Canara Bank: ಕೆನರಾ ಬ್ಯಾಂಕ್ ನಲ್ಲಿ ಉದ್ಯೋಗಾವಕಾಶ.! SSLC ಪಾಸ್ ಆದವರು ಅರ್ಜಿ ಸಲ್ಲಿಸಿ.!

Canada Bank

ಇಂದು ಉದ್ಯೋಗ(employment) ಅನ್ನೋದು ಪ್ರತಿಯೊಬ್ಬರಿಗೂ ಬಹಳ ಮುಖ್ಯವಾಗಲಿದೆ. ಸರಿಯಾದ ಉದ್ಯೋಗ ಇದ್ದರೆ ಮಾತ್ರ ನೆಮ್ಮದಿಯ ಜೀವನ‌ ನಡೆಸಬಹುದು‌. ಇಂದು ಎಷ್ಟೇ ಶಿಕ್ಷಣ(Education) ಪಡೆದರೂ ಸರಿಯಾದ ಆಸಕ್ತಿ ಇದ್ದ ಉದ್ಯೋಗ ಸಿಗುತ್ತಿಲ್ಲ. ಹಾಗಾಗಿ, ಹೆಚ್ಚಿನವರು ಸ್ವ ಉದ್ಯಮ ದತ್ತ ಆಕರ್ಷಿತರಾಗುತ್ತಿದ್ದಾರೆ. ಅದೇ ರೀತಿ ಸರಕಾರ ಕೂಡ ನಿರುದ್ಯೋಗ ಯುವಕ ಯುವತಿಯರನ್ನು ಪ್ರೊತ್ಸಾಹಿಸುತ್ತಲೇ ಬಂದಿದೆ.

ಹಾಗಾಗಿ, ಹೆಚ್ಚಿನ ಯುವಕ ಯುವತಿಯರು ಸ್ವ ಉದ್ಯೋಗದತ್ತ ಆಕರ್ಷಿತ ರಾಗಿದ್ದಾರೆ. ಹಾಗೆ ಸರ್ಕಾರವು ಕೂಡ ನಿರುದ್ಯೋಗ ಯುವಕ (Young man) ಯುವತಿ(young woman)ಯರಿಗೆ ಹಲವಾರು ರೀತಿಯ ಯೋಜನೆಗಳನ್ನು ಜಾರಿ ತರುತ್ತಲೇ ಇದೆ .ಈ ಲೇಖನದಲ್ಲಿ ಪಡಿತರ ಚೀಟಿಯನ್ನು ಹೊಂದಿರುವ ಯುವಕ – ಯುವತಿಯರಿಗೆ ನಿರುದ್ಯೋಗದಿಂದ ಮುಕ್ತರಾಗುವುದು ಹಾಗೆ ಸರಕಾರದ ಅನುದಾನವನ್ನು ಪಡೆದುಕೊಳ್ಳುವ ವಿಧಾನವನ್ನು ಸಂಪೂರ್ಣವಾಗಿ ತಿಳಿಸಲಾಗಿದ್ದು ಕೊನೆತನಕ ಮಿಸ್‌ ಮಾಡದೇ ಓದಿ ತಿಳಿದುಕೊಳ್ಳಿ.

WhatsApp Group Join Now
Telegram Group Join Now

ಇದೀಗ ನಿರುದ್ಯೋಗಿ ಯುವಕ-ಯುವತಿಯರಿಗೆ ಇಲ್ಲಿದೆ ಒಂದು ಗುಡ್ ನ್ಯೂಸ್. ಹೌದು, ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ(Canara Bank Rural Self Employment Training Institute) ವತಿಯಿಂದ ಗ್ರಾಮೀಣ ಪ್ರದೇಶ(Rural area)ದ 18 ರಿಂದ 45 ವಯೋಮಿತಿಯೊಳಗಿನ ನಿರುದ್ಯೋಗಿ ಯುವತಿ-ಯುವಕರಿಗೆ ಮೊಬೈಲ್ ರಿಪೇರಿ(Mobile Repair), ಸರ್ವಿಸ್(Service), ಎಲೆಕ್ಟಿçಕ್ ಮೋಟರ್ ರಿವೈಂಡಿಂಗ್(Electric motor rewinding), ರಿಪೇರ್ ಸರ್ವಿಸ್ ತರಬೇತಿ(Repair Service Training) ನೀಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಆ.16 ರಿಂದ 30 ದಿನಗಳ ಕಾಲ ವಸತಿ ಸಹಿತವಾಗಿ ಉಚಿತ ತರಬೇತಿ ನೀಡಲಾಗುತ್ತದೆ.

ಅರ್ಹತೆಗಳು

– ಬಿ.ಪಿ.ಏಲ್. ಕಾರ್ಡ್‌ ಹೊಂದಿರಬೇಕು, ಕನ್ನಡವನ್ನು ಓದಲು ಹಾಗೂ ಬರೆಯಲು ಬರುವಂತಹ ನಿರುದ್ಯೋಗಿ ಸ್ವ-ಉದ್ಯೋಗ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳು ತರಬೇತಿಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.

ವಿದ್ಯಾರ್ಹತೆ

ಕನಿಷ್ಟ 10ನೇ ತರಗತಿ ಪಾಸಾಗಿರಬೇಕು. ತರಬೇತಿಯ ಬಗ್ಗೆ ಪ್ರಾಥಮಿಕ ಅನುಭವ ಹೊಂದಿದವರಿಗೆ ಆದ್ಯತೆ ಕೊಡಲಾಗುವುದು. 35 ಜನರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು. ಈ ಮೊದಲು ತರಬೇತಿ ಪಡೆದವರು ಪುನಃ ತರಬೇತಿ ಪಡೆಯಲು ಅರ್ಹರಿರುವುದಿಲ್ಲ.

ಆಸಕ್ತ ಅರ್ಹ ಅಭ್ಯರ್ಥಿಗಳು ತ್ವರಿತವಾಗಿ ತಮ್ಮ ಹೆಸರು, ವಿಳಾಸ, ಸಂಪರ್ಕಕ್ಕೆ ಲಭ್ಯವಿರುವ ದೂರವಾಣಿ ಸಂಖ್ಯೆ, ವಯಸ್ಸು, ವಿದ್ಯಾರ್ಹತೆ, ಪಡೆಯಲಿಚ್ಚಿಸಿರುವ ತರಬೇತಿ, ಸಂಬಂಧಿತ ವಿಷಯದಲ್ಲಿ ಇರುವ ಪ್ರಾಥಮಿಕ ಜ್ಞಾನ, ಅನುಭವ ಮುಂತಾದ ಮಾಹಿತಿಯೊಂದಿಗೆ ಬಿಳಿ ಹಾಳೆಯ ಮೇಲೆ ಅರ್ಜಿಯನ್ನು ಬರೆದು ಪಾಸ್ ಪೋರ್ಟ್ ಅಳತೆಯ ಇತ್ತೀಚಿನ ಭಾವಚಿತ್ರದೊಂದಿಗೆ ರೇಷನ್ ಕಾರ್ಡ್ನ ಒಂದು ಝೆರಾಕ್ಸ್ ಪ್ರತಿಯನ್ನು ಲಗತ್ತಿಸಿ ಅರ್ಜಿಯನ್ನು ಆ.14 ರೊಳಗಾಗಿ ಸಲ್ಲಿಸಬೇಕು. ಅರ್ಜಿಗಳು ನಮಗೆ ತಲುಪಿದ ನಂತರ ತರಬೇತಿಯಲ್ಲಿ ಭಾಗವಹಿಸುವ ಬಗೆಗೆ ಅರ್ಜಿಯಲ್ಲಿ ನಮೂದಿಸಿದ ಫೋನ್ ನಂಬರ್‌ಗೆ ಫೋನ್ ಮಾಡಿ ತಿಳಿಸಲಾಗುವುದು. ತರಬೇತಿಯಲ್ಲಿ ಪಾಲ್ಗೊಳ್ಳಲು ತಗುಲುವ ಪ್ರಯಾಣ ಭತ್ಯೆಯನ್ನು ತಾವೇ ಭರಿಸಬೇಕು.

ಈ ಸುದ್ದಿ:- Post office: ಪೋಸ್ಟ್ ಆಫೀಸ್ ನಲ್ಲಿ ಕೇವಲ 1000ರೂ. ಹೂಡಿಕೆ ಮಾಡಿ ಪ್ರತಿ ತಿಂಗಳು 20 ಸಾವಿರ ಸಿಗುತ್ತೆ.!

ಹೆಚ್ಚಿನ ಮಾಹಿತಿಗಾಗಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಹತ್ತಿರದ ಡಿಐಸಿ ಕಾಂಪೌಡ್‌ನ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕರ ಕಚೇರಿ ಅಥವಾ ದೂ.08392-299117, ಮೊ.8310766951 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ. ಇದಷ್ಟೇ ಅಲ್ಲದೇ, ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಯ ಮೂಲಕವೂ ನಿರುದ್ಯೋಗ ಯುವಕ ಯುವತಿಯರಿಗೆ ಯುವನಿಧಿ ಯೋಜನೆ (Yuva Nidhi Yojana) ಯನ್ನು ಜಾರಿಗೆ ತಂದಿದ್ದು, ಹೆಚ್ಚಿನ ಯುವಕ ಯುವತಿಯರು ಈ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡುತ್ತಿದ್ದಾರೆ.

ವಿದ್ಯಾವಂತ ನಿರುದ್ಯೋಗಿಗಳಿಗೆ 2022-23ನೇ ಸಾಲಿನಲ್ಲಿ ಉತ್ತೀರ್ಣರಾಗಿ 6 ತಿಂಗಳು ಉದ್ಯೋಗ ಸಿಗದ ಯುವಕ ಯುವತಿಯರು ಅರ್ಹರಾಗಿದ್ದಾರೆ. ಪದವೀಧರರಿಗೆ 3,000 ರೂಪಾಯಿ ಹಾಗೂ ಡಿಪ್ಲೊಮಾ ಪದವೀಧರರಿಗೆ ಮಾಸಿಕ 1,500 ರೂಪಾಯಿ ಆರ್ಥಿಕ ಸಹಾಯವನ್ನು ಕೂಡ ಸರಕಾರ ನೀಡುತ್ತಿದೆ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment