅಥವಾ www.siam.in ಭೇಟಿ ನೀಡಿ
● ವೆಬ್‌ಸೈಟ್‌ನಲ್ಲಿ ಇರುವ Book HSRP ಆಪ್ಷನ್ ಮೇಲೆ ಮೊದಲಿಗೆ ಕ್ಲಿಕ್ ಮಾಡಿ
● Book HSRP ಮೇಲೆ ಕ್ಲಿಕ್ ಮಾಡಿದ ನಂತರ ನಿಮ್ಮ ವಾಹನದ ಡೀಟೇಲ್ಸ್ ಕುರಿತು ಕೇಳಲಾಗಿರುತ್ತವೆ ಸರಿಯಾದ ಮಾಹಿತಿಗಳನ್ನು ಫಿಲ್ ಮಾಡಿ.
● ಆನ್ಲೈನ್ ನಲ್ಲಿ ಸರ್ಕಾರ ನಿಗದಿಪಡಿಸಿರುವ ಶುಲ್ಕವನ್ನು ಭರ್ತಿ ಮಾಡಿ
● ನಿಮ್ಮ ಮನೆಗೆ HSRP ನಂಬರ್ ಪ್ಲೇಟ್ ಆರ್ಡರ್ ಪಡೆಯಿರಿ. ಡೀಲರ್ಸ್ ಅಥವಾ ಶೋರೂಮ್ ನಲ್ಲಿ ಡೇಟ್ ಫಿಕ್ಸ್ ಮಾಡಿ ನಂಬರ್ ಪ್ಲೇಟ್ ಬದಲಾಯಿಸಿಕೊಳ್ಳಿ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment