Indian Navy
250 SSC ಆಫೀಸರ್ಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ.! ಅರ್ಜಿ ಸಲ್ಲಿಸಲು ಯಾರು ಅರ್ಹರು? ಇಲ್ಲಿದೆ ನೋಡಿ ಕಂಪ್ಲೀಟ್ ಮಾಹಿತಿ.
ಭಾರತೀಯ ರಕ್ಷಣಾ ಪಡೆಯಲ್ಲಿ ಹುದ್ದೆ ಮಾಡುವುದು ಎನ್ನುವುದು ವ್ಯಕ್ತಿಗೆ ಮಾತ್ರವಲ್ಲದೆ ಆತನ ಕುಟುಂಬಕ್ಕೆ ಹಾಗೂ ಗ್ರಾಮಕ್ಕೆ ಕೂಡ ಹೆಮ್ಮೆ ಪಡುವ ಸಂಗತಿಯಾಗಿದೆ. ಹಾಗಾಗಿ ಯುವ ಜನತೆ ಈ ಸೇವಾವಲಯದತ್ತ ಹೆಚ್ಚು ಆಸಕ್ತಿ ತೋರುತ್ತಾರೆ. ನೀವು ಕೂಡ ಇದೇ ರೀತಿ ದೇಶ ಸೇವೆ ಬಗ್ಗೆ ಅಪಾರ ಒಲವು ಹೊಂದಿದ್ದರೆ ಈಗ ನಿಮಗೆ ಭಾರತೀಯ ನೌಕಾಪಡೆಯಲ್ಲಿ (Navy recruitment) ಹುದ್ದೆ ಮಾಡುವಂತಹ ಅದ್ಭುತ ಅವಕಾಶ ದೊರೆಯುತ್ತಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೆಲವು ಅರ್ಹತಾ ಮನದಂಡಗಳಿದ್ದು ಇವುಗಳನ್ನು ಪೂರೈಸುವ ಅಭ್ಯರ್ಥಿಗಳಿಗಷ್ಟೇ ಅರ್ಜಿ ಸಲ್ಲಿಸಲು ಅವಕಾಶವಿದೆ. ಈ ಬಾರಿ ಜೂನ್ 2025 ಸಾಲಿನಲ್ಲಿ ಬರೋಬ್ಬರಿ 250 SSC ಆಫೀಸರ್ ನೇಮಕಾತಿಗಾಗಿ ಅರ್ಜಿ ಆಹ್ವಾನ ಮಾಡಿ ನೋಟಿಫಿಕೇಶನ್ ಹೊರಡಿಸಲಾಗಿದೆ. ಈ ಹುದ್ದೆಗೆ ಸಂಬಂಧಿಸಿದ ಹೆಚ್ಚಿನ ವಿವರ ಹೀಗಿದೆ ನೋಡಿ.
ನೇಮಕಾತಿ ಸಂಸ್ಥೆ:- ಸರ್ವಿಸ್ ಸೆಲೆಕ್ಷನ್ ಬೋರ್ಡ್
ಉದ್ಯೋಗ ಸಂಸ್ಥೆ:- ಭಾರತೀಯ ರಕ್ಷಣಾ ಇಲಾಖೆ
ಹುದ್ದೆ ಹೆಸರು:- ಶಾರ್ಟ್ ಸರ್ವಿಸ್ ಕಮಿಷನ್ ಆಫೀಸರ್
ಒಟ್ಟು ಹುದ್ದೆಗಳ ಸಂಖ್ಯೆ:- 250 ಹುದ್ದೆಗಳು
ಹುದ್ದೆ ವಿವರ:-
* ಜೆನೆರಲ್ ಸರ್ವೀಸ್ – 56
* ಇಲೆಕ್ಟ್ರಿಕಲ್ ವಿಭಾಗ – 42
* ಇಂಜಿನಿಯರಿಂಗ್ ವಿಭಾಗ – 36
* ಪೈಲಟ್ – 24
* ನೇವಲ್ ಏರ್ ಆಪರೇಷನ್ಸ್ ಆಫೀಸರ್ – 21
* ಏರ್ ಟ್ರಾಫಿಕ್ ಕಂಟ್ರೋಲರ್ – 20
* ಲಾಜಿಸ್ಟಿಕ್ಸ್ – 20
* ನೇವಲ್ ಆರ್ನಮೆಂಟ್ ಇನ್‌ಸ್ಪೆಕ್ಟೋರೇಟ್ ಕೇಡರ್ – 16
* ಶಿಕ್ಷಣ – 15
ಉದ್ಯೋಗ ಸ್ಥಳ:- ಭಾರತದಾದ್ಯಂತ ಯಾವುದೇ ಕಡೆ ಕಾರ್ಯನಿರ್ವಹಿಸಬೇಕಿರುತ್ತದೆ.
ವೇತನ ಶ್ರೇಣಿ:-
* ಈ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಆರಂಭದಲ್ಲಿಯೇ ಮಾಸಿಕವಾಗಿ ರೂ.56,100 ವೇತನ ಮತ್ತು ಇತರೆ ಭತ್ಯೆಗಳು ಸಿಗುತ್ತವೆ.
* ಈ ಹುದ್ದೆಗಳ ಗರಿಷ್ಠ ಅವಧಿ 10 ವರ್ಷಗಳು ಇದಾದ ಬಳಿಕ ಮೇಲ್ಮಟ್ಟದ ವರ್ಗಕ್ಕೆ ಬಡ್ತಿ ನೀಡಲಾಗುತ್ತದೆ, ಇದರೊಂದಿಗೆ ಕಾಲಕಾಲಕ್ಕೆ ಅನುಗುಣವಾಗುವ ನಿಯಮದಂತೆ ವೇತನ ಕೂಡ ಪರಿಷ್ಕರಣೆಯಾಗುತ್ತಿರುತ್ತದೆ.
ಶೈಕ್ಷಣಿಕ ವಿದ್ಯಾರ್ಹತೆ:-
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಲ್ಲಿ ಸಂಬಂಧ ಪಟ್ಟ ವಿಷಯದಲ್ಲಿ BE ಅಥವಾ B.Tec / B.Sc ಪದವಿ ಪಡೆದಿರಬೇಕು
ವಯೋಮಿತಿ:-
* ಕನಿಷ್ಠ 18 ವರ್ಷಗಳು (01-07-2006ರ ನಂತರ ಜನಿಸಿದವರು ಅರ್ಜಿ ಸಲ್ಲಿಸಬಹುದು)
* ಗರಿಷ್ಠ 25 ವರ್ಷಗಳು (02-07-2001 ರ ಒಳಗೆ ಜನಿಸಿರಬೇಕು)
ಅರ್ಜಿ ಸಲ್ಲಿಸುವ ವಿಧಾನ:-
* ಆನ್ಲೈನ್ ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ
* ಆಸಕ್ತಿವುಳ್ಳ ಅಭ್ಯರ್ಥಿಗಳು ನೇರವಾಗಿ ಇಲಾಖೆಯ ಅಧಿಕೃತ ವೆಬ್ಸೈಟ್ https://www.joinindiannavy.gov.in/ ಗೆ ಭೇಟಿ ಕೊಟ್ಟು ಸೂಚನೆಗಳ ಪ್ರಕಾರವಾಗಿ ಅರ್ಜಿ ಸಲ್ಲಿಸಬೇಕು.
ಆಯ್ಕೆ ವಿಧಾನ:-
* ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಶೈಕ್ಷಣಿಕ ವಿದ್ಯಾರ್ಹತೆ ಆಧಾರದ ಮೇಲೆ ಮೆರಿಟ್ ಲಿಸ್ಟ್ ತಯಾರಿಸಲಾಗುತ್ತದೆ, ನಂತರ ಸಂದರ್ಶನ ಮಾಡಲಾಗುತ್ತದೆ.
* ಈ ಪಟ್ಟಿಯಲ್ಲಿ ಆಯ್ಕೆ ಆದವರಿಗೆ ವೈದ್ಯಕೀಯ ಪರೀಕ್ಷೆ ನಡೆಸಿ ಆಯ್ಕೆ ಆದವರನ್ನು ನೇಮಕಾತಿ ಮಾಡಿಕೊಂಡು ತರಬೇತಿಗೆ ಕಳುಹಿಸಲಾಗುತ್ತದೆ
ಪ್ರಮುಖ ದಿನಾಂಕಗಳು:-
* ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 14 ಸೆಪ್ಟೆಂಬರ್, 2024
* ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 29 ಸೆಪ್ಟೆಂಬರ್, 2024.