Ayushman Mitra
ಕೇಂದ್ರ ಸರ್ಕಾರ(Central Govt)ವು ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ದೇಶಾದ್ಯಂತ 1 ಲಕ್ಷ ಆಯುಷ್ಮಾನ್ ಮಿತ್ರ(Ayushmann Mitra)ರ ನೇಮಕಾತಿಗೆ ಮುಂದಾಗಿದೆ. ಹೌದು, ಕೇಂದ್ರದಲ್ಲಿನ ಮೋದಿ ಸರ್ಕಾರವು ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದ್ದರೆ, ಕೇಂದ್ರವು ಆಯುಷ್ಮಾನ್ ಭಾರತ್ ಯೋಜನೆ (Ayushman Bharat Yojana) ಎಂಬ ಯೋಜನೆಯನ್ನು ಜಾರಿಗೆ ತರುತ್ತಿದೆ. ಕೇಂದ್ರವು ಜಾರಿಗೆ ತರುತ್ತಿರುವ ಈ ಯೋಜನೆಯು ಆರೋಗ್ಯ ಸೇವೆಗಳಿಗೆ ಸುಲಭ ಪ್ರವೇಶವನ್ನು ಒದಗಿಸುತ್ತದೆ.
ಈ ಯೋಜನೆಯಡಿ ಅರ್ಜಿ ಸಲ್ಲಿಸಿದವರಿಗೆ ಕೇಂದ್ರದಿಂದ ಗೋಲ್ಡನ್ ಕಾರ್ಡ್ ಪಡೆಯಲು ಅವಕಾಶವಿದೆ. ಈ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರವು ಆಯುಷ್ಮಾನ್ ಮಿತ್ರ(Ayushmann Mitra)ವನ್ನು ಪ್ರಾರಂಭಿಸಿದೆ. ಈ ಯೋಜನೆಯಡಿ, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಮಿತ್ರರನ್ನು ನೇಮಿಸಲಾಗುವುದು ಮತ್ತು ತಿಂಗಳಿಗೆ ಕನಿಷ್ಠ 15,000 ರಿಂದ 30,000 ರೂ.ಗಳ ವೇತನವನ್ನು ಪಡೆಯುವ ಸಾಧ್ಯತೆಯಿದೆ. ಆಯುಷ್ಮಾನ್ ಮಿತ್ರರಾಗಲು ಬಯಸುವವರು ಕೆಲವು ವಿಷಯಗಳನ್ನು ತಿಳಿದುಕೊಳ್ಳಬೇಕು.
ಆಯುಷ್ಮಾನ್ ಯೋಜನೆಯಡಿ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದು ಲಕ್ಷ ಆಯುಷ್ಮಾನ್ ಮಿತ್ರರನ್ನು ನೇಮಿಸಲು ಮೋದಿ ಸರ್ಕಾರ ಯೋಜಿಸಿದೆ. ಫಲಾನುಭವಿಗಳ ತಯಾರಿಕೆಯಲ್ಲಿ ಯಾವುದೇ ಸಮಸ್ಯೆಗಳಿಲ್ಲ ಎಂದು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದ್ದು, ಇಂಟರ್ ಮೀಡಿಯೇಟ್ ತೇರ್ಗಡೆಯಾದ ಯುವಕರು ಇದಕ್ಕೆ ಅರ್ಹರಾಗಿದ್ದಾರೆ. ಈ ಯೋಜನೆಯ ಮೂಲಕ ಹೆಚ್ಚಿನ ಸಂಖ್ಯೆಯ ಉದ್ಯೋಗಾವಕಾಶಗಳನ್ನು ಒದಗಿಸಲು ಕೇಂದ್ರ ಸರ್ಕಾರ ಆಶಿಸಿದೆ.
ಈ ಸುದ್ದಿ ಓದಿ:- Land Map: ರೈತರಿಗೆ ಗುಡ್ ನ್ಯೂಸ್: ಈಗ ಮೊಬೈಲ್‌ನಲ್ಲೇ ಪೋಡಿ ನಕ್ಷೆ ಪಡೆಯಬಹುದು.! ಇಲ್ಲಿದೆ ಫುಲ್ ಡಿಟೇಲ್ಸ್
ಮುಂದಿನ ಐದು ವರ್ಷಗಳಲ್ಲಿ 10 ಲಕ್ಷ ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ನಾವು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಈ ವರ್ಷ 20,000 ಆಯುಷ್ಮಾನ್ ಮಿತ್ರರನ್ನು ನೇಮಿಸಲಾಗುವುದು ಎಂದು ತಿಳಿದುಬಂದಿದೆ. ಪರೀಕ್ಷೆಯಲ್ಲಿ ಉತ್ತೀರ್ಣರಾದವರನ್ನು ಮಾತ್ರ ಆಯುಷ್ಮಾನ್ ಮಿತ್ರ ಹುದ್ದೆಗೆ ನೇಮಕ ಮಾಡಲಾಗುತ್ತದೆ. ಈ ಉದ್ಯೋಗಿಗಳು ರೋಗಿಗಳಿಗಾಗಿ ಅಭಿವೃದ್ಧಿಪಡಿಸುತ್ತಿರುವ ಸಾಫ್ಟ್ವೇರ್ನಲ್ಲಿ ಕೆಲಸ ಮಾಡುತ್ತಾರೆ.
ಆಯುಷ್ಮಾನ್ ಮಿತ್ರ ಅರ್ಹತೆ.?
– ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
– ಶೈಕ್ಷಣಿಕ ಅರ್ಹತೆ: 10+2/12th
– ವಯಸ್ಸಿನ ಮಿತಿ: 18 – 40 ವರ್ಷ
– ಮಹಿಳೆ/ಮಾನ್ಯತೆ ಇರುವ ಸಾಮಾಜಿಕ ಆರೋಗ್ಯ ಕಾರ್ಯಕರ್ತರು/ಆರೋಗ್ಯ ಆರೈಕೆಯಲ್ಲಿ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ
– ಬೇಸಿಕ್ ಕಂಪ್ಯೂಟರ್/ಇಂಟರ್ನೆಟ್ ಜ್ಞಾನ, ಅನುಭವ
– ಪ್ರಾದೇಶಿಕ ಭಾಷೆ ಅಥವಾ ಹಿಂದಿ, ಇಂಗ್ಲಿಷ್ ಭಾಷೆ ಬಲ್ಲವರಾಗಿರಬೇಕು.
ಆಯುಷ್ಮಾನ್ ಮಿತ್ರ ತರಬೇತಿ
– ಆಯ್ಕೆಯಾದ ಅಭ್ಯರ್ಥಿಗಳಿಗೆ ಅಗತ್ಯ ತರಬೇತಿಯನ್ನು ನೀಡಲಾಗುವುದು.
– ಆಸಕ್ತ ಅಭ್ಯರ್ಥಿಗಳು ಆಯುಷ್ಮಾನ್ ಮಿತ್ರಕ್ಕೆ ಬರುವ ಮುನ್ನವೇ ತರಬೇತಿ ಪಡೆಯಬಹುದು.
– ಭಾರತ ಸರ್ಕಾರದ ಕೌಶಲ್ಯ ಅಭಿವೃದ್ಧಿ ಇಲಾಖೆಯು ಹಲವಾರು ಕೋರ್ಸ್ ಗಳನ್ನು ಹೊಂದಿದೆ.
– ಈಗಾಗಲೇ ತರಬೇತಿ ಪಡೆದಿರುವ ಅನುಭವವಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
– ತರಬೇತಿ ಪೂರ್ಣಗೊಂಡ ನಂತರ ಪ್ರಮಾಣಪತ್ರ ನೀಡಲಾಗುವುದು.
ಆಯುಷ್ಮಾನ್ ಮಿತ್ರ ಸಂಬಳ
– ಸರ್ಕಾರ ಯಾವುದೇ ಅಧಿಕೃತ ಮೊತ್ತವನ್ನು ಉಲ್ಲೇಖಿಸದಿದ್ದರೂ, ತಿಂಗಳಿಗೆ ರೂ. 30 ಸಾವಿರದವರೆಗೆ ಸಂಬಳ ನೀಡುವ ಸಾದ್ಯತೆ ಇದೆ.
– ಸಂಬಳದ ಹೊರತಾಗಿ ಒಬ್ಬ ರೋಗಿಯ ಮೇಲೆ 50 ರೂ. ಪ್ರೋತ್ಸಾಹ ಧನ ಸಿಗುತ್ತದೆ.
ಆಯುಷ್ಮಾನ್ ಮಿತ್ರ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?
– ಆಯುಷ್ಮಾನ್ ಭಾರತ್ ಯೋಜನೆಯ ಅಧಿಕೃತ ವೆಬ್ಸೈಟ್ https://www.abnhpm.gov.in/work-with-nha ಅಥವಾ www.abnhpm.gov.in ಗೆ ಭೇಟಿ ನೀಡಿ.
– ಆಯುಷ್ಮಾನ್ ಮಿತ್ರ ನೇಮಕಾತಿ (ayushman mitra recruitment) ಮೇಲೆ ಕ್ಲಿಕ್ ಮಾಡಿ. ಉಲ್ಲೇಖಿಸಲಾಗಿರುವ ಸೂಚನೆಗಳನ್ನು ಅನುಸರಿಸಿ.
– ಅರ್ಜಿಯನ್ನು ತುಂಬಿ
– ಅರ್ಜಿಯನ್ನು ಸಬ್ಮಿಟ್ ಮಾಡಿ.
ಆಯಷ್ಮಾನ್ ಭಾರತ್ ಸೌಲಭ್ಯ ಯಾರಿಗೆ ಸಿಗಲಿದೆ?
ಜಾತಿ ಗಣತಿ/ಪಡಿತರ ಚೀಟಿ ಮಾನದಂಡದ ಆಧಾರದ ಮೇಲೆ ವಿಮೆ ಸಗಲಿದೆ.
– ಪ.ಜಾತಿ/ಪ.ಪಂಗಡ ಬುಡಕಟ್ಟು ಸಮುದಾಯದವರು
– ನಿರ್ವಸಿತರು (ವಸತಿ ಸೌಲಭ್ಯ ಇಲ್ಲದವರು)
– ಒಂದು ಕೊಠಡಿಯಲ್ಲಿ ವಾಸಿಸುವ ಕುಟುಂಬಗಳು
– ಕೂಲಿ ಕಾರ್ಮಿಕರು, ಜೀತ ವಿಮುಕ್ತರು
– ರದ್ದಿ ಆಯುವವರು, ಭಿಕ್ಷುಕರು, ಪೌರಕಾರ್ಮಿಕರು – ಕಟ್ಟಡ ಕಾರ್ಮಿಕರು, ಮನೆ ಕೆಲಸದವರು, ಕುಸುರಿ ಕೆಲಸಗಾರರು
– ಟೈಲರ್, ಪ್ಲಂಬರ್, ಸಾರಿಗೆ ನೌಕರರು, ರಿಕ್ಷಾವಾಲಾಗಳು
– ಎಲೆಕ್ಟ್ರಿಷಿಯನ್, ಮೆಕಾನಿಕ್, ಸಹಾಯಕರು