Indian Bank Recruitment
ಇಂಡಿಯನ್ ಓವರ್‌ಸೀಸ್ ಬ್ಯಾಂಕ್ (Indian Overseas Bank – IOB) ಅಧಿಕೃತ ಅಧಿಸೂಚನೆ(Notification) ಆಗಸ್ಟ್ 2024 ರ ಮೂಲಕ ಅಪ್ರೆಂಟಿಸ್ ಪೋಸ್ಟ್(Apprentice Post)ಗಳನ್ನು ನೇಮಕಾತಿ(recruitment) ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಭಾರತ ಸರ್ಕಾರ(Government of India)ದಲ್ಲಿ ಕೆಲಸ ಮಾಡಲು ಮುಂದಾಗಿರುವವರಿಗೆ ಇದು ಉತ್ತಮ ಸಮಯ. ಆಸಕ್ತ ಅಭ್ಯರ್ಥಿಗಳು(Interested candidates) ಸೆಪ್ಟೆಂಬರ್ 10 ರ ಒಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
ಇಂಡಿಯನ್ ಓವರ್‌ಸೀಸ್ ಬ್ಯಾಂಕ್ (IOB)ನಲ್ಲಿ ಇದೀಗ ಒಟ್ಟಾರೆ 550 ಪೋಸ್ಟ್‌ಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಆಯ್ಕೆ ಆದ ಅಭ್ಯರ್ಥಿಗಳಿಗೆ ತಿಂಗಳಿಗೆ 10,000 ರಿಂದ 15,000ರೂ.ಳ ಸ್ಟೈಪೆಂಡ್ ನೀಡಲಾಗುತ್ತದೆ. ಅರ್ಜಿ ಸಲ್ಲಿಕೆ ಮಾಡಲು ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ ಪೂರ್ಣಗೊಳಿಸಿರಬೇಕು.
ಈ ಸುದ್ದಿ ಓದಿ:- Jio:- ರಿಲಯನ್ಸ್ ಜಿಯೋ ಸಿಮ್ ಬಳಕೆದಾರರಿಗೆ ಗುಡ್ ನ್ಯೂಸ್ ಹೊಸ ಆಫರ್?
ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಅಪ್ರೆಂಟಿಸ್‌ಗಳ ಹುದ್ದೆಗೆ ಸ್ಟೈಫಂಡ್ ವಿವರ
– ಮೆಟ್ರೋ ಸಿಟಿಗಳಲ್ಲಿ ನೇಮಕವಾಗುವ ಅಭ್ಯರ್ಥಿಗಳಿಗೆ ಮಾಸಿಕ ರೂ.15,000.
– ನಗರ ಪ್ರದೇಶಗಳಲ್ಲಿ ನೇಮಕವಾಗುವ ಅಭ್ಯರ್ಥಿಗಳಿಗೆ ಮಾಸಿಕ ರೂ.12,000.
– ಸೆಮಿ ಅರ್ಬನ್ / ಗ್ರಾಮೀಣ ಪ್ರದೇಶಗಳಲ್ಲಿ ನೇಮಕವಾಗುವ ಅಭ್ಯರ್ಥಿಗಳಿಗೆ ಮಾಸಿಕ ರೂ.10,000.
ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಅಪ್ರೆಂಟಿಸ್ ಹುದ್ದೆಗೆ ವಯಸ್ಸಿನ ಅರ್ಹತೆಗಳು
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಕನಿಷ್ಠ 20 ವರ್ಷ ಆಗಿರಬೇಕು. ಗರಿಷ್ಠ 28 ವರ್ಷ ವಯಸ್ಸು ಮೀರಿರಬಾರದು. ಒಬಿಸಿ ವರ್ಗದವರಿಗೆ 3 ವರ್ಷ, ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆ ನಿಯಮ ಅನ್ವಯವಾಗಲಿದೆ.
ಹುದ್ದೆಗೆ ವಿದ್ಯಾರ್ಹತೆ
ಭಾರತ ಸರ್ಕಾರದ ಅಥವಾ ರಾಜ್ಯ ಸರ್ಕಾರಗಳಿಂದ ಅಂಗೀಕೃತವಾದ ವಿಶ್ವವಿದ್ಯಾಲಯ ಅಥವಾ ಶಿಕ್ಷಣ ಸಂಸ್ಥೆಗಳಿಂದ ಪದವಿ ಪಾಸ್ ಮಾಡಿರಬೇಕು. ಅರ್ಜಿ ಸಲ್ಲಿಸುವ ಕೊನೆ ದಿನಾಂಕದೊಳಗೆ ಈ ವಿದ್ಯಾರ್ಹತೆ ಪಡೆದಿರಬೇಕು.
ಅರ್ಜಿ ಶುಲ್ಕ ಎಷ್ಟು?
ಸಾಮಾನ್ಯ, ಒಬಿಸಿ, ಇ ಡಬ್ಲ್ಯೂ ಎಸ್ ಅಭ್ಯರ್ಥಿಗಳು 944 ರೂ., ಎಸ್‌ಸಿ, ಎಸ್‌ಟಿ ಮಹಿಳಾ ಅಭ್ಯರ್ಥಿಗಳು 708ರೂ.ಗಳು, ಪಿ ಡಬ್ಲ್ಯೂ ಬಿ ಡಿ ಅಭ್ಯರ್ಥಿಗಳು 472 ರೂ.ಗಳನ್ನು ಆನ್‌ಲೈನ್ ಮೂಲಕ ಪಾವತಿ ಮಾಡಬೇಕಿದೆ. ಆನ್‌ಲೈನ್ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ
ಅರ್ಜಿ ಸಲ್ಲಿಸಲು ನಿಗದಿತ ಪ್ರಮುಖ ದಿನಾಂಕಗಳು
– ಆನ್‌ಲೈನ್ ಅಪ್ಲಿಕೇಶನ್ ಸ್ವೀಕಾರದ ಆರಂಭಿಕ ದಿನಾಂಕ : 28-08-2024
– ಆನ್‌ಲೈನ್ ಅಪ್ಲಿಕೇಶನ್ ಸ್ವೀಕಾರದ ಕೊನೆ ದಿನಾಂಕ: 10-09-2024
– ಅಪ್ಲಿಕೇಶನ್ ಶುಲ್ಕ ಪಾವತಿಸಲು ನಿಗದಿತ ದಿನಾಂಕ : ಆಗಸ್ಟ್ 28 ರಿಂದ ಸೆಪ್ಟೆಂಬರ್ 15, 2024 ರವರೆಗೆ.
– ಆನ್‌ಲೈನ್ ಪರೀಕ್ಷೆಯ ಸಂಭಾವ್ಯ ದಿನಾಂಕ : 22-09-2024
ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಅಪ್ರೆಂಟಿಸ್‌ಗಳ ನೇಮಕಾತಿ ವಿಧಾನ
– ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಆನ್‌ಲೈನ್ ಸಿಬಿಟಿ ಪರೀಕ್ಷೆಯನ್ನು ಹಾಗೂ ಸ್ಥಳೀಯ ಭಾಷಾ ಪ್ರಾವೀಣ್ಯತೆ ಪರೀಕ್ಷೆಯನ್ನು ನಡೆಸಲಾಗುತ್ತದೆ. 100 ಅಂಕಗಳಿಗೆ 100 ಪ್ರಶ್ನೆಗಳನ್ನು ಕೆಳಲಾಗುವ ಮೂಲಕ ಪರೀಕ್ಷೆ ನಡೆಸಲಾಗುತ್ತದೆ.
– ಜೆನೆರಲ್ / ಫೈನಾನ್ಸಿಯಲ್ ಅವಾರ್ನೆಸ್, ಜೆನೆರಲ್ ಇಂಗ್ಲಿಷ್, ಕ್ವಾಂಟಿಟೇಟಿವ್ ಅಂಡ್ ರೀಸನಿಂಗ್ ಆಪ್ಟಿಟ್ಯೂಡ್, ಕಂಪ್ಯೂಟರ್ ಶಿಕ್ಷಣದ ಕುರಿತು ಪ್ರಶ್ನೆಗಳು ಇರುತ್ತವೆ.
ಅರ್ಜಿ ಸಲ್ಲಿಸಲು ಭೇಟಿ ನೀಡಬೇಕಾದ ವೆಬ್‌ಸೈಟ್ ವಿಳಾಸಗಳು : https://bfsissc.com/IOB.php / https://nats.education.gov.in/.