Jio
ದೀಪಾವಳಿ ಹಬ್ಬ ಬಂತೆಂದರೆ ಮನೆಯಲ್ಲಿ ಹಬ್ಬದ ಸಂಭ್ರಮದ, ಮನೆಯಲ್ಲಿ ಸಿಹಿ ಅಡುಗೆಯ ಸಡಗರದೊಂದ ಜೊತೆಗೆ ಮಾರುಕಟ್ಟೆಯಲ್ಲಿ ಕೂಡ ಬೆಳಕಿನ ಹಬ್ಬದ, ಪ್ರಯುಕ್ತವಾಗಿಯೇ ವಿಶೇಷ ಆಫರ್ ಗಳ ಕೊಡುಗೆ ಕೂಡ ಸಿಗುತ್ತದೆ. ಈಗಾಗಲೇ ಅನೇಕ ಕಡೆಯಲ್ಲಿ ನೀವು ಈ ಸಂಬಂಧ ಜಾಹೀರಾತುಗಳನ್ನು ಕೂಡ ನೋಡಿರುತ್ತೀರಿ,
ದೇಶದಾದ್ಯಂತ ಆಚರಿಸಲಾಗುವ ಈ ದೀಪಾವಳಿ ಹಬ್ಬಕ್ಕೆ ದೇಶದ ಪ್ರತಿಷ್ಠಿತ ಟೆಲಿಕಾಂ ಕಂಪನಿಯಾದ ರಿಲಯನ್ಸ್ ಜಿಯೋ (Reliance Jio) ತನ್ನ ಆಫರ್ ಪೋಷಿಸಿದೆ. ಭಾರತದಲ್ಲಿರುವ 2G ಫೋನ್ ಬಳಕೆದಾರರಿಗಾಗಿಯೇ ವಿಶೇಷವಾಗಿ ಈ ಆಫರ್ ನೀಡುತ್ತಿದೆ.
2G ಜಿಯೋ ಫೋನ್ ಬಳಕೆದಾರರಿಗೆ ಕಡಿಮೆ ಬೆಲೆಯ ರೀಚಾರ್ಜ್‌ಗೆ ವೇಗದ ಇಂಟರ್ನೆಟ್ ಸಂಪರ್ಕವನ್ನು ಒದಗಿ ಬಹುತೇಕ ಸ್ಮಾರ್ಟ್ ಫೋನ್ ಫೀಚರ್ಸ್ ಅನುಭವಗಳನ್ನು ನೀಡುವ ಗುರಿಯನ್ನು ಹೊಂದಿದೆ. ಹೆಚ್ಚಿನ ಡೀಟೇಲ್ಸ್ ಹೀಗಿದೆ ನೋಡಿ.
Jio Bharat ದೀಪಾವಳಿ ಧಮಾಕಾ ಆಫರ್‌ನಡಿ ಮಾರ್ಕೆಟ್ ನಲ್ಲಿ ರೂ.999 ಕ್ಕೆ ಮಾರಾಟವಾಗುತ್ತಿದ್ದ Jio Bharat K1 Karbonn ಫೋನ್ ಹಬ್ಬದ ಕೊಡುಗೆಯಾಗಿ ಕೇವಲ ರೂ. 699 ಕ್ಕೆ ಸಿಗಲಿದೆ. ಮುಖ್ಯ ಕಂಡಿಷನ್ ಏನೆಂದರೆ,ಇದು ಸೀಮಿತ-ಸಮಯದ ಕೊಡುಗೆಯಾಗಿದೆ.
ಈ ದೀಪಾವಳಿಗೆ ಸಮಯದಲ್ಲಿ ಮಾತ್ರ ಆಫರ್ ಚಾಲ್ತಿಯಲ್ಲಿರುವವರೆಗೆ ಇಷ್ಟು ಕಡಿಮೆ ಬೆಲೆಗೆ ನಿಮಗೆ ಈ ಫೋನ್ ಸಿಗಲಿದೆ. ಕೈಗೆಟುಕುವ ಮಾಸಿಕ (EMI) ಯೋಜನೆಯೊಂದಿಗೂ ಈ ಫೋನ್ ಖರೀದಿಸಬಹುದಾಗಿದೆ. 4Gಗೆ ಅಪ್‌ಗ್ರೇಡ್ ಮಾಡಲು ಬಯಸುವವರಿಗೆ ಇದು ಸಕಾಲವಾಗಿದೆ.
ಅಲ್ಲದೆ ಮತ್ತೊಂದು ಪ್ಲಸ್ ಪಾಯಿಂಟ್ ಏನೆಂದರೆ ರೂ.123 ಮಾಸಿಕ ರಿಚಾರ್ಜ್ ನಲ್ಲಿ ಈ ಜಿಯೋ ಭಾರತ್ ಬಳಕೆದಾರರು ಅನಿಯಮಿತ ವಾಯ್ಸ್ ಕರೆಗಳು, 14GB ಡೇಟಾ ಮತ್ತು 455ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳನ್ನು Access ಮಾಡಬಹುದು.
ಈ ಯೋಜನೆಯು Jio Cinema ಮೂಲಕ ಸಿನಿಮಾಗಳ ಪ್ರೀಮಿಯರ್‌ಗಳು, ವಿಡಿಯೋ ಪ್ರದರ್ಶನಗಳು, ಲೈವ್ ಕ್ರೀಡೆಗಳು ಮತ್ತು ಮುಖ್ಯಾಂಶಗಳಿಗೆ ಪ್ರವೇಶವನ್ನು ಕೂಡ ಒದಗಿಸುತ್ತದೆ.
QR ಕೋಡ್ ಸ್ಕ್ಯಾನ್ ಬಳಸಿಕೊಂಡು ಬಳಕೆದಾರರು Jio Pay ಮೂಲಕ ಡಿಜಿಟಲ್ ಪಾವತಿ ಮಾಡಬಹುದು ಮತ್ತು ಸ್ವೀಕರಿಸಬಹುದು. ಸ್ವೀಕರಿಸಿದ ಪಾವತಿಗಳಿಗೆ ಆಡಿಯೋ ನೋಟಿಫಿಕೇಶನ್ ಸಹ ಪಡೆಯಬಹುದು. ಇದಲ್ಲದೆ Jio Chat ಮೂಲಕ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಂಪರ್ಕ ಹೊಂದಬಹುದು.
ಅಲ್ಲಿಯೂ ವಿಡಿಯೋ, ಫೋಟೋ ಮತ್ತು ಸಂದೇಶಗಳನ್ನು ಹಂಚಿಕೊಳ್ಳಬಹುದು. ಈ ವೈಶಿಷ್ಟ್ಯಗಳು ನಿಮ್ಮ ಈ ಫೋನ್ ನಲ್ಲಿಯೇ ಖಂಡಿತವಾಗಿಯೂ ಸ್ಮಾರ್ಟ್‌ಫೋನ್ ಅನುಭವ ನೀಡುತ್ತದೆ. ಮುಖ್ಯವಾಗಿ ಇದೇ ಕಂಪನಿಯ ಗುರಿಯಾಗಿದೆ.
ಇತರೆ ಟೆಲಿಕಾಂ ಇದನ್ನು ಕಂಪೇರ್ ಮಾಡಿ ನೋಡುವುದಾದರೆ ಮೂಲ ಫೀಚರ್ ಫೋನ್ ಯೋಜನೆಗಳಿಗೆ ತಿಂಗಳಿಗೆ ರೂ.199 ಶುಲ್ಕ ರಿಚಾರ್ಜ್ ಮಾಡಿಸಬೇಕು, ಹೀಗಾಗಿ ಅದಕ್ಕೆ ಹೋಲಿಸಿದರೆ ಜಿಯೋ ಭಾರತ್‌ನ ರೂ.123 ನ ಪ್ಲಾನಿಂಗ್ ಶೇ.40ರಷ್ಟು ಅಗ್ಗವಾಗಿರುತ್ತದೆ. ಬಳಕೆದಾರರಿಗೆ ಪ್ರತಿ ತಿಂಗಳು ರೂ. 76 ಉಳಿತಾಯವಾಗುತ್ತದೆ.
ರಿಲಯನ್ಸ್ ಜಿಯೋ ದೀಪಾವಳಿಯ ಈ ಆಫರ್ ಮೂಲಕ ಕಡಿಮೆ ಬೆಲೆಗೆ ಫೋನ್ ಮಾರಾಟ ಮಾಡಿ ಡಿಜಿಟಲ್ ಕನೆಕ್ಷನ್ ಗೆ ಎಲ್ಲರೂ ಪ್ರವೇಶಿಸುವ ಅವಕಾಶ ಕಲ್ಪಿಸಿ ಕೊಡುತ್ತಿದೆ. Jio Bharat ನ ಈ ದೀಪಾವಳಿ ಧಮಾಕಾ ಕೊಡುಗೆಯು ವಿವಿಧ ಚಿಲ್ಲರೆ ಮಳಿಗೆಗಳು, Jio Mart ಮತ್ತು Amazonನಲ್ಲಿ ಲಭ್ಯವಿದೆ.