Jio 5G Smart Phone
ಟೆಲಿಕಾಂ ಕ್ಷೇತ್ರ(Telecom sector)ದಲ್ಲಿ ಮುನ್ನಡೆಯುತ್ತಿರುವ ಜಿಯೋ(Jio) ಇದೀಗ ಮತ್ತೊಂದು ಸಂಚಲನಕ್ಕೆ ಸಿದ್ಧತೆ ನಡೆಸಿದೆ. ಜಿಯೋ ಕಂಪನಿ ಟೆಲಿಕಾಂ ಇಂಡಸ್ಟ್ರಿಯಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿ ಮಾಡುತ್ತಾ ಬಂದಿದೆ. ಮೊದಲು 4G ಕೀ ಪ್ಯಾಡ್ ಮೊಬೈಲನ್ನು(Keypad Mobile) ಮಾರುಕಟ್ಟೆಗೆ ತಂದು ಸುದ್ದಿ ಮಾಡಿತ್ತು. ಅದೇ ರೀತಿ ಇದೀಗ ಅತ್ಯಂತ ಕಡಿಮೆ ದರದಲ್ಲಿ 5G ಸ್ಮಾರ್ಟ್ ಫೋನ್ (5G Smart phone) ಅನ್ನು ಮಾರುಕಟ್ಟೆಗೆ ತಂದು ಗ್ರಾಹಕರನ್ನು(Customers) ಆಕರ್ಷಿಸಲು ಮುಂದಾಗಿದೆ.
ಹೌದು, ಜಿಯೋ ಇದೀಗ 5G ಸ್ಮಾರ್ಟ್‌ಫೋನ್ ಅನ್ನು ತರಲಿದೆ. ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ 5G ಸ್ಮಾರ್ಟ್‌ಫೋನ್‌ಗಳ ಟ್ರೆಂಡ್ ಚಾಲ್ತಿಯಲ್ಲಿರುವ ಈ ಸಮಯದಲ್ಲಿ, Jio ಕೂಡ ಬಜೆಟ್ ಫ್ರೆಂಡ್ಲಿ ಸ್ಮಾರ್ಟ್‌ಫೋನ್ (budget friendly smartphone) ಮಾರುಕಟ್ಟೆಯಲ್ಲಿ ತನ್ನ ಶಕ್ತಿಯನ್ನು ತೋರಿಸಲು ಸಿದ್ಧವಾಗಿದೆ.
5G ಫೋನ್ ಪ್ರೀಮಿಯಂ ವೈಶಿಷ್ಟ್ಯ(premium feature)ಗಳೊಂದಿಗೆ ಬರಲಿದೆ. ಹಾಗಾದರೆ, ಜಿಯೋ ಕಂಪನಿಯ ಅತ್ಯಂತ ಕಡಿಮೆ ಬೆಲೆಗೆ ಈ ಫೈವ್ ಜಿ ಜಿಯೋ ಸ್ಮಾರ್ಟ್ ಫೋನ್ ನ ವಿಶೇಷತೆಗಳೇನು? ಮಾರುಕಟ್ಟೆಗೆ ಯಾವಾಗ ಬರಲಿದೆ? ಕ್ಯಾಮೆರಾ ವೈಶಿಷ್ಟ್ಯ(Camera feature)ಗಳು ಹಾಗೂ ಇತರೆ ತಾಂತ್ರಿಕ ಮಾಹಿತಿಗಳನ್ನು ಕೆಳಗೆ ತಿಳಿದುಕೊಳ್ಳಿ.
5,999 ರೂ. ಬೆಲೆಗೆ ಸಿಗಲಿದೆ Jio Bharat 1 5G!
ರಿಲಯನ್ಸ್ ಜಿಯೋ ಶೀಘ್ರದಲ್ಲೇ ಹೊಸ Jio Bharat 1 5G ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಲಿದೆ. ಈ ಫೋನಿನ ಬೆಲೆ ಸೇರಿದಂತೆ ಕೆಲವು ವಿಶೇಷತೆಗಳು ಈಗಾಗಲೇ ಲೀಕ್ ಆಗಿವೆ. ವೈಶಿಷ್ಟ್ಯಗಳು ಸಂವೇದನೆಯನ್ನು ಸೃಷ್ಟಿಸುವ ಸಾಧ್ಯತೆಯಿದೆ. ಮಾಹಿತಿಗಳ ಪ್ರಕಾರ, ಈ ಫೋನ್ ಅತ್ಯಂತ ಕಡಿಮೆ ಬೆಲೆ ಅಂದ್ರೆ 5,999 ರೂ.ಕ್ಕೆ ಲಭ್ಯವಿರುತ್ತದೆ.
ಫೋನ್ ಹೆಚ್ಚಿನ ರೆಸಲ್ಯೂಶನ್ ಕ್ಯಾಮೆರಾವನ್ನು ಸಹ ಹೊಂದಿರುತ್ತದೆ ಎಂದು ತೋರುತ್ತದೆ ಅಲ್ಲದೆ, Jio 5G ಫೋನ್ ಮೂರು ಆಂತರಿಕ ಸಂಗ್ರಹಣೆಯ ರೂಪಾಂತರಗಳಲ್ಲಿ ಬರುವ ಸಾಧ್ಯತೆಯಿದೆ. ಇದು 8GB RAM+128GB, 12GB RAM + 256GB, 16GB RAM + 512 GB ಒಳಗೊಂಡಿದೆ.
Jio Bharat 1 5G ಬಿಡುಗಡೆಗೆ ಸಂಬಂಧಿಸಿದಂತೆ ಕಂಪನಿಯು ಅಧಿಕೃತವಾಗಿ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಈ ವರ್ಷದ ಅಂತ್ಯದ ವೇಳೆಗೆ ಈ ಫೋನ್ ಟೆಕ್ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ ಎಂಬ ಲೀಕ್‌ಗಳು ಬರುತ್ತಿವೆ. ಅವುಗಳ ಆಧಾರದ ಮೇಲೆ, ಜಿಯೋ ಫೋನ್‌ನ ಬೆಲೆ 5999 ರೂ. ರಿಂದ 6999 ರೂ. ರ ನಡುವೆ ಇರುವ ಸಾಧ್ಯತೆ ಇದೆ.
– Display ವಿಶೇಷತೆಗಳು
ಜಿಯೋದಿಂದ ಬರುತ್ತಿರುವ ಹೊಸ 5G ಸ್ಮಾರ್ಟ್‌ಫೋನ್‌ನ ವಿನ್ಯಾಸವು ಅದ್ಭುತವಾಗಿದೆ ಎಂದು ವರದಿಯಾಗಿದೆ. ಇದು 6.7-ಇಂಚಿನ ಸೂಪರ್ AMOLED ಡಿಸ್ಪ್ಲೇ ಹೊಂದಿದೆ ಎಂದು ಹೇಳಲಾಗುತ್ತದೆ. ನೀವು ಸೂಪರ್ AMOLED ಡಿಸ್ಪ್ಲೇಯಲ್ಲಿ ಸ್ಫಟಿಕ ಸ್ಪಷ್ಟ ವೀಡಿಯೊಗಳನ್ನು ವೀಕ್ಷಿಸಬಹುದು. ಸ್ಕ್ರೀನ್ ಕ್ಲಾರಿಟಿ ಹೊಂದಿದೆ ಹಾಗೂ ಇದರ ರಿಪ್ರೇಶ ರೇಟ್ 144Hz ನಷ್ಟಿದೆ. ಈ ಕಾರಣದಿಂದಾಗಿ ನೀವು ಮೃದುವಾದ ಸ್ಪರ್ಶದ ಅನುಭವವನ್ನು ಪಡೆಯಬಹುದು.
– ಕ್ಯಾಮರಾ ವೈಶಿಷ್ಟಗಳು (Camera feature)
ಈ ಮೊಬೈಲ್ ನ ಕ್ಯಾಮೆರಾ 100mp ಪ್ರೈಮರಿ ಕ್ಯಾಮೆರಾ ಸೆಟಪ್ ನೊಂದಿಗೆ ಉತ್ತಮ ಗುಣಮಟ್ಟದ ಫೋಟೋಗಳನ್ನು ತೆಗೆಯಲು ಸಹಾಯಕವಾಗಿದೆ. 16mp ಅಗಲವಾದ ಕ್ಯಾಮೆರಾ ವೈಶಿಷ್ಟ್ಯದ ಫೋಟೋ ತೆಗೆಯುವ ಸಾಮರ್ಥ್ಯ ಹೊಂದಿದೆ.
– ಬ್ಯಾಟರಿ ವೈಶಿಷ್ಟಗಳು (Battery features)
ಇದು 6700mah ಕೆಪಾಸಿಟಿಯ ಬ್ಯಾಟರಿ ಹೊಂದಿದ್ದು, 120 ವಾಟ್ಸ್ ಸೂಪರ್ ಫಾಸ್ಟ್ ಚಾರ್ಜಿಂಗ್ ಬಳಸುವ ಸಾಮರ್ಥ್ಯ ಹೊಂದಿದೆ.
ಬೆಲೆ ಹಾಗೂ ಇತರೆ ಮಾಹಿತಿ (price)
ಈ ಮೊಬೈಲ್ ನ ಬೆಲೆ 5,999 ರೂ. ಯಿಂದ 6,999ರೂ. ವರೆಗೆ ಇರಬಹುದೆಂದು ಅಂದಾಜಿಸಲಾಗಿದೆ.
ಈ ಮೊಬೈಲ್ ನ ಸ್ಟೋರೇಜ್ 8gb/128gb ಯಿಂದ 16gb/512gb ತನಕ ಸ್ಟೋರೇಜ್ ಆಯ್ಕೆಗಳಿವೆ.
ಈ ಮೊಬೈಲ್ ನ ಬಿಡುಗಡೆಯು ಈ ವರ್ಷದ ಕೊನೆಯ ತಿಂಗಳ ಒಳಗಾಗಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.