Infosys
ಇನ್ಫೋಸಿಸ್ (Infosys) ನಾಡಿನ ಪ್ರತಿಷ್ಠಿತ ಸಂಸ್ಥೆಯಾಗಿದ್ದು ಜಗದ್ವಿಖ್ಯಾತಿಯಾಗಿದೆ. ಉದ್ಯೋಗ ಸೃಷ್ಟಿಯಲ್ಲಿ ಮಾತ್ರವಲ್ಲದೆ ಇನ್ಫೋಸಿಸ್ ಫೌಂಡೇಶನ್ ಮೂಲಕ ಜನಸೇವೆಯಿಂದ ಕೂಡ ಹೆಸರಾಗಿದೆ. ಇನ್ಫೋಸಿಸ್ ಫೌಂಡೇಶನ್ ದೇಶದ ಹಿಂದುಳಿದ ವರ್ಗ ಹಾಗೂ ಮಹಿಳೆಯರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದ್ದು ಶಿಕ್ಷಣ, ಆರೋಗ್ಯ ರಕ್ಷಣೆ, ಮಹಿಳಾ ಸಬಲೀಕರಣ ಮತ್ತು ಪರಿಸರ ಸುಸ್ಥಿರತೆ ಧ್ಯೇಯವಾಗಿದೆ.
ಈ ಸುದ್ದಿ ಓದಿ:- Railway Jobs: ರೈಲ್ವೇ ಇಲಾಖೆಯಲ್ಲಿ 7951 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ ವೇತನ:- 35,400/-
ಈ ವಿಷಯಗಳ ಕುರಿತಾಗಿ ಶ್ರಮಿಸುತ್ತ ದೇಣಿಗೆ ನೀಡಿದ ಸಂಸ್ಥೆಯು ಮುಂದುವರೆದು 2024 -25 ನೇ ಸಾಲಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇನ್ಫೋಸಿಸ್ ಫೌಂಡೇಶನ್ ಸ್ಟಾರ್ಸ್ ಸ್ಕಾಲರ್ಶಿಪ್ (Infosys Foundation STEM Stars Scholarship) ಕೂಡ ನೀಡುತ್ತಿದೆ. ಈ ಸ್ಕಾಲರ್ಶಿಪ್ ಪಡೆಯಲು ಯಾರು ಅರ್ಹರು? ಅರ್ಜಿ ಸಲ್ಲಿಸುವುದು ಹೇಗೆ? ಬೇಕಾಗುವ ದಾಖಲೆಗಳೇನು? ಎನ್ನುವುದರ ಪೂರ್ತಿ ಮಾಹಿತಿಗಾಗಿ ಅಂಕಣವನ್ನು ಕೊನೆಯವರೆಗೂ ಓದಿ.
ಸಂಸ್ಥೆಯ ಹೆಸರು :- ಇನ್ಫೋಸಿಸ್ ಫೌಂಡೇಶನ್
ಅರ್ಹತೆ ಮತ್ತು ಕಂಡಿಷನ್ ಗಳು:-
* 2024-25ನೇ ಸಾಲಿನಲ್ಲಿ ವಿಜ್ಞಾನ, ತಂತ್ರಜ್ಞಾನ ಇಂಜಿನಿಯರಿಂಗ್ ಅಥವಾ ಗಣಿತ ವಿಷಯಗಳಲ್ಲಿ ಇಂಜಿನಿಯರಿಂಗ್ ಅಥವಾ ಡಿಪ್ಲೋಮೋ ತರಗತಿಗಳನ್ನು ಪ್ರಥಮ ವರ್ಷದಲ್ಲಿ ಅಭ್ಯಾಸ ಮಾಡುತ್ತಿರುವ ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
* ಭಾರತೀಯ ಪ್ರಜೆಯಾಗಿರಬೇಕು
* ಕಳೆದ ವರ್ಷದ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿರುವ ಪ್ರತಿಭಾವಂತರು ಅರ್ಜಿ ಸಲ್ಲಿಸಬಹುದು
* ವಿದ್ಯಾರ್ಥಿನಿಯ ಕುಟುಂಬದ ವಾರ್ಷಿಕ ಆದಾಯವು 8 ಲಕ್ಷ ಕ್ಕಿಂತ ಹೆಚ್ಚಿಗೆ ಇರಬಾರದು.
