IBPS
ರಾಜ್ಯದಾದ್ಯಂತ ಇರುವ ಎಲ್ಲ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಐಬಿಪಿಎಸ್ (IBPS) ಸಂಸ್ಥೆಯಿಂದ ಸಿಹಿ ಸುದ್ದಿ ಒಂದಿದೆ. IBPS ಸಂಸ್ಥೆಯು ಬ್ಯಾಂಕ್ ಸಂಬಂಧಿತ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಿ ದೇಶದ ಪ್ರತಿಷ್ಠಿತ ಬ್ಯಾಂಕ್ ಗಳಿಗೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ನಿರ್ವಹಿಸುತ್ತದೆ.
ಅದಕ್ಕೆ ಸಂಬಂಧಿಸಿದಂತೆ ಪ್ರಸ್ತುತವಾಗಿ ದೇಶದ ಪ್ರಮುಖ ಐದು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಖಾಲಿ ಇರುವ 896 ಸ್ಪೆಷಲಿಸ್ಟ್ ಆಫೀಸರ್ ಹುದ್ದೆ ನೇಮಕಾತಿ ಬಗ್ಗೆ ಪ್ರಕಟಣೆ ಬಿಡುಗಡೆಗೊಳಿಸಿ ಸಂಸ್ಥೆಯು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಸ್ವೀಕರಿಸುತ್ತಿದೆ. ಈ ಹುದ್ದೆಗಳಿಗೆ ಸಂಬಂಧಪಟ್ಟ ವಿವರವಾದ ಮಾಹಿತಿ ಹಾಗೂ ಈ ನೇಮಕಾತಿ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂದು ತಿಳಿದುಕೊಳ್ಳಲು ಲೇಖನವನ್ನು ಕೊನೆಯವರೆಗೂ ಓದಿ ಮತ್ತು ತಪ್ಪದೆ ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.
ನೇಮಕಾತಿ ಸಂಸ್ಥೆ:- ಇನ್ ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸೋನಲ್ ಸೆಲೆಕ್ಷನ್ (IBPS)
ಹುದ್ದೆ ಹೆಸರು:- ಸ್ಪೆಷಲ್ ಆಫೀಸರ್ (ಸ್ಕೇಲ್ -1 ಅಧಿಕಾರಿ)
ಒಟ್ಟು ಹುದ್ದೆಗಳ ಸಂಖ್ಯೆ:- 896 ಹುದ್ದೆಗಳು
ಹುದ್ದೆಗಳ ವಿವರ:-
- * ಐಟಿ ಆಫೀಸರ್ ಹುದ್ದೆಗಳು
* ಅಗ್ರಿಕಲ್ಚರಲ್ ಫೀಲ್ಡ್ ಆಫೀಸರ್
* ಲಾ ಆಫೀಸರ್
* ರಾಜ್ಯ ಭಾಷ ಅಧಿಕಾರಿ ಹುದ್ದೆ
* HR / ಪರ್ಸನಲ್ ಆಫೀಸರ್ ಹುದ್ದೆಗಳು
* ಮಾರ್ಕೆಟಿಂಗ್ ಆಫೀಸರ್ ಹುದ್ದೆಗಳು
* ಬ್ಯಾಂಕ್ ಆಫ್ ಇಂಡಿಯಾ
* ಇಂಡಿಯನ್ ಓವರ್ಸೀಸ್ ಬ್ಯಾಂಕ್
* UCO ಬ್ಯಾಂಕ್
* ಕೆನರಾ ಬ್ಯಾಂಕ್
* ಪಂಜಾಬ್ ನ್ಯಾಷನಲ್ ಬ್ಯಾಂಕ್
ವೇತನ ಶ್ರೇಣಿ:-
* ಅತ್ಯುತ್ತಮ ವೇತನ ಶ್ರೇಣಿಯೊಂದಿಗೆ ಇನ್ನಿತರ ಸೌಲಭ್ಯಗಳು ಇರುತ್ತವೆ
* ಕಡಿಮೆ ಕೆಲಸದ ಒತ್ತಡ ಹಾಗೂ ಹೆಚ್ಚು ರಜಾ ದಿನಗಳ ಅನುಕೂಲತೆ ಇರುವುದರಿಂದ ಈ ಹುದ್ದೆಗಳಿಗೆ ಸ್ಪರ್ಧೆ ಹೆಚ್ಚಾಗಿದೆ.
ಶೈಕ್ಷಣಿಕ ವಿದ್ಯಾರ್ಹತೆ:-
1. ಐಟಿ ಆಫೀಸರ್ ಹುದ್ದೆಗಳು
* ಕಂಪ್ಯೂಟರ್ ಮತ್ತು ಎಲೆಕ್ಟ್ರಾನಿಕ್ಸ್ ವಿಷಯಕ್ಕೆ ಸಂಬಂಧಿಸಿದ ನಾಲ್ಕು ವರ್ಷಗಳ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದಿರಬೇಕು
* ಪದವಿ ಜೊತೆಯಲ್ಲಿ DOEACC B ಲೆವೆಲ್ ಪರೀಕ್ಷೆ ಪಾಸಾಗಿರಬೇಕು.
2. ಅಗ್ರಿಕಲ್ಚರ್ ಫೀಲ್ಡ್ ಆಫೀಸರ್
* ಕೃಷಿ/ತೋಟಗಾರಿಕೆ / ಪಶುಸಂಗೋಪನೆ,/ ಪಶು ವೈದ್ಯಕೀಯ ವಿಜ್ಞಾನ/ ಡೇರಿ ಸೈನ್ಸ್/ ಅಗ್ರಿ ಎಂಜಿನಿಯರಿಂಗ್/ ಮೀನುಗಾರಿಕೆ ವಿಜ್ಞಾನ/ ಮೀನು ಸಾಕಣೆ, ಮಾರ್ಕೆಟಿಂಗ್ ಮತ್ತು ಸಹಕಾರ/ ಸಹಕಾರ ಮತ್ತು ಬ್ಯಾಂಕಿಂಗ್/ ಕೃಷಿ-ಅರಣ್ಯ /ಅರಣ್ಯ / ಕೃಷಿ ಜೈವಿಕ ತಂತ್ರಜ್ಞಾನ/ ಆಹಾರ ವಿಜ್ಞಾನ/ ಕೃಷಿ ವ್ಯ ವಹಾರ ನಿರ್ವ ಹಣೆ/ ಆಹಾರ ತಂತ್ರಜ್ಞಾನ/ ಡೇರಿ ತಂತ್ರಜ್ಞಾನ / ಕೃಷಿ ಎಂಜಿನಿಯರಿಂಗ್/ ರೇಷ್ಮೆ ಕೃಷಿ/ ಮೀನುಗಾರಿಕೆ ಎಂಜಿನಿಯರಿಂಗ್ ನಾಲ್ಕು ವರ್ಷಗಳ ಪದವಿ ಪಡೆದಿರಬೇಕು.
3. ಲಾ ಆಫೀಸರ್:-
* ಕಾನೂನು ವಿಷಯದಲ್ಲಿ ಪದವಿ
* ಬಾರ್ ಕೌನ್ಸಿಲ್ ನಲ್ಲಿ ಸದಸ್ಯತ್ವ ಪಡೆದಿರಬೇಕು.
4. ರಾಜ್ಯ ಭಾಷಾ ಅಧಿಕಾರಿ ಹುದ್ದೆಗಳು:-
* ಹಿಂದಿಯಲ್ಲಿ ಸ್ನಾತಕೋತ್ತರ ಪದವಿ, ಜೊತೆಗೆ ಪದವಿಯಲ್ಲಿ ಇಂಗ್ಲಿಷ್ ಅನ್ನು ಒಂದು ವಿಷಯವಾಗಿ ಅಭ್ಯಾಸ ಮಾಡಿರಬೇಕು ಅಥವಾ
* ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಜೊತೆಗೆ ಪದವಿಯಲ್ಲಿ ಇಂಗ್ಲಿಷ್ ಮತ್ತು ಹಿಂದಿಯನ್ನು ವಿಷಯವಾಗಿ ಅಭ್ಯಾಸ ಮಾಡಿರಬೇಕು.
5. HR / ಪರ್ಸನಲ್ ಆಫೀಸರ್ ಹುದ್ದೆಗಳು
* ಯಾವುದೇ ಪದವಿ ಜೊತೆಗೆ ಪರ್ಸನಲ್ ಮ್ಯಾನೇಜ್ಮೆಂಟ್/ಇಂಡಸ್ಟ್ರಿಯಲ್ ರಿಲೇಷನ್ಸ್ HR/ HRD / ಸೋಷಿಯಲ್ ವರ್ಕ್/ ಕಾರ್ಮಿಕ ಕಾನೂನು ಇದ್ಯಾವುದಾದರೂ ವಿಷಯದಲ್ಲಿ ಪೂರ್ಣಾವಧಿಯ ಸ್ನಾತಕೋತ್ತರ ಪದವಿ ಅಥವಾ ಪೂರ್ಣಾವಧಿಯ ಸ್ನಾತಕೋತ್ತರ ಅಥವಾ ಡಿಪ್ಲೊಮಾ ಮಾಡಿರಬೇಕು.
6. ಮಾರ್ಕೆಟಿಂಗ್ ಆಫೀಸರ್:-
ಯಾವುದೇ ಪದವಿ ಜೊತೆಗೆ ಎರಡು ವರ್ಷಗಳ ಪೂರ್ಣಾವಧಿ MMS (ಮಾರ್ಕೆಟಿಂಗ್) MBA (ಮಾರ್ಕೆಟಿಂಗ್)/ PGDBA /PGDBM/PGPM/PGDM ಮಾರ್ಕೆಟಿಂಗ್ ನಲ್ಲಿ ಸ್ಪೆಷಲೈಸೇಷನ್ ಮಾಡಿರಬೇಕು
7. ಈ ಮೇಲೆ ತಿಳಿಸಿದ ಅರ್ಹತೆಗಳೊಂದಿಗೆ ಮೇಲನ ಎಲ್ಲಾ ಹುದ್ದೆಗಳಿಗೂ ಕಂಪ್ಯೂಟರ್ ಜ್ಞಾನ ಕಡ್ಡಾಯವಾಗಿದೆ.
ವಯೋಮಿತಿ:-
* ಕನಿಷ್ಠ 20 ವರ್ಷಗಳು
* ಗರಿಷ್ಠ 30 ವರ್ಷಗಳು
ವಯೋಮಿತಿ ಸಡಿಲಿಕೆ:-
* SC / ST ಅಭ್ಯರ್ಥಿಗಳಿಗೆ – 5 ವರ್ಷಗಳು
* OBC ಅಭ್ಯರ್ಥಿಗಳಿಗೆ – 3 ವರ್ಷಗಳು
* ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳು
ಅರ್ಜಿ ಸಲ್ಲಿಸುವ ವಿಧಾನ:-
* ನೇರವಾಗಿ https://www.ibps.in ವೆಬ್ಸೈಟ್ ಗೆ ಭೇಟಿ ನೀಡಿದ ಮೂಲಕ ಆನ್ಲೈನಲ್ಲಿ ಅರ್ಜಿ ಸಲ್ಲಿಸಬಹುದು
ಅರ್ಜಿ ಶುಲ್ಕ:-
* ಸಾಮಾನ್ಯ , OBC ಹಾಗೂ ಇತರೆ ಅಭ್ಯರ್ಥಿಗಳಿಗೆ – ರೂ.850. * SC/ST ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಹಾಗೂ ಮಾಜಿ ಯೋಧರಿಗೆ ರೂ.175
* ಅರ್ಜಿ ಶುಲ್ಕದ ಜೊತೆಯಲ್ಲಿ ಇಂಟಿಮೇಷನ್ ಶುಲ್ಕಗಳನ್ನು ಅಭ್ಯರ್ಥಿಯು ಭರಿಸಬೇಕು
* ಆನ್ಲೈನ್ ವಿಧಾನದಲ್ಲಿಯೇ ಪಾರ್ವತಿ ಮಾಡಬೇಕು
ಆಯ್ಕೆ ವಿಧಾನ:-
ಮೂರು ಹಂತಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ನಂತರ ದಾಖಲೆಗಳ ಪರಿಶೀಲನೆ ಹಾಗೂ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 01-08-2024
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 21-08-2024