Indian Bank Recruitment
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಅರಸುತ್ತಿರುವ ಎಲ್ಲರಿಗೂ ಕೂಡ ಇಂಡಿಯನ್ ಬ್ಯಾಂಕ್ ವತಿಯಿಂದ ಸಿಹಿ ಸುದ್ದಿ ಇದೆ. ಅದೇನೆಂದರೆ, ಇಂಡಿಯನ್ ಬ್ಯಾಂಕ್ (Indian Bank Recruitment) ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ ಮಾಡಿದೆ. ದೇಶದಾದ್ಯಂತ ಇರುವ ನಿರುದ್ಯೋಗಿಗಳು ಅಥವಾ ಬ್ಯಾಂಕಿಗ್ ಹುದ್ದೆಯನ್ನು ಪಡೆಯಬೇಕೆಂದು ಪ್ರಯತ್ನಿಸುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು.
ಇಂಡಿಯನ್ ಬ್ಯಾಂಕ್ ವತಿಯಿಂದ ಈ ಬಗ್ಗೆ ಅಧಿಕೃತ ನೋಟಿಫಿಕೇಶನ್ ಕೂಡ ಬಿಡುಗಡೆ ಆಗಿದ್ದು, ಈ ಹುದ್ದೆಗಳನ್ನು ಪಡೆಯಲು ಅರ್ಜಿ ಸಲ್ಲಿಸಲು ಏನೆಲ್ಲಾ ಮಾನದಂಡಗಳಿಗೆ? ಅರ್ಜಿ ಸಲ್ಲಿಸುವುದು ಹೇಗೆ? ಇನ್ನು ಮಂತಾದ ಹುದ್ದೆ ಕುರಿತ ಸಂಪೂರ್ಣ ಮಾಹಿತಿಯನ್ನು ವಿವರಿಸಲಾಗಿದೆ. ಅರ್ಜಿ ಸಲ್ಲಿಸುವವರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ನಾವು ಸಹ ಈ ಲೇಖನದಲ್ಲಿ ನೇಮಕಾತಿ ಕುರಿತ ಪ್ರಮುಖ ಸಂಗತಿಗಳನ್ನು ವಿವರಿಸುತ್ತಿದ್ದೇವೆ. ತಪ್ಪದೆ ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.
ನೇಮಕಾತಿ ಸಂಸ್ಥೆ:- ಇಂಡಿಯನ್ ಬ್ಯಾಂಕ್
ಹುದ್ದೆ ಹೆಸರು:- ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳು
ಹುದ್ದೆಯ ಬಗೆ:- ಗುತ್ತಿಗೆ ಆಧಾರಿತ
ಹುದ್ದೆಗಳ ವಿವರ:-
1. ಉಪ ಉಪಾಧ್ಯಕ್ಷ – 30 ಹುದ್ದೆಗಳು
2. ಸಹಾಯಕ ಉಪಾಧ್ಯಕ್ಷ – 43 ಹುದ್ದೆಗಳು
3. ಅಸೋಸಿಯೇಟ್ ಮ್ಯಾನೇಜರ್ – 29 ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ:- 102 ಹುದ್ದೆಗಳು
ಉದ್ಯೋಗ ಸ್ಥಳ:-
ಭಾರತದಾದ್ಯಂತ ಇರುವ ವಿವಿಧ ಇಂಡಿಯನ್ ಬ್ಯಾಂಕ್ ಬ್ರಾಂಚ್ ಗಳಲ್ಲಿ ಉದ್ಯೋಗ ಮಾಡಲು ಸಿದ್ಧರಿರಬೇಕು
ವೇತನ ಶ್ರೇಣಿ:-
ಈ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಅತ್ಯುತ್ತಮ ಮಾಸಿಕ ವೇತನ ಹಾಗೂ ಬ್ಯಾಂಕ್ ನೌಕರರಿಗೆ ಸಿಗುವ ಇನ್ನಷ್ಟು ಸವಲತ್ತುಗಳು ಕೂಡ ಸಿಗುತ್ತವೆ.
ಶೈಕ್ಷಣಿಕ ವಿದ್ಯಾರ್ಹತೆ:-
1. ಉಪ ಉಪಾಧ್ಯಕ್ಷ – CA / MCA / MS / MSc / MBA / BE / B.Tec
2. ಸಹಾಯಕ ಉಪಾಧ್ಯಕ್ಷ – CA / ICWA / MBA / ಯಾವುದೇ ಸ್ನಾತಕೋತ್ತರ ಪದವಿ
3. ಅಸೋಸಿಯೇಟ್ ಮ್ಯಾನೇಜರ್ – CA / ICWA / MBA / ಯಾವುದೇ ಸ್ನಾತಕೋತ್ತರ ಪದವಿ
ವಯೋಮಿತಿ:-
1. ಉಪ ಉಪಾಧ್ಯಕ್ಷ
* ಕನಿಷ್ಠ 27 ವರ್ಷಗಳು
* ಗರಿಷ್ಠ 40 ವರ್ಷಗಳು
2. ಸಹಾಯಕ ಉಪಾಧ್ಯಕ್ಷ
* ಕನಿಷ್ಠ 25 ವರ್ಷಗಳು
* ಗರಿಷ್ಠ 38 ವರ್ಷಗಳು
3. ಅಸೋಸಿಯೇಟ್ ಮ್ಯಾನೇಜರ್
* ಕನಿಷ್ಠ 23 ವರ್ಷಗಳು
* ಗರಿಷ್ಠ 35 ವರ್ಷಗಳು
ವಯೋಮಿತಿ ಸಡಿಲಿಕೆ:-
* OBC ಅಭ್ಯರ್ಥಿಗಳಿಗೆ 03 ವರ್ಷಗಳು
* SC/ST ಅಭ್ಯರ್ಥಿಗಳಿಗೆ 05 ವರ್ಷಗಳು
* ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳ ಸಡಿಲಿಕೆ ಇರುತ್ತದೆ
ಅರ್ಜಿ ಸಲ್ಲಿಸುವ ವಿಧಾನ:-
* ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು
* ಆಸಕ್ತರು ನೇರವಾಗಿ https://ibpsonline.ibps.in/ibesmarc24 or https://indianbank.in/ ವೆಬ್ಸೈಟ್ ಗೆ ತೆರಳಿ ಅರ್ಜಿ ಸಲ್ಲಿಸಬಹುದು
ಆಯ್ಕೆ ವಿಧಾನ:-
* ಅರ್ಜಿ ಸಲ್ಲಿಸಿದ ಎಲ್ಲರಿಗೂ ಕಂಪ್ಯೂಟರ್ ಬೆಸ್ಟ್ ಎಕ್ಸಾಮ್ ನಡೆಸಲಾಗುತ್ತದೆ
* ಆಯ್ಕೆ ಆದವರಿಗೆ ಆನ್ಲೈನ್ ಇಂಟರ್ವ್ಯೂ ನಡೆಸಿ ಆಯ್ದುಕೊಳ್ಳಲಾಗುತ್ತದೆ
ಅರ್ಜಿ ಶುಲ್ಕ:-
* SC / ST ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ರೂ.75
* ಉಳಿದ ಎಲ್ಲಾ ಅಭ್ಯರ್ಥಿಗಳಿಗೂ ರೂ.1000
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 29 ಜೂನ್, 2024
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 14 ಜುಲೈ, 2024.