* NIRF ನಿಂದ ಮಾನ್ಯತೆ ಪಡೆದ, ಸಂಸ್ಥೆಯಿಂದ ಕುರಿತುಸಲ್ಪಟ್ಟ ಸಂಸ್ಥೆಗಳಲ್ಲಿ ಪ್ರವೇಶಾತಿ ಪಡೆದಿರಬೇಕು
* ವಿದ್ಯಾರ್ಥಿ ವೇತನ ಪಡೆಯುವ ಅಭ್ಯರ್ಥಿಯು ಕೋರ್ಸ್ ಮುಗಿಯುವವರೆಗೆ ನಿರಂತರ ದಾಖಲಾತಿ ಮತ್ತು ಎಲ್ಲ ವಿಷಯಗಳಲ್ಲೂ ಉತ್ತೀರ್ಣರಾಗಬೇಕು.
ಸಿಗುವ ನೆರವು:-
* ರೂ.1 ಲಕ್ಷದವರೆಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿನಿಯು ವಿದ್ಯಾರ್ಥಿ ವೇತನ ಪಡೆಯುತ್ತಾರೆ
* ಇದು ಆಕೆಯ ಬೋಧನ ಶುಲ್ಕ ಭರಿಸಲು ಹಾಗೂ ಅಧ್ಯಯನ ಸಾಮಗ್ರಿ ಖರೀದಿಸಲು ನೆರವಾಗುತ್ತದೆ.
* ಹಣಕಾಸಿನ ಕೊರತೆ ಕಾರಣದಿಂದ ಪ್ರತಿಭಾವಂತ ವಿದ್ಯಾರ್ಥಿನಿಯರು ಶಿಕ್ಷಣದಿಂದ ವಂಚಿತರಾಗುವುದು ಅಥವಾ ತಮ್ಮ ಐಚ್ಚಿಕ ವಿಷಯವನ್ನು ತ್ಯಜಿಸುವುದು ತಪ್ಪುತ್ತದೆ
ಅರ್ಜಿ ಸಲ್ಲಿಸುವ ವಿಧಾನ :-
* ಆನ್ಲೈನ್ ವಿಧಾನದಲ್ಲಿಯೇ ಅರ್ಜಿ ಸಲ್ಲಿಸಬೇಕು
https://www.buddy4study.com/page/infosys-stem-stars-scholarship#singleScApply
ಲಿಂಕ್ ಕ್ಲಿಕ್ ಮಾಡುವ ಮೂಲಕ ಮುಂದುವರಿಯಬಹುದು.
ಬೇಕಾಗುವ ದಾಖಲೆಗಳು:-
- * ವಿದ್ಯಾರ್ಥಿನಿಯ ಆಧಾರ್ ಕಾರ್ಡ್ ಅಥವಾ ಸರ್ಕಾರ ನೀಡಿರುವ ಯಾವುದಾದರು ಗುರುತಿನ ಚೀಟಿ
* 12 ನೇ ತರಗತಿ ಅಂಕಪಟ್ಟಿ
* JEE/NEET/CET ಅಂಕಪಟ್ಟಿಗಳೊಂದಿಗೆ ಉತ್ತೀರ್ಣ ಪ್ರಮಾಣ ಪತ್ರಗಳು
* ಕಾಲೇಜು ಪ್ರವೇಶ ಪುರಾವೆಯಾಗಿ ಶುಲ್ಕ ಪಾವತಿಸಿರುವ ರಸೀದಿ ಅಥವಾ ಕಾಲೇಜು ಐಡಿ ಕಾರ್ಡ್ / ಬೊನಫೈಡ್ ಪ್ರಮಾಣ ಪತ್ರ
* ಕುಟುಂಬದ ಆದಾಯ ಪ್ರಮಾಣ ಪತ್ರ
* BPL ರೇಷನ್ ಕಾರ್ಡ್
* ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳು
* ಬ್ಯಾಂಕ್ ಖಾತೆ ವಿವರ ಮತ್ತು ಇನ್ನಿತರ ಪ್ರಮುಖ ದಾಖಲೆಗಳು
ಪ್ರಮುಖ ದಿನಾಂಕಗಳು
- * ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – ಈಗಾಗಲೇ ಆರಂಭವಾಗಿದೆ
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 15 ಸೆಪ್ಟೆಂಬರ್, 2024.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:-
* Infosysstemstars@buddy4study.com
* 011 -430 – 92248 (Ext – 351) ಈ ಸಂಖ್ಯೆಗೆ ಸೋಮವಾರದಿಂದ ಶುಕ್ರವಾರದವರೆಗೆ ಕಛೇರಿ ಸಮಯದಲ್ಲಿ ಮಾತ್ರ ಕರೆ ಮಾಡಿ.