Indian Oil
ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್(Indian Oil Corporation Limited) ಟ್ರೇಡ್ ಅಪ್ರೆಂಟಿಸ್, ಟೆಕ್ನೀಷಿಯನ್ ಅಪ್ರೆಂಟಿಸ್, ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ (Recruitment Notification) ಬಿಡುಗಡೆ ಮಾಡಿದೆ. ಈ ಹುದ್ದೆಗಳಿಗೆ ಕ್ರಮವಾಗಿ ಐಟಿಐ, ಡಿಪ್ಲೊಮ, ತಾಂತ್ರಿಕ / ತಾಂತ್ರಿಕೇತರ ವಿಷಯಗಳಲ್ಲಿ ಪದವಿ ಪಾಸಾದವರು ಅರ್ಜಿ ಸಲ್ಲಿಸಬಹುದು.
ಈ ಸುದ್ದಿ ಓದಿ:-Post Office Scheme: ಪೋಸ್ಟ್ ಆಫೀಸ್‌ನಲ್ಲಿ 5,000 ರೂಪಾಯಿ ಠೇವಣಿ ಮಾಡಿದ್ರೆ 8 ಲಕ್ಷ ಸಿಗಲಿದೆ.!
ಈ ಹುದ್ದೆಗಳಿಗೆ ಯಾವುದೇ ಪರೀಕ್ಷೆ ನಡೆಸದೇ ಕೇವಲ ವಿದ್ಯಾರ್ಹತೆಯ(Eligibility) ಅಂಕಗಳ ಆಧಾರದಲ್ಲಿ, ಮೆರಿಟ್ ಪಟ್ಟಿ ಸಿದ್ಧಪಡಿಸಿ ನೇಮಕ ಮಾಡಲಾಗುತ್ತದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೆಳಗಿನ ಇನ್ನಷ್ಟು ವಿವರಗಳನ್ನು ತಿಳಿದು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ.
ಅಂದಹಾಗೆ, ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್ ಈ ವಿವಿಧ ತರಬೇತುದಾರ ಹುದ್ದೆಗಳನ್ನು ತನ್ನ ಇಲೆಕ್ಟ್ರಿಕಲ್, ಮೆಕ್ಯಾನಿಕಲ್, ಫಿಟ್ಟರ್, ಇತರೆ ಹಲವು ವಿಭಾಗಗಳಲ್ಲಿ ನೇಮಕ ಮಾಡಲಿದೆ.
ಹುದ್ದೆಗಳ ವಿವರ
– ಟ್ರೇಡ್ ಅಪ್ರೆಂಟಿಸ್ ಹುದ್ದೆಗಳು : 95
– ಟೆಕ್ನೀಷಿಯನ್ ಅಪ್ರೆಂಟಿಸ್ ಹುದ್ದೆಗಳು : 105
– ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳು : 200
– ಒಟ್ಟು ಹುದ್ದೆಗಳ ಸಂಖ್ಯೆ : 400
ಶೈಕ್ಷಣಿಕ ಅರ್ಹತೆಗಳು
– ಟ್ರೇಡ್ ಅಪ್ರೆಂಟಿಸ್ ಹುದ್ದೆಗಳು: ಐಟಿಐ ಪಾಸ್ ಆಗಿರಬೇಕು.
– ಟೆಕ್ನೀಷಿಯನ್ ಅಪ್ರೆಂಟಿಸ್ ಹುದ್ದೆಗಳು : ಡಿಪ್ಲೊಮ ಪಾಸ್ ಆಗಿರಬೇಕು.
– ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳು : ತಾಂತ್ರಿಕ ವಿಷಯಗಳಲ್ಲಿ, ತಾಂತ್ರಿಕೇತರ ವಿಷಯಗಳಲ್ಲಿ ಗ್ರಾಜುಯೇಷನ್ ಮುಗಿಸಿರಬೇಕು.
ವಯಸ್ಸಿನ ಅರ್ಹತೆ
ಅಪ್ಲಿಕೇಶನ್ ಸಲ್ಲಿಸಲು ಕನಿಷ್ಠ 18 ವರ್ಷ ಪೂರೈಸಿರಬೇಕು. ಗರಿಷ್ಠ 24 ವರ್ಷ ವಯಸ್ಸು ಮೀರಿರಬಾರದು.
ಒಬಿಸಿ / ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ವಯಸ್ಸಿನ ಸಡಿಲಿಕೆ ನಿಯಮಗಳು ಸರ್ಕಾರದ ರೂಲ್ಸ್ ಪ್ರಕಾರ ಅನ್ವಯವಾಗಲಿವೆ.
ಆಯ್ಕೆ ವಿಧಾನ
ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳನ್ನು ಪರಿಗಣಿಸಿ ಮೆರಿಟ್ ಪಟ್ಟಿ ಸಿದ್ಧಪಡಿಸಲಾಗುತ್ತದೆ. ನಂತರ ಅದರಲ್ಲಿನ ಅಭ್ಯರ್ಥಿಗಳಿಗೆ ಮೂಲ ದಾಖಲೆಗಳ ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು, ಮಾಹಿತಿಗಳು
– ಆಧಾರ್ ಕಾರ್ಡ್
– ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ
– ಟ್ರೇಡ್ ಅಪ್ರೆಂಟಿಸ್‌ಗೆ ಅರ್ಜಿ ಹಾಕುವವರಿಗೆ ಐಟಿಐ ಪಾಸ್ ಪ್ರಮಾಣ ಪತ್ರ.
– ಟೆಕ್ನೀಷಿಯನ್ ಅಪ್ರೆಂಟಿಸ್‌ಗೆ ಅರ್ಜಿ ಹಾಕುವವರಿಗೆ ಡಿಪ್ಲೊಮ ಪಾಸ್ ಪ್ರಮಾಣ ಪತ್ರ.
– ಗ್ರಾಜುಯೇಟ್ ಅಪ್ರೆಂಟಿಸ್‌ಗೆ ಅರ್ಜಿ ಹಾಕುವವರಿಗೆ ಪದವಿ ಪಾಸ್ ಪ್ರಮಾಣ ಪತ್ರ.
– ಇಮೇಲ್ ವಿಳಾಸ
– ಮೊಬೈಲ್ ನಂಬರ್
– ಇತರೆ.
ಅಪ್ರೆಂಟಿಸ್ ಅವಧಿ : 12 ತಿಂಗಳು
ಅಪ್ರೆಂಟಿಸ್ ಅಭ್ಯರ್ಥಿಗಳಿಗೆ 1960 ಅಪ್ರೆಂಟಿಸ್ ಕಾಯ್ದೆ ಅನ್ವಯ ಮಾಸಿಕ ಸ್ಟೈಫಂಡ್ Rs.7000- 15000 ವರೆಗೆ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್ ನೀಡಲಿದೆ.
ಅರ್ಜಿ ಸಲ್ಲಿಸಲು ಭೇಟಿ ನೀಡಬೇಕಾದ ವೆಬ್‌ಸೈಟ್ ವಿಳಾಸಗಳು : https://www.iocrefrecruit.in / www.iocl.com
ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್‌ನ ಟ್ರೇಡ್, ಟೆಕ್ನೀಷಿಯನ್ ಹಾಗೂ ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ ಕುರಿತ ಇತರೆ ಹೆಚ್ಚಿನ ಕಂಪ್ಲೀಟ್ ಮಾಹಿತಿಗಳಿಗಾಗಿ ಮೇಲಿನ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ, ಅಧಿಸೂಚನೆ ಲಿಂಕ್ ಕ್ಲಿಕ್ ಮಾಡಿ ಓದಿರಿ.
ಪ್ರಮುಖ ದಿನಾಂಕಗಳು
– ಆನ್‌ಲೈನ್ ಅರ್ಜಿ ಸ್ವೀಕಾರ ಆರಂಭ ದಿನಾಂಕ : 2-08-2024
– ಆನ್‌ಲೈನ್ ಅರ್ಜಿ ಸ್ವೀಕರಿಸುವ ಕೊನೆ ದಿನಾಂಕ: 19-08-2024 ರ ಸಂಜೆ 11 ಗಂಟೆವರೆಗೆ.