Jio Sim:
ದೇಶದ ಪ್ರತಿಷ್ಠಿತ ಟೆಲಿಕಾಂ ಸಂಸ್ಥೆಗಳಲ್ಲಿ ನಂಬರ್ ಒನ್ ಪಟ್ಟ ಗಿಟ್ಟಿಸಿ ಕೊಂಡಿರುವ ಜಿಯೋ (Jio) ಲಾಂಚ್ ಆದ ಮೇಲೆ ಭಾರತ ದೇಶದಲ್ಲಿ ತಂತ್ರಜ್ಞಾನದ ವಿಚಾರವಾಗಿ ಹೊಸ ಕ್ರಾಂತಿಯನ್ನು ಸೃಷ್ಟಿಸಿತು ಎಂದರೆ ತಪ್ಪಾಗುವುದಿಲ್ಲ. ಯಾಕೆಂದರೆ ಜಿಯೋ ಸಿಮ್ ದಯೆಯಿಂದ ಭಾರತದ ಕಟ್ಟೆ ಕಡೆಯ ಹಳ್ಳಿಯಲ್ಲಿರುವ ಯುವಕನು ಕೂಡ ಇಂಟರ್ನೆಟ್ ನಿಂದ ತನಗೆ ಬೇಕಾದ ವಿಷಯದ ಮಾಹಿತಿ ಪಡೆಯುವಂತಾಗಿದ್ದು, ಸೀರಿಯಲ್ ಗಾಗಿ ಗೃಹಿಣಿ, ಕ್ರಿಕೆಟ್, ನ್ಯೂಸ್ ಗಾಗಿ ಗಂಡ ಮತ್ತು ಕಾಟನ್ ಗಾಗಿ ಮಕ್ಕಳು ಟಿವಿ ಮುಂದೆ ರಿಮೋಟ್ ಹಿಡಿದು ಜಗಳವಾಡುವ ಬದಲು ತಮ್ಮ ತಮ್ಮ ರೂಂಗಳಲ್ಲಿ ಕೈಯಲ್ಲಿರುವ ಮೊಬೈಲ್ ನ ಇಂಟರ್ನೆಟ್ ಸೌಲಭ್ಯದಿಂದ ಯಾವಾಗ ಬೇಕಾದರೂ ಎಲ್ಲಿ ಬೇಕಾದರೂ ತಮಗೆ ಬೇಕಾದನ್ನು ಲೈವ್ ಆಗಿ ಅಥವಾ ಇನ್ನೂ ಒಂದು ಹೆಚ್ಚು ಮುಂದೆ ಹೋಗಿ ಪ್ರೀಮಿಯಂ ಆಗಿ ನೋಡಲು ಸಾಧ್ಯವಾಗಿದ್ದು.
ಇವಿಷ್ಟೇ ಅಲ್ಲದೆ ಇಂದು ನಾವು ಆನ್ಲೈನ್ ಮೂಲಕ ಪಡೆಯುತ್ತಿರುವ ಎಲ್ಲಾ ಸೇವೆಗಳು ಇಷ್ಟು ಬೇಗ ಕೈಗೆಟಕುವಂತೆ ಆಗಿದ್ದು ಎಲ್ಲರಿಗೂ ಫ್ರೀ ಸಿಮ್ ಹಾಗೂ ಫ್ರೀ ಇಂಟರ್ನೆಟ್ ಸಿಕ್ಕ ಮೇಲೆ ಎನ್ನುವುದನ್ನು ಕೂಡ ಒಪ್ಪಲೇಬೇಕು. ಹೀಗೆ ಜಿಯೋ ಸಿಮ್ ಎನ್ನುವುದು ಗ್ರಾಹಕ ಸ್ನೇಹಿಯಾಗಿ ಭಾರತೀಯರ ಮನಸ್ಸಿನಲ್ಲಿ ಎಂದು ಒಂದು ಶಾಶ್ವತ ಗೌರವ ಪಡೆದುಕೊಂಡು ಬಿಟ್ಟಿದೆ.
ಜಿಯೋ ಸಿಮ್ ಗೆ ಟಕ್ಕರ್ ಕೊಡುವುದಕ್ಕಾಗಿ ಇನ್ನಿತರ ಟೆಲಿಕಾಂ ಕಂಪನಿಗಳು ಕೂಡ ಇದನ್ನೇ ಹೋಲುವಂತಹ ಅಥವಾ ಇದಕ್ಕಿಂತಲೂ ವಿಭಿನ್ನವಾದ ಅನುಕೂಲತೆ ಮಾಡಿಕೊಡುತ್ತಿದ್ದರು ಜಿಯೋ ಮೇಲಿರುವ ಸೆಳೆತ ಅಷ್ಟು ಸುಲಭಕ್ಕೆ ಬದಲಾಗುವುದಿಲ್ಲ ಹಾಗೆ ಜಿಯೋ ಕೂಡ ಪದೇಪದೇ ಅಪ್ಡೇಟ್ ಆಗುತ್ತಿತ್ತು ಇನ್ನು ಹೆಚ್ಚಿಗೆ ಯಾವ ರೂಪದಲ್ಲಿ ತನ್ನ ಗ್ರಾಹಕರಿಗೆ ಅನುಕೂಲ ಮಾಡಿಕೊಡಬಹುದು, ಇನ್ನೇನು ಅಗತ್ಯ ಇದೆ ಎನ್ನುವುದರ ಬಗ್ಗೆ ಯೋಚಿಸುತ್ತಿರುತ್ತದೆ.
ಇತರೆ ಟೆಲಿಕಾಂ ಕಂಪನಿಗಳ ಬಹುತೇಕ ಅನುಕೂಲತೆಗಳನ್ನು ಹೊಂದಿರುವ ಜಿಯೋ ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಉಚಿತವಾದ ಅನ್ಲಿಮಿಟೆಡ್ ಡಾಟ ನೀಡಲು ಪ್ಲಾನ್ ಮಾಡುತ್ತಿದೆ, ಇದರ ಕುರಿತಾದ ಸಂಪೂರ್ಣ ವಿವರ ಹೀಗಿದೆ ನೋಡಿ. ಸಾಮಾನ್ಯವಾಗಿ ನಾವು ಒಂದು ದಿನಕ್ಕೆ ತಿಂಗಳಿಗೆ 1GB ಇಂದ ದಿನಕ್ಕೆ 2GB ಡಾಟಾ ಬರುವ ಪ್ಲಾನ್ ಗಳಲ್ಲಿ ಯಾವುದಾದರೂ ಒಂದನ್ನು ಆರಿಸಿಕೊಂಡು ರಿಚಾರ್ಜ್ ಮಾಡಿರುತ್ತೇವೆ.
ಕೆಲವರು ಇದರಲ್ಲಿ ಅರ್ಧದಷ್ಟು ಖಾಲಿ ಮಾಡದೇ ಇದ್ದರೆ ಇನ್ನು ಕೆಲವರಿಗೆ ಅರ್ಧ ದಿನಕ್ಕಿಂತ ಮುಂಚೆ ಪೂರ್ತಿ ಡಾಟಾ ಖಾಲಿ ಆಗಿರುತ್ತದೆ. ಇಷ್ಟು ಬಿಡುವಿರುವವರು ಡೇಟಾ ಖಾಲಿ ಆದ ತಕ್ಷಣ ಸಪ್ಪೆಯಾಗುತ್ತಿರುತ್ತಾರೆ ಮತ್ತು ಇದು ಅನ್ಲಿಮಿಟೆಡ್ ಆಗಿದ್ದರೆ ಎಂದು ಯೋಚಿಸುತ್ತಿರುತ್ತಾರೆ ಅವರಿಗೆ ಈಗ ಜಿಯೋ ಕಂಪನಿ ಅಸ್ತು ಎಂದಿದೆ.
ಹೇಗೆಂದರೆ, ಇದೀಗ ಜಿಯೋ ಸಿಮ್ ಅತಿ ಕಡಿಮೆ ಬೆಲೆಯಲ್ಲಿ 800 ಟಿವಿ ಚಾನಲ್ ಗಳನ್ನು ಉಚಿತವಾಗಿ ವೀಕ್ಷಿಸಲು ಅವಕಾಶವನ್ನು ನೀಡುವ ಬಗ್ಗೆ ಪ್ಲಾನ್ ಸಿದ್ದಪಡಿಸಿದೆ. ಈ ಯೋಜನೆಯ ಲಾಭ ನೀವು ಪಡೆದುಕೊಳ್ಳಲು ಜಿಯೋ ರಿಲಯನ್ಸ್ ಗ್ರಾಹಕರು ಕಂಪನಿಯ 599 ರೂ ರಿಚಾರ್ಜ್ ಪ್ಲಾನ್ ಖರೀದಿಸ ಬೇಕಾಗಿರುತ್ತದೆ, GST ಸೇರಿ ಇದರ ಬೆಲೆ ಇನ್ನಷ್ಟು ಹೆಚ್ಚಾಗಬಹುದು.
ಇನ್ನು ಮುಂದೆ ರೂ.599 ನ ಈ ರಿಚಾರ್ಜ್ ಪ್ಲಾನ್ ಮಾಡಿಸಿದರೆ ಗ್ರಾಹಕರು 30 ದಿನಗಳವರೆಗೆ 30mbps ವೇಗದ ಡಾಟಾವನ್ನು ತನ್ನ ಗ್ರಾಹಕರಿಗೆ ನೀಡುತ್ತದೆ. ಈ ಯೋಜನೆಯ ಅಡಿಯಲ್ಲಿ 30 ದಿನಗಳ ವರೆಗೆ 1,000 GB ಡೇಟಾವನ್ನು 30 ದಿನಗಳ ವ್ಯಾಲಿಡಿಟಿಯೊಂದಿಗೆ ನೀಡುವುದರ ಜೊತೆಗೆ ಇದೇ ಪ್ಲಾನ್ ನಲ್ಲಿ ರೂ.599ರ OTT ಪ್ಲಾಟ್ಫಾರ್ಮ್ ಗಳನ್ನು ಉಚಿತವಾಗಿ ಬಳಸಲು ಅವಕಾಶವಿರುತ್ತದೆ.
ಕೇವಲ ಉಚಿತ ಚಂದದಾರರಾಗುವುದಲ್ಲದೆ 800ಕ್ಕೂ ಹೆಚ್ಚು TV ಚಾನಲ್ ಗಳನ್ನು ಕೂಡ ಉಚಿತವಾಗಿ ವೀಕ್ಷಿಸಬಹುದಾದ ಈ ಅನುಕೂಲತೆಯು ಜಿಯೋ ರಿಲಯನ್ಸ್ ಎಲ್ಲಾ ಗ್ರಾಹಕರಿಗೂ ಕೂಡ ಸಿಗಲಿದೆ. ಈಗಾಗಲೇ ವೇಗದ ಇಂಟರ್ನೆಟ್ ಮತ್ತು ಅತಿ ಕಡಿಮೆ ದರಕ್ಕೆ ಇಂಟರ್ನೆಟ್ ಸೌಲಭ್ಯ ನೀಡುತ್ತಿರುವ ಕಂಪನಿ ಎಂದು ಹೆಸರಾಗಿರುವ ಜಿಯೋ ನಿಂದ ಇನ್ನು ನೂತನ ಬಗೆಯ ಪ್ಲಾನ್ ಗಳನ್ನು ಜಾರಿಗೆ ಬರುತ್ತಿರುವುದರಿಂದ ಜಿಯೋ ಗ್ರಾಹಕರ ಸಂಖ್ಯೆ ಇನ್ನಷ್ಟು ಹೆಚ್ಚಿಸಿಕೊಳ್ಳುವುದರಲ್ಲಿ ಯಾವುದೇ ಅನುಮಾನ ಇಲ್ಲ. ಜಿಯೋ ಕೊಡುತ್ತಿರುವ ಈ ನೂತನ ರೀಚಾರ್ಜ್ ಪ್ಲಾನ್ ನಿಮಗೆ ಸಮಾಧಾನಕರವಾಗಿಯೇ ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ತಪ್ಪದೆ ಕಮೆಂಟ್ ಮಾಡಿ ತಿಳಿಸಿ.