Library
ರಾಜ್ಯದಾದ್ಯಂತ ಇರುವ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಅದರಲ್ಲೂ ಗ್ರಂಥಾಲಯದಲ್ಲಿ ಉದ್ಯೋಗ ಮಾಡಬಯಸುವವರಿಗೆ ಒಂದು ಸಿಹಿ ಸುದ್ದಿಯನ್ನು ಈ ಲೇಖನದ ಮೂಲಕ ಹಂಚಿಕೊಳ್ಳುತ್ತಿದ್ದೇವೆ. ಗ್ರಂಥಾಲಯದಲ್ಲಿ ಉದ್ಯೋಗವಕಾಶ ಎನ್ನುವುದೇ ಬಹಳ ಖುಷಿ ಕೊಡುವ ಸಂಗತಿ ಆಗಿದೆ. ಗ್ರಂಥಾಲಯದಲ್ಲಿ ಓದುವುದಕ್ಕೆ ಸಮಯ ಸಿಕ್ಕರೆ ಅದೇ ಒಂದು ಸೌಭಾಗ್ಯ, ಸದ್ಯಕ್ಕೆ ಇದರ ಜೊತೆ ಸಂಬಳ ಕೂಡ ನೀಡುವುದಾದರೆ ಅದಕ್ಕಿಂತ ಪುಣ್ಯದ ಕಾರ್ಯ ಮತ್ತೊಂದಿಲ್ಲ ಎಂದು ಹೇಳಬಹುದು.
ನಾವು ಓದುತ್ತಾ ಹಾಗೂ ಓದಿನ ಬಗ್ಗೆ ಆಸಕ್ತಿ ಇರುವ ಇತರರನ್ನು ಕೂಡ ಪ್ರೇರೇಪಿಸುತ್ತಾ ಅವರಿಗೆ ಸಹಾಯವಾಗುವ ಈ ಹುದ್ದೆಗಳಿಗೆ ಸರ್ಕಾರದ ಕಡೆಯಿಂದ ಯಾವುದೇ ಪರೀಕ್ಷೆ ಇಲ್ಲದೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಅಂತೆಯೇಶಸದ್ಯಕ್ಕೀಗ ದಾವಣಗೆರೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಖಾಲಿ ಇರುವ ಸರ್ಕಾರಿ ಮತ್ತು ಮಾಹಿತಿ ಕೇಂದ್ರಗಳ ಮೇಲ್ವಿಚಾರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಭರ್ತಿ ಮಾಡಲು ಆಸಕ್ತರಿಂದ ಅರ್ಜಿ ಆಹ್ವಾನ ಮಾಡಲಾಗಿದೆ. ಇದರ ಕುರಿತಾದ ಕಂಪ್ಲೀಟ್ ಮಾಹಿತಿ ಹೀಗಿದೆ ನೋಡಿ.
ನೇಮಕಾತಿ ಸಂಸ್ಥೆ:- ದಾವಣಗೆರೆ ಜಿಲ್ಲಾ ಪಂಚಾಯಿತಿ
ಹುದ್ದೆ ಹೆಸರು:-
* ಗ್ರಂಥಪಾಲಕ
* ಮಾಹಿತಿ ಕೇಂದ್ರ ಮೇಲ್ವಿಚಾರಕ
ಒಟ್ಟು ಹುದ್ದೆಗಳ ಸಂಖ್ಯೆ:- 16 ಹುದ್ದೆಗಳು
ಉದ್ಯೋಗ ಸ್ಥಳ:- ದಾವಣಗೆರೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಉದ್ಯೋಗ ಖಾಲಿ ಇರುವ ಸಾರ್ವಜನಿಕ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳಲ್ಲಿ
ವೇತನ ಶ್ರೇಣಿ:-
ಈ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಮಾಸಿಕವಾಗಿ ರೂ.15,196. ರಂತೆ ವೇತನ ಸಿಗುತ್ತದೆ
ಶೈಕ್ಷಣಿಕ ವಿದ್ಯಾರ್ಹತೆ:-
* ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕಡ್ಡಾಯವಾಗಿ ಕರ್ನಾಟಕದಲ್ಲಿ ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಕಲಾ / ವಾಣಿಜ್ಯ ಅಥವಾ ವಿಜ್ಞಾನ ವಿಭಾಗದಲ್ಲಿ ಉತ್ತೀರ್ಣರಾಗಿರಬೇಕು
* ಸರ್ಟಿಫಿಕೇಷನ್ ಕೋರ್ಸ್ ಇನ್ ಲೈಬ್ರರಿ ಸೈನ್ಸ್ ಪ್ರಮಾಣ ಪತ್ರ ಪಡೆದಿರಬೇಕು
* ಇದರೊಂದಿಗೆ ಮೂರು ತಿಂಗಳ ಕಂಪ್ಯೂಟರ್ ಶಿಕ್ಷಣದ ಪ್ರಮಾಣ ಪತ್ರ ಹೊಂದಿರಬೇಕು
ವಯೋಮಿತಿ:-
* ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು
* ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 35 ವರ್ಷಗಳು
ವಯೋಮಿತಿ ಸಡಿಲಿಕೆ:-
* SC / ST ಮತ್ತು ಪ್ರವರ್ಗ -1 ವರ್ಗದ ಅಭ್ಯರ್ಥಿಗಳಿಗೆ 05 ವರ್ಷಗಳು
* 2A, 2B, 3A, 3B ವರ್ಗದ ಅಭ್ಯರ್ಥಿಗಳಿಗೆ 03 ವರ್ಷಗಳು
ಅರ್ಜಿ ಸಲ್ಲಿಸುವ ವಿಧಾನ:-
* ದಾವಣಗೆರೆ ಜಿಲ್ಲೆ ಅಧಿಕೃತ ವೆಬ್ಸೈಟ್ davanagere.nic.in ರಲ್ಲಿ ದಾಖಲೆಗಳನ್ನು ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕರಿಸಿ ಆನ್ಲೈನ್ ಮುಖಾಂತರ ಸಲ್ಲಿಸಲು ತಿಳಿಸಲಾಗಿದೆ
* ಅರ್ಜಿಯನ್ನು ಸಂಪೂರ್ಣವಾಗಿ ಸಲ್ಲಿಸಿದ ನಂತರ ಸ್ವೀಕೃತಿ ಪತ್ರದ ಪ್ರತಿಗಳೊಂದಿಗೆ ದಾಖಲೆಗಳನ್ನು ಲಗತ್ತಿಸಿ ಜಿಲ್ಲಾ ಪಂಚಾಯತ್ ಕಚೇರಿಯ ಆಡಳಿತ ವಿಭಾಗ ಕೊಠಡಿ ಸಂಖ್ಯೆ 25ಕ್ಕೆ ದಿನಾಂಕ 20-7-2014ರೊಳಗೆ ಸಲ್ಲಿಸಿ ಸ್ಪೀಕೃತಿ ಪಡೆಯಲು ತಿಳಿಸಲಾಗಿದೆ.
ಅರ್ಜಿ ಶುಲ್ಕ:-
* ಸಾಮಾನ್ಯ ಅಭ್ಯರ್ಥಿಗಳಿಗೆ ರೂ.500
* SC/ST ಮತ್ತು ಪ್ರವರ್ಗ-1 ರ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.200
* 2A, 2B, 3A, 3B ಗೆ ಸೇರಿದ ಅಭ್ಯರ್ಥಿಗಳಿಗೆ ರೂ.300
* ಅಂಗವಿಕಲ ಅಭ್ಯರ್ಥಿಗಳಿಗೆ ರೂ.100
* ಅರ್ಜಿ ಶುಲ್ಕವನ್ನು ಅಧಿಸೂಚನೆಯಲ್ಲಿ ತಿಳಿಸಿರುವಂತೆ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಸಲ್ಲಿಸಬೇಕು
ಆಯ್ಕೆ ವಿಧಾನ:-
ಶೈಕ್ಷಣಿಕ ಅರ್ಹತೆಯಲ್ಲಿನ ಮೆರಿಟ್ ಮತ್ತು ರೋಸ್ಟರ್ ಮೀಸಲಾತಿ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 29 ಜೂನ್, 2024
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 20 ಜುಲೈ, 2024.