Job
ಕರ್ನಾಟಕದ ಪ್ರತಿಷ್ಠಿತ ಮಾಹಿತಿ ತಂತ್ರಜ್ಞಾನ ಸಂಸ್ಥೆ ಎನಿಸಿರುವ ವಿಪ್ರೋ (WIPRO) ಕಂಪನಿಯಲ್ಲಿ, ಉದ್ಯೋಗ ಮಾಡಬೇಕೆನ್ನುವುದು ವಿದ್ಯಾರ್ಥಿ ಜೀವನದಲ್ಲಿದ್ದಾಗ ಪ್ರತಿಯೊಬ್ಬ ವಿದ್ಯಾರ್ಥಿಯ ಕನಸು. ನೀವು ಕೂಡ ಈ ಬಗ್ಗೆ ಆಸಕ್ತಿ ಹೊಂದಿದ್ದರೆ ಅಥವಾ ವೃತ್ತಿಪರ ಬೆಳವಣಿಗೆ ಹಾಗೂ ಅಭಿವೃದ್ಧಿಗೆ ಸ್ಪಷ್ಟವಾದ ಮಾರ್ಗವನ್ನು ಹೊಂದಿರುವ ವಿಪ್ರೊ ಕಂಪನಿಯಲ್ಲಿ ಉದ್ಯೋಗ ಮಾಡಲು ಇಚ್ಛಿಸುತ್ತಿದ್ದರೆ ಕಂಪನಿ ವತಿಯಿಂದ ನಿಮಗೆ ಸಿಹಿ ಸುದ್ದಿ ಇದೆ.
ಆದೇನೆಂದರೆ, ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಿದೆ. ಈ ಸಂಬಂಧ ನೋಟಿಫಿಕೇಶನ್ ಕೂಡ ಹೊರಡಿಸಿದೆ. ಈಗಷ್ಟೇ ಪದವಿ ಮುಗಿಸಿರುವಂತಹ ಪ್ರತಿಭಾವಂತ ಯುವಜನತೆ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಯಾವ ಹುದ್ದೆ? ವೇತನ ಎಷ್ಟಿರುತ್ತದೆ? ಇನ್ನಿತರ ಸೌಲಭ್ಯಗಳು ಏನು? ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಎಂದು? ಎಲ್ಲಾ ಮಾಹಿತಿಗಾಗಿ ಲೇಖನವನ್ನು ಕೊನೆಯವರೆಗೂ ಓದಿ.
ನೇಮಕಾತಿ ಸಂಸ್ಥೆ :- ವಿಪ್ರೋ ( WIPRO)
ಹುದ್ದೆ ಹೆಸರು :- ಪ್ರಾಜೆಕ್ಟ್ ಇಂಜಿನಿಯರ್ ತರಬೇತುದಾರ ಹುದ್ದೆಗಳು
ಹುದ್ದೆ ವಿವರ:-
* ಆರಂಭದಲ್ಲಿ ನಾಲ್ಕು ವರ್ಷಗಳ ಕಾಲ ತರಬೇತುದಾರನಾಗಿ ಕಾರ್ಯನಿರ್ವಹಿಸಬೇಕು
* ನಂತರ ಹಿರಿಯ ಪ್ರಾಜೆಕ್ಟ್ ಇಂಜಿನಿಯರ್ ಆಗಿ ಬಡ್ತಿ ನೀಡಲಾಗುತ್ತದೆ
* ಕಾರ್ಯಕ್ಷಮತೆ ಆಧಾರದ ಮೇಲೆ ಪ್ರತಿ ವರ್ಷ ಸ್ಯಾಲರಿ ಪ್ಯಾಕೇಜ್ ಹೆಚ್ಚಾಗುತ್ತದೆ ಹಾಗೂ ಉತ್ತಮ ಪೋಸ್ಟ್ ಸಿಗುತ್ತದೆ
ಉದ್ಯೋಗ ಸ್ಥಳ:- ಬೆಂಗಳೂರು ಅಥವಾ ಯಾವುದೇ ವಿಪ್ರೊ ಬ್ರಾಂಚ್ ನಲ್ಲಿ
ವೇತನ ಶ್ರೇಣಿ:-
* ಮೊದಲ ವರ್ಷದ, ಸ್ಟೈಫಂಡ್ – ರೂ. 15,000
* ಎರಡನೇ ವರ್ಷದ ಸ್ಟೈಫಂಡ್ – ರೂ. 17,000
* 3 ನೇ ವರ್ಷದ ಸ್ಟೈಫಂಡ್ – ರೂ. 19,000
* 4ನೇ ವರ್ಷದ ಸ್ಟೈಫಂಡ್ – ರೂ. 23,000
* ಇದರೊಂದಿಗೆ PF & ESI ಸೌಲಭ್ಯವು ಇರುತ್ತದೆ
* ಹಿರಿಯ ಪ್ರಾಜೆಕ್ಟ್ ಇಂಜಿನಿಯರಿಂಗ್ ಆಗಿ ಬಡ್ತಿ ಹೊಂದಿದ ಬಳಿಕ ವಾರ್ಷಿಕ ಪ್ಯಾಕೇಜ್ 6 ಲಕ್ಷದವರೆಗೂ ಕೂಡ ವೇತನ ಸಿಗಲಿದೆ
ಶೈಕ್ಷಣಿಕ ವಿದ್ಯಾರ್ಹತೆ :-
* ಅಂತಿಮ ವರ್ಷದ B, SC & B. Sc ವಿದ್ಯಾಭ್ಯಾಸ ಪೂರ್ತಿಗೊಳಿಸಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು
ವಯೋಮಿತಿ :-
* ಕಳೆದ ಶೈಕ್ಷಣಿಕ ಸ್ಥಳದಲ್ಲಿ ಪದ ವಿಪೂರ್ತಿಗೊಳಿಸಿದ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ ಇರುತ್ತದೆ
ಅರ್ಜಿ ಸಲ್ಲಿಸುವ ವಿಧಾನ:-
* ಆನ್ಲೈನ್ ವಿಧಾನದಲ್ಲಿ ಅರ್ಜಿ ಸಲ್ಲಿಸಬಹುದು
* ಆಸಕ್ತ ಅಭ್ಯರ್ಥಿಗಳು www.wipro.com ವೆಬ್ಸೈಟ್ ವಿಳಾಸಕ್ಕೆ ಹೋಗಿ ಅರ್ಜಿ ಸಲ್ಲಿಸಬೇಕು
* ಮುಖಪುಟದಲ್ಲಿ ಅರ್ಜಿ ಫಾರಂ ಲಿಂಕ್ ಇರುತ್ತದೆ ಕ್ಲಿಕ್ ಮಾಡಿ, ಎಲ್ಲ ವೈಯಕ್ತಿಕ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ ಮತ್ತೊಮ್ಮೆ ಪರಿಶೀಲಿಸಿ ಸಬ್ಮಿಟ್ ಕೊಡಿ
ಆಯ್ಕೆ ವಿಧಾನ:-
* ಅರ್ಜಿ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳಿಗೂ ಅವರ ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟ ಹಾಗೆ ಸ್ಕಿಲ್ ಟೆಸ್ಟ್ ಹಾಗೂ ನೇರ ಸಂದರ್ಶನ ನಡೆಯುತ್ತದೆ
*ನಂತರ ದಾಖಲೆಗಳ ಪರಿಶೀಲನೆ ಮಾಡಿ ಪ್ರತಿಭಾವಂತರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ
ವಿಪ್ರೋ ಸಂಸ್ಥೆಯು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ಕೊನೆಯ ದಿನಾಂಕ ನಿಗದಿ ಪಡಿಸಿಲ್ಲ . ಆದರೆ ಮೊದಲು ಅರ್ಜಿ ಸಲ್ಲಿಸಿದವರಿಗೆ ಹೆಚ್ಚಿನ ಆದ್ಯತೆ ಇರುತ್ತದೆ. ಈಗಷ್ಟೇ ವಿದ್ಯಾಭ್ಯಾಸ ಮುಗಿಸಿ ಉತ್ತಮ ಕಂಪನಿಯಲ್ಲಿ ಉದ್ಯೋಗ ಮಾಡಬೇಕೆಂದು ಅರಸುತ್ತಿರುವ ಅಭ್ಯರ್ಥಿಗಳಿಗೆ ಇದು ಖಂಡಿತವಾಗಿಯೂ ಒಂದು ಉತ್ತಮ ಅವಕಾಶ. ಹಾಗಾಗಿ ತಪ್ಪದೆ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.