Jio : ಜಿಯೋ ಸಿಮ್ ಗ್ರಾಹಕರಿಗೆ ಗುಡ್ ನ್ಯೂಸ್.! 3 ತಿಂಗಳವರೆಗೆ ರೀಚಾರ್ಜ್ ಮಾಡಬೇಕಿಲ್ಲ.! ಅನ್ಲಿಮಿಟೆಡ್ ಡೇಟಾ.!

Jio

ನಮ್ಮ ದೇಶ ಭಾರತ(India)ದಲ್ಲಿ ಇಂದು ಡಿಜಿಟಲ್‌ ಕ್ರಾಂತಿ(Digital revolution) ಮಂದುವರೆದಿದೆ. ವಿಶ್ವದಲ್ಲಿ ಜಾಗತಿಕ(Global)ವಾಗಿ ಮುಂದುವರೆದ ದೇಶಗಳಲ್ಲಿ ಭಾರತ ಕೂಡಒಂದಾಗುತ್ತಿದೆ. ಇಂದು ಎಲ್ಲರ ಕೈಯ್ಯಲ್ಲೂ ಮೊಬೈಲ್‌(Mobile) ಇದೆ. ನಾವು ಕಂತಲ್ಲೇ ನಮ್ಮ ಪ್ರೀತಿ ಪಾತ್ರರನ್ನು ಸಂಪರ್ಕಿಸಬಹುದಾಗಿದೆ. ಆದ್ರೆ, ದಿನೇ ದಿನೇ ಮೊಬೈಲ್‌ ರಿಚಾರ್ಜ್‌ ಬೆಲೆ(Mobile recharge price) ಗಗನಕ್ಕೇರುತ್ತಿದೆ. ಇದು ಗ್ರಾಹಕ(Customer)ರ ಜೇಬಿಗೆ ಕತ್ತರಿ ಹಾಕಿಸುತ್ತಿದೆ.

ಈ ಸುದ್ದಿ ಓದಿ:- PM Vishwakarma: ಕೇಂದ್ರ ಸರ್ಕಾರದಿಂದ ವಿಶ್ವಕರ್ಮ ಯೋಜನೆಯಡಿ ಮಹಿಳೆ & ಪುರುಷ ಇಬ್ಬರಿಗೂ ಸಿಗಲಿದೆ 5 ಲಕ್ಷ ನೆರವು.!

ಎಲ್ಲಾ ಟೆಲಿಕಾಂ ಕಂಪನಿ(telecom company)ಗಳು ತಮ್ಮ ಯೋಜನೆಗಳನ್ನು ದುಬಾರಿಯಾಗಿಸಿವೆ. ಭಾರತದ ಟೆಲಿಕಾಂ ಕ್ಷೇತ್ರ(Indian Telecom Sector)ದಲ್ಲಿ ತನ್ನದೇ ಆದ ಛಾಪು ಹೊಂದಿರುವ ಜಿಯೋ(j‌io) ಈಗ ತನ್ನ ಗ್ರಾಹಕರನ್ನು ತನ್ನತ್ತ ಹಿಡಿದಿಟ್ಟುಕೊಳ್ಳಲು ಭರ್ಜರಿ ಪ್ಲ್ಯಾನ್ ಮಾಡಿದೆ. ಹಲವು ಸೇವೆಗಳನ್ನು ಒಳಗೊಂಡ ವಿಶಿಷ್ಠ ರಿಚಾರ್ಜ್‌ ಯೋಜನೆಯನ್ನು ನೀಡಲು ಜಿಯೋ ಮುಂದಾಗಿದೆ. ಈ ರಿಚಾರ್ಜ್‌ ಪ್ಲ್ಯಾನ್‌ಗಳ ವ್ಯಾಲಿಡಿಟಿ ಹೆಚ್ಚಿರುತ್ತದೆ.

WhatsApp Group Join Now
Telegram Group Join Now

ಹೌದು, ರಿಲಯನ್ಸ್ ಜಿಯೋ (Reliance Jio) ಕೂಡಾ ತನ್ನ ಯೋಜನೆ(Plan)ಗಳನ್ನು ಹಿಂದಿಗಿಂತ ದುಬಾರಿಯಾಗಿಸಿದ್ದರೂ‌, ಇತರ ಖಾಸಗಿ ಟೆಲಿಕಾಂ ಕಂಪನಿಗಳ ಪ್ಲಾನ್ ಗಿಂತ ಈ ಯೋಜನೆ ಇನ್ನೂ ಕೂಡಾ ಅಗ್ಗವಾಗಿಯೇ ಇದೆ.

ಈ ಸುದ್ದಿ ಓದಿ:- ಫೋನ್ ಪೇ, ಗೂಗಲ್ ಪೇ UPI ಮೂಲಕ ಹಣ ಪಾವತಿ ಮಾಡುವವರಿಗೆ ಹೊಸ ರೂಲ್ಸ್.! NPI ನಿಂದ ಮಹತ್ವದ ನಿರ್ಧಾರ ಘೋಷಣೆ.!

ಟೆಲಿಕಾಂ ಕಂಪನಿಗಳು ಶುಲ್ಕವನ್ನು ಹೆಚ್ಚು ಮಾಡಿರುವ ಹಿನ್ನೆಲೆಯಲ್ಲಿ ಇದೀಗ ಬಹುತೇಕ ಗ್ರಾಹಕರು ಬಿಎಸ್ಎನ್ಎಲ್ ನತ್ತ ಮುಖ ಮಾಡುತ್ತಿದ್ದಾರೆ. ಆದರೂ ಜಿಯೋ ಈಗಲೂ ನಂಬರ್ ಒನ್ ಸ್ಥಾನದಲ್ಲಿಯೇ ಇದೆ.ಇದಲ್ಲದೇ,ಹೆಚ್ಚಿನ ಪ್ರಯೋಜನಗಳನ್ನು ನೀಡುವ ಹಲವು ಯೋಜನೆಗಳನ್ನು ಜಿಯೋ ಹೊಂದಿದೆ.ಜಿಯೋದ ರಿಚಾರ್ಜ್ ಪ್ಲಾನ್ ನಲ್ಲಿ ನೆಟ್‌ಫ್ಲಿಕ್ಸ್ ಕೂಡಾ ಫ್ರೀಯಾಗಿ ಸಿಗುತ್ತಿದ್ದು, ಇದು ಸಾಕಷ್ಟು ಜನಪ್ರಿಯವಾಗಿದೆ.

ಜಿಯೋ ಕಂಪನಿ ತನ್ನ ಗ್ರಾಹಕರನ್ನು ಖುಷಿ ಪಡಿಸುವ ದೃಷ್ಟಿಯಿಂದ ಹಲವು ಕಾರ್ಯಗಳನ್ನು ಮೊದಲಿನಿಂದಲೂ ಮಾಡುತ್ತಲೇ ಬಂದಿದೆ. ಆರಂಭದಲ್ಲಿ ಉಚಿತವಾಗಿ ಡಾಟಾ ನೀಡಿದ್ದ ಜಿಯೋ, ಈಗ ಓಟಿಟಿಗಳನ್ನು ಉಚಿತವಾಗಿ ನೀಡುತ್ತಿದೆ. ಇನ್ನು ನೀವು ಹೆಚ್ಚಿನ ಡೇಟಾವನ್ನು ಉಪಯೋಗಿಸುವ ಗ್ರಾಹಕರು ಆಗಿದ್ದರೇ ಅಂತಹವರಿಗೂ ಜಿಯೋ ಬೆಸ್ಟ್ ಆಫರ್ ನೀಡಿದೆ.

ಜಿಯೋದ 1299 ರೂ.ಯೋಜನೆ

ಜಿಯೋದ 1299 ರೂಪಾಯಿ ಪ್ಲಾನ್ ನಲ್ಲಿ ಗ್ರಾಹಕರು ಅನ್ಲಿಮಿಟೆಡ್ 5G ಡೇಟಾದ ಆನಂದವನ್ನು ಪಡೆಯಬಹುದು.ಇದರಲ್ಲಿ 84 ದಿನಗಳ ವ್ಯಾಲಿಡಿಟಿ ಸಿಗುತ್ತದೆ. ಅಂದರೆ 3 ತಿಂಗಳವರೆಗೆ ರಿಚಾರ್ಜ್ ಬಗ್ಗೆ ಯೋಚಿಸಬೇಕಿಲ್ಲ. ಡೇಟಾದ ದೃಷ್ಟಿಯಿಂದಲೂ ಇದೊಂದು ಬೆಸ್ಟ್ ಪ್ಲಾನ್. ಈ ಯೋಜನೆಯಲ್ಲಿ ಪ್ರತಿದಿನ 2GB ಡೇಟಾ ಸಿಗುತ್ತದೆ.ಅಂದರೆ ಯಾವುದೇ ಚಿಂತೆಯಿಲ್ಲದೆ ಡೇಟಾವನ್ನು ಬಳಸಲು ಸಾಧ್ಯವಾಗುತ್ತದೆ.

ಈ ಪ್ಲಾನ್ ನಲ್ಲಿ ನೆಟ್‌ಫ್ಲಿಕ್ಸ್ ಫ್ರೀ

ಈ ಯೋಜನೆಯಲ್ಲಿ 84 ದಿನಗಳವರೆಗೆ ನೆಟ್‌ಫ್ಲಿಕ್ಸ್ ಮೊಬೈಲ್‌ನ ಚಂದಾದಾರಿಕೆ ಕೂಡಾ ಸಿಗುವುದು.ಇದರರ್ಥ ನೆಟ್‌ಫ್ಲಿಕ್ಸ್ ಅನ್ನು ಆರಾಮವಾಗಿ ಆನಂದಿಸಬಹುದು. ಇದಲ್ಲದೆ, JioTV, JioCinema ಮತ್ತು JioCloud ನ ಪ್ರಯೋಜನಗಳು ಕೂಡಾ ಲಭ್ಯವಿದೆ.ಆದರೆ, ಈ ಪ್ಲಾನ್ ನಲ್ಲಿ JioCinema ಪ್ರೀಮಿಯಂ ಮಾತ್ರ ಲಭ್ಯವಿರುವುದಿಲ್ಲ.JioCinema ಪ್ರೀಮಿಯಂ ಬೇಕಿದ್ದಲ್ಲಿ ಪ್ರತ್ಯೇಕ ಚಂದಾದಾರಿಕೆಯನ್ನು ತೆಗೆದುಕೊಳ್ಳಬೇಕಾಗುತ್ತದೆ.

ಒಂದು ದಿನದಲ್ಲಿ ಎರಡು GB ಡೇಟಾ ಬೇಗನೆ ಮುಗಿದು ಹೋದರೆ ನಂತರ ಸ್ಪೀಡ್ 64Kbps ಗೆ ಕಡಿಮೆಯಾಗುತ್ತದೆ.ಇದಲ್ಲದೆ,ಈ ಯೋಜನೆಯಲ್ಲಿ ಪ್ರತಿದಿನ 100 SMS ಸೌಲಭ್ಯ ಕೂಡಾ ಇದೆ.ಈ ಯೋಜನೆಯನ್ನು ಹೊರತುಪಡಿಸಿ, 1799 ರೂಗಳ ಪ್ಲಾನ್ ಕೂಡಾ ಇದೆ. ಇದರಲ್ಲಿ ಉಳಿದೆಲ್ಲಾ ಪ್ರಯೋಜನಗಳು ಒಂದೇ ರೀತಿ ಆಗಿದ್ದು, ನಿತ್ಯ 2GB ಬದಲಿಗೆ 3GB ಡೇಟಾ ಸಿಗುತ್ತದೆ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment