CorpCrop compensation
ಸರ್ಕಾರಿ ಸೌಲಭ್ಯ(Govt facility) ಪಡೆಯುವ ಉದ್ದೇಶದಿಂದ ತಾವು ಸಣ್ಣ ರೈತ(farmer)ರು ಎಂದು ತೋರಿಸಿಕೊಳ್ಳುವ ಭರದಲ್ಲಿ ರಾಜ್ಯದ ಕೃಷಿಕರು(Farmers of the state) ಫ್ರೂಟ್ಸ್ ತಂತ್ರಾಂಶ(Fruits software)ದಲ್ಲಿ ತಮ್ಮ ಒಡೆತನದಲ್ಲಿರುವ ಸಂಪೂರ್ಣ ಕೃಷಿ ಭೂಮಿ(Agricultural land)ಯ ಮಾಹಿತಿ ಮರೆಮಾಚಿ, ಕೆಲವೇ ಹೆಕ್ಟೇರ್ ಭೂಮಿ ಮಾಹಿತಿ ನೀಡುತ್ತಿದ್ದಾರೆ. ಇದರಿಂದ ಬರ ಪರಿಹಾರ ಪಡೆಯಲು ರೈತರಿಗೆ ತೊಡಕಾಗುವ ಅಪಾಯ ಎದುರಾಗಿದೆ.
ರಾಜ್ಯಾದ್ಯಂತ ಬರ ಎದುರಾಗಿದ್ದು, ಬರ ಪರಿಹಾರ ಪಡೆಯಬೇಕಾದರೆ, ರೈತರು ಫ್ರೂಟ್ಸ್ ಐಡಿ (Fruits ID) ಕಡ್ಡಾಯವಾಗಿ ಹೊಂದಿರಬೇಕು ಎಂದಿರುವ ಸರ್ಕಾರ ಎಫ್‌ಐಡಿ ನೋಂದಣಿ ಗಡುವನ್ನು ನ.30ರವರೆಗೆ ವಿಸ್ತರಿಸಿದೆ. ಆದರೆ, ನೋಂದಣಿ ನಿರೀಕ್ಷೆಯಂತೆ ಆಗುತ್ತಿಲ್ಲ. ಜೊತೆಗೆ, ತಾವು ದೊಡ್ಡ ರೈತರೆಂದು ತೋರಿಸಿಕೊಂಡರೆ ಸರ್ಕಾರದಿಂದ ಸಹಾಯಧನ, ಗೌರವಧನ, ಸಾಲ ಮೊದಲಾದ ಸೌಲಭ್ಯಸಿಗುವುದಿಲ್ಲ ಎಂಬ ಕಾರಣಕ್ಕೆ ರೈತರು ಪೂರ್ಣ ಮಾಹಿತಿ ನೀಡುತ್ತಿಲ್ಲ.
ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಹೋಗಿ, ತಮ್ಮ ಎಲ್ಲ ಜಮೀನುಗಳ ಪಹಣಿ, ಆಧಾರ್ ಮತ್ತು ಜಾತಿ ಪ್ರಮಾಣ ಪತ್ರ ಹಾಗೂ ಬ್ಯಾಂಕ್ ಪಾಸ್ಬುಕ್ ನೀಡಿ ಎಫ್‌ಐಡಿ ಮಾಡಿಸಬೇಕು. ಈಗಾಗಲೇ ಎಫ್‌ಐಡಿ ಹೊಂದಿರುವ ರೈತರು ತಮ್ಮ ಹೆಸರಿನಲ್ಲಿರುವ ಎಲ್ಲ ಸರ್ವೆ ನಂಬರ್‌ಗಳ ಜಮೀನನ್ನು ಎಫ್‌ಐಡಿಗೆ ಲಿಂಕ್ ಮಾಡಬೇಕು. ಎಲ್ಲ ರೈತರೂ ಎಫ್‌ಐಡಿ ಮಾಡಿಸುವ ನಿಟ್ಟಿನಲ್ಲಿ ಜಾಗೃತಿ ಅಭಿಯಾನ ನಡೆಸುತ್ತಿದ್ದೇವೆ ಎಂದು ಕೃಷಿ ಅಧಿಕಾರಿ ತಿಳಿಸಿದ್ದಾರೆ.
ಈ ಕುರಿತಂತೆ ಸ್ವತಃ ಕಂದಾಯ ಸಚಿವ ಕೃಷ್ಣ ಬೈರೇಗೌಡ ಕಳವಳ ವ್ಯಕ್ತಪಡಿಸಿದ್ದರು. ಇತ್ತೀಚೆಗೆ ದಾವಣಗೆರೆಯಲ್ಲಿ ಸಚಿವರು ಅಧಿಕಾರಿಗಳ ಸಭೆ ನಡೆಸಿದಾಗ ಎಫ್‌ಐಡಿ ಮತ್ತು ಹಿಡುವಳಿದಾರರ ಸಂಖ್ಯೆಗೆ ಹೊಂದಾಣಿಕೆ ಆಗಲಿಲ್ಲ. ಸಣ್ಣ ರೈತರು ಎಂದು ತೋರಿಸಿಕೊಳ್ಳುವ ಉದ್ದೇಶದಿಂದ ಕೃಷಿಕರು ತಮ್ಮ ಪೂರ್ಣ ಕೃಷಿ ಭೂಮಿಯ ಮಾಹಿತಿ ಫ್ರೂಟ್ಸ್ನಲ್ಲಿ ದಾಖಲಿಸುತ್ತಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು.
ಎಫ್‌ಐಡಿ ಇಲ್ಲದಿದ್ದರೆ ಹಾಗೂ ಪೂರ್ಣ ಪ್ರಮಾಣದ ಭೂಮಿ ಮಾಹಿತಿ ನೀಡದಿದ್ದರೆ ರೈತರಿಗೆ ಸಂಪೂರ್ಣ ಬರ ಪರಿಹಾರ ಸಿಗುವುದಿಲ್ಲ. ಕಾರಣ, ತಮ್ಮ ಒಡೆತನದ ಅಷ್ಟೂ ಕೃಷಿ ಭೂಮಿ ಮಾಹಿತಿಯನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ದಾಖಲಿಸುವಂತೆ ಕೃಷಿಕರಿಗೆ ಜಾಗೃತಿ ಮೂಡಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದರು.
ಫ್ರೂಟ್ಸ್ ಎಂದರೇನು: ಫ್ರೂಟ್ಸ್: “ರೈತ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ”. FRUITS- Farmer Registration & Unified Beneficiary InformaTion System) ಅಂತರ್ಜಾಲ ಆಧಾರಿತ ತಂತ್ರಾಂಶ ವ್ಯವಸ್ಥೆಯಾಗಿದೆ.
ಫ್ರೂಟ್ಸ್ ಐಡಿಯಿಂದ ದೊರೆಯುವ ಸೌಲಭ್ಯಗಳು:
ಕೃಷಿಗೆ ಸಂಬಂಧಿಸಿದಂತೆ ಯಂತ್ರೋಪಕರಣಗಳ ಖರೀದಿಗೆ, ತೋಟಗಾರಿಕೆ, ಕೃಷಿ ಇಲಾಖೆ, ಪಶುಸಂಗೋಪನೆ, ಮೀನುಗಾರಿಕೆ, ರೇಷ್ಮೆ ಇಲಾಖೆಯಿಂದ ರೈತರು ಯಾವುದೇ ಸೌಲಭ್ಯಗಳನ್ನು ಪಡೆಯಬೇಕಾದರೆ ಫ್ರೂಟ್ಸ್ ಐಡಿಯು ಕಡ್ಡಾಯವಾಗಿರುತ್ತದೆ.
ಕುರಿ,ಮೇಕೆ ಕೋಳಿ, ಸಾಕಾಣಿಕೆಯ ಸಬ್ಸಿಡಿ ಪಡೆಯಲು, ಗಂಗಾ ಕಲ್ಯಾಣ ಯೋಜನೆಯ ಅಡಿಯಲ್ಲಿ ಬೋರ್ವೆಲ್ ಕೊರೆಯಲು ಸಬ್ಸಿಡಿ ಪಡೆಯಲು ರೈತರಿಗೆ ಫ್ರೂಟ್ಸ್ ಐಡಿ ಬೇಕಾಗುತ್ತದೆ. ಮತ್ತು ಕೃಷಿ ಹೊಂಡ ನಿರ್ಮಾಣಕ್ಕೂ ಫ್ರೂಟ್ಸ್ ಐಡಿ ಬೇಕು.
FRUITS ID ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
– ಆಧಾರ್ ಕಾರ್ಡ್
– ಪಹಣಿ ಉತಾರ (ಆರ್.ಟಿ.ಸಿ)
– ಎಲ್ಲಾ ಸರ್ವೆ ನಂಬರ್ ಗಳ ಪಹಣಿ ನೀಡಬೇಕು.
– ರೈತರು SC/ST ಗೆ ಸೇರಿದವರಾಗಿದ್ದರೆ ಜಾತಿ ಪ್ರಮಾಣ ಪತ್ರ ನೀಡಬೇಕು.
– ಬ್ಯಾಂಕ್ ಪಾಸ್ ಬುಕ್
– ಇತ್ತೀಚಿನ ಭಾವಚಿತ್ರ
FRUITS ID ಗೆ ಅರ್ಜಿ ಸಲ್ಲಿಸುವ ವಿಧಾನ
ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಗಳಲ್ಲಿ ಮಾಡಿಸಬಹುದು. ಹಾಗೂ ಗ್ರಾಮ ಒನ್, ಕರ್ನಾಟಕ ಒನ್, ಸಿಎಸ್.ಸಿ ಕೇಂದ್ರಗಳಲ್ಲಿಯೂ ಫ್ರೂಟ್ಸ್ ಐಡಿ ಮಾಡಿಸಿಕೊಳ್ಳಬಹುದು. ಅಥವಾ ಫ್ರೂಟ್ಸ್ ವೆಬ್ಸೈಟ್ನಲ್ಲಿ “ನಾಗರೀಕ ಪ್ರವೇಶ (Citizen Login)” ಗೆ ಭೇಟಿ ನೀಡಿ ಸ್ವಯಂ ನೋಂದಾಯಿಸಿಕೊಳ್ಳಬಹುದು.