Jobs
ಯಾವುದೇ ವ್ಯಕ್ತಿಗಾದರೂ ಕೂಡ ವಿದೇಶದಲ್ಲಿ ಕೆಲಸ ಮಾಡುವ ಅವಕಾಶ ಸಿಗುತ್ತದೆ ಎಂದು ಕೇಳಿದ ಕೂಡಲೇ ಖಂಡಿತ ಖುಷಿಯಾಗುತ್ತದೆ. ಯಾಕೆಂದರೆ ನಮ್ಮಲ್ಲಿ ಫಾರಿನ್ ಗೆ ಹೋಗಿ ಕೆಲಸ ಮಾಡುವುದು ಎಂದರೆ ಒಂದು ಹೆಮ್ಮೆಯ ಸಂಗತಿಯೇ ಸರಿ, ಅಲ್ಲದೆ ವಿದೇಶದಲ್ಲಿ ಹೋಗಿ ಕೆಲಸ ಮಾಡಿದರೆ ಹೆಚ್ಚು ಸಂಬಳ ಸಿಗುತ್ತದೆ ಎನ್ನುವ ಆಸೆಯೂ ಕೂಡ ಹಾಗಾಗಿ ಪ್ರತಿಯೊಬ್ಬರೂ ಇಂತಹದೊಂದು ಕನಸು ಕಾಣುತ್ತಾರೆ.
ಕೆಲವರಿಗೆ ಈ ಬಗೆಯ ಕನಸಿದ್ದರೂ ತಾವು ಹೆಚ್ಚಿಗೆ ವಿದ್ಯಾಭ್ಯಾಸ ಪಡೆದಿಲ್ಲ ಅಥವಾ ಕುಟುಂಬ ವಿದೇಶದಲ್ಲಿ ನೆಲೆಸಲು ಶಕ್ತವಾಗಿಲ್ಲ ಹೀಗಾಗಿ ಸಾಧ್ಯವಿಲ್ಲ ಎಂದುಕೊಂಡಿರುತ್ತಾರೆ. ಪ್ರಸ್ತುತ ಜಗತ್ತಿನಲ್ಲಿ ಅರ್ಹತೆ ಇದ್ದವರಿಗೆ ಎಲ್ಲವೂ ಸಾಧ್ಯವಿದೆ. ಈಗ ಅಂತಹ ವಿದೇಶದಲ್ಲಿ ಉದ್ಯೋಗ ಪಡೆಯ ಬಯಸುವ ಉದ್ಯೋಗಾಕಾಂಕ್ಷಿಗಳಿಗೆಲ್ಲ ಸರ್ಕಾರವೇ ಅವಕಾಶ ಕಲ್ಪಿಸಿ ಕೊಡುತ್ತಿದೆ. ಇದಕ್ಕೆ ಸಂಬಂಧಪಟ್ಟ ಡೀಟೇಲ್ಸ್ ಹೀಗಿದೆ ನೋಡಿ.
ಕರ್ನಾಟಕ ರಾಜ್ಯ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದಿಂದ UAE ನಲ್ಲಿ ಬೇಡಿಕೆ ಇರುವ ಹಲವಾರು ಹುದ್ದೆಗಳಿಗೆ ನೇಮಕ ಮಾಡುತ್ತಿದೆ. ಕೇವಲ SSLC ಪಾಸ್ ಆಗಿದ್ದರೂ ಸಾಕು ಬೇಡಿಕೆ ಇರುವ ಸದರಿ ಉದ್ಯೋಗಗಳಲ್ಲಿ ಪರಿಣಿತಿ ಹೊಂದಿರುವ ಅರ್ಹರನ್ನು ನೇರ ಸಂದರ್ಶನದ ಮೂಲಕ ಆಯ್ದುಕೊಂಡು ವಿದೇಶಕ್ಕೆ ಕಳುಹಿಸಿಕೊಡಲಾಗುತ್ತದೆ.
ಈ ಸುದ್ದಿ ಓದಿ:- HSRP Number Plate: ವಾಹನ ಸವಾರರಿಗೆ ಗುಡ್ ನ್ಯೂಸ್, HSRP ನಂಬರ್ ಪ್ಲೇಟ್ ನಿಯಮ ಬದಲಾವಣೆ, ಹೊಸ ರೂಲ್ಸ್ ಏನು ನೋಡಿ.!
ಈ ಹುದ್ದೆಗಳನ್ನು ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ? ಇದಕ್ಕಿರುವ ಕಂಡಿಷನ್ ಏನು? ಎಲ್ಲಿ ಸಂದರ್ಶನ ನಡೆಯುತ್ತದೆ? ದಿನಾಂಕ ಏನು? ಯಾವೆಲ್ಲಾ ಕಂಡೀಶನ್ ಇರುತ್ತದೆ ಎಂಬ ಮಾಹಿತಿಗಾಗಿ ಲೇಖನವನ್ನು ಕೊನೆಯವರೆಗೂ ಓದಿ ಮತ್ತು ತಪ್ಪದೇ ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.
ಇಲಾಖೆ:- ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
ಉದ್ಯೋಗ ಸ್ಥಳ:- UAE
ಖಾಲಿ ಇರುವ ಹುದ್ದೆಗಳ ವಿವರ:-
● ಪ್ಲಂಬರ್ – 06
● ಸ್ಟೀಲ್ ಫಿಕ್ಸರ್ – 43
● ಕಾರ್ಪೆಂಟರ್ – 20
● ಅಲ್ಯೂಮೀನಿಯಂ ಫ್ಯಾಬ್ರಿಕೇಟರ್ಸ್ – 20
● ಫರ್ನಿಚರ್ ಕಾರ್ಪೆಂಟರ್ – 18
● ಫರ್ನಿಚರ್ ಪೇಂಟರ್ – 10
● AC ಟೆಕ್ನಿಷಿಯನ್ – 06
● ಜಸ್ಟ್ ಮ್ಯಾನ್ – 06
● ಹೆಲ್ಪರ್ – 06
● ಮೇಷನ್- 22
ಕಂಡಿಷನ್ ಗಳು:-
● 10ನೇ ತರಗತಿ ಉತ್ತೀರ್ಣರಾದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು
● ಸಂಬಂಧ ಪಟ್ಟ ಕ್ಷೇತ್ರದಲ್ಲಿ ಎರಡು ವರ್ಷಗಳ ಕಾಲ ಕೆಲಸ ಮಾಡಿರುವ ಅನುಭವ ಹೊಂದಿರಬೇಕು
● ECNR ಪಾಸ್ಪೋರ್ಟ್ ಹೊಂದಿದ್ದರೆ ಸಾಕು, ಕಂಪನಿ ಕಡೆಯಿಂದ ವೀಸಾ ಮಾಡಿಕೊಡಲಾಗುತ್ತದೆ
● ವಿದೇಶದಲ್ಲಿ ವಸತಿ ಸೌಲಭ್ಯ ಮತ್ತು ಕೆಲಸಕ್ಕೆ ಹೋಗುವ ವೆಚ್ಚವನ್ನು ಕಂಪನಿಯೇ ಭರಿಸುತ್ತದೆ.
● ಎಮಿರೇಟ್ಸ್ ಐಡಿ ಚಾರ್ಜ್ ವೆಚ್ಚ ಸುಮಾರು AED200 ಅಭ್ಯರ್ಥಿಗಳೇ ಭರಿಸಬೇಕು
● ವಿಮಾನಯಾನ ಟಿಕೆಟ್ ವೆಚ್ಚವನ್ನು ಅಭ್ಯರ್ಥಿಗಳೇ ಭರಿಸತಕ್ಕದ್ದು
● ಈ ನೇಮಕಾತಿ ಪ್ರಕ್ರಿಯೆಯನ್ನು ಕೇರಳದ ODEPEC ಸಹಯೋಗದೊಂದಿಗೆ ನಡೆಸಲಾಗುತ್ತದೆ, ಅಭ್ಯರ್ಥಿಗಳು ನೇಮಕಾತಿಯ ಸೇವಾ ಶುಲ್ಕವಾಗಿ ಸರ್ಕಾರದ ಮಾನದಂಡದಂತೆ ರೂ.35,400 ಪಾವತಿಸಬೇಕಿರುತ್ತದೆ.
● ಆಸಕ್ತ ಅಭ್ಯರ್ಥಿಗಳು ಈ ಕೆಳಕಂಡ ಇಮೇಲ್ ಐಡಿಗೆ ತಮ್ಮ ರೆಸ್ಯೂಮ್ ಕಳುಹಿಸತಕ್ಕದ್ದು
email:- he.imk@gmail.com
● ಬೆಂಗಳೂರಿನಲ್ಲಿ 20 ಜುಲೈ, 2024ರಂದು ನೇರ ಸಂದರ್ಶನ ನಡೆಯುತ್ತದೆ
● ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:-
ಅಂತರಾಷ್ಟ್ರೀಯ ವಲಸೆ ಕೇಂದ್ರ – ಕರ್ನಾಟಕ (IMC – K),
ಕಲ್ಯಾಣ ಸುರಕ್ಷಾ ಭವನ, 6ನೇ ಮಹಡಿ,
ಡೈರಿ ಸರ್ಕಲ್, ಬನ್ನೇರುಘಟ್ಟ ರಸ್ತೆ,
ಬೆಂಗಳೂರು – 560029.
ದೂರವಾಣಿ ಸಂಖ್ಯೆ- 96064 92213, 96064 92214