QR code: ದೇಶಾದ್ಯಂತ ಏಕರೂಪದ QR code ಜಾರಿ.! DL & RC ಹೊಂದಿರುವವರಿಗೆ ಕೇಂದ್ರ ಸರ್ಕಾರದಿಂದ ಹೊಸ ನಿಯಮ.!

QR code across the country.

ದೇಶಾದ್ಯಂತ ಏಕರೂಪದ ವಾಹನ ಚಾಲನಾ ಪರವಾನಗಿ(Uniform Driving License, ವಾಹನ ನೋಂದಣಿ ಪ್ರಮಾಣ ಪತ್ರ(Vehicle Registration Certificate) ಜಾರಿಗೆ ಕೇಂದ್ರದಿಂದ ನಿಯಮ(Rules) ತಂದಿದ್ದು, ಆರ್.ಸಿ(R.C), ಡಿಎಲ್ ಸ್ಮಾರ್ಟ್ ಕಾರ್ಡ್(DL Smart Card) ಗಳನ್ನು ವಿತರಿಸಲು ರಾಜ್ಯ ಸಾರಿಗೆ ಇಲಾಖೆ(State Transport Department) ಸಿದ್ಧತೆ ಮಾಡಿಕೊಂಡಿದೆ.

WhatsApp Group Join Now
Telegram Group Join Now

ಡಿಎಲ್ ಮತ್ತು ಆರ್.ಸಿ.ಗಳಲ್ಲಿ ಕ್ಯೂಆರ್ ಕೋಡ್(QR code) ಇರಲಿದ್ದು, ಅದನ್ನು ಸ್ಕ್ಯಾನ್ ಮಾಡಿದರೆ ವಾಹನ ಸಂಪೂರ್ಣ ವಿವರ ಮತ್ತು ಚಾಲಕನ ವಿವರ ಸಿಗಲಿದೆ. ವಾಹನಗಳ ಮೇಲೆ ಕೇಸುಗಳಿದ್ದರೆ ಮಾಹಿತಿಯೂ ಗೊತ್ತಾಗಲಿದೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ರೂಪಿಸಿರುವ ನಿಯಮ ಅನುಷ್ಠಾನಕ್ಕೆ ರಾಜ್ಯ ಸಾರಿಗೆ ಇಲಾಖೆ ಮುಂದಾಗಿದೆ. ಕ್ಯೂಆರ್ ಕೋಡ್ ಇರುವ ಡಿಎಲ್ ಮತ್ತು ಆರ್.ಸಿ. ಮುದ್ರಿಸಿ ವಿತರಿಸಲು ಟೆಂಡರ್ ಪ್ರಕ್ರಿಯೆ ನಡೆಸಲಾಗಿದ್ದು, ಈ ತಿಂಗಳಾಂತ್ಯಕ್ಕೆ ಗುತ್ತಿಗೆದಾರರನ್ನು ಅಂತಿಮಗೊಳಿಸಿ ಸೆಪ್ಟೆಂಬರ್ ನಿಂದ ಹೊಸ ರೀತಿಯ ಡಿಎಲ್ ಮತ್ತು ಆರ್.ಸಿ. ವಿತರಿಸಲು ಸಾರಿಗೆ ಇಲಾಖೆ ಕ್ರಮ ಕೈಗೊಂಡಿದೆ.

ಈ ಸುದ್ದಿ ಓದಿ:- PM Kisan: ರೈತರಿಗೆ ಗುಡ್‌ ನ್ಯೂಸ್ ಈ ದಿನ ನಿಮ್ಮ ಖಾತೆ ಸೇರಲಿದೆ 18 ನೇ ಕಂತಿನ ಹಣ.!

ಡಿಎಲ್ ನಲ್ಲಿ ಚಾಲಕನ ಹೆಸರು(Driver’s Name), ಜನ್ಮ ದಿನಾಂಕ(date of birth), ವಿಳಾಸ(address), ರಕ್ತದ ಗುಂಪು (blood group) ಇರುತ್ತಿದ್ದವು. ಇದರ ಜೊತೆಗೆ ಡಿಎಲ್ ಹೊಂದಿರುವವರು ಅಂಗಾಂಗದ ದಾನಿಯಾಗಿದ್ದಾರೆಯೇ ಎಂಬುದನ್ನು ನಮೂದಿಸಲಾಗುವುದು. ಡಿಎಲ್ ಹೊಂದಿದವರ ಮೊಬೈಲ್ ಸಂಖ್ಯೆ(mobile no), ಅವರ ಸಂಬಂಧಿಕರ ಅಥವಾ ತಕ್ಷಣ ಕರೆ ಮಾಡಬೇಕಾದ ಮೊಬೈಲ್ ಸಂಖ್ಯೆಯನ್ನು ನಮೂದಿಸಲಾಗುವುದು.

ಡಿಎಲ್ ಮತ್ತು ಆರ್.ಸಿ. ಕಾರ್ಡ್ ನ ಒಂದು ಬದಿಯಲ್ಲಿ ಎಲ್ಲಾ ವಿವರಗಳಿದ್ದು, ಇನ್ನೊಂದು ಬದಿಯಲ್ಲಿ ಮೈಕ್ರೋ ಚಿಪ್ ಅಳವಡಿಸಲಾಗುವುದು. ವಾಹನ ಮಾಲೀಕರ ಮತ್ತು ವಾಹನದ ಅಥವಾ ಚಾಲಕರ ವಿವರ ನಮೂದಿಸಲಾಗುವುದು. ಲೇಸರ್ ಪ್ರಿಂಟ್ ಗಳಲ್ಲಿ ಇದನ್ನು ಮುದ್ರಿಸಲಾಗುವುದು. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ಎಲ್ಲಾ ವಿವರ ಲಭ್ಯವಾಗುತ್ತದೆ.

ಮಾಲಿನ್ಯದ ಪ್ರಮಾಣ ಮತ್ತು ಇತರ ನಿಯಮಗಳನ್ನು ಆರ್‌ಸಿಯಲ್ಲಿ ಅಳವಡಿಸಲಾಗಿರುತ್ತದೆ. ಇದರಿಂದ ಮಾಲಿನ್ಯ ಪರೀಕ್ಷೆಯ ವೇಳೆ ಅನುಕೂಲವಾಗುತ್ತದೆ. ಪ್ರಸ್ತುತ ಈ ಪರೀಕ್ಷೆಗೆ ಒಳಪಡುವ ವ್ಯಕ್ತಿಗೆ ವಾಹನದ ಮಾಲೀಕರು ಮತ್ತು ಇತರ ವಿವರಗಳ ಬಗ್ಗೆ ಪ್ರಶ್ನಿಸಲಾಗುತ್ತದೆ.

ಈ ಸುದ್ದಿ ಓದಿ:- Agriculture ನಿಮ್ಮ ಜಮೀನಿಗೆ ಹೋಗಲು ಅಕ್ಕಪಕ್ಕದವರು ದಾರಿ ಬಿಡ್ತಿಲ್ಲಾ ಅಂದ್ರೆ ಚಿಂತೆ ಬಿಡಿ.! ಈಗ ಬಂದಿದೆ ಹೊಸ ರೂಲ್ಸ್.!

ದೇಶಾದ್ಯಂತ ಪ್ರತಿದಿನ ಸುಮಾರು 32,000 ಡಿಎಲ್‌ಗಳ ವಿತರಣೆ/ ನವೀಕರಣ ನಡೆಯುತ್ತಿದ್ದು, 43,000 ವಾಹನಗಳ ನೋಂದಣಿ ನಡೆಯುತ್ತದೆ. ಇನ್ನು ಮುಂದೆ ನವೀಕರಣಗೊಳ್ಳುವ ಎಲ್ಲ ಡಿಎಲ್‌ ಮತ್ತು ಆರ್‌ಸಿಗಳನ್ನು ಹೊಸದಕ್ಕೆ ಬದಲಾಯಿಸಲಾಗುತ್ತದೆ.

ಸಾರಿಗೆ ಇಲಾಖೆ ಈಗಾಗಲೇ ಈ ಪ್ರಕ್ರಿಯೆ ಆರಂಭಿಸಿದ್ದು, ಟ್ರಾಫಿಕ್ ಪೊಲೀಸರಿಗೆ ಚಾಲಕನ ದಾಖಲೆಗಳ ತಪಾಸಣೆಗೆ ಹಲವು ಆಯ್ಕೆಗಳು ದೊರೆಯುತ್ತವೆ. ತಮ್ಮ ಕೈಯಲ್ಲಿರುವ ಸಾಧನದ ಮೂಲಕ ಡಿಎಲ್‌ ಅಥವಾ ಆರ್‌ಸಿ ನಂಬರ್ ನಮೂದಿಸಿ, ಅಥವಾ ಸ್ಮಾರ್ಟ್ ಕಾರ್ಡ್‌ ಅನ್ನು ಸಾಧನದೊಳಗೆ ತುರುಕಿಸಿ ಅಥವಾ ಕ್ಯೂಆರ್ ಕೋಡ್‌ ಸ್ಕ್ಯಾನ್ ಮಾಡುವ ಮೂಲಕ ಎಲ್ಲ ವಿವರಗಳನ್ನು ಪಡೆಯಬಹುದಾಗಿದೆ. ಎನ್‌ಎಫ್‌ಸಿ ವೈಶಿಷ್ಟ್ಯದ ಮೂಲಕ ಡಿಎಲ್‌ ಅಥವಾ ಆರ್‌ಸಿಯನ್ನು ಪೊಲೀಸರ ಬಳಿಯಿರುವ ಸಾಧನಕ್ಕೆ ಸ್ಪರ್ಶಿಸಿದ ಕೂಡಲೇ ವಿವರ ದೊರೆಯುತ್ತದೆ.

ನಿರ್ದಿಷ್ಟ ವಾಹನದ ಅಥವಾ ಚಾಲಕನ ವಿವರ ಹೊಂದಿರುವ ಯುಆರ್‌ಎಲ್‌ಗೆ ನೇರ ಸಂಪರ್ಕಿಸುವುದರಿಂದ ವಾಹನ ಮತ್ತು ಸಾರಥಿ ಡೇಟಾಬೇಸ್‌ಗಳಿಂದ ಕ್ಷಿಪ್ರವಾಗಿ ವಿವರ ಪಡೆಯಬಹುದು. ಪ್ರತಿ ಡಿಎಲ್‌ ಅಥವಾ ಆರ್‌ಸಿಗೆ ಈ ವೈಶಿಷ್ಟ್ಯಗಳನ್ನು ಅಳವಡಿಸಲು 15-20 ರೂ.ಗಳಿಗಿಂತ ಹೆಚ್ಚು ವೆಚ್ಚವಾಗದು. ರಾಜ್ಯಗಳು ನಿಗದಿತ ಕಾಲಮಿತಿಯೊಳಗೆ ಈ ಕಾರ್ಯವನ್ನು ಮಾಡಿ ಮುಗಿಸಬಹುದು ಎಂದು ಅವರು ತಿಳಿಸಿದರು.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment