Jio
ಸ್ಮಾರ್ಟ್‌ಫೋನ್(Smartphone) ಪ್ರಿಯರಿಗೆ ದೇಶದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ(Mukesh Ambani) ಸಿಹಿ ಸುದ್ದಿಯನ್ನು ನೀಡಿದ್ದಾರೆ. ಸದ್ದಿಲ್ಲದೆ, ಕೇವಲ 1,099 ರೂ.ಗೆ ಎರಡು ಹೊಸ ಮೊಬೈಲ್(Two new mobiles)ಗಳನ್ನು ಬಿಡುಗಡೆ (release) ಮಾಡಿದ್ದಾರೆ.
ಹೌದು, ಟೆಲಿಕಾಂ ಮಾರುಕಟ್ಟೆ(Telecom market)ಯಲ್ಲಿ ಸಂಚಲನ ಮೂಡಿಸಿರುವ ರಿಲಯನ್ಸ್ ಜಿಯೋ(Reliance Jio) ತನ್ನ ‘ಜಿಯೋ ಭಾರತ್ ಸರಣಿ(Jio Bharat series)’ಯಲ್ಲಿ ಕೈಗೆಟುಕುವ 4G ಫೋನ್(4G phone)ಗಳನ್ನು ಅನಾವರಣಗೊಳಿಸಿದೆ. ಅದುವೇ, ಜಿಯೋ ಭಾರತ್ V3 (Jio Bharat V3) ಮತ್ತು ಜಿಯೋ ಭಾರತ್ V4 (Jio Bharat V4) ಸ್ಮಾರ್ಟ್‌ಫೋನ್.
ಈ ಮೂಲಕ ಇನ್ನಿತರ ಮೊಬೈಲ್ ಕಂಪನಿಗಳಿಗೆ ಸವಾಲನ್ನು ಹಾಕಿದೆ ರಿಲಯನ್ಸ್ ಜಿಯೋ, ಈ ಎರಡೂ 4G ಫೀಚರ್ ಫೋನ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಹೊಸ 4G ಫೀಚರ್ ಫೋನ್‌ಗಳು 1,000mAh ಸಾಮರ್ಥ್ಯ ಬ್ಯಾಟರಿಯನ್ನು ಹೊಂದಿವೆ ಕಂಪನಿಯು 128GB ಮೆಮೊರಿ ಕಾರ್ಡ್ ಅನ್ನು ಒದಗಿಸಿದೆ.
ಈ ಫೋನ್‌ಗಳಲ್ಲಿ, ವಾಟ್ಸಪ್ (WhatsApp) ಇಲ್ಲದೆಯೇ ಚಾಟಿಂಗ್ ಮಾಡಬಹುದು. ಶೀಘ್ರದಲ್ಲೇ ಅಮೆಜಾನ್ ಮೂಲಕ ಜಿಯೋ ಭಾರತ್ V3 ಮತ್ತು ಜಿಯೋ ಭಾರತ್ V4 ಮಾರಾಟ ಪ್ರಾರಂಭಿಸಲಿವೆ. ಜಿಯೋ ಬಳಕೆದಾರರು 123 ರೂ.ಗಳ ರೀಚಾರ್ಜ್ ಪಡೆಯಬಹುದು.
ಜಿಯೋ ಭಾರತ್ V3 ಮತ್ತು ಜಿಯೋ ಭಾರತ್ V4 ಬೆಲೆ
ಜಿಯೋ ಭಾರತ್ V3 ಫೋನಿನ ಬೆಲೆ 1,099 ರೂ. ಆಗಿದೆ. ಜಿಯೋ ಭಾರತ್ V4 ಅನ್ನು 1,099 ರೂ.ಗೆ ಬಿಡುಗಡೆ ಮಾಡಲಾಗಿದೆ. ಜಿಯೋ ಭಾರತ್ V3 ಮತ್ತು V4 ಇಂಟರ್ನೆಟ್ ಸಂಪರ್ಕದೊಂದಿಗೆ ಅಗ್ಗದ 4G ವೈಶಿಷ್ಟ್ಯದ ಫೋನ್‌ಗಳಾಗಿವೆ.
ಈ ಎರಡೂ ಮೊಬೈಲ್‌ಗಳ ಮಾರಾಟವು ಮುಂಬರುವ ಕೆಲವು ದಿನಗಳಲ್ಲಿ ಪ್ರಾರಂಭವಾಗಲಿದೆ. ನಿಮ್ಮ ಹತ್ತಿರದ ಚಿಲ್ಲರೆ ಅಂಗಡಿಗಳು ಮತ್ತು ಮೊಬೈಲ್ ಅಂಗಡಿಗಳು ಮತ್ತು ಆನ್‌ಲೈನ್ ಶಾಪಿಂಗ್ ಸೈಟ್‌ಗಳಾದ ಅಮೆಜಾನ್ ಮತ್ತು ಜಿಯೋಮಾರ್ಟ್‌ನಿಂದ ಖರೀದಿಸಬಹುದು.
ಜಿಯೋ ಭಾರತ್ ಯೋಜನೆ
ಈ ಅಗ್ಗದ ಜಿಯೋ ಫೋನ್‌ಗಳ ರೀಚಾರ್ಜ್ ಯೋಜನೆಗಳು ಸಹ ಅಗ್ಗವಾಗಿವೆ. ಜಿಯೋ ಭಾರತ್ V3 ಮತ್ತು ಜಿಯೋ ಭಾರತ್ V4 ಫೋನ್‌ಗಳನ್ನು ಖರೀದಿಸುವ ಗ್ರಾಹಕರು ಕೇವಲ 123 ರೂ.ಗಳ ರೀಚಾರ್ಜ್ ಮಾಡುವ ಮೂಲಕ 4G ಫೋನ್ ಅನ್ನು ಆನಂದಿಸಬಹುದು.
ಈ 123 ರೂ.ಗಳ ಜಿಯೋ ಯೋಜನೆಯಲ್ಲಿ, ನೀವು ಅನ್‌ಲಿಮಿಟೆಡ್ ಕಾಲ್ (unlimited voice calls) ಸೌಲಭ್ಯವನ್ನು ಪಡೆಯಬಹುದು. ಜಿಯೋ ಬಳಕೆದಾರರು 123 ರೂ.ಗೆ 14GB ಇಂಟರ್ನೆಟ್ ಡೇಟಾವನ್ನು ಸಹ ಪಡೆಯಬಹುದು.
ರಿಲಯನ್ಸ್ ಜಿಯೋ ತಮ್ಮ ಜಿಯೋ ಭಾರತ್ 4G ಫೋನ್‌ಗಳನ್ನು ಬಳಸುವುದರಿಂದ ಇತರ ಸ್ಪರ್ಧಾತ್ಮಕ ಕಂಪನಿಗಳಿಗಿಂತ 40 ಪ್ರತಿಶತ ಕಡಿಮೆ ವೆಚ್ಚವಾಗುತ್ತದೆ ಎಂದು ಹೇಳಿಕೊಂಡಿದೆ. ಅಂದರೆ ಜಿಯೋ ಬಟನ್ ಮೊಬೈಲ್‌ಗಳು ಇತರ ಬ್ರಾಂಡ್‌ಗಳು ಮತ್ತು ಆಪರೇಟರ್‌ಗಳಿಗಿಂತ ಅಗ್ಗವಾಗಿದೆ.
ಜಿಯೋ ಭಾರತ್ V3 ಮತ್ತು ಜಿಯೋ ಭಾರತ್ V4 ಫೋನಿನ ವೈಶಿಷ್ಟ್ಯಗಳು
ಜಿಯೋ ಟಿವಿ
ಜಿಯೋ ಭಾರತ್ V3 ಮತ್ತು ಜಿಯೋ ಭಾರತ್ V4 ಫೋನಿನಲ್ಲಿ 455ಕ್ಕೂ ಹೆಚ್ಚು ಟಿವಿ ಚಾನೆಲ್‌ಗಳನ್ನು ಲೈವ್ ಆಗಿ ಪ್ಲೇ ಮಾಡಬಹುದು. ನಾಟಕಗಳು, ಸಿನಿಮಾಗಳು, ಬಿಗ್ ಬಾಸ್‌ನಂತಹ ಕಾರ್ಯಕ್ರಮಗಳು, ಸುದ್ದಿ ಮತ್ತು ಕ್ರಿಕೆಟ್ ಪಂದ್ಯಗಳನ್ನು ಸಹ ವೀಕ್ಷಿಸಬಹುದು.
ಜಿಯೋ ಸಿನಿಮಾ
ಜಿಯೋ ಸಿನಿಮಾ (JioCinema) ಅಪ್ಲಿಕೇಶನ್ ಅನ್ನು ಜಿಯೋ ಭಾರತ್ ಫೋನ್‌ಗಳಲ್ಲಿ ಸೇರಿಸಲಾಗಿದೆ. ಆನ್‌ಲೈನ್ ಚಲನಚಿತ್ರಗಳು, ವಿಡಿಯೋಗಳು ಮತ್ತು ಪ್ರದರ್ಶನಗಳು ಮತ್ತು ಲೈವ್ ಕ್ರಿಕೆಟ್ ಪಂದ್ಯಗಳು ಮತ್ತು ಇತರೆ ಆಟದ ಸ್ಪರ್ಧೆಗಳನ್ನು ಇದರಲ್ಲಿ ವೀಕ್ಷಿಸಬಹುದು.
ಜಿಯೋಪೇ
ಜಿಯೋ ಭಾರತ್ V3 ಮತ್ತು ಜಿಯೋ ಭಾರತ್ V4 ಫೋನ್ ಯುಪಿಐ (UPI) ಅನ್ನು ಹೊಂದಿವೆ. ಜಿಯೋ ಫೋನ್ ಬಳಸುವ ಜನರಿಗೆ ಪೇಟಿಎಂ (Paytm) ಅಥವಾ ಗೂಗಲ್ ಪೇ (Google Pay) ಅಗತ್ಯವಿಲ್ಲ. ಜಿಯೋ ಫೋನ್ ಮೂಲಕ ಮಾತ್ರ ಪಾವತಿ ಮಾಡಬಹುದು. ಇದಲ್ಲದೇ, ಈ ಫೋನ್ ಇನ್ ಬಿಲ್ಟ್ ಸೌಂಡ್ ಬಾಕ್ಸ್ ಕೂಡ ಹೊಂದಿದೆ. ಹಣ ಕಳುಹಿಸುವಾಗ ಅಥವಾ ಸ್ವೀಕರಿಸುವಾಗ ಬಳಕೆದಾರರಿಗೆ ಮಾಹಿತಿ ನೀಡುತ್ತದೆ.
ಜಿಯೋ ಚಾಟ್
ಜಿಯೋ ಭಾರತ್ V3 ಮತ್ತು ಜಿಯೋ ಭಾರತ್ V4 4G ಫೋನ್‌ಗಳಲ್ಲಿ, ವಾಟ್ಸಪ್ (WhatsApp) ಇಲ್ಲದೆಯೇ ಚಾಟಿಂಗ್ ಮಾಡಬಹುದು. ಇದರ ಜಿಯೋ ಚಾಟ್ (JioChat) ಅಪ್ಲಿಕೇಶನ್ ಮೂಲಕ, ಸ್ನೇಹಿತರು ಅಥವಾ ಕುಟುಂಬಕ್ಕೆ ಸಂದೇಶಗಳನ್ನು ಕಳುಹಿಸಬಹುದು. ಜೊತೆಗೆ, ವಾಯ್ಸ್ ಮೆಸೇಜ್ ಮತ್ತು ಫೋಟೋಗಳನ್ನು ಸಹ ಕಳುಹಿಸಬಹುದು. ಇದರಲ್ಲಿ ಚಾಟಿಂಗ್ ಗ್ರೂಪ್ ಕೂಡ ರಚನೆಯಾಗಲಿದೆ.
1000mAh ಬ್ಯಾಟರಿ, 128GB ಮೆಮೊರಿ
ಜಿಯೋನ ಹೊಸ 4G ಫೀಚರ್ ಫೋನ್‌ಗಳು 1,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿವೆ. ಈ ಬ್ಯಾಟರಿಯು ಈವರೆಗಿನ ಕೀಪ್ಯಾಡ್ ಮೊಬೈಲ್‌ಗೆ ಹೋಲಿಸಿದರೆ ಸಾಕಷ್ಟು ದೊಡ್ಡದಾಗಿದೆ. 128GB ಮೆಮೊರಿ ಕಾರ್ಡ್ ಅನ್ನು ಈ ಫೋನ್‌ಗಳಲ್ಲಿ ಸ್ಥಾಪಿಸಬಹುದು. ಈ ಬಟನ್ ಫೋನ್‌ಗಳಲ್ಲಿ ಹಲವು ವಿಡಿಯೋಗಳು ಮತ್ತು ಹಾಡುಗಳನ್ನು ಲೋಡ್ ಮಾಡಬಹುದು.
23 ಭಾಷೆಯಲ್ಲಿ ಫೋನ್ ಬಳಸಬಹುದು
ಭಾರತವು ವೈವಿಧ್ಯತೆಯ ದೇಶವಾಗಿದ್ದು, ಪ್ರತಿಯೊಂದು ರಾಜ್ಯವು ತನ್ನದೇ ಆದ ಪ್ರತ್ಯೇಕ ಭಾಷೆ ಮತ್ತು ಉಪಭಾಷೆಯನ್ನು ಹೊಂದಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಜಿಯೋ ಭಾರತ್ V3 ಮತ್ತು ಜಿಯೋ ಭಾರತ್ V4 ಫೋನ್ 23 ಭಾರತೀಯ ಭಾಷೆಗಳನ್ನು ಬೆಂಬಲಿಸುತ್ತದೆ. ನೀವು, ತಮ್ಮ ಅನುಕೂಲಕರ ಭಾಷೆಯಲ್ಲಿ ಫೋನನ್ನು ಬಳಸಬಹುದು.