Nurse Recruitment
ಕಳೆದ ಬುಧವಾರ ವಿಕಾಸ ಸೌಧದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣ ಪ್ರಕಾಶ್ ಪಾಟೀಲ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಂಬರುವ ಇಲಾಖೆ ನೇಮಕಾತಿ ಬಗ್ಗೆ ಸಚಿವರಿಂದ ಸ್ಪಷ್ಟ ನಿರ್ದೇಶನ ದೊರೆತಿದೆ ಎಂಬ ಮಾಹಿತಿಯು ಬಲವಾದ ಮೂಲಗಳಿಂದ ದೊರೆತಿದೆ. ಈ ಮಾಹಿತಿಯ ಪ್ರಕಾರವಾಗಿ 1200 ನರ್ಸ್ ಗಳು ಹಾಗೂ 650 ವೈದ್ಯಕೀಯ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರುಗಳ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು.
ಮತ್ತು ಈ ನೇಮಕಾತಿಯ ಜವಾಬ್ದಾರಿಯನ್ನು ಬಹುದಿನಗಳ ಬೇಡಿಕೆಯಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (KEA) ವಹಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ ಎನ್ನುವ ಮಾಹಿತಿಯು ತಿಳಿದು ಬಂದಿದೆ. ಈ ನೇಮಕಾತಿ ಹೇಗೆ ನಡೆಯುತ್ತದೆ ಕಾರಣವೇನು ಹಾಗೂ ಹುದ್ದೆ ಕುರಿತಾದ ಇನ್ನಷ್ಟು ಮಾಹಿತಿಗಾಗಿ ಲೇಖನವನ್ನು ಕೊನೆಯವರೆಗೂ ಓದಿ.
ಇದುವರೆಗೂ ಕೂಡ ವೈದ್ಯಕೀಯ ಶಿಕ್ಷಣ ಇಲಾಖೆಯ ನೇಮಕಾತಿಗಳು ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರುಗಳ ಮೂಲಕ ನಡೆಯುತ್ತಿತ್ತು. ಆದರೆ ಸ್ವಜನ ಪಕ್ಷಪಾತ ಮತ್ತು ಭ್ರಷ್ಟಾಚಾರ ನಡೆಯುತ್ತಿದೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದ್ದು ಮತ್ತು ಲಕ್ಷಾಂತರ ಅಭ್ಯರ್ಥಿಗಳ ಆಕಾಂಕ್ಷೆ ಕೂಡ ಆಗಿದ್ದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕವೇ ಈ ನೇಮಕಾತಿ ನಡೆಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ.
ಈ ಸುದ್ದಿ ಓದಿ:- Corp Insurance: ಬೆಳೆ ವಿಮೆಗೆ ಅರ್ಜಿ ಸಲ್ಲಿಸಿದವರಿಗೆ ಗುಡ್ ನ್ಯೂಸ್.!
ಇದಕ್ಕಾಗಿ ಇಲಾಖೆಯ ನೇಮಕಾತಿ ಭೈಲಾಗಳನ್ನು ತಿದ್ದುಪಡಿ ಮಾಡಲು ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ನೇಮಕಾತಿ ನಡೆಸಲು ಬೇಕಾದ ಎಲ್ಲಾ ಸಹಕಾರವನ್ನು ಇಲಾಖೆ ಕಡೆಯಿಂದ ನೀಡುವ ಬಗ್ಗೆ ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ ಎಂದು ತಿಳಿದು ಬಂದಿದೆ. ಈ ಹಿಂದೆಯೇ KEAಗೆ ಈ ಜವಾಬ್ದಾರಿ ನೀಡಿದ್ದಾಗ KEA ಮೂಲಕ ನರ್ಸ್ ಗಳ ನೇಮಕಾತಿ ಮಾಡಿಕೊಳ್ಳಲು.
ಕೇಡರ್ ಮತ್ತು ರಿಕ್ರೂಟ್ಮೆಂಟ್ ರೂಲ್ಸ್ ಹಾಗೂ ರೋಸ್ಟರ್ ವ್ಯವಸ್ಥೆ ಇಲ್ಲದೆ ಇರುವುದರಿಂದ ನೇಮಕಾತಿ ಕಷ್ಟವಾಗುತ್ತಿದೆ ಎನ್ನುವ ಸಮಂಜಸ ಉತ್ತರವನ್ನು ಸಂಸ್ಥೆ ನೀಡಿತ್ತು. ಈಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೇಮಕಾತಿಗೆ ಅನ್ವಯವಾಗುವ ಸಿ ಮತ್ತು ಆರ್ ನಿಯಮಗಳನ್ನು ಅನುಸರಿಸುವಂತೆ ಸಚಿವರು ನಿದರ್ಶನ ನೀಡಿದ್ದಾರೆ.
ಈ ಸುದ್ದಿ ಓದಿ:- Cheque: ಚೆಕ್ ಬುಕ್ ಬಳಕೆ ಮಾಡುವವರಿಗೆ ಗುಡ್ ನ್ಯೂಸ್ ಕೊಟ್ಟ RBI.!
ಹಾಗಾಗಿ ಇನ್ನು ಮುಂದೆ ಎಲ್ಲರ ಇಚ್ಛೆಯಂತೆ ಪಾರದರ್ಶಕವಾಗಿಯೇ ಈ ನೇಮಕಾತಿ ನಡೆಯಲಿದೆ ಹಾಗೂ ಅರ್ಹತೆ ಇದ್ದವರಷ್ಟೇ ಹುದ್ದೆ ಪಡೆದುಕೊಳ್ಳಲಿದ್ದಾರೆ ಮತ್ತು ಶೀಘ್ರವಾಗಿ ಬೃಹತ್ ಸಂಖ್ಯೆಯಲ್ಲಿ ಅಂದರೆ ಒಟ್ಟು 1750 ಹುದ್ದೆಗಳ ಭರ್ತಿ ನಡೆಯುವುದರಿಂದ ಆಸಕ್ತ ಆಕಾಂಕ್ಷಿಗಳು ತಮ್ಮ ಅಭ್ಯಾಸವನ್ನು ಚುರುಕುಗೊಳಿಸಿಕೊಳ್ಳಲಿ ಎನ್ನುವುದೇ ಈ ಅಂಕಣದ ಆಶಯವಾಗಿದೆ. ಆಸಕ್ತರಿಗಾಗಿ ನೇಮಕಾತಿ ಕುರಿತಂತೆ ಇನ್ನಷ್ಟು ವಿವರ ಇಂತಿದೆ.
ನೇಮಕಾತಿ ಸಂಸ್ಥೆ:- ಕರ್ನಾಟಕ ಪರೀಕ್ಷಾ ಪ್ರಾಧಿಕಾರ
ಉದ್ಯೋಗ ಸಂಸ್ಥೆ:- ವೈದ್ಯಕೀಯ ಶಿಕ್ಷಣ ಇಲಾಖೆಯ ಕಾಲೇಜುಗಳು ಮತ್ತು ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ ಗಳು
ಒಟ್ಟು ಹುದ್ದೆಗಳ ಸಂಖ್ಯೆ:-
* ಸಹಾಯಕ ಪ್ರಾಧ್ಯಕ್ಷರು – 650
* ನರ್ಸ್ ಗಳು – 1200
ಉದ್ಯೋಗ ಸ್ಥಳ:- ಕರ್ನಾಟಕದಾದ್ಯಂತ ವಿವಿಧ ಭಾಗಗಳಲ್ಲಿ
ವೇತನ ಶ್ರೇಣಿ:-ಈ ಹುದ್ದೆಗಳಿಗೆ ಆಯ್ಕೆ ಆದವರಿಗೆ ಕನಿಷ್ಠ ರೂಂ. 31,100 ರಿಂದ ಗರಿಷ್ಠ ರೂ.66,800 ವೇತನ ದೊರೆಯಲಿದೆ.
ಶೈಕ್ಷಣಿಕ ವಿದ್ಯಾರ್ಹತೆ:-
* ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ವೈದ್ಯಕೀಯ ಪಿಜಿ ಮತ್ತು ಯುಜಿ ಪೂರೈಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು
* ನರ್ಸ್ ಹುದ್ದೆಗಳಿಗೆ ನರ್ಸಿಂಗ್ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು
ವಯೋಮಿತಿ
ಕರ್ನಾಟಕದ ಸರ್ಕಾರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ವಯೋಮಿತಿ ನಿಗದಿ ಹಾಗೂ ಸಡಿಲಿಕೆ ಇರುತ್ತದೆ
ಅರ್ಜಿ ಸಲ್ಲಿಸುವ ವಿಧಾನ:-
ಆನ್ಲೈನ್ ಮೂಲಕವೇ ಅರ್ಜಿ ಆಹ್ವಾನಿಸುತ್ತದೆ ಮತ್ತು ಸಂಬಂಧಿತ ಮಾಹಿತಿಗಳನ್ನು SMS ಅಥವಾ ಇ-ಮೇಲ್ ಮೂಲಕ ಅಭ್ಯರ್ಥಿಗಳಿಗೆ ತಲುಪಿಸುತ್ತದೆ
ಆಯ್ಕೆ ವಿಧಾನ:-
ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುವ ಮೂಲಕ ನೇಮಕ ಮಾಡಿಕೊಳ್ಳುತ್ತದೆ ಹೆಚ್ಚಿನ ಮಾಹಿತಿಗಾಗಿ ಸಂಪೂರ್ಣ ಮಾಹಿತಿ ಒಳಗೊಂಡ ಅಧಿಕೃತ ಪ್ರಕಟಣೆಗಾಗಿ ಕಾಯೋಣ.