Indian Bank Recruitment
ಇಂಡಿಯನ್ ಬ್ಯಾಂಕ್(Indian Bank) ದೇಶದಲ್ಲಿ ಮುಂಚೂಣಿಯಲ್ಲಿರುವ ಒಂದು ಪಬ್ಲಿಕ್ ಸೆಕ್ಟರ್ ಬ್ಯಾಂಕ್(Public Sector Bank). ಈ ಬ್ಯಾಂಕ್ ಈಗ ತಮಿಳುನಾಡು(Tamil Nadu), ಕರ್ನಾಟಕ(Karnataka), ಆಂಧ್ರ ಪ್ರದೇಶ ಮತ್ತು ತೆಲಂಗಾಣ, ಮಹಾರಾಷ್ಟ್ರ, ಗುಜರಾತ್ ರಾಜ್ಯಗಳ ತನ್ನ ಶಾಖೆಗಳಲ್ಲಿ ಅಗತ್ಯ ಲೋಕಲ್ ಬ್ಯಾಂಕ್ ಆಫೀಸರ್(Local Bank Officer) (ಸ್ಕೇಲ್-1) ಹುದ್ದೆ ಭರ್ತಿಗೆ ನೋಟಿಫಿಕೇಶನ್(Notification) ಬಿಡುಗಡೆ ಮಾಡಿದೆ.
ನೀವೇನಾದ್ರು ಪದವಿ ಮುಗಿಸಿದ್ದು, ಬ್ಯಾಂಕ್ ಜಾಬ್ ಆದ್ರು ಪರವಾಗಿಲ್ಲ ಒಂದು ಡೀಸೆಂಟ್ ಜಾಬ್, ಆಕರ್ಷಕ ಸಂಬಳ(salary) ಇರುವ ಜಾಬ್(Job) ಬೇಕು ಎಂದು ಸರ್ಚ್ ಮಾಡುತ್ತಿದ್ದರೆ, ಈಗಲೇ ಈ ಹುದ್ದೆಗೆ ಅರ್ಜಿ ಸಲ್ಲಿಸಿ. ಸೆಪ್ಟೆಂಬರ್ 02, 2024 ರವರೆಗೆ ಅರ್ಜಿಗೆ ಅವಕಾಶ ನೀಡಲಾಗಿದೆ. ಹುದ್ದೆಗಳ ಕುರಿತ ಇನ್ನಷ್ಟು ಮಾಹಿತಿಗಳನ್ನು ಕೆಳಗಿನಂತೆ ಓದಿಕೊಳ್ಳಿ.
ಹೌದು, ಇಂಡಿಯನ್ ಬ್ಯಾಂಕ್(Indian Bank) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 300 ಲೋಕಲ್ ಬ್ಯಾಂಕ್ ಆಫೀಸರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಸೆಪ್ಟೆಂಬರ್ 2, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ ಆಸಕ್ತರು ಆನ್‌ಲೈನ್ (Online) ಮೂಲಕ ಅಪ್ಲೈ ಮಾಡಬೇಕು.
ಈ ಸುದ್ದಿ ಓದಿ:- Jio: ಜಿಯೋ ಸಿಮ್ ಬಳಕೆದಾರರಿಗೆ ಗುಡ್ ನ್ಯೂಸ್.!
ಕರ್ನಾಟಕದಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
– ಉದ್ಯೋಗ ಬ್ಯಾಂಕ್ : ಇಂಡಿಯನ್ ಬ್ಯಾಂಕ್
– ಹುದ್ದೆ ಹೆಸರು : ಲೋಕಲ್ ಬ್ಯಾಂಕ್ ಆಫೀಸರ್ (ಸ್ಥಳೀಯ ಬ್ಯಾಂಕ್ ಅಧಿಕಾರಿ)
– ಹುದ್ದೆಗಳ ಸಂಖ್ಯೆ : 300
ವಿದ್ಯಾರ್ಹತೆ:
ಇಂಡಿಯನ್ ಬ್ಯಾಂಕ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪದವಿ ಪೂರ್ಣಗೊಳಿಸಿರಬೇಕು.
ವಯೋಮಿತಿ:
ಇಂಡಿಯನ್ ಬ್ಯಾಂಕ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಜುಲೈ 1, 2024ಕ್ಕೆ ಕನಿಷ್ಠ 20 ವರ್ಷ ಮತ್ತು ಗರಿಷ್ಠ 30 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ವಯೋಮಿತಿ ಸಡಿಲಿಕೆ
– OBC (NCL) ಅಭ್ಯರ್ಥಿಗಳು: 03 ವರ್ಷಗಳು
– SC/ST ಅಭ್ಯರ್ಥಿಗಳು: 05 ವರ್ಷಗಳು
– PwBD ಅಭ್ಯರ್ಥಿಗಳು: 10 ವರ್ಷಗಳು
ವೇತನ: ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ 48,480-85,920 ರೂ. ಸಂಬಳ ಕೊಡಲಾಗುತ್ತದೆ.
ಉದ್ಯೋಗದ ಸ್ಥಳ: ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ಆಂಧ್ರ ಪ್ರದೇಶ
ಅರ್ಜಿ ಶುಲ್ಕ
– SC/ST/PwBD ಅಭ್ಯರ್ಥಿಗಳು: 175 ರೂ.
– ಇತರೆ ಅಭ್ಯರ್ಥಿಗಳು: ರೂ.1000/-
ಪಾವತಿ ವಿಧಾನ: ಆನ್‌ಲೈನ್
ಆಯ್ಕೆ ಪ್ರಕ್ರಿಯೆ
– ಲಿಖಿತ ಪರೀಕ್ಷೆ
– ಆನ್‌ಲೈನ್ ಟೆಸ್ಟ್
– ಸಂದರ್ಶನ
ಇಂಡಿಯನ್ ಬ್ಯಾಂಕ್ ಸ್ಥಳೀಯ ಬ್ಯಾಂಕ್ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವ ವಿಧಾನ
– ಮೇಲಿನ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ವೆಬ್‌ಸೈಟ್ https://ibpsonline.ibps.in/iblbojul24/ ಗೆ ಭೇಟಿ ನೀಡಿ.
– ತೆರೆದ ವೆಬ್‌ಸೈಟ್‌ನಲ್ಲಿ ‘Click Here For New Registration’ ಎಂದಿರುವಲ್ಲಿ ಕ್ಲಿಕ್ ಮಾಡಿ.
– ನಂತರ ತೆರೆದ ವೆಬ್‌ಪೇಜ್‌ನಲ್ಲಿ ಕೇಳಲಾದ ವೈಯಕ್ತಿಕ ವಿವರ ನೀಡಿ ರಿಜಿಸ್ಟ್ರೇಷನ್ ಪಡೆದು, ಅರ್ಜಿ ಪೂರ್ಣಗೊಳಿಸಿ.
– ನಿಮ್ಮ ಅರ್ಜಿ ಪ್ರಿಂಟ್ ತೆಗೆದುಕೊಳ್ಳಲು ಸೆಪ್ಟೆಂಬರ್ 17, 2024 ರವರೆಗೆ ಅವಕಾಶ ಇರುತ್ತದೆ.
ಪ್ರಮುಖ ದಿನಾಂಕಗಳು
– ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 13/08/2024
– ಅರ್ಜಿ ಸಲ್ಲಿಸಲು & ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನ: ಸೆಪ್ಟೆಂಬರ್ 2, 2024