IAM Scholarship: 6-10 ನೇ ತರಗತಿ ವಿದ್ಯಾರ್ಥಿಗಳಿಗೆ ಸಿಗಲಿದೆ 10,000 ಸ್ಕಾಲರ್ ಶಿಪ್ ಆಸಕ್ತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ.!

IAM Scholarship

ಎಲ್ಲಾ ವಿದ್ಯಾರ್ಥಿ(student)ಗಳಿಗೂ ಸಹ ವಿದ್ಯಾರ್ಥಿ ವೇತನ(Scholarship) ಬಹಳ ಮುಖ್ಯ. ಈ ಬಗ್ಗೆ ಮಾಹಿತಿ(Information)ಯನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳುವುದು ಅಷ್ಟೇ ಮುಖ್ಯ. ನೀವೂ ಅರ್ಜಿ ಸಲ್ಲಿಸಿದರೆ ಹಣ(money) ನೇರವಾಗಿ ನಿಮ್ಮ ಬ್ಯಾಂಕ್ ಖಾತೆ(Bank account)ಗೆ ಬರಲಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಹಾಗೂ ಯಾರಿಗೆಲ್ಲ ಅರ್ಜಿ ಸಲ್ಲಿಸುವ ಅರ್ಹತೆ ಇದೆ.. ? ಅರ್ಜಿ ಸಲ್ಲಿಸಲು ಯಾವ ದಾಖಲೆಗಳು ಬೇಕು ..? ಈ ಎಲ್ಲ ಮಾಹಿತಿ ತಿಳಿಯೋಣ ಬನ್ನಿ.!

ಈ ಸುದ್ದಿ ಓದಿ:- Infosys: ಇನ್ಫೋಸಿಸ್ ಫೌಂಡೇಶನ್ ನಿಂದ ವಿದ್ಯಾರ್ಥಿಗಳಿಗೆ 1 ಲಕ್ಷ ಸ್ಕಾಲರ್ಶಿಪ್.!

ಶಾಲೆಗಳಿಗೆ ಎಲ್ಲಾ ವರ್ಗದ ವಿದ್ಯಾರ್ಥಿಗಳು ಕಲಿಕೆಗಾಗಿ ಬರುತ್ತಾರೆ. ಆದ್ರೆ, ಅವರೆಲ್ಲರೂ ಶ್ರೀಮಂತರಾಗಿರುವುದಿಲ್ಲ. ಕೆಲವರು ಬಡತನದಿಂದ ಬಂದವರಾಗಿರುತ್ತಾರೆ. ಅಂತಹ ಮಕ್ಕಳು ತಮ್ಮ ಓದಿನ ವಯಕ್ತಿಕ ಖರ್ಚಿಗಾಗಿ ಹಣ ಹೊಂದಿಸಲು ಪರದಾಡುತ್ತಿರುತ್ತಾರೆ. ಅಂತಹವರಿಗೆ ಸಹಾಯಕವಾಗಲೆಂದೇ ಸರ್ಕಾರವು ವಿದ್ಯಾರ್ತಿ ವೇತನದ ಮೂಲಕ ಅವರ ಖಾತೆಗೆ ಹಣ ವರ್ಗಾಯಿಸುತ್ತದೆ. ಅವುಗಳಲ್ಲಿ ಇನ್‌ಸ್ಪೈರ್ ಅವಾರ್ಡ್ಸ್ ಮನಕ್ ಸ್ಕೀಮ್ ಕೂಡ ಒಂದು.

WhatsApp Group Join Now
Telegram Group Join Now

ಇಂದು 2024-25 ನೇ ಸಾಲಿನ ಇನ್‌ಸ್ಪೈರ್ ಅವಾರ್ಡ್ಸ್ ಮನಕ್ ಸ್ಕೀಮ್(INSPIRE Awards MANAK Scheme – IAM) ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಇದು ಒಂದು ಅತ್ಯುತ್ತಮ ವಿದ್ಯಾರ್ಥಿ ವೇತನ(Scholarship)ವಾಗಿದೆ. ಈ ವಿದ್ಯಾರ್ಥಿ ವೇತನಕ್ಕೆ(scholarship) ಅರ್ಜಿಯನ್ನು ಸಲ್ಲಿಸಲು ಬೇಕಾಗಿರುವ ಅರ್ಹತೆ(Eligibility)ಗಳು ಯಾವುವು?, ವಿದ್ಯಾರ್ಥಿ ವೇತನದ ಮೊತ್ತ(amount) ಎಷ್ಟು?, ಬೇಕಾದ ದಾಖಲೆಗಳು(documents) ಯಾವುವು?, ಅರ್ಜಿಯನ್ನು ಸಲ್ಲಿಸುವ ವಿಧಾನ ಹೇಗೆ?, ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಏನು ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದ ಮೂಲಕ ತಿಳ್ದುಕೊಳ್ಳೋಣ.

ಈ ಸುದ್ದಿ ಓದಿ:- PM Vishwakarma: ಕೇಂದ್ರ ಸರ್ಕಾರದಿಂದ ವಿಶ್ವಕರ್ಮ ಯೋಜನೆಯಡಿ ಮಹಿಳೆ & ಪುರುಷ ಇಬ್ಬರಿಗೂ ಸಿಗಲಿದೆ 5 ಲಕ್ಷ ನೆರವು.!

6 ರಿಂದ 10ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ 2024-25 ನೇ ಸಾಲಿನ ಇನ್ಸ್ಪೈರ್ ಅವಾರ್ಡ್ಸ್ ಮಾನಕ್ ಸ್ಕಾಲರ್ ಶಿಪ್(Inspire Award Manak Scholarship) ನೀಡುತ್ತಿದ್ದು, ಆಸಕ್ತ ಹಾಗೂ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ಹೇಗೆ, ಅರ್ಹತೆ ಏನಿರಬೇಕು ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಇನ್ಸ್ಪೈರ್ ಅವಾರ್ಡ್ಸ್ ಮಾನಕ್ ಸ್ಕಾಲರ್ ಶಿಪ್, 6 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ನೀಡುವ ಅವಕಾಶವಾಗಿದೆ. ಇದು, ಶಾಲಾ ವಿದ್ಯಾರ್ಥಿಗಳಲ್ಲಿ ಸೃಜನಶೀಲ ಮತ್ತು ನವೀನ ಚಿಂತನೆಯನ್ನು ಹುಟ್ಟುಹಾಕುವ ಮೂಲ ಉದ್ದೇಶವನ್ನು ಹೊಂದಿದ್ದು, ಭಾರತ ಸರ್ಕಾರದ ಡಿಪಾರ್ಟ್ಮೆಂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ (ಡಿಎಸ್ಟಿ)ಯ ಮೂಲಕ ಕಾರ್ಯಗತಗೊಳಿಸಲಾದ ಪ್ರಮುಖ ಕಾರ್ಯಕ್ರಮವಾಗಿದೆ.

ಹಾಗಾದರೆ ಅರ್ಜಿ ಸಲ್ಲಿಸಲು ಅರ್ಹತೆ ಏನಿರಬೇಕು?
  • – 10-15 ವರ್ಷ ವಯಸ್ಸಿನವರಾಗಿರಬೇಕು
    – 6 ರಿಂದ 10 ನೇ ತರಗತಿಯಲ್ಲಿ ಓದುತ್ತಿರಬೇಕು.
    – ಈ ಯೋಜನೆಯಡಿಯಲ್ಲಿ, ಶಾಲೆಗಳು ವಿದ್ಯಾರ್ಥಿಗಳ 5 ಅತ್ಯುತ್ತಮ ಮೂಲ ಕಲ್ಪನೆಗಳು/ಆವಿಷ್ಕಾರಗಳನ್ನು ನಾಮನಿರ್ದೇಶನ ಮಾಡಬಹುದು.
ಬೇಕಾದ ದಾಖಲೆಗಳು
  • – ಛಾಯಾಚಿತ್ರ
    – ವಿದ್ಯಾರ್ಥಿಯ ಬ್ಯಾಂಕ್ ವಿವರಗಳು
    – ವಿದ್ಯಾರ್ಥಿಯ ಆಧಾರ್ ಸಂಖ್ಯೆ

ಎಷ್ಟು ಸ್ಕಾಲರ್ ಶಿಪ್ ಲಭ್ಯ: 10,000

ಅರ್ಜಿ ಸಲ್ಲಿಕೆ ಹೇಗೆ?

ಆಸಕ್ತ ಹಾಗೂ ಅರ್ಹ ವಿದ್ಯಾರ್ಥಿಗಳು https.b4s.in/nwmd/IAMS3 ಈ ವೆಬ್ ಸೈಟ್ ಗೆ ಭೇಟಿ ನೀಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ?

15-09-2024

ಈ ಮೇಲೆ ತಿಳಿಸಿರುವ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಅರ್ಹ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಿ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಈ ಕೂಡಲೇ ಅರ್ಜಿಗಳನ್ನು ಸಲ್ಲಿಸಿ ವಿದ್ಯಾರ್ಥಿ ವೇತನದ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment