Sim Card: ನಿಮ್ಮ ಬಳಿ ಎಷ್ಟು ಸಿಮ್ ಕಾರ್ಡ್ ಇದೆ.? ಇದಕ್ಕಿಂತ ಹೆಚ್ಚು ಸಿಮ್ ಕಾರ್ಡ್ ಬಳಸಿದ್ರೆ ಜೈಲು ಶಿಕ್ಷೆ ಜೊತೆ 2 ಲಕ್ಷ ದಂಡ ಕಟ್ಟಬೇಕು.!

Sim Card:

ಇಂದಿನ ಡಿಜಿಟಲ್(digital) ಯುಗದಲ್ಲಿ ಪ್ರತಿಯೊಬ್ಬರೂ ಮೊಬೈಲ್‌(Mobile) ಬಳಕೆ ಮಾಡ್ತಿದ್ದಾರೆ. ತಾವು ಕುಂತಲ್ಲೇ ಇಂದು ಜಗತ್ತನ್ನೇ ನೋಡುತ್ತಿದ್ದಾರೆ. ಸ್ಮಾರ್ಟ್‌ ಫೋನ್‌(Smart phone) ಬಳಸುವವರು ಒಂದು ಅಥವಾ ಎರಡಕ್ಕಿಂತ ಹೆಚ್ಚು ಸಿಮ್ ಕಾರ್ಡ್(SIM card) ಹೊಂದಿರುತ್ತಾರೆ. ಆದರೆ, ಒಬ್ಬರು ಎಷ್ಟು ಸಿಮ್ ಕಾರ್ಡ್ ಹೊಂದಿರಬೇಕು ಎಂಬುವುದು ಅವರಿಗೆ ಗೊತ್ತಿರಲ್ಲ. ಕೆಲವರು ಎರಡಕ್ಕಿಂತ ಅಧಿಕ ಸಿಮ್ ಕಾರ್ಡ್ ಖರೀದಿಸಿ ಕೆಲವೊಮ್ಮೆ ಸಂಕಷ್ಟಕ್ಕೆ ಸಿಲುಕುತ್ತಾರೆ.

ಈ ಸುದ್ದಿ ಓದಿ:- PM Kaushal Vikas Yojan: ನಿರುದ್ಯೋಗಿಗಳಿಗೆ ಗುಡ್‌ ನ್ಯೂಸ್‌, ಕೇಂದ್ರ ಸರ್ಕಾರದಿಂದ ಪ್ರತಿ ತಿಂಗಳು 8,000 ಸಿಗಲಿದೆ.!

2023 ರ ದೂರಸಂಪರ್ಕ ಕಾಯ್ದೆ (Telecommunications Act of 2023) ಒಬ್ಬ ವ್ಯಕ್ತಿಯು ಗರಿಷ್ಠ ಎಷ್ಟು ಸಿಮ್ ಕಾರ್ಡ್ ಹೊಂದಬೇಕು ಎಂಬುದನ್ನು ತಿಳಿಸುತ್ತದೆ. ಸಿಮ್ ಸಂಬಂಧ ಕಟ್ಟುನಿಟ್ಟಾದ ನಿಯಮಗಳು ಮತ್ತು ಉಲ್ಲಂಘನೆ ಬಗ್ಗೆ ದೂರಸಂಪರ್ಕ ಕಾಯ್ದೆ ತಿಳಿಸುತ್ತದೆ. ನಿಯಮ ಉಲ್ಲಂಘನೆಗೆ ಶಿಕ್ಷೆ ಅಥವಾ ದಂಡಕ್ಕೆ ಗುರಿಯಾಗಬಹುದು. ಕೆಲವು ಪ್ರಕರಣಗಳಲ್ಲಿ ಎರಡೂ ಶಿಕ್ಷೆಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಇಂದಿನ ಈ ಲೇಖನದಲ್ಲಿ ಒಬ್ಬ ವ್ಯಕ್ತಿ ಗರಿಷ್ಠ ಎಷ್ಟು ಸಿಮ್ ಕಾರ್ಡ್ ಹೊಂದಬಹುದು? ಎಂಬುದರ ಬಗ್ಗೆ ತಿಳಿಯೋಣ ಬನ್ನಿ…

WhatsApp Group Join Now
Telegram Group Join Now
ಗರಿಷ್ಠ ಎಷ್ಟು ಸಿಮ್ ಕಾರ್ಡ್ ಹೊಂದಬಹುದು?

ಬಳಕೆದಾರ ವಾಸಿಸುವ ಸ್ತಳದ ಆಧಾರದ ಮೇಲೆ ಗರಿಷ್ಠ ಸಿಮ್ ಹೊಂದುವುದನ್ನು ನಿರ್ಧರಿಸಲಾಗುತ್ತದೆ. ಭಾರತದ ಒಬ್ಬ ವ್ಯಕ್ತಿ ಗರಿಷ್ಠ 9 ಸಿಮ್ ಖಾರ್ಡ್ ಖರೀದಿಸಬಹುದಾಗಿದೆ. ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ ಮತ್ತು ಈಶಾನ್ಯ ರಾಜ್ಯಗಳ ಸೂಕ್ಷ್ಮ ಪ್ರದೇಶಗಳಲ್ಲಿ ಈ ಮಿತಿಯನ್ನು 6ಕ್ಕೆ ಇಳಿಸಲಾಗಿದೆ. ಸಿಮ್ ದುರ್ಬಳಕೆಯನ್ನು ನಿಯಂತ್ರಿಸಲು ಈ ನಿಯಮ ತರಲಾಗಿದೆ.

ನಿಯಮ ಉಲ್ಲಂಘನೆಗೆ ಏನು ಶಿಕ್ಷೆ?

ಓರ್ವ ಬಳಕೆದಾರ ನಿಗದಿತ ಮಿತಿ ಹೆಚ್ಚು ಸಿಮ್ ಹೊಂದುವ ಮೂಲಕ ಮೊದಲ ಬಾರಿ ನಿಯಮ ಉಲ್ಲಂಘನೆ ಮಾಡದ್ದರೆ 50 ಸಾವಿರ ರೂ.ವರೆಗೆ ದಂಡ ವಿಧಿಸಲಾಗುತ್ತದೆ. ಮತ್ತೆ ತಪ್ಪು ಮರುಕಳಿಸಿದ್ರೆ ದಂಡದ ಮೊತ್ತ ಏರಿಕೆಯಾಗುತ್ತಾ ಹೋಗುತ್ತವೆ. ದೂರಸಂಪರ್ಕ ಕಾಯ್ದೆಯ ಪ್ರಕಾರ, 2 ಲಕ್ಷದವರೆಗೂ ದಂಡಕ್ಕೆ ತುತ್ತಾಗಬೇಕಾಗುತ್ತದೆ.

2023ರ ಹೊಸ ದೂರಸಂಪರ್ಕ ಕಾಯ್ದೆ, ಸಿಮ್ ಕಾರ್ಡ್ ಖರೀದಿಸುವ ವೇಳೆ ಮಾರಾಟಗಾರ ಹಲವು ಕಠಿಣ ನಿಯಮಗಳನ್ನು ಪಾಲನೆ ಮಾಡಬೇಕು. ಅದೇ ರೀತಿ ಖರೀದಿದಾರ ಅಗತ್ಯ ದಾಖಲೆಗಳನ್ನು ನೀಡಬೇಕಾಗುತ್ತದೆ. ಈ ನಿಯಮ ಉಲ್ಲಂಘನೆಗೆ 3 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ 50 ಲಕ್ಷ ರೂ ಅಥವಾ ಎರಡೂ ವಿಧಿಸಬಹುದು.

ಸಿಮ್ ಕಾರ್ಡ್ ದುರುಪಯೋಗ ಪತ್ತೆ ಮಾಡೋದು ಹೇಗೆ?

ಟೆಲಿಕಾಂ ಆಪರೇಟರ್‌ಗಳ ಮೂಲಕ ತಮ್ಮ ಹೆಸರಿನಲ್ಲಿ/ ಗುರುತಿನ ದಾಖಲೆಯಡಿ ಎಷ್ಟು ಸಿಮ್ ಕಾರ್ಡ್ ಇದೆ ಎಂಬುದನ್ನ ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ. ನಿಮ್ಮ ಹೆಸರಿನಲ್ಲಿ ಬೇರೆಯಾದ್ರೂ ಸಿಮ್ ಕಾರ್ಡ್ ಬಳಕೆ ಮಾಡುತ್ತಿದ್ದರಾ ಎಂಬುದನ್ನು ತ್ವರಿತವಾಗಿ ತಿಳಿದುಕೊಳ್ಳಲು ಸಾಧ್ಯ. ಟೆಲಿಕಾಂ ಆಪರೇಟರ್‌ ಗಳನ್ನು ಸಂಪರ್ಕಿಸುವ ಮೂಲಕ ಸಿಮ್ ಬಳಕೆ ಬಗ್ಗೆ ತಿಳಿದುಕೊಳ್ಳಲು ದೂರಸಂಪರ್ಕ ಇಲಾಖೆಯ ಪೋರ್ಟಲ್ ಸಹಾಯ ಮಾಡುತ್ತದೆ.

ಸಿಮ್ ಬಳಕೆಯ ಪರಿಶೀಲನೆ ಮಾಡೋದು ಹೇಗೆ?

ಒಂದು ವೇಳೆ ನಿಮ್ಮ ಬಳಿ ನಿಗಿದಿತಕ್ಕಿಂತ ಹೆಚ್ಚಿನ ಸಿಮ್ ಕಾರ್ಡ್ ಹೊಂದಿದ್ದರೆ ದೂರ ಸಂಪರ್ಕ ಇಲಾಖೆ ಬಳಕೆದಾರಿಗೆ 2021ರಿಂದ ಕೆಲವು ಆಯ್ಕೆಗಳನ್ನು ನೀಡುತ್ತದೆ. ಕಾರ್ಡ್‌ ಸರೆಂಡರ ಮಾಡೋದು, ಸಂಪರ್ಕ ಕಡಿತಗೊಳಿಸೋದು ಮತ್ತು ವರ್ಗಾವಣೆಯ ಆಯ್ಕೆಯನ್ನು (surrender, transfer, or disconnect the excess connections) ನೀಡಲಾಗುತ್ತದೆ.

ಇದು ನಿಯಮ ಪಾಲನೆ ಮಾಡಲು ಸಹಾಯ ಮಾಡುತ್ತದೆ. ಇದನ್ನು ಸಿಮ್ ಕಾರ್ಡ್‌ಗಳ ಮರು ಪರಿಶೀಲನೆ ಅಂತ ಕರೆಯಲಾಗುತ್ತದೆ. ಬಳಕೆಯಾಗದ ಸಿಮ್ ಬಗ್ಗೆಯೂ ದೂರ ಸಂಪರ್ಕ ಇಲಾಖೆ ಮಾಹಿತಿ ನಿರಂತರವಾಗಿ ಮಾಹಿತಿ ಕಲೆ ಹಾಕುತ್ತಿರುತ್ತದೆ.

ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್‌ಗಳಿವೆ?

ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್ ಇವೆ ಎಂಬುದನ್ನು ತಿಳದುಕೊಳ್ಳಲು ದೂರ ಸಂಪರ್ಕ ಇಲಾಖೆ ಸಾಥಿ ಎಂಬ ಪೋರ್ಟಲ್ ಆರಂಭಿಸಿದೆ. ನಿಮ್ಮ ಆಧಾರ್ ಕಾರ್ಡ್‌ ನಲ್ಲಿ ಎಷ್ಟು ಸಿಮ್ ಕಾರ್ಡ್ ನೋಂದಣಿಯಾಗಿದೆ ಎಂಬುದನ್ನು ಮನೆಯಲ್ಲಿಯೇ ಕುಳಿತು ತಿಳಿದುಕೊಳ್ಳಬಹುದು. ಹೇಗೆ ಚೆಕ್ ಮಾಡೋದನ್ನು ಅನ್ನೋದರ ಮಾಹಿತಿ ಇಲ್ಲಿದೆ.

ಈ ಸುದ್ದಿ ಓದಿ:- 7th pay commission: 7ನೇ ವೇತನ ಆಯೋಗ ಜಾರಿಯಾದರೆ ನೌಕರರ ಸಂಬಳ ಎಷ್ಟು ಹೆಚ್ಚಾಗಲಿದೆ ಗೊತ್ತ.? ಇಲ್ಲಿದೆ ನೋಡಿ ಪಟ್ಟಿ.!

– ಮೊದಲು ಸಂಚಾರ ಸಾತಿ ವೆಬ್‌ಪುಟಕ್ಕೆ ಭೇಟಿ ನೀಡಿ.. https://sancharsathi.gov.in ಗೆ ಹೋಗಬೇಕು.
– ಹೋಮ್ ಪೇಜ್‌ನಲ್ಲಿ ಕಾಣಿಸುವ Choose your option ಮೇಲೆ ಕ್ಲಿಕ್ ಮಾಡಿ
– ಈಗ ಅಲ್ಲಿ ಕಾಣಿಸುವ ಬಾಕ್ಸ್ ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಿ. ಕೆಳಗೆ ಕ್ಯಾಪ್ಚಾ ಕೋಡ್(Verify with Captcha) ಟೈಪ್ ಮಾಡಿ, ನಂತರ ನಿಮ್ಮ ಫೋನ್‌ಗೆ ಬರುವ ಒಟಿಪಿಯನ್ನು ಎಂಟ್ರಿ ಮಾಡಿ.
– ಈಗ ಹೊಸ ಪುಟ ತೆರೆದುಕೊಳ್ಳುತ್ತದೆ. ಇಲ್ಲಿ ನಿಮಗೆ ಮ್ಮ ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ಎಲ್ಲಾ ಮೊಬೈಲ್ ಸಂಖ್ಯೆಗಳ ಪಟ್ಟಿಯನ್ನು ಕಾಣಿಸುತ್ತದೆ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment