Bank Recruitment: ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ಉದ್ಯೋಗವಕಾಶ
ಈಗಿನ ಜಮಾನದಲ್ಲಿ ಸರ್ಕಾರಿ ಹುದ್ದೆಗಳಷ್ಟೇ ಬ್ಯಾಂಕಿಗ್ ಕ್ಷೇತ್ರದಲ್ಲಿನ ಹುದ್ದೆಗಳ ಬಗ್ಗೆ ಯುವಜನತೆ ಆಸಕ್ತಿ ತೋರುತ್ತಿದ್ದಾರೆ. ಯಾಕೆಂದರೆ ಅಧಿಕ ಒತ್ತಡ ಇಲ್ಲದ ಕೆಲಸವಾಗಿರುತ್ತದೆ ಇದು ಜನಸಾಮಾನ್ಯರಿಗೆ ಸೇವೆ ಮಾಡಿದ ರೀತಿಯು ಆಗುತ್ತದೆ ಜೊತೆಗೆ ಅತಿ ಹೆಚ್ಚು ರಜಾ ದಿನಗಳು ಮತ್ತು ಅತ್ಯುತ್ತಮ ವೇತನವೂ ಕೂಡ ಸಿಗುವುದು ಇದಕ್ಕೆ ಕಾರಣವಾಗಿದೆ.
ಹೀಗಾಗಿ ಸರ್ಕಾರಿ ಹುದ್ದೆಗಳನ್ನು ಪಡೆಯುವ ಸಲುವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ಸೇರಿ ವರ್ಷಾನುಗಟ್ಟಲೆ ಸಮಯವನ್ನು ನೀಡಿ ಅಭ್ಯಾಸ ಮಾಡುವ ರೀತಿ ಬ್ಯಾಂಕಿಂಗ್ ಕ್ಷೇತ್ರದ ಹುದ್ದೆಗಳಿಗಾಗಿ ಕೂಡ ತಯಾರಾಗುತ್ತಿರುತ್ತಾರೆ. ಹೊಸದಾಗಿ ಪದವಿ ಮುಗಿಸಿದ ಪ್ರತಿ ಅಭ್ಯರ್ಥಿಯು ಬ್ಯಾಂಕಿಂಗ್ ಹುದ್ದೆಗಳಿಗಾಗಿ ಪ್ರಯತ್ನಪಟ್ಟಿರುತ್ತಾನೆ ಮತ್ತು ಈಗಾಗಲೇ ಮತ್ತೊಂದು ಕ್ಷೇತ್ರದಲ್ಲಿ ಹುದ್ದೆ ಪಡೆದುಕೊಂಡಿದ್ದರು ಕೂಡ ಪ್ರಯತ್ನಿಸುತ್ತಿರುವವರು ಕೂಡ ಇರುತ್ತಾರೆ. ಇವರಿಗೆಲ್ಲ ಒಂದು ಗುಡ್ ನ್ಯೂಸ್ ಇದೆ.
ದೇಶದಲ್ಲಿ ಸಾಕಷ್ಟು ಖಾಸಗಿ ಹಾಗೂ ಸರ್ಕಾರಿ ವಲಯದ ಬ್ಯಾಂಕ್ ಗಳು ಇವೆ. ಖಾಸಗಿ ಬ್ಯಾಂಕ್ ಗಳಲ್ಲಿ ಕೂಡ ಸರಕಾರಿ ಬ್ಯಾಂಕ್ ನಂತೆ ಅತ್ಯುತ್ತಮ ವೇತನ ಶ್ರೇಣಿ ಹಾಗು ಇನ್ನಿತರ ಸೌಲಭ್ಯಗಳು ದೊರೆಯುತ್ತವೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಕರ್ನಾಟಕದಲ್ಲಿನ ಬ್ಯಾಂಕುಗಳ ಹುದ್ದೆಗಳಲ್ಲಿ ಕನ್ನಡಿಗರಿಗೆ ಹೆಚ್ಚಿನ ಆದ್ಯತೆ ಇರುತ್ತದೆ ಇಲ್ಲಿನ ಗ್ರಾಮೀಣ ಭಾಷೆಯಾದ ಕನ್ನಡ ಅರಿತವರಿಗೆ ಇದು ಸರಾಗಾಗುವುದರಿಂದ ಕರ್ನಾಟಕದಲ್ಲಿನ ಬ್ಯಾಂಕ್ ಹುದ್ದೆಗಳನ್ನು ಸುಲಭವಾಗಿ ಪಡೆಯಬಹುದಾಗಿದೆ.
ಈ ಬಗ್ಗೆ ಪ್ರಯತ್ನದಲ್ಲಿರುವವರಿಗೆ ಸಿಹಿ ಸುದ್ದಿ ಏನೆಂದರೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ಸುಮಾರು 500ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದೆ ಈ ಹುದ್ದೆಗಳ ಭರ್ತಿಗಾಗಿ ಬ್ಯಾಂಕ್ ಅಧಿಸೂಚನೆ ಕೂಡ ಹೊರಡಿಸಿದೆ. ಆ ಸೂಚನೆಗಳಂತೆ ಅರ್ಜಿ ಸಲ್ಲಿಸಿ ಹುದ್ದೆ ಪಡೆದುಕೊಳ್ಳಬಹುದು. ಎಲ್ಲಾ ಉದ್ಯೋಗ ಆಕಾಂಕ್ಷಿಗಳಿಗೂ ಅನುಕೂಲತೆ ಮಾಡಿಕೊಡುವ ಸಲುವಾಗಿ ಈ ಅಂಕಣದಲ್ಲಿ ಬ್ಯಾಂಕ್ ಹೊರಡಿಸಿರುವ ಅಧಿಸೂಚನೆಯಲ್ಲಿ ಹುದ್ದೆ ಹಾಗೂ ನೇಮಕಾತಿ ಬಗ್ಗೆ ತಿಳಿಸಿರುವ ಪ್ರಮುಖ ಅಂಶಗಳನ್ನು ವಿವರಿಸುತ್ತಿದ್ದೇವೆ.
ನೇಮಕಾತಿ ಸಂಸ್ಥೆ:- ಕರ್ನಾಟಕ ಗ್ರಾಮೀಣ ಸಂಸ್ಥೆ
ಉದ್ಯೋಗ ಸಂಸ್ಥೆ:-
* ಕರ್ನಾಟಕ ಗ್ರಾಮೀಣ ಬ್ಯಾಂಕ್
* ಕರ್ನಾಟಕ ವಿಕಾಸ್ ಬ್ಯಾಂಕ್
ಒಟ್ಟು ಹುದ್ದೆಗಳು:- 586 ಹುದ್ದೆಗಳು
ಹುದ್ದೆಗಳ ವಿವರ:-
* ಆಫೀಸರ್ ಅಸಿಸ್ಟೆಂಟ್ – 386 ಹುದ್ದೆಗಳು
* ಆಫೀಸರ್ (ಸ್ಕೇಲ್ – 1) – 200 ಹುದ್ದೆಗಳು
ಉದ್ಯೋಗ ಸ್ಥಳ:- ಕರ್ನಾಟಕದಾದ್ಯಂತ ಇರುವ ವಿವಿಧ ಶಾಖೆಗಳಲ್ಲಿ
ಶೈಕ್ಷಣಿಕ ವಿದ್ಯಾರ್ಹತೆ:-
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಯಾವುದಾದರೂ ವಿಷಯದಲ್ಲಿ ಪದವಿ ಪಡೆದಿರಬೇಕು
ವಯೋಮಿತಿ:-
1. ಆಫೀಸರ್ ಅಸಿಸ್ಟೆಂಟ್
* ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು
* ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 28 ವರ್ಷಗಳು
* ಸರ್ಕಾರಿ ನಿಯಮದ ಅನುಗುಣವಾಗಿ ಕೆಲ ವರ್ಗಗಳಿಗೆ ಮೀಸಲಾತಿ ಕೂಡ ಇರುತ್ತದೆ.
2. ಆಫೀಸರ್ (ಸ್ಕೇಲ್ – 1)
* ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು
* ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 30 ವರ್ಷಗಳು
* ಸರ್ಕಾರಿ ನಿಯಮದ ಅನುಸಾರ ಕೆಲ ವರ್ಗಗಳಿಗೆ ಮೀಸಲಾತಿ ಕೂಡ ಇರುತ್ತದೆ
ವಯೋಮಿತಿ ಸಡಿಲಿಕೆ:-
* ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ 05 ವರ್ಷಗಳು
* ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ (NCL) 3 ವರ್ಷಗಳು
* ವಿಶೇಷ ಚೇತನ ಅಭ್ಯರ್ಥಿಗಳಿಗೆ 10 ವರ್ಷಗಳ ಸಡಿಲಿಕೆ ಇರುತ್ತದೆ
ಅರ್ಜಿ ಶುಲ್ಕ:-
1. ಆಫೀಸರ್ ಅಸಿಸ್ಟೆಂಟ್
* SC / ST & PwBD ಅಭ್ಯರ್ಥಿಗಳಿಗೆ ರೂ.175
* ಇನ್ನುಳಿದ ಎಲ್ಲಾ ಅಭ್ಯರ್ಥಿಗಳಿಗೂ ರೂ.850
2. ಆಫೀಸರ್ (ಸ್ಕೇಲ್ – 1)
* SC / ST/PwBD/ESM/DESM ಅಭ್ಯರ್ಥಿಗಳಿಗೆ ರೂ.175
* ಇನ್ನುಳಿದ ಎಲ್ಲಾ ಅಭ್ಯರ್ಥಿಗಳಿಗೆ ರೂ.850
ಅರ್ಜಿ ಸಲ್ಲಿಸುವ ವಿಧಾನ:-
* https://ibpsonline.ipbs.in/rrb130amay24 ಲಿಂಕ್ ಕ್ಲಿಕ್ ಮಾಡುವ ಮೂಲಕ ಬ್ಯಾಂಕ್ ಅಧಿಕೃತ ವೆಬ್ ಸೈಟ್ ಗೆ ತೆರಳಿ ಅರ್ಜಿ ಸಲ್ಲಿಸಬಹುದ
* ಈ ಮೇಲೆ ತಿಳಿಸಿರುವ ಅರ್ಜಿ ಶುಲ್ಕವನ್ನು ಕೂಡ ಆನ್ಲೈನ್ ನಲ್ಲಿ ಪಾವತಿ ಮಾಡಿ ಇ-ರಸೀದಿ ಪಡೆದುಕೊಳ್ಳಬೇಕು
ಆಯ್ಕೆ ವಿಧಾನ:-
* ಆನ್ಲೈನ್ ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಲಿಖಿತಾ ಪರೀಕ್ಷೆ ನಡೆಸಿ ಆಯ್ಕೆಯಾದ ಅಭ್ಯರ್ಥಿಗಳ ನೇರ ಸಂದರ್ಶನ ಮತ್ತು ದಾಖಲೆ ಪರಿಶೀಲನೆ ಬಾರಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 07 ಜೂನ್, 2024
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 27 ಜೂನ್, 2024